ಮಂಡ್ಯ

ಚಲಿಸುತ್ತಿದ್ದ ಬಸ್‌ಗೆ ಬೆಂಕಿ-ಪ್ರಯಾಣಿಕರು ಪಾರು: 30 ಲಕ್ಷ ನಷ್ಟ

ಮಂಡ್ಯ: ಚಲಿಸುತ್ತಿದ್ದ ಖಾಸಗಿ ಪ್ರವಾಸಿ ಬಸ್ಸಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣ ಭಸ್ಮಗೊಂಡಿರುವ ಘಟನೆ ತಾಲ್ಲೂಕಿನ ಹೊಸಬೂದನೂರು ಬಳಿಯ ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನಡೆದಿದೆ.

ಬೆಂಗಳೂರಿನಿಂದ ಮೈಸೂರು ಕಡೆಗೆ ತೆರಳುತ್ತಿದ್ದ ಅಶೋಕ್ ಟ್ರಾವೆಲ್ಸ್‌ ಏಜೆನ್ಸಿಗೆ ಸೇರಿದ ಬಸ್‌ನಲ್ಲಿ ತಡರಾತ್ರಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಬಸ್‌ನ್ನು ಚಾಲಕ ರಸ್ತೆ ಬದಿಗೆ ನಿಲ್ಲಿಸಿ ಪ್ರಯಾಣಿಕರನ್ನು ಹೊರಗಿಳಿಸಿದ್ದಾರೆ.

ಪ್ರಯಾಣಿಕರು ಬಸ್‌ನಿಂದ ಇಳಿಯುತ್ತಿದ್ದಂತೆ ಬೆಂಕಿಯ ಕೆನ್ನಾಲಿಗೆ ಹೆಚ್ಚಾದ ಪರಿಣಾಮ ಕ್ಷಣಾರ್ಧದಲ್ಲಿ ಬಸ್ಸು ಬೆಂಕಿಗೆ ಆಹುತಿಯಾಗಿದೆ. ಪ್ರಯಾಣಿಕರ ಬಟ್ಟೆ ಬರೆ, ಡೆಕೋರೇಷನ್ ವಸ್ತುಗಳು, ಬಸ್ಸಿನ ಬಿಡಿ ಭಾಗಗಳು ಸೇರಿದಂತೆ ಇತರೆ ವಸ್ತುಗಳು ಸಂಪೂರ್ಣ ಸುಟ್ಟು ಕರಕಲಾಗಿವೆ.

ಸುದ್ಧಿ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದರು. ಅಷ್ಟರಲ್ಲಾಗಲೇ ಬಸ್ಸು ಬಹುತೇಕ ಸುಟ್ಟು ಕರಕಲಾಗಿತ್ತು. ಘಟನೆಯಿಂದಾಗಿ ಸುಮಾರು 30 ಲಕ್ಷಕ್ಕೂ ಹೆಚ್ಚು ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಈ ಸಂಬಂಧ ಮಂಡ್ಯ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ಕ್ರಮ ಕೈಗೊಂಡಿದ್ದಾರೆ.

ಆಂದೋಲನ ಡೆಸ್ಕ್

Recent Posts

ಓದುಗರ ಪತ್ರ:  ರಾಜ್ಯ ಸರ್ಕಾರಿ ನೌಕರರಿಗೆ ವಸ್ತ್ರಸಂಹಿತೆ ಒಳ್ಳೆಯ ಬೆಳವಣಿಗೆ

ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಸಭ್ಯ ಉಡುಪುಗಳನ್ನು ಧರಿಸಿಕೊಂಡು ಬರುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ. ಕೆಲವು…

3 mins ago

ಓದುಗರ ಪತ್ರ:  ವರುಣ ನಾಲೆಗೆ ತಡೆಗೋಡೆ ನಿರ್ಮಿಸಿ

ಮೈಸೂರಿನ ಲಲಿತಾದ್ರಿಪುರ ರಿಂಗ್ ರಸ್ತೆಯಲ್ಲಿರುವ ಮಾರ್ವೆಲ್ ಶಾಲಾ- ಕಾಲೇಜು ಮುಂಭಾಗದಿಂದ ಸ್ವಲ್ಪ ದೂರ ಸಾಗಿದರೆ ವರುಣ ನಾಲೆ ಕಾಲುವೆ ಸಿಗುತ್ತದೆ.…

5 mins ago

ಮೈಸೂರು ಮುಡಾ ಹಗರಣ: ಇಂದು ಸಿಎಂ ಸಿದ್ದರಾಮಯ್ಯ ಭವಿಷ್ಯ ನಿರ್ಧಾರ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್‌ ಕುರಿತು ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಆದೇಶ…

7 mins ago

ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಸೈಕ್ಲಿಂಗ್‌

ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಭಾರತದಲ್ಲಿ ಹಲವಾರು ರಾಜ್ಯ, ಹಲವಾರು ಧರ್ಮ, ಹಲವಾರು ಆಹಾರ ವೈವಿಧ್ಯತೆ, ಹಲವಾರು ಭಾಷೆ, ಹಲವಾರು ಸಂಸ್ಕ ತಿಗಳು…

48 mins ago

ಅಡಕೆಗೆ ಎಲೆಚುಕ್ಕಿ, ಹಳದಿ ರೋಗ ಬಾಧೆ

ಕೊಡಗು ಜಿಲ್ಲೆಯಲ್ಲಿಯೂ ಕಾಣಿಸಿಕೊಳ್ಳುತ್ತಿರುವ ರೋಗ; ಹತೋಟಿಗೆ ಔಷಧಿ ಜೊತೆಗೆ ಸೂಕ್ತ ಪರಿಹಾರಕ್ಕೆ ಒತ್ತಾಯ ಮಡಿಕೇರಿ: ವಾಣಿಜ್ಯ ಬೆಳೆಯಾಗಿ ಕೃಷಿಕರ ಬದುಕಿಗೆ ಆಶ್ರಯವಾಗಿರುವ…

1 hour ago

ಸಾರ್ವಜನಿಕ ಶೌಚಾಲಯ ‘ಎರಡೂ’ ಬಂದ್!

ಚಾ.ನಗರದ ತರಕಾರಿ ಮಾರುಕಟ್ಟೆ, ಹಳೇ ಖಾಸಗಿ ಬಸ್ ನಿಲ್ದಾಣದಲ್ಲಿ ಮುಚ್ಚಿದ ಶೌಚಾಲಯಗಳು; ಜನರಿಗೆ ಸಮಸ್ಯೆ ಚಾಮರಾಜನಗರ: ನಗರದಲ್ಲಿನ ಎರಡು ಸಾರ್ವಜನಿಕ…

2 hours ago