ಚಾಮರಾಜನಗರ: ಜಿಲ್ಲಾ ಮಲೆಯಾಳ ಸಮಾಜದಿಂದ ಜೋಡಿರಸ್ತೆಯ ಸಂತ ಪೌಲರ ಸಮುದಾಯ ಭವನದಲ್ಲಿ ವೈವಿದ್ಯಮಯ ಓಣಂ ಆಚರಣೆ ನಡೆಯಿತು.ಆಕರ್ಷಕ ಹೂವಿನ ರಂಗೋಲಿ ಸಿಂಗಾರಿಮೇಳ ಓಣಂಸಾಧ್ಯ ಪ್ರಮುಖ ಆಕರ್ಷಣೆ ಯಾಗಿತ್ತು .
ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದ ಸಮಾಜದ ಅದ್ಯಕ್ಷ ರಾಜು ವರ್ಗೀಸ್ ೧೯೭೫ ರಲ್ಲಿ ನಾನು ಚಾಮರಾಜನಗರಕ್ಕೆ ಬಂದಾಗ ಒಂದೆರಡು ಮಲೆಯಾಳಿ ಕುಟುಂಬಗಳಿದ್ದವು ಈಗ ಬಹಳಷ್ಟು ಕುಟುಂಬಗಳಿವೆ ಎಲ್ಲರನ್ನು ಸಂಘಟಿಸುವ ಗುರುತರ ಜವಾಬ್ದಾರಿ ಇದೆ ನಾವು ಮೂಲತಃ ಕೇರಳದವರಾದರೂ ಈಗ ಜಿಲ್ಲೆಯಲ್ಲಿ ನೆಲೆಸಿದ್ದೇವೆ ಕನ್ನಡ ಭಾಷೆ ಕಲಿಯಬೇಕು ಕನ್ನಡ ಸಂಸ್ಕೃತಿ ಅಳವಡಿಸಿಕೊಳ್ಳಬೇಕು ಕನ್ನಡಿಗರೊಂದಿಗೆ ಉತ್ತಮ ಬಾಂಧವ್ಯ ಬೆಳವಳಿಸಿಕೊಳ್ಳಬೇಕು ಎಂದರು.
೨೦೦೮ ರಲ್ಲಿ ಜಿಲ್ಲಾ ಮಲೆಯಾಳ ಸಮಾಜ ಸ್ಥಾಪನೆಯಾಯಿತು ಆದರೆ ೨೦೧೮ ರಲ್ಲಿ ನೋಂದಣಿ ಯಾಯಿತು ಅಲ್ಲಿಂದ ಪ್ರತಿವರ್ಷ ಓಣಂ ಆಚರಿಸಿಕೊಂಡು ಬರುತ್ತಿದ್ದೇವೆ. ಕಳೆದ ನಾಲ್ಕು ವರ್ಷಗಳಿಂದ ಕೋವಿಡ್ ಮತ್ತು ವಯನಾಡ್ ನಲ್ಲಿ ಮನೆಗಳು ಕುಸಿದು ಅನೇಕರು ಮರಣ ಹೊಂದಿದ್ದರಿಂದ ಆಚರಿಸಲು ಸಾಧ್ಯ ವಾಗಲಿಲ್ಲ ಈ ವರ್ಷ ಅದ್ದೂರಿಯಾಗಿ ಆಚರಿಸುತ್ತಿದ್ದೇವೆ ನಾವು ಕೆಲವು ಸೇವಾ ಕಾರ್ಯಗಳನ್ನು ನಡೆಸುತ್ತಿದ್ದೇವೆ ಎಂದರು.
ಮೊಟ್ಟಮೊದಲಿಗೆ ಶವಸಾಗಾಣಿಕೆ ವಾಹನವನ್ನು ಪರಿಚಯಿಸಿ ಎಲ್ಲಾ ಸಮಾಜದವರಿಗೂ ವಿಶೇಷ ವಾಗಿ ಬಡವರಿಗೆ ಉಚಿತವಾಗಿ ಒದಗಿಸಿಕೊಟ್ಟಿದ್ದೇವೆ ಇತ್ತೀಚಿಗೆ ಯಾರೂ ದಿಕ್ಕಿಲ್ಕದೆ ಮಳೆಯಲ್ಲಿ ನೆನೆಯುತ್ತಿದ್ದ ವೃದ್ದೆಯೊಬ್ಬರಿಗೆ ಮೂಡಲಧ್ವನಿ ವೃದ್ದಾಶ್ರಮದಲ್ಲಿ ಆಸರೆ ಒದಗಿಸಲಾಯಿತು ಎಂದರು.
ಇದೇ ಸಂದರ್ಭದಲ್ಲಿ ಸಾಮಾಜಿಕ ಸೇವೆಗಾಗಿ ಮೂಡಲಧ್ವನಿ ವೃದ್ದಾಶ್ರಮದ ಶಂಕರ್ ಹಾಗೂ ಬಹುವರ್ಷಗಳಿಂದ ಜಿಲ್ಲೆಯಲ್ಲಿ ನೆಲೆಸಿರುವ ಗೋಪಕುಮಾರ್ ಸ್ವಾಮಿನಾಥನ್ ಸ್ವಾಮಿನಾಥ ಅಯ್ಯರ್ ಸುಬ್ರಹ್ಮಣ್ಯ ವೇಣುಗೋಪಾಲ್ ರಾಜಮ್ಮ ಗಂಗಾಧರನ್ ಶಾಂತಮ್ಮ ಅವರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಕಾರ್ಯದರ್ಶಿ ಸೆಬಾಸ್ಟಿಯನ್ ಜೋಕಿಂ ಸಿ ಆರ್ ಹರೀಶ್ ಕೆ ಕೆ ಮೊಹಮ್ಮದ್ ಆಲಿ ಸುಧಾ ರವಿ ಇದ್ದರು ಓಣಂ ವಿಶೇಷ ನೃತ್ಯ ಹಾಗೂ ಸಿಂಗಾರಿ ಮೇಳ ಆಯೋಜಿಸಲಾಗಿತ್ತು.
ಬಿಹಾರ ವಿಧಾನಸಭೆಗೆ ಚುನಾವಣೆ ನಡೆದು ಮೂರೂವರೆ ತಿಂಗಳಾಗುವಷ್ಟರಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಗೆ ಏಕಿಷ್ಟು ಆತುರ? ಏನು ಕಾರಣ ಎನ್ನುವುದಕ್ಕೆಲ್ಲ ಉತ್ತರ…
ಕೃಷ್ಣ ಸಿದ್ದಾಪುರ ತೋಟದ ಮಾಲೀಕನ ದೌರ್ಜನ್ಯಕ್ಕೆ ತುತ್ತಾದ ೮ ಕುಟುಂಬಗಳ ೨೬ ಮಂದಿ ರಕ್ಷಣೆ; ಸಾಬೀತಾಗದ ಆರೋಪ ಸಿದ್ದಾಪುರ: ವ್ಯವಸ್ಥೆಯಲ್ಲಿ ಶತಮಾನಗಳಿಂದ…
ಮಹಾದೇಶ್ ಎಂ ಗೌಡ ಮಾ.೯ರಿಂದ ೫ ದಿನಗಳ ಕಾಲ ನಡೆಯಲಿರುವ ಹಬ್ಬ; ಸಾವಿರಾರು ಜನರು ಸೇರುವ ನಿರೀಕ್ಷೆ ಹನೂರು: ಪಟ್ಟಣದ…
ಸಿರಿ ಮೈಸೂರು ಮೈಸೂರಿನ ನ್ಯಾಯಾಲಯದ ಮುಂಭಾಗದಿಂದ ಮಾಧವ ರಾವ್ ವೃತ್ತದವರೆಗೂ (ಅಗ್ರಹಾರ ವೃತ್ತ) ಇರುವ ರಸ್ತೆಯನ್ನು ವಾಣಿವಿಲಾಸ ರಸ್ತೆ ಎಂದು…
ರಾಧಾ ಆದಿಕಾಲದಿಂದ ಮಾನವರನ್ನು ಮೂಕವಿಸ್ಮಿತನನ್ನಾಗಿ ಮಾಡುತ್ತಾ ಬಂದ ವಿಚಿತ್ರಮಯ ಜಗತ್ ಸೃಷ್ಟಿ ಅವರ ಪಾಲಿಗೆ ಬಿಡಿಸಲಾರದ ಒಗಟು. ಆದಿಮಾನವರಿಗಂತೂ, ಭೂಮ್ಯಾಕಾಶಗಳಲ್ಲಿ…
ಸುಕನ್ಯಾ ಕನಾರಳ್ಳಿ ಹೆಣ್ಣು ನಿಮ್ಮ ಆಸ್ತಿಗೆ ವಾರಸುದಾರರನ್ನ ಹುಟ್ಟಿಸುವ ಕೇವಲ ಗರ್ಭ ಅಲ್ಲ, ಅವಳೊಬ್ಬ ಪ್ರಜೆ, ಅಂತ ಸಾರಿ ಸಾರಿ…