ಮಂಡ್ಯ

ಬೆಳೆಗಳನ್ನು ಸಾಗಿಸಲು ರಸ್ತೆ ನಿರ್ಮಿಸಿಕೊಡುವಂತೆ ಒತ್ತಾಯಿಸಿ ರೈತರ ಪ್ರತಿಭಟನೆ.

ಕೆ.ಆರ್.ಪೇಟೆ:– ರೈತರು ತಾವು ಬೆಳೆದ ಬೆಳೆಗಳನ್ನು ಸಾಗಿಸಲು ಸಮರ್ಪಕವಾದ ರಸ್ತೆಯಿಲ್ಲದೇ ಹೈರಾಣಾಗಿದ್ದು ಕೂಡಲೇ ತಮ್ಮ ಬೆಳೆಗಳನ್ನು ಸಾಗಿಸಲು ಸೂಕ್ತ ರಸ್ತೆ ನಿರ್ಮಿಸಿಕೊಡುವಂತೆ ಒತ್ತಾಯಿಸಿ ತಾಲ್ಲೂಕಿನ ಶೀಳನೆರೆ ಹೋಬಳಿಯ ಮರುವನಹಳ್ಳಿ ಗ್ರಾಮದ ರೈತರು ಗುಂಡಿಬಿದ್ದ ರಸ್ತೆಯಲ್ಲಿಯೇ ಪ್ರತಿಭಟನೆ ನಡೆಸಿದರು.

ಗ್ರಾಮದ ಸ್ಮಶಾನದ ಪಕ್ಕದಲ್ಲಿ ಶೀಳನೆರೆ ಗ್ರಾಮಕ್ಕೆ ತೆರಳಲು ಈ ಹಿಂದೆಯೇ ರಸ್ತೆ ಮಾಡಲಾಗಿತ್ತು. ಆದರೆ ಆ ರಸ್ತೆಯು ಪ್ರಾಕೃತಿಕ ವಿಕೋಪಗಳಿಗೆ ಸಿಲುಕಿ ಹದಗೆಟ್ಟಿದೆ. ಈಗ ಈ ರಸ್ತೆಗಳಲ್ಲಿ ಗಿಡಗಂಟಿಗಳು ಬೆಳೆದಿದ್ದು ಹಾಗೂ ಮಣ್ಣಿನ ಸವಕಳಿಯಿಂದ ವಾಹನಗಳನ್ನಾಗಲಿ ಅಥವಾ ಎತ್ತಿನ ಗಾಡಿಗಳನ್ನಾಗಲಿ ಚಲಾಯಿಸಲು ಸಾಧ್ಯವಾಗದೇ ಪರದಾಡುವಂತಾಗಿದೆ.

ಇದೇ ರಸ್ತೆಯನ್ನುಅವಲಂಬಿಸಿರುವ  ಸುಮಾರು ನೂರಾರು ರೈತರುಗಳಿಗೆ ತಾವು ಬೆಳೆದ ಬೆಳೆಗಳನ್ನು ಸಾಗಿಸಲು ಬಹಳ ಅನಾನುಕೂಲವಾಗಿದೆ. ನೂರಾರು ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ರೈತರು ಹೆಚ್ಚಾಗಿ ಕಬ್ಬನ್ನು ಬೆಳೆಯುತ್ತಿದ್ದು ತಾವು ಬೆಳೆದ ಬೆಳೆಗಳನ್ನು ಸಾಗಿಸಲು ಸಮರ್ಪಕ ರಸ್ತೆಯಿಲ್ಲದೇ ಚುನಾಯಿತ ಜನಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಹಾಗಾಗಿ ಸಚಿವ ಕೆ.ಸಿ.ನಾರಾಯಣಗೌಡರು ಕೂಡಲೇ ಈ ಬಗ್ಗೆ ಗಮನಹರಿಸಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರಿಗೆ ಸೂಚಿಸಿ ಒತ್ತುವರಿಯಾಗಿರುವ ರಸ್ತೆಯನ್ನು ಸರಿಪಡಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದ್ದಾರೆ.

ಪ್ರತಿಭಟನೆಯಲ್ಲಿ ಗ್ರಾಮದ ಮುಖಂಡರಾದ ಹನುಮೇಗೌಡ, ಶಂಕರೇಗೌಡ, ನಂಜಪ್ಪಗೌಡ, ದೇವರಾಜು, ಶೇಖರ, ಶಂಕರಣ್ಣ, ವನಜಾಕ್ಷಮ್ಮ, ಶ್ರೀಕಂಠೇಗೌಡ, ಸುಧಾಕರ, ವಿಜಯ್‍ಕುಮಾರ್, ಸೇರಿದಂತೆ ಹಲವರು ಹಾಜರಿದ್ದರು.

andolana

Recent Posts

ದೇವರಾಜ ಅರಸು ಸೇತುವೆ ಮೇಲೆ ಸಂಚಾರ ನಿರ್ಬಂಧ

ಎಸ್.ಎಸ್.ಭಟ್ ನಂ.ಗೂಡು: ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಪೂರ್ವಸಿದ್ಧತೆ ಕೈಗೊಳ್ಳದಿದ್ದರೆ ಅಪಾಯದ ಭೀತಿ ನಂಜನಗೂಡು: ಕಬಿನಿ ನದಿಯ ದೇವರಾಜ ಅರಸು…

9 mins ago

2 ತಿಂಗಳಾದರೂ ಕೋಟೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸ್ಥಾನ ಖಾಲಿ

ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಅಸಮಾಧಾನ; ಶೀಘ್ರದಲ್ಲಿ ನೇಮಕ ಮಾಡಲು ಆಗ್ರಹ  ಮಂಜು ಕೋಟೆ ಎಚ್.ಡಿ.ಕೋಟೆ: ಬಿಜೆಪಿ ತಾಲ್ಲೂಕು ಅಧ್ಯಕ್ಷ ಸ್ಥಾನ…

13 mins ago

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೇಕು ಸರ್ಜರಿ

ದೇವರಾಜ ಅರಸು ಕಾಲೋನಿ, ಪೌರಕಾರ್ಮಿಕರ ಕಾಲೋನಿಯಲ್ಲಿ ನೀರಿನ ಸಮಸ್ಯೆ ಪ್ರಶಾಂತ್ ಎಸ್. ಮೈಸೂರು: ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ ೬೨ರ…

17 mins ago

ತಗ್ಗದ ಗ್ಯಾಸ್ ಟ್ರಬಲ್; ಕೈಸುಡುತ್ತಿದೆ ತಿಂಡಿ ಬಿಲ್!

ಚಿರಂಜೀವಿ ಸಿ ಹುಲ್ಲಹಳ್ಳಿ ಮೈಸೂರು: ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧದ ಪರಿಣಾಮ ಜಿಲ್ಲೆಯಲ್ಲಿ ತಿಂಗಳು ಕಳೆದರೂ ಗ್ಯಾಸ್ ಟ್ರಬಲ್ ತಗ್ಗಿಲ್ಲ.…

23 mins ago

ರೈಲು ಪ್ರಯಾಣಿಕರಿಗೆ ಮತ್ತೊಂದು ಶಾಕ್

೮ ಗಂಟೆ ಮೊದಲು ಟಿಕೆಟ್ ರದ್ದಾಗದಿದ್ದರೆ ಸಂಪೂರ್ಣ ಹಣ ಖೋತಾ ಹೊಸದಿಲ್ಲಿ: ರೈಲು ಪ್ರಯಾಣ ಆರಂಭವಾಗುವ ೮ ಗಂಟೆ ಮೊದಲು…

30 mins ago