ಶಾಸಕರಲ್ಲಿ ಅತೃಪ್ತಿಯ ಬೇಗುದಿ ಇದೆ, ಅದು ಯಾವಾಗ ಅಸ್ಫೋಟಿಸುತ್ತೋ ಗೊತ್ತಿಲ್ಲ
ಜನರು, ಕಾಂಗ್ರೆಸ್ ಶಾಸಕರಿಂದಲೇ ಈ ಸರಕಾರ ಹೋಗುತ್ತದೆ; ಎಚ್ .ಡಿ.ಕುಮಾರಸ್ವಾಮಿ ಭವಿಷ್ಯ
ಮಂಡ್ಯ: ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಬಹಳ ದಿನ ಉಳಿಯಲಿಲ್ಲ. ಜನರು ಮತ್ತು ಆ ಪಕ್ಷದ ಶಾಸಕರೇ ಸರ್ಕಾರವನ್ನು ತೆಗೆಯುತ್ತಾರೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಭವಿಷ್ಯ ನುಡಿದರು.
ಮಂಡ್ಯದಲ್ಲಿ ಉದ್ಯೋಗ ಮೇಳದ ಸಮಾರೋಪದ ನಂತರ ಮಾಧ್ಯಮಗಳ ಜತೆ ಅವರು ಮಾತನಾಡಿದರು.
2028ರವರೆಗೆ ಈ ಸರ್ಕಾರ ನಡೆಯಲ್ಲ. ಕಾಂಗ್ರೆಸ್ ಶಾಸಕರಲ್ಲೇ ಅಸಮಾಧಾನದ ಬೇಗುದಿ ಇದೆ. ಅದು ಯಾವಾಗ ಅಸ್ಪೋಟ ಆಗುತ್ತದೆ ಎನ್ನುವುದು ಗೊತ್ತಿಲ್ಲ. ಕಾದು ನೋಡೋಣ. ನಾವು ಅವರ ಸರ್ಕಾರ ಅಲ್ಲಾಡಿಸುತ್ತೇವೆ ಎನ್ನುವುದು ಸರಿಯಲ್ಲ, ಅವರ ಶಾಸಕರು ಮತ್ತು ಜನರೇ ಸರ್ಕಾರದ ಬುಡ ಅಲ್ಲಾಡಿಸುತ್ತಿದ್ದಾರೆ ಎಂದು ಮಾರ್ಮಿಕವಾಗಿ ಹೇಳಿದರು ಸಚಿವರು.
ಸರ್ಕಾರದ ನಿಷ್ಕ್ರಿಯತೆಯಿಂದ ಶಾಸಕರು ಹಳ್ಳಿಗೆ ಹೋಗಿ ಜನರನ್ನು ಭೇಟಿ ಮಾಡದಂತಹ ವಾತಾವರಣ ಸೃಷ್ಟಿಯಾಗಿದೆ. ಸರ್ಕಾರದ ನಡವಳಿಕೆ ಬಗ್ಗೆ ಅವರಲ್ಲೇ ವಿಪರೀತ ಅಸಮಾಧಾನ ಇದೆ, ಅದು ಸ್ಪೋಟವಾಗುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
2028ರ ವರೆಗೆ ಈ ಸರ್ಕಾರ ನಡೆಯಲ್ಲ ಎನ್ನುವುದು ಖಚಿತ. ಮತ್ತೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂದು ಜನರು ಒಂದು ಅವಕಾಶ ಕೊಡುತ್ತಾರೆ ಸಿಗುವ ವಿಶ್ವಾಸ ಇದೆ. 2028ರ ಒಳಗೆ ಆ ಅವಕಾಶ ಬರುತ್ತದೆ. ನಾನು ಜ್ಯೋತಿಷ್ಯಗಾರನಲ್ಲ, ಆದರೂ ಹೇಳುತ್ತಿದ್ದೇನೆ ಎಂದರು ಸಚಿವರು.
ಜನ ಮತ್ತೆ ತೀರ್ಮಾನ ಮಾಡ್ತಾರೆ ಅನ್ನುವ ವಿಶ್ವಾಸದಲ್ಲಿದ್ದೇನೆ. ಜನ ಬಯಸಿದರೆ ಯಾಕೆ ಆಗಬಾರದು? ನಾನು ಮುಖ್ಯಮಂತ್ರಿ ಸ್ಥಾನ ಐದು ವರ್ಷಗಳ ಸರ್ಕಾರ ಕೊಡಿ ಅಂತ ಜನತೆಗೆ ಈಗಲೂ ಮನವಿ ಮಾಡುತ್ತೇನೆ. ನನ್ನ 14 ತಿಂಗಳ ಆಡಳಿತ, ಬೇರೆಯವರ ಹಂಗಿನಲ್ಲಿ ಮಾಡಿದ್ದು. ಇನ್ನೊಬ್ಬರ ಹಂಗಿನಲ್ಲಿ ಸರ್ಕಾರ ಮಾಡಿದಾಗಲೂ ನಾಡಿಗೆ ಕೊಟ್ಟ ಜನಪರ ಕಾರ್ಯಕ್ರಮಗಳ ಬಗ್ಗೆ ಜನ ಮರೆತಿಲ್ಲ ಎಂದರು ಅವರು.
ಕರ್ನಾಟಕ ಸಮೃದ್ಧಿಯ ನಾಡು. ಒಂದು ಅವಕಾಶ ಕೊಟ್ಟರೆ ನಾನು ಉತ್ತಮ ಕೆಲಸ ಮಾಡುತ್ತೇನೆ. ಯಾವ ಕುಟುಂಬವೂ ತಮ್ಮ ಬದುಕಿಗಾಗಿ ಕೈ ಒಡ್ಡುವ ಪರಿಸ್ಥಿತಿ ಬರಬಾರದು. ಇನ್ನೊಬ್ಬರಿಗೆ ಕೈ ಎತ್ತಿ ಕೊಡುವ ಆರ್ಥಿಕ ಶಕ್ತಿ ಕೊಡುವ ರಾಜ್ಯ ಇದು. ಹಣ ಇವತ್ತು ಲೂಟಿಯಾಗುತ್ತಿದೆ. ಸರ್ಕಾರದ ಆಸ್ತಿ ಕಬಳಿಕೆ ಆಗುತ್ತಿದೆ. ಇದಕ್ಕೆ ಕಡಿವಾಣ ಹಾಕಿದರೆ ಇವರು ಕೊಡುವ 2 ಸಾವಿರ ಅಲ್ಲ, ಕನಿಷ್ಠ 10 ಸಾವಿರ ಸಂಪಾದನೆ ಮಾಡುವ ಕಾರ್ಯಕ್ರಮಗಳನ್ನು ಜಾರಿ ಮಾಡಬಹುದು. ಮುಂದೆ ಜನರು ಒಂದು ಅವಕಾಶ ನೀಡುತ್ತಾರೆ ಎನ್ನುವ ವಿಶ್ವಾಸ ಇದೆ. 2028ರ ಒಳಗೆ ಆ ಅವಕಾಶ ಬರುತ್ತದೆ ಎಂದು ನಂಬಿದ್ದೇನೆ. ನಾನು ಜ್ಯೋತಿಷ್ಯಗಾರನಲ್ಲ, ಆಶಾವಾದಿ ಅಷ್ಟೇ. ಈ ಸರ್ಕಾರದ ನಡವಳಿಕೆಯ ಬಗ್ಗೆ ಜನರು ಬೇಸತ್ತಿದ್ದಾರೆ ಎಂದರು.
' ಗ್ರೇಸ್' ಪೋಷಕರ ದಿನಾಚರಣೆಯಲ್ಲಿ ಮೈಜಿಪಸಂ ಅಧ್ಯಕ್ಷ ಕೆ.ದೀಪಕ್ ಅಭಿಮತ ಮೈಸೂರು : ಹಣ ಆಸ್ತಿಗೆ ಹೆತ್ತವರ ಉಸಿರು ತೆಗೆಯುವ…
ಕನ್ನಡ ಸಾಹಿತ್ಯ ಸಮ್ಮೇಳನ: ಪ್ರಮುಖ ರಸ್ತೆಗಳಿಗೆ ವಿದ್ಯುತ್ ದೀಪಾಲಂಕಾರ ಮಂಡ್ಯ:ಸಕ್ಕರೆ ನಗರಿ ಮಂಡ್ಯದಲ್ಲಿ ಡಿ.20 ರಿಂದ ಮೂರು ದಿನಗಳ ಕಾಲ…
ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಮಂಡ್ಯ ನಗರದಲ್ಲಿನ ವಿದ್ಯುತ್ ದೀಪಾಲಂಕಾರಕ್ಕೆ ಕೃಷಿ ಸಚಿವರು ಹಾಗೂ…
ಕೇರಳ ಮೂಲದ ಮಾಸ್ಟರ್ ಮೈಂಡ್ ಸೇರಿದಂತೆ 12 ಆರೋಪಿಗಳ ಬಂಧನ; ಮತ್ತೊಂದು ಮೋಸದ ಜಾಲ ಬಯಲಿಗೆಳೆದ ಕೊಡಗು ಜಿಲ್ಲಾ ಪೊಲೀಸರು…
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧದ ಮುಡಾ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜನವರಿ…
ಮಂಡ್ಯ: ೮೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಗುರುವಾರ ಸಂಜೆ ನಗರಕ್ಕೆ…