ಸಾರ್ವಜನಿಕರಿಂದ ದೂರು, ಇಬ್ಬರು ಮಹಿಳೆುಂರ ಬಂಧನ!
-ಕೆ.ಬಿ.ಶಂಶುದ್ಧೀನ್
ಕುಶಾಲನಗರ: ದಿನನಿತ್ಯ ವಂಚನೆ ಪ್ರಕರಣಗಳನ್ನು ನಡೆಯುತ್ತಲೇ ಇವೆ. ಆದರೂ ಕೂಡಾ ಹಣದ ಆಸೆಗೆ ವಾರುಹೋಗುವ ಸಾರ್ವಜನಿಕರು, ಮೋಸಗಾರರ ಬಲೆಗೆ ಬೀಳುತ್ತಿದ್ದಾರೆ. ಬಡ್ಡಿರಹಿತ ಲೋನ್‌ಗೆ ಆಸೆಪಟ್ಟು, ಸಾರ್ವಜನಿಕರು ಹಣ ಕಳೆದುಕೊಂಡು ಮೋಸಹೋದ ಘಟನೆ ಕುಶಾಲನಗರದಲ್ಲಿ ನಡೆದಿದೆ.
ಸರ್ಕಾರದಿಂದ ಬಡ್ಡಿರಹಿತ ಸಾಲ ಕೊಡಿಸುವುದಾಗಿ ಸಾರ್ವಜನಿಕರಿಂದ ಹಣ ವಸೂಲಿ ವಾಡುತ್ತಿದ್ದ ಇಬ್ಬರು ಮಹಿಳೆಯರನ್ನು ಸಾರ್ವಜನಿಕರ ದೂರಿನ ಹಿನ್ನಲೆ ಬಂಧಿಸಿದ್ದಾರೆ. ಗೋಣಿಕೊಪ್ಪದ ಕುಸುವಾವತಿ ಹಾಗೂ ಕೂಡ್ಲೂರಿನ ಜಮುನಾ ಬಂಧಿತ ಮಹಿಳೆಯರು. ಇವರು ಸರ್ಕಾರದಿಂದ ಬಡ್ಡಿರಹಿತ ಸಾಲ ಕೊಡಿಸುತ್ತೇವೆ ಎಂದು ಕೊಡಗಿನಾದ್ಯಂತ ಸಾರ್ವಜನಿಕರಿಂದ ತಲಾ ಸಾವಿರ ರೂಗಳನ್ನು ವಸೂಲಿ ವಾಡುತ್ತಾ ಬಂದಿದ್ದಾರೆ. ಒಂದೊಂದು ಗ್ರಾಮದಲ್ಲಿ ೩೦ ಮಹಿಳೆಯರ ಗುಂಪು ವಾಡಿ, ಹಣವನ್ನು ವಸೂಲಿ ವಾಡಿದ್ದಾರೆ.
ಅಲ್ಪಸಂಖ್ಯಾತರಿಗೆ ಅಲ್ಪಸಂಖ್ಯಾತರ ಘಟಕದಿಂದ ಸಾಲ ಕೊಡಿಸುವುದಾಗಿುೂಂ, ಹಿಂದುಳಿದ ವರ್ಗದವರಿಗೆ ಹಾಗೂ ಪರಿಶಿಷ್ಠ ಜಾತಿ ಹಾಗೂ ಪರಿಶಿಷ್ಟ ಪಂಗಡದ ಜನರಿಗೆ ಸಂಬಂಧಪಟ್ಟ ಇಲಾಖೆಯಿಂದ ಬಡ್ಡಿರಹಿತ ಸಾಲ ಕೊಡಿಸುತ್ತೇವೆ ಎಂದು ಆಮಿಷವೊಡ್ಡಿ ಹಣ ಸಂಗ್ರಹಿಸಲಾಗಿದೆ. ಸಾರ್ವಜನಿಕರಿಂದ ಪಡೆದ ಒಂದು ಸಾವಿರ ನಗದನ್ನು ಕುಶಾಲನಗರದ ಕೆನರಾ ಬ್ಯಾಂಕ್‌ನಲ್ಲಿ ಖಾತೆ ತೆರೆದು ಜವಾ ವಾಡಲಾಗುವುದು ಎಂದು ಹೇಳಿ, ಹಣ ವಸೂಲಾತಿ ವಾಡಲಾಗಿದೆ. ಕುಸುವಾವತಿ ಎಂಬ ಮಹಿಳೆಯ ಎಲ್ಲ ಗ್ರಾಮಗಳಲ್ಲಿ ಮಹಿಳೆಯರಿಂದ ಹಣ ವಸೂಲಿ ವಾಡಿದ್ದಾರೆ. ಇವರ ಏಜೆಂಟ್ ಆಗಿ ಜಮುನಾ ಎಂಬವರು ಕಾರ್ಯನಿರ್ವಹಿಸಿದ್ದಾರೆ. ಮಂಗಳೂರಿನ ನಾಗರಾಜ್ ಶೆಟ್ಟಿ ಎಂಬವರು ಇದರ ಕಿಂಗ್ ಆಗಿದ್ದು, ಈ ವ್ಯಕ್ತಿ ಜಿಲ್ಲಾಧಿಕಾರಿಗಳ ಮೂಲಕ ಲೋನ್ ಕೊಡಿಸುವುದಾಗಿ ಕುಸುವಾವತಿಯವರು ಮಹಿಳೆಯರು ಹೇಳಿಕೊಂಡಿದ್ದಾರೆ.
ಸಬ್ಸಿಡಿ ಲೋನ್: ಆರ್ಯ ಜನಾಂಗದವರಿಗೆ ಸಂಬಂಧಿಸಿದ ಇಲಾಖೆಯಿಂದ ಸಬ್ಸಿಡಿ ಲೋನ್ ಕೊಡಿಸುವುದಾಗಿ ಕುಸುವಾವತಿ ಎಂದು ಆಮಿಷವೊಡ್ಡಲಾಗಿದೆ. ಹಿಂದುಳಿಗೆ ವರ್ಗದವರಿಗೆ ಒಂದು ಲಕ್ಷ ರೂ. ಸಬ್ಸಿಡಿ, ಅಲ್ಪಸಂಖ್ಯಾತರಿಗೆ ಹಾಗೂ ಪ.ಪಂ. ಜಾತಿ ಹಾಗೂ ಪ.ಪಂಗಡದವರಿಗೆ ಒಂದೂವರೆ ಲಕ್ಷ ರೂ. ಸಬ್ಸಿಡಿ ದೊರಕುತ್ತದೆ. ಒಟ್ಟು ಎಲ್ಲರಿಗೂ ತಲಾ ಮೂರು ಲಕ್ಷ ರೂ. ಲೋನ್ ಸಿಗುತ್ತದೆ. ನಾಲ್ಕು ವರ್ಷಗಳಲ್ಲಿ ಕಂತುಕಂತಾಗಿ ಸಾಲ ತೀರಿಸಬಹುದಾಗಿದೆ ಎನ್ನಲಾಗಿದೆ.
ವಾದಾಮಟ್ಟಣದಲ್ಲಿ ಸಿಕ್ಕಿಬಿದ್ದ ಮಹಿಳೆ: ಕುಶಾಲನಗರದ ಕೂಡಿಗೆ, ಕೂಡುಮಂಗಳೂರು, ಬೈಚನಹಳ್ಳಿ, ಗೊಂದಿಬಸವನಹಳ್ಳಿ, ಕೊಡಗರ ಹಳ್ಳಿ ಹಾಗೂ ಹಲವೆಡೆ ಮಹಿಳೆಯರಿಂದ ಹಣ ಪಡೆಯಲಾಗಿದ್ದು, ಮಂಗಳವಾರ ವಾದಾಪಟ್ಟಣದಲ್ಲಿ ಮಹಿಳೆಯನ್ನು ಸಾರ್ವಜನಿಕರು ದಿಗ್ಬಂಧನ್ನಕೊಳಪಡಿಸಿದ್ದಾರೆ. ವಾದಾಪಟ್ಟಣದಲ್ಲಿ ೮೭ ಸಾವಿರ ರೂ. ಸಂಗ್ರಹಿಸಲಾಗಿದೆ. ಗೊಂದಿಬಸವನಹಳ್ಳಿಯಲ್ಲಿ ಒಂದು ಲಕ್ಷ ರೂ. ಸಂಗ್ರಹಿಸಲಾಗಿದ್ದು, ಕೊಡಗರಹಳ್ಳಿಯಲ್ಲಿ ೬೯ ಸಾವಿರ ಹಣ ಸಂಗ್ರಹಿಸಲಾಗಿದೆ ಎಂದು ಆಯ ಭಾಗದ ಮಹಿಳೆಯವರು ವಾಹಿತಿ ನೀಡಿದ್ದಾರೆ. ಮಹಿಳೆ ಕೊಡಗಿನಾದ್ಯಂತ ಹಣ ಸಂಗ್ರಹಿಸಿದ್ದು, ಕುಶಾಲನಗರದಲ್ಲಿ ಸುವಾರು ೧೨ ಲಕ್ಷ ರೂ. ಸಂಗ್ರಹಿಸಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪ್ರಕರಣ ದಾಖಲು: ಈ ಘಟನೆ ಬಗ್ಗೆ ಕುಶಾಲನಗರ ಪಟ್ಟಣ ಪೊಲೀಸರು ಸಾರ್ವಜನಿಕರು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಸಿಕೊಂಡಿದ್ದು, ಮಹಿಳೆುಂರನ್ನು ಬಂಧಿಸಿ ತನಿಖೆ ಪ್ರಾರಂಭಿಸಿದ್ದಾರೆ. ಘಟನೆ ಬಗ್ಗೆ ಸೂಕ್ತ ತನಿಖೆ ನಡೆಸಿ ಜನರ ಹಣವನ್ನು ಹಾಗೂ ಪಡೆಯಲಾಗಿರುವ ದಾಖಲಾತಿಗಳನ್ನು ಹಿಂದಿಗಿಸಬೇಕು ಎಂದು ಕುಶಾಲನಗರದ ಎಸ್.ಡಿ.ಪಿ.ಐ. ಘಟಕದ ಅಧ್ಯಕ್ಷ ಜಕ್ರಿಯಾ ಒತ್ತಾಯಿಸಿದ್ದಾರೆ.
ನಾನು ಪೊಲೀಸ್ ಎಂದಿದ್ದ ಮಹಿಳೆ!
ಪೊಲೀಸರ ವಶದಲ್ಲಿರುವ ಕುಸುವಾವತಿ ಎಂಬ ಮಹಿಳೆಯರು ಬೇರೆ ಬೇರೆ ಕಡೆಗಳಲ್ಲಿ ನಾನಾ ಹೆಸರನ್ನು ಹೇಳಿಕೊಂಡಿದ್ದಾರೆ. ಈಕೆ ಪೊಲೀಸ್ ಹುದ್ದೆ ನಿರ್ವಹಿಸುವುದಾಗಿಯೂ, ರಾತ್ರಿ ಪಾಳಿ ವಾಡುವುದಾಗಿ ಹೇಳಿಕೊಂಡಿದ್ದಾರೆ. ಪೊಲೀಸ್ ಹುದ್ದೆಯಲ್ಲಿರುವುದರಿಂದ ವಂಚಿಸುವುದಿಲ್ಲ ಎಂದು ಸಾರ್ವಜನಿಕರು ನಂಬಿಕೆಯಿಂದ ಹಣ ನೀಡಿದ್ದಾರೆ.
ನಾಳೆಯಿಂದ ಬಿಜೆಪಿ ಪ್ರತಿಭಟನೆ: ಸಂಸದರ ಮಾಹಿತಿ ಮೈಸೂರು : ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಕುರಿತ ಅವಹೇಳನಕಾರಿ ವೀಡಿಯೋ ಮಾಡಿದವರ…
ಬೆಳಗಾವಿ : ಮುಂದಿನ ಮಾರ್ಚ್‌ನಿಂದ ಎರಡೂವರೆ ಸಾವಿರ ಮೆಗಾ ವ್ಯಾಟ್ ಸೌರಶಕ್ತಿ ವಿದ್ಯುತ್ ಸೇರ್ಪಡೆಯಾಗುತ್ತಿದ್ದು, ಗೃಹ ಬಳಕೆ ಹಾಗೂ ಕೈಗಾರಿಕೆಗಳಿಗೆ…
ಬೆಳಗಾವಿ : ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿರುವ ಕೈದಿಗಳಿಗೆ ರಾಜ್ಯಾಥಿತ್ಯ ಸೌಲಭ್ಯಗಳು ಸಿಗುತ್ತಿರುವ ಬಗ್ಗೆ ವಿಧಾನಪರಿಷತ್‌ನಲ್ಲಿ ಪ್ರಸ್ತಾಪವಾಯಿತು. ಶೂನ್ಯವೇಳೆಯಲ್ಲಿ ಸದಸ್ಯ ಧನಂಜಯ್…
ಬೆಂಗಳೂರು : ನಟ ದರ್ಶನ್ ಅವರ ಅನುಪಸ್ಥಿತಿಯಲ್ಲಿ ದಿ ಡೆವಿಲ್ ಸಿನಿಮಾ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾವನ್ನು ಅಭಿಮಾನಿಗಳು, ದರ್ಶನ್…
ಬೆಳಗಾವಿ : ರಾಜ್ಯದಲ್ಲಿ ಹೊಸ ಶಾಲಾ ಕೊಠಡಿಗಳ ನಿರ್ಮಾಣಕ್ಕೆ 360 ಕೋಟಿ ರೂ. ಬಿಡುಗಡೆ ಮಾಡಲಾಗುವುದು ಎಂದು ಶಾಲಾ ಶಿಕ್ಷಣ…
ಬೆಳಗಾವಿ : ರಾಜ್ಯದಲ್ಲಿ ಹೊಸ ತಾಲ್ಲೂಕುಗಳಲ್ಲಿ ಸದ್ಯಕ್ಕೆ ತಾಲ್ಲೂಕು ಮಟ್ಟದ ಆಸ್ಪತ್ರೆಗಳ ಮಂಜೂರಾತಿ ಇಲ್ಲ ಎಂದು ಆರೋಗ್ಯ ಮತ್ತು ಕುಟುಂಬ…