ಕೊಟ್ಟ ಮಾತನ್ನು ಉಳಿಸಿಕೊಳ್ಳದ ಪ್ರತಾಪ್ ಸಿಂಹ ಮಾನ ಮರ್ಯಾದೆ ತೆಗೆದಿದ್ದಾರೆ: ಲಕ್ಷ್ಮಣ್ ಕಿಡಿ
ಮೈಸೂರು: ಬಸ್ ತಂಗುದಾಣದ ಗುಂಬಜ್ ಮಾದರಿಯನ್ನು ಒಡೆದು ಹಾಕುತ್ತೇನೆಂದು ಹೇಳಿರುವ ಪ್ರತಾಪ್ ಸಿಂಹ ಅವರಿಗೆ ತಾಕತ್ತು, ಧಮ್ ಇದ್ದಲ್ಲಿ ಊಟಿ ರಸ್ತೆಯಲ್ಲಿ ಗೋಪುರ ಮಾದರಿಯ ಬಸ್ ತಂಗುದಾಣವನ್ನು ನೆಲಸಮಗೊಳಿಸಲಿ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಲಕ್ಷ್ಮಣ್ ಸವಾಲು ಹಾಕಿದರು.
ನಗರದ ಕಾಂಗ್ರೆಸ್ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಎಂಟು ವರ್ಷಗಳಲ್ಲಿ ಜನರಿಗೆ ಕೊಟ್ಟ ಮಾತನ್ನೂ ಉಳಿಸಿಕೊಳ್ಳದೆ ಸುಳ್ಳು ಹೇಳಿಕೊಂಡು ಕಾಲಾಹರಣ ಮಾಡುತ್ತಿದ್ದಾರೆ. ಸುಳ್ಳು ಹೇಳುವುದರಲ್ಲಿ ಪ್ರತಾಪ್ ಸಿಂಹ ಮೊದಲಿಗರು. ನಾಗನಹಳ್ಳಿ ಬಳಿ ಸ್ಯಾಟಲೈಟ್ ರೈಲ್ವೆ ಟರ್ಮಿನಲ್, ವಿಮಾನ ನಿಲ್ದಾಣ ರನ್ ವೇ ವಿಸ್ತರಣೆ, ಉಂಡುವಾಡಿ ಕುಡಿಯುವ ನೀರಿನ ಯೋಜನೆ, ಕುಶಾಲನಗರಕ್ಕೆ ರೈಲು, ದಸರಾ ಒಳಗೆ ದಶಪಥ ರಸ್ತೆ ಬರಿ ಮಾತಿನಲ್ಲೇ ಇದೆ ಎಂದು ಟೀಕಿಸಿದರು.
ಶಾಸಕ ಎಸ್.ಎ.ರಾಮದಾಸ್ ಹಾಗೂ ಸಂಸದ ಪ್ರತಾಪ್ ಸಿಂಹ ಈ ಇಬ್ಬರ ನಡುವಿನ ವಾರ್‌ನಲ್ಲಿ ಮೈಸೂರಿನ ಮರ್ಯಾದೆ ತೆಗೆಯುತ್ತಿದ್ದಾರೆ. ಬಸ್ ತಂಗುದಾಣಕ್ಕೆ ಅಡ್ಡಿಪಡಿಸಿ ದೊಡ್ಡ ವಿವಾದ ಮಾಡಿರುವ ಸಂಸದರೇ ನಿಮ್ಮ ಮನೆಯಿಂದ ದುಡ್ಡು ತಂದು ನಿರ್ಮಿಸಿದ್ದೀರಾ? ನಗರಾಭಿವೃದ್ಧಿ ಇಲಾಖೆ ನಿಯಮಗಳ ಪ್ರಕಾರ ಗೋಪುರ ಮಾದರಿಯ ಕಟ್ಟಡಗಳಿಗೆ ಅನುಮತಿ ಪಡೆಯಬೇಕಿಲ್ಲ. ಹೀಗಿದ್ದರೂ, ನಗರಪಾಲಿಕೆಯಿಂದ ಅನುಮತಿ ಪಡೆಯಬೇಕೆಂದು ಹೇಳಿರುವುದು ಹಾಸ್ಯಾಸ್ಪದ. ಮುಸ್ಲಿಮರನ್ನು ಟಾರ್ಗೆಟ್ ಮಾಡಿ ಮಾತನಾಡುವುದನ್ನು ನಿಲ್ಲಿಸದಿದ್ದರೆ ಸಂಸದರ ಕಚೇರಿ ಎದುರು ಉಪವಾಸ ಸತ್ಯಾಗ್ರಹ ಮಾಡುತ್ತೇನೆ. ಪೊಲೀಸ್ ಠಾಣೆಗೂ ದೂರು ನೀಡಲಾಗುವುದು ಎಚ್ಚರಿಸಿದರು.
ಮೈಸೂರಿನಲ್ಲೂ ಬಿಜೆಪಿ ನೇಮಿಸಿರುವ ವ್ಯಕ್ತಿಗಳು ಮತದಾರರ ಮಾಹಿತಿ ಸಂಗ್ರಹಿಸುತ್ತಿರುವ ಕುರಿತು ವರದಿ ಬಂದಿರುವುದರಿಂದ ಜಿಲ್ಲಾಧಿಕಾರಿಗಳಿಗೆ ಸೋಮವಾರ ದೂರು ನೀಡಲಾಗುವುದು.
ಪದವಿ ವೈದ್ಯಕೀಯ ಸಮಾಜ ಶಾಸ್ತ್ರದ ಪಠ್ಯದಲ್ಲಿ ಏಡ್ಸ್ ಮತ್ತು ಕ್ಯಾನ್ಸರ್‌ಗೆ ಸ್ವಮೂತ್ರ ಕುಡಿದರೆ ಗುಣವಾಗಲಿದೆ ಅಂತ ಹೇಳಿರುವುದು ಅವೈಜ್ಞಾನಿಕ ಮತ್ತು ಮೂರ್ಖತನದಿಂದ ಕೂಡಿದೆ. ಆರ್‌ಎಸ್‌ಎಸ್ ಪ್ರೇರಿತ ವಿಚಾರಧಾರೆಗಳನ್ನು ಪಠ್ಯದಲ್ಲಿ ಸೇರಿಸಲಾಗಿದೆ. ಒಂದು ವಾರದೊಳಗೆ ಮರು ಮುದ್ರಣ ಮಾಡಿ ಹಂಚಬೇಕು ಎಂದು ಒತ್ತಾಯಿಸಿದರು.
ನಗರ ಕಾಂಗ್ರೆಸ್ ಅಧ್ಯಕ್ಷ ಆರ್.ಮೂರ್ತಿ, ಜಿಪಂ ವಾಜಿ ಅಧ್ಯಕ್ಷ ಬಿ.ಎಂ.ರಾಮು, ಸೇವಾದಳದ ಅಧ್ಯಕ್ಷ ಗಿರೀಶ್ ನಾುಂಕ್, ವಕ್ತಾರ ಕೆ.ಮಹೇಶ್ ಮತ್ತಿತರರು ಹಾಜರಿದ್ದರು.
ಪೊಲೀಸರನ್ನು ಮುಂದಿಟ್ಟುಕೊಂಡು ವೇದಿಕೆಯಲ್ಲಿ ಭಾಷಣ ಮಾಡುವರು ಪುಕ್ಕಲರು. ಚಕ್ರವರ್ತಿ ಸೂಲಿಬೆಲೆಯಂತಹ ಪುಕ್ಕಲರ ಬಗ್ಗೆ ಪ್ರತಿಕ್ರಿಯೆ ಕೊಡಬಾರದು. ಅಡ್ಡಂಡ ಕಾರ್ಯಪ್ಪ ಸಾಂಸ್ಕೃತಿಕ ವೇದಿಕೆಯನ್ನು ರಾಜಕೀಯ ವೇದಿಕೆಯನ್ನಾಗಿ ಮಾಡಿಕೊಂಡಿದ್ದಾರೆ.
-ಎಂ.ಲಕ್ಷ್ಮಣ್
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…