ಮಂಡ್ಯ

ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ : ನಾಲ್ವರು ಸಾವು

ನಾಗಮಂಗಲ : ಭೀಕರ ರಸ್ತೆ ಅಪಘಾತದಲ್ಲಿ ನಾಲ್ವರು ಯುವಕರು ಮೃತಪಟ್ಟ ಘಟನೆ ತಾಲೂಕಿನ ತಿರುಮಲಾಪುರ ಬಳಿ ಭಾನುವಾರ ನಡೆದಿದೆ.
ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಹಿನ್ನೆಲೆಯಲ್ಲಿ ನೆಲಮಂಗಲದ ಶರತ್, ನವೀನ್, ಹೇಮಂತ್ ಸೇರಿ ನಾಲ್ವರು ಸಾವನ್ನಪ್ಪಿದ್ದಾರೆ. ಮತ್ತೋರ್ವ ಮೃತನ ವಿವರ ದೊರೆತಿಲ್ಲ.

ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ತಿರುಮಲಾಪುರ ಗೇಟ್ ಬಳಿ ಭೀಕರ ಅಪಘಾತ ಸಂಭವಿಸಿದ್ದು ಕಾರಿನಲ್ಲಿದ್ದವರು ಬೆಂಗಳೂರಿನಿಂದ ಹಾಸನ ಕಡೆ ಹೋಗುತ್ತಿದ್ದರು,. ಇವರ ಕಾರು ತಿರುಮಲಾಪುರ ಗೇಟ್ ಬಳಿ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಮುಂದೆ ಚಲಿಸುತ್ತಿದ್ದ ತ್ಯಾಜ್ಯ ಸಾಗಾಟದ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ .
ಕಾರಿನ ಮುಂಭಾಗ ಸಂಪೂರ್ಣ ನಜ್ಜು ಗುಜ್ಜಾಗಿದ್ದು ಅಪಘಾತದ ಭೀಕರತೆಯನ್ನು ಬಿಂಬಿಸಿದೆ.

ಘಟನಾ ಸ್ಥಳಕ್ಕೆ ನಾಗಮಂಗಲ ಡಿವೈಎಸ್ಪಿ ಲಕ್ಷ್ಮಿ ಪ್ರಸಾದ್, ಸಿಪಿಐ ನಿರಂಜನ್ ಹಾಗೂ ಬೆಳ್ಳೂರು ಪೊಲೀಸ್ ಠಾಣೆ ಪಿಎಸ್ ಐ ಲೋಕೇಶ್ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

lokesh

Recent Posts

ಕೇದಾರನಾಥ ಧಾಮದಲ್ಲಿ ಯಾತ್ರಾರ್ಥಿಗಳಿಗೆ 24 ಗಂಟೆ ಬಿಸಿನೀರು: ಸಿಎಂ ಪುಷ್ಕರ್‌ ಸಿಂಗ್‌ ಧಾಮಿ ಘೋಷಣೆ

ಡೆಹರಾಡೂನ್:‌ ಕೇದಾರನಾಥ ಧಾಮಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಗೆ ಶೀಘ್ರದಲ್ಲೇ ತಣ್ಣೀರಿನ ಬದಲಿಗೆ 24 ಗಂಟೆಗಳ ಬಿಸಿನೀರಿನ ಪೂರೈಕೆಯನ್ನು ಒದಗಿಸಲಾಗುವುದು ಎಂದು…

1 hour ago

ರಣ ಬಿಸಿಲ ನಡುವೆಯೇ ಕೆಲ ಜಿಲ್ಲೆಗಳಲ್ಲಿ ಆಲಿಕಲ್ಲು ಮಳೆ ಮುನ್ಸೂಚನೆ

ಬೆಂಗಳೂರು: ರಾಜ್ಯದ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಆಲಿಕಲ್ಲು ಸಹಿತ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದೆ.…

1 hour ago

ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಪತಿಗೆ ಚಟ್ಟ ಕಟ್ಟಿದ ಪತ್ನಿ

ಸರಗೂರು: ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಪತಿಯನ್ನು ಪತ್ನಿಯೇ ತನ್ನ ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿರುವ ಘಟನೆ ಮೈಸೂರು ಜಿಲ್ಲೆ…

1 hour ago

ದೇವನೂರಿಗೆ ಆಗಮಿಸಿದ ಪಂಪ

ಅರ್ಧ ಶತಮಾನಕ್ಕೂ ಹಿಂದಿನ ಕಾಲದ ಚಿತ್ರಗಳು  ಓ.ಎಲ್.ನಾಗಭೂಷಣ ಸ್ವಾಮಿ ದೇವನೂರ ಮಹಾದೇವ ಕನ್ನಡಿಗರ ಮನಸಿನಲ್ಲಿ ಮನೆ ಮಾಡಿರುವವರು. ಒಬ್ಬೊಬ್ಬರೂ ಮಹಾದೇವರ…

2 hours ago

ದೇವನೂರಿಗೆ ಆಗಮಿಸಿದ ಪಂಪ

ದೇಮ ಎಂಬ ನೈತಿಕ ಕೈಮರ  ಸುರೇಶ ಕಂಜರ್ಪಣೆ ಅಂದಕಾಲತ್ತಿಲೇ ನಾನು ಅರಕಲಗೂಡಲ್ಲಿ ಪಾಠ ಮಾಡುತ್ತಿದ್ದಾಗ ಅಲ್ಲಿನ ದೇವಸ್ಥಾನದಲ್ಲಿ ಶಿವರಾತ್ರಿಯಂದು ನಡೆದ…

2 hours ago

ಚೆಕ್‌ಡ್ಯಾಂ ತಡೆಗೋಡೆ ಒಡೆದು ಹಾಕಿದ ಕಿಡಿಗೇಡಿಗಳು: ಕಠಿಣ ಕ್ರಮಕ್ಕೆ ಪ್ರಜ್ಞಾವಂತ ನಾಗರಿಕರ ಆಗ್ರಹ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಅಂತರ್ಜಲ ಮಟ್ಟ ಹೆಚ್ಚಳ ಮಾಡುವ ನಿಟ್ಟಿನಲ್ಲಿ ಮಳೆಯ ನೀರು ಸಂಗ್ರಹಿಸಲು…

2 hours ago