ಜಿಲ್ಲೆಗಳು

ಮುಡಾ ಭೂಮಿಗೆ ಸಾಲ ನೀಡಿ ಮೋಸ ಹೋದ ಬ್ಯಾಂಕ್‌ ಆಫ್‌ ಬರೋಡ

ನಕಲಿ ಖಾತೆಯ ಭೂಮಿಗೆ 14 ಕೋಟಿ ಸಾಲ ನೀಡಿದ್ದ ಬ್ಯಾಂಕ್‌ 

ಮೈಸೂರು: ಭೂ ಖರೀದಿಯ ದಾಖಲೆ ಖಚಿತಪಡಿಸಿಕೊಳ್ಳಲು ಬ್ಯಾಂಕ್ ಸಾಲ ಪಡೆಯುವುದೇ ನಿಖರತೆ ಎನ್ನುವ ಮಾತು ಇರುವಾಗ ಮುಡಾಕ್ಕೆ ಸೇರಿದ ಕೋಟ್ಯಂತರ ರೂ. ಬೆಲೆ ಬಾಳುವ ಭೂಮಿಯ ನಕಲಿ ಖಾತೆ ಸೃಷ್ಟಿಸಿ ಬರೋಬ್ಬರಿ ೧೪ ಕೋಟಿ ರೂ. ಸಾಲ ಪಡೆದು ವಂಚಿಸಿರುವ ಪ್ರಕರಣ ಬಯಲಾಗಿದೆ.

ಮುಡಾಗೆ ಸೇರಿದ ಸುಮಾರು ೨೫ ಕೋಟಿ ರೂ. ಬೆಲೆ ಬಾಳುವ ನಿವೇಶನಕ್ಕೆ ನಕಲಿ ದಾಖಲೆ ಸೃಷ್ಟಿಸಿ ರಾಷ್ಟ್ರೀಕೃತ ಬ್ಯಾಂಕ್‌ನಲ್ಲಿ ಅಡವಿಟ್ಟ ಭೂಗಳ್ಳರು ಸಾಲ ಪಡೆದಿದ್ದು, ಇದನ್ನು ಗಂಭೀರವಾಗಿ ಪರಿಗಣಿಸಿರುವ ಮುಡಾ ಅಧಿಕಾರಿಗಳು ಭೂಗಳ್ಳರ ವಿರುದ್ದ ವಿದ್ಯಾರಣ್ಯಪುರಂ ಠಾಣೆಯಲ್ಲಿ ಮಂಗಳವಾರ ಪ್ರಕರಣ ದಾಖಲಿಸಿದ್ದಾರೆ.
ಮೈಸೂರು ನಗರದ ಇಂಡಸ್ಟ್ರಿಯಲ್‌  ಸಬರ್ಬ್ ಎರಡನೇ ಹಂತ ವಿಶ್ವೇಶ್ವರನಗರದ ಶ್ರೀ ಜುಂಚಾಮರಾಜೇಂದ್ರ ಪಿಯು ಕಾಲೇಜು ಶಾರದಾ ವಿದ್ಯಾಮಂದಿರ ಮುಂಭಾಗವಿರುವ ಕೈಗಾರಿಕಾ ನಿವೇಶನ ಸಂಖ್ಯೆ ೩೬/ಎ ೨೮೫*೨೦೦ ಅಡಿ ವಿಸ್ತೀರ್ಣ ೫೭ ಸಾವಿರ ಚದರಡಿ ಅಳತೆಯ ನಿವೇಶನವು ಮೈಸೂರು ನಗರಾಭಿವೃದ್ದಿ ಪ್ರಾಧಿಕಾರಕ್ಕೆ ಸೇರಿದ ಆಸ್ತಿಯಾಗಿದೆ. ಪ್ರಾಧಿಕಾರದ ದಾಖಲೆಗಳ ಪ್ರಕಾರ ಈವರೆಗೆ ಈ ನಿವೇಶನ ಯಾರಿಗೂ ಮಂಜೂರಾಗಿಲ್ಲ. ಈ ನಿವೇಶನವನ್ನು ಹರಾಜು ಹಾಕಲು ಹಲವಾರು ಬಾರಿ ಪ್ರಕಟಣೆ ಕೊಟ್ಟು ಹರಾಜಿಗೆ ಆಹ್ವಾನಿಸಿದರೂ ಪ್ರಕ್ರಿಯೆ ಯಶಸ್ವಿಯಾಗಲಿಲ್ಲ.

ಇದನ್ನೇ ಬಂಡವಾಳ ಮಾಡಿಕೊಂಡ ಖಾಸಗಿ ಪ್ರಾಪರ್ಟೀಸ್‌ನ ವಾಲೀಕರಾದ ಲಕ್ಷ್ಮೇಗೌಡ, ಜಗದೀಶ್, ಶಶಿ ಹಾಗೂ ನಂಜಪ್ಪ ಅವರು ಕೋಟ್ಯಂತರ ರೂಪಾಯಿ ಬೆಲೆ ಬಾಳುವ ನಿವೇಶನಕ್ಕೆ ನಕಲಿ ದಾಖಲೆಗಳನ್ನ ಸೃಷ್ಟಿಸಿದ್ದಾರೆ. ಇದೇ ನಕಲಿ ದಾಖಲೆಗಳನ್ನು ಹಾಸನದಲ್ಲಿರುವ ಬ್ಯಾಂಕ್ ಆಫ್ ಬರೋಡ ಶಾಖೆಯಲ್ಲಿ ಅಡವಿಟ್ಟು ಬರೋಬರಿ ೧೪ ಕೋಟಿ ರೂ. ಸಾಲ ಪಡೆದಿದ್ದಾರೆ.ದಾಖಲೆಗಳನ್ನು ನಿಯಮಾನುಸಾರ ಪರಿಶೀಲಿಸದ ಬ್ಯಾಂಕ್ ಅಧಿಕಾರಿಗಳು ಕಳೆದ ೨೦೧೮ರ ಅಕ್ಟೋಬರ್ ತಿಂಗಳಲ್ಲಿ ಭಾರಿ ಮೊತ್ತದ ಹಣವನ್ನೇ ಸಾಲವಾಗಿ ಕೊಟ್ಟಿದ್ದಾರೆ. ಈ ಎಲ್ಲ ಅಕ್ರಮಗಳ ಬಗ್ಗೆ ದಾಖಲೆ ಸಂಗ್ರಹಿಸಿದ ಸಾಮಾಜಿಕ ಕಾರ್ಯಕರ್ತ ಬಿ.ಎನ್.ನಾಗೇಂದ್ರ ಮುಡಾ ಆಯುಕ್ತ ಜಿ.ಟಿ.ದಿನೇಶ್ ಕುಮಾರ್‌ ಗೆ  ಲಿಖಿತ ರೂಪದಲ್ಲಿ ದೂರು ಕೊಟ್ಟಿದ್ದಾರೆ.

ನಂತರ ಎಚ್ಚೆತ್ತ ಆಯುಕ್ತರು ಹಾಗೂ ಕಾರ್ಯದರ್ಶಿ ಡಾ.ಎನ್.ಸಿ ವೆಂಕಟರಾಜು ದಾಖಲೆಗಳನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಅಕ್ರಮ ನಡೆದಿರುವುದು ಖಚಿತವಾಗಿದೆ. ಸಾಲ ಪಡೆಯುವಾಗ ಭೂಗಳ್ಳರು ಒದಗಿಸಿರುವ ದಾಖಲೆಗಳನ್ನು ಸಂಪೂರ್ಣವಾಗಿ ಒದಗಿಸುವಂತೆ ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳಿಗೆ ಮುಡಾ ಆಯುಕ್ತರು ಪತ್ರ ಬರೆದಿದ್ದಾರೆ.ಈ ಪತ್ರಕ್ಕೆ ಬ್ಯಾಂಕ್ ಅಧಿಕಾರಿಗಳಿಂದ ಇದುವರೆಗೆ ಉತ್ತರದ ರೂಪದಲ್ಲಿ ಪ್ರತಿಕ್ರಿಯೆ ಬಂದಿಲ್ಲ. ಕೂಡಲೇ ಮುಡಾ ಆಯುಕ್ತರು ಪ್ರಾಧಿಕಾರದ ವಿಶೇಷ ತಹಸಿಲ್ದಾರ್ ಆರ್.ಮಂಜುನಾಥ್ ಮೂಲಕ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ಲಕ್ಷ್ಮೇಗೌಡ, ಜಗದೀಶ, ಶಶಿ ಹಾಗೂ ನಂಜಪ್ಪ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.


 

ದಾನ ಮಾಡಿದ ಕಿಲಾಡಿಗಳು

ಬ್ಯಾಂಕ್‌ನಲ್ಲಿ ಸಾಲ ಪಡೆಯುವುದಕ್ಕೆ ಸೀಮಿತವಾಗದ ಪ್ರಾಪರ್ಟೀಸ್‌ನ ಪಾಲುದಾರ ನಂಜಪ್ಪ ನಂಜನಗೂಡು ತಾಲ್ಲೂಕಿನ ಕುಪ್ಪರವಳ್ಳಿಯ ನಿವಾಸಿಯಾಗಿದ್ದು, ೨೦೨೦ರಲ್ಲಿ ತನ್ನ ಸ್ನೇಹಿತನ ಮಗ ಹೇಮಂತರಾಜು ಎಂಬವರಿಗೆ ದಾನಪತ್ರ ಮಾಡಿದ್ದಾನೆ. ಮುಡಾ ಆಸ್ತಿಯನ್ನು ಬ್ಯಾಂಕ್‌ನಲ್ಲಿ ಅಡವಿಟ್ಟು ಸಾಲ ಪಡೆದ ನಂತರದ ಮೇಲೂ ದಾನಪತ್ರವನ್ನೂ ಸಹ ಮಾಡಿದ್ದಾರೆ.

ಅಭಿವೃದ್ದಿಗೆ ವೆಚ್ಚ

ಮತ್ತೊಂದು ಅಚ್ಚರಿಯ ಸಂಗತಿ ಎಂದರೆ ಈ ಭೂಗಳ್ಳರು ೨೦೧೮ ರಲ್ಲಿ ಮುಡಾ ಅಧಿಕಾರಿಗಳ ಗಮನಕ್ಕೆ ಬಾರದಂತೆ ಭಾರೀ ಮೊತ್ತದ ಸಾಲ ಪಡೆದರೆ ಮತ್ತೊಂದೆಡೆ ಮುಡಾ ಅಧಿಕಾರಿಗಳು ಈ ನಿವೇಶನದ ಅಭಿವೃದ್ದಿಗಾಗಿ ೨೦೨೧ ರಲ್ಲಿ ೪ ಲಕ್ಷ ೪೪ ಸಾವಿರ ಖರ್ಚು ಮಾಡಿರುವುದು ಗಮನಿಸಬಹುದಾಗಿದೆ.


ನಕಲಿ ದಾಖಲೆಗಳನ್ನು ಸೃಷ್ಟಿಸಿ ಬ್ಯಾಂಕ್‌ನಿಂದ ಸಾಲ ಪಡೆದಿರುವ ವಿಚಾರ ಗೊತ್ತಾದ ತಕ್ಷಣವೇ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುವ ಜತೆಗೆ ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ಭೂಗಳ್ಳರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುತ್ತೇವೆ. ನಿವೇಶನವನ್ನು ಪ್ರಾಧಿಕಾರಕ್ಕೆ ವಶಕ್ಕೆ ಪಡೆದುಕೊಳ್ಳಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳುತ್ತೇವೆ.

-ಜಿ.ಟಿ.ದಿನೇಶ್‌ಕುಮಾರ್, ಆಯುಕ್ತರು,ಮುಡಾ.

andolanait

Recent Posts

ಮಳವಳ್ಳಿ ದರೋಡೆ ಪ್ರಕರಣ : ನಾಲ್ವರು ಆರೋಪಿಗಳ ಬಂಧನ

ಮಳವಳ್ಳಿ : ತಾಲೂಕಿನ ಹಲಗೂರು ಸಮೀಪದ ಜೂಗನಹಳ್ಳಿ ವ್ಯಾಪ್ತಿಯ ತೋಟದ ಮನೆಗೆ ನುಗ್ಗಿ ಮಾರಕಾಸ್ತ್ರ ತೋರಿಸಿ ಚಿನ್ನ ದೋಚಿ ಪರಾರಿಯಾಗಿದ್ದ…

3 hours ago

ಪ್ರಚೋದನಕಾರಿ ಭಾಷಣ ; ಯತ್ನಾಳ್, ಅನಂತ್ ಕುಮಾರ್ ಹೆಗ್ಡೆ ವಿರುದ್ಧ ದೂರು ದಾಖಲು

ಮದ್ದೂರು : ಹಿಂದೂ ಪರ ಸಂಘಟನೆಗಳ ವತಿಯಿಂದ ಹಮ್ಮಿಕೊಂಡಿದ್ದ ಬಲಿದಾನ್‌ ದಿವಾಸ್ ಕಾರ್ಯಕ್ರಮದಲ್ಲಿ ಅನ್ಯ ಕೋಮಿನ ಭಾವನೆಗಳಿಗೆ ಧಕ್ಕೆ ತರುವ…

3 hours ago

ಆನೆ ಹಾವಳಿ ತಡೆಗೆ ಶಾಶ್ವತ ಪರಿಹಾರ : ಸಚಿವ ಖಂಡ್ರೆ ಭರವಸೆ

ಬೆಂಗಳೂರು : ಗ್ರಾಮಗಳಿಗೆ ನುಗ್ಗಿ ಬೆಳೆಹಾನಿ, ಜೀವಹಾನಿ ಮಾಡುತ್ತಿರುವ ಆನೆಗಳ ಸೆರೆಗೆ ಆದೇಶ ನೀಡಿದ್ದು, ಈಗಾಗಲೇ 2 ಆನೆ ಸೆರೆ…

4 hours ago

ಭದ್ರಾ ಅಭಯಾರಣ್ಯ ಪರಿಸರ ಸೂಕ್ಷ್ಮ ಪ್ರದೇಶ ಗುರುತಿಸಲು ಕ್ರಮ : ಈಶ್ವರ ಖಂಡ್ರೆ

ಬೆಂಗಳೂರು : ಭದ್ರಾ ಅಭಯಾರಣ್ಯದ ಪರಿಸರ ಸೂಕ್ಷ್ಮ ವಲಯ ಪ್ರದೇಶವನ್ನು ನಿಗದಿ ಪಡಿಸುವ ಕುರಿತಂತೆ ಚಿಕ್ಕಮಗಳೂರು ಜಿಲ್ಲೆಯ ಜನಪ್ರತಿನಿಧಿಗಳೊಂದಿಗೆ ಸಭೆ…

4 hours ago

ಎಲ್‌ಪಿಜಿ ರಿಫಿಲಿಂಗ್‌ ಅವಧಿ ಹೆಚ್ಚಳ ; ವದಂತಿ ನಿರಾಕರಿಸಿದ ಕೇಂದ್ರ

ಹೊಸದಿಲ್ಲಿ : ಎಲ್‌ಪಿಜಿ ಸಿಲಿಂಡರ್ ರಿಫಿಲಿಂಗ್‌ ಸಮಯ ಮಿತಿ ಬದಲಾವಣೆ ಬಗ್ಗೆ ಹಲವು ಊಹಾಪೋಹಗಳು ಹರಡಿದ್ದು, ಇದೀಗ ಪೆಟ್ರೋಲಿಯಂ ಮತ್ತು…

4 hours ago

ಆಕಸ್ಮಿಕ ಬೆಂಕಿ; ಸ್ಕೂಟಿ ಭಸ್ಮ, ಮಹಿಳೆ ಪಾರು

ನಾಪೋಕ್ಲು : ದ್ವಿಚಕ್ರ ವಾಹನವೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿ ಹೊತ್ತಿ ಉರಿದ ಘಟನೆ ಚೈಯಂಡಾಣೆಯ ನರಿಯಂದಡ ಗ್ರಾಮದಲ್ಲಿ ಜರುಗಿದೆ. ಸ್ಥಳೀಯ…

4 hours ago