ಜಿಲ್ಲೆಗಳು

ಮಂಡ್ಯದಲ್ಲಿ ಬೋನಿಗೆ ಬಿತ್ತು ಮತ್ತೊಂದು ಚಿರತೆ

ನಿನ್ನೆ ಮದ್ದೂರು, ಇಂದು ನಾಗಮಂಗಲ, ಇನ್ನೂ ನಿಂತಿಲ್ಲ ಚಿರತೆ ಕಾರ್ಯಾಚರಣೆ

ನಾಗಮಂಗಲ: ಮದ್ದೂರು ತಾಲ್ಲೂಕಿನ ಕುಂದನಕುಪ್ಪೆ ಬಳಿ ಚಿರತೆ ಸೆರೆಯಾದ ಬೆನ್ನಿಗೇ ನಾಗಮಂಗಲದ ದೇವಲಾಪುರ ಹೋಬಳಿ ಮುತ್ಸಂದ್ರ ಗ್ರಾಮದ ಬಳಿ ಚಿರತೆಯೊಂದನ್ನು ಅರಣ್ಯ ಇಲಾಖೆ ಅಧಿಕಾರಿಗಳು ಸೋಮವಾರ ಸೆರೆ ಹಿಡಿದಿದ್ದಾರೆ. ಈ ನಡುವೆ ಶ್ರೀರಂಗಪಟ್ಟಣದ ಕೆ ಆರ್‌ ಎಸ್‌ ಬಳಿ ಕಾಣಿಸಿಕೊಂಡ ಚಿರತೆ ಸೆರೆಗೆ ಕಾರ್ಯಾಚರಣೆ ಮುಂದುವರಿದಿದೆ.

ನಾಗಮಂಗಲದ ಮುತ್ಸಂದ್ರ, ಗೊಲ್ಲರಹಳ್ಳಿ, ಕಸಲಗೆರೆ ಸೇರಿದಂತೆ ಸುತ್ತಮುತ್ತಲ ಹಲವು ಗ್ರಾಮಗಳಲ್ಲಿ ಸಂಚರಿಸಿ ಕುರಿ, ಮೇಕೆಗಳನ್ನು ಹಿಡಿದು ಹೊತ್ತೋಯ್ಯುತ್ತಿದ್ದ ಚಿರತೆಯಿಂದಾಗಿ ಇಲ್ಲಿನ ಗ್ರಾಮಸ್ಥರು ರೋಸಿಹೋಗಿದ್ದರು.
ರೈತರ ದೂರಿನ ಮೇರೆಗೆ ಅರಣ್ಯ ಇಲಾಖೆಯವರು 4ನೇ ತಾರೀಖಿನಂದು ಚಿರತೆ ಸೆರೆಗಾಗಿ ಬೋನಿಟ್ಟು ಕಾಯುತ್ತಿದ್ದರು.
ಸೋಮವಾರ ಮಧ್ಯಾಹ್ನ 12ಗಂಟೆ ಸಮಯದಲ್ಲಿ ಮುತ್ಸಂದ್ರ ಗ್ರಾಮದ ಬಳಿ ಚಿರತೆ ಬೋನಿಗೆ ಬಿದ್ದು ಸೆರೆಯಾಗಿದೆ.
ಚಿರತೆ ಸೆರೆಯಾಗಿದ್ದರಿಂದ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ. ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ನಾಗರಹೊಳೆ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.
ಕಾರ್ಯಾಚರಣೆಯಲ್ಲಿ ವಲಯ ಅರಣ್ಯಾಧಿಕಾರಿ ಸತೀಶ್, ಉಪವಲಯ ಅರಣ್ಯಾಧಿಕಾರಿ ಮಂಜು, ಅರಣ್ಯ ರಕ್ಷಕರಾದ ರಂಗಸ್ವಾಮಿ, ಸಾಕಯ್ಯ, ಕ್ಷೇಮಾಭಿವೃದ್ದಿ ನೌಕರ ಪುಟ್ಟಸ್ವಾಮಿ ಭಾಗವಹಿಸಿದ್ದರು.

andolanait

Recent Posts

ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಶೀಘ್ರದಲ್ಲಿಯೇ ಬ್ಯಾನ್‌ ಆಗಲಿದೆ ಮೊಬೈಲ್?:‌ ಸಿಎಂ ಸಿದ್ದರಾಮಯ್ಯ ಸುಳಿವು

ಬೆಂಗಳೂರು: ರಾಜ್ಯದ ಶಾಲಾ-ಕಾಲೇಜುಗಳಲ್ಲಿ ಮೊಬೈಲ್‌ ಫೋನ್‌ ನಿಷೇಧ ಮಾಡುವ ನಿಟ್ಟಿನಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಚಿಂತನೆ ನಡೆಸಿದೆ.…

55 mins ago

ಎಐ ಇಂಪ್ಯಾಕ್ಟ್‌ ಶೃಂಗಸಭೆ ಒಂದು ಮಹತ್ವದ ತಿರುವು: 131ನೇ ಮನ್‌ ಕಿ ಬಾತ್‌ನಲ್ಲಿ ಪ್ರಧಾನಿ ಮೋದಿ ಸಂತಸ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್‌ ಕಿ ಬಾತ್‌ನ 131ನೇ ಸಂಚಿಕೆಯಲ್ಲಿ…

1 hour ago

ಮಾಜಿ ಶಾಸಕ ಸುರೇಶ್‌ ಗೌಡ ಕಾರು ಅಪಘಾತ

ಮಂಡ್ಯ: ಚಾಲಕನ ನಿಯಂತ್ರಣ ತಪ್ಪಿ ನಾಗಮಂಗಲದ ಜೆಡಿಎಸ್‌ ಮಾಜಿ ಶಾಸಕ ಸುರೇಶ್‌ ಗೌಡ ಕಾರು ಪಲ್ಟಿಯಾಗಿ ಅಪಘಾತ ಸಂಭವಿಸಿರುವ ಘಟನೆ…

2 hours ago

ರಾಜ್ಯದಲ್ಲಿ ಬಿಸಿಲ ಝಳದ ನಡುವೆಯೇ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ

ಬೆಂಗಳೂರು: ರಾಜ್ಯದಲ್ಲಿ ಬಿಸಿಲ ಝಳದ ನಡುವೆಯೇ ಕೆಲ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ…

2 hours ago

ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ

ಚಿಕ್ಕಮಗಳೂರು: ಚಿಕ್ಕಮಗಳೂರಿನಲ್ಲಿ ಕಾಡಾನೆ ದಾಳಿಗೆ ಮತ್ತೊಬ್ಬರು ಬಲಿಯಾಗಿದ್ದಾರೆ. ಕಾಫಿ ತೋಟದಲ್ಲಿ ಕಾರ್ಮಿಕ ಮಹಿಳೆಯನ್ನು ಕಾಡಾನೆ ಬಲಿ ಪಡೆದಿದೆ. ಚಿಕ್ಕಮಗಳೂರು ತಾಲ್ಲೂಕಿನ…

2 hours ago

ಮಹಿಳೆಯರ ಮುಂದೆ ಮೂತ್ರ ವಿಸರ್ಜಿಸಿದ ಶಿಕ್ಷಕ: ಪ್ರಶ್ನಿಸಿದ ವ್ಯಕ್ತಿಗೆ ಚಾಕು ಇರಿತ

ಮೈಸೂರು: ಮಹಿಳೆಯರ ಮುಂದೆ ಶಿಕ್ಷಕ ಮೂತ್ರ ವಿಸರ್ಜನೆ ಮಾಡುತ್ತಿದ್ದುದನ್ನು ಪ್ರಶ್ನಿಸಿದ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆಗೆ ಯತ್ನ ನಡೆಸಿದ ಆರೋಪ…

3 hours ago