ಜಿಲ್ಲೆಗಳು

KSOU 2013-14, 2014-15 ಸಾಲಿನ ವಿದ್ಯಾರ್ಥಿಗಳಿಗೆ ಕೊನೆಗೂ ನೆಮ್ಮದಿ

ಬೆಂಗಳೂರು: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯ ೨೦೧೩-೧೪, ೨೦೧೪-೨೦೧೫ ನೇ ಸಾಲುಗಳ ಯುಜಿಸಿ ಮಾನ್ಯತೆ ತೊಡಕಿಗೆ ಸಿಲುಕಿದ್ದ ಇನ್‌ಹೌಸ್ ಅಡ್ಮಿಟೆಡ್ ನಾನ್ ಟೆಕ್ನಿಕಲ್ ಕೋರ್ಸ್ ವಿದ್ಯಾರ್ಥಿಗಳಿಗೆ ರಾಜ್ಯ ಉಚ್ಚ ನ್ಯಾಯಾಲಯ ಗುರುವಾರ ಸಿಹಿ ಸುದ್ಧಿ ನೀಡಿದೆ.

ಕರಾಮುವಿ ೨ ತಿಂಗಳ ಅವಧಿಯೊಳಗೆ ಪರಿನಿಯಮಾನುಸಾರ ಪರೀಕ್ಷೆ ಬರೆದು ಪಾಸಾದ ಸದರಿ ಸಾಲುಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿಗಳನ್ನು ನೀಡುವಂತೆ ಉಚ್ಚ ನ್ಯಾಯಾಲಯ  ಆದೇಶಿಸಿದೆ. ಜತೆಗೆ ರಾಜ್ಯ ಸರ್ಕಾರ ಹಾಗೂ ಅಂಗ ಸಂಸ್ಥೆಗಳು ಸದರಿ ಸಾಲಿನ ವಿದ್ಯಾರ್ಥಿಗಳ ಪದವಿ ಪರಿಗಣಿಸುವಂತೆಯೂ ನ್ಯಾಯಾಲಯ ಸೂಚಿಸಿದೆ.

ಪ್ರಕರಣದ ಹಿನ್ನೆಲೆ ಇಂತಿದೆ.

೨೦೧೩ ನೇ ಸಾಲಿಗಿಂತ ಹಿಂದಿನ ಮಾನ್ಯತೆ ಇದ್ದ ಅವದಿಯ ವಿವಿ ಪದವಿಗಳನ್ನೂ ತಿರಸ್ಕರಿಸುತ್ತಿದ್ದ ಕಾರಣ ರಾಜ್ಯ ಸರ್ಕಾರ ಹಾಗೂ ಕೆಪಿಎಸ್‌ಸಿ ವಿರುದ್ದ ನ್ಯಾಯಾಲಯದ ಮೊರೆ ಹೋಗಲಾಗಿತ್ತು. ( ಡಬ್ಲ್ಯುಪಿ ೩೪೨೫೫/೨೦೧೬ರ ೨೭.೬.೨೦೧೭). ಪ್ರಕರಣದಲ್ಲಿ ವಿವಿ ಪರ ತೀರ್ಪಿನಂತೆ ವಿವಿ ಪದವೀದರನ್ನು ಪರಿಗಣಿಸಲು ಅನುಕೂಲ ಮಾಡಿಕೊಡಲಾಗಿತ್ತು.

ಕರಾಮುವಿ ಶಿಕ್ಷಕೇತರ ನೌಕರರ ಸಂಘ(ರಿ) ಸಲ್ಲಿಸಿರುವ ಡಬ್ಲ್ಯುಪಿ ೪೮೩೭೯/೨೦೧೭ ಪ್ರಕರಣದಲ್ಲಿನ ೦೧.೦೨.೨೦೧೮ರ ಮಧ್ಯಂತರ ಆದೇಶ  ಅನ್ವಯ ರಾಜ್ಯ ಸರ್ಕಾರ ೦೩.೦೫.೨೦೧೮ ರಂದು ಆದೇಶ ಹೊರಡಿಸಿ ಕರಾಮುವಿಯ ೨೦೧೩-೧೪, ೨೦೧೪-೨೦೧೫ನೇ ಸಾಲುಗಳ ಯುಜಿಸಿ ಮಾನ್ಯತೆ ತೊಡಕಿಗೆ ಸಿಲುಕಿದ್ದ ಇನ್‌ಹೌಸ್ ಅಡ್ಮಿಟೆಡ್ ನಾನ್ ಟೆಕ್ನಿಕಲ್ ಕೋರ್ಸ್ ವಿದ್ಯಾರ್ಥಿಗಳ ಪದವಿಗಳನ್ನು ನೇಮಕಾತಿ/ಬಡ್ತಿ ಹಾಗೂ ಉನ್ನತ ವ್ಯಾಸಂಗಕ್ಕೆ ಪರಿಗಣಿಸಲು ಆದೇಶಿಸಿತ್ತು. ಈ ಅವಧಿಯಲ್ಲಿ ಕುಲಪತಿಯಾಗಿದ್ದ ಪ್ರೊ.ಶಿವಲಿಂಗಯ್ಯ ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಅಗತ್ಯ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಆ ಮೂಲಕ ಅವರ ಹಿಂದಿನ  ಶ್ರಮವೂ ನ್ಯಾಯಾಲಯದ ಈ ಆದೇಶಕ್ಕೆ ಕಾರಣವಾಗಿದೆ.

ಮೇಲಿನ ತೀರ್ಪಿಗೊಳಪಟ್ಟಿರುವ ಪ್ರಕರಣಗಳಲ್ಲಿನ ಮಧ್ಯಂತರ ಆದೇಶ ಆಧಾರದಲ್ಲಿ ವಿವಿಯು ೨೦೧೯ ರಿಂದಲೂ ಅಂಕಪಟ್ಟಿ ಹಾಗೂ ಪ್ರಾವಿಷನಲ್ ಪಾಸ್ ಸರ್ಟಿಫಿಕೇಟ್ ನೀಡುತ್ತಾ ಬರುತ್ತಿದೆ.

ಪ್ರಸ್ತುತ ೦೩.೦೮.೨೦೨೨ರ ಸಾಮಾನ್ಯ ಆದೇಶಕ್ಕೆ ಒಳಪಟ್ಟಿರುವ  ಒಳಪಟ್ಟಿರುವ ೨೦೧೩-೧೪ ಮತ್ತು ೨೦೧೪-೧೫ ಇನ್ ಹೌಸ್ ವಿದ್ಯಾರ್ಥಿಗಳ ಈ ಪ್ರಕರಣಗಳಲ್ಲಿ ಯುಜಿಸಿ ವಿರುದ್ಧ ಮುಖ್ಯ ಮನವಿ  ಇದ್ದು, ಅವರ ಶಿಕ್ಷಣ ಕ್ರಮ ಮತ್ತು ಪದವಿಗಳು ತಾಂತ್ರಿಕವಾಗಿ ನಿಯಮಾನುಸಾರ ವಿದ್ದುದರಿಂದ ಹಾಗೂ ಯುಜಿಸಿ ತಜ್ಞರ ಸಮಿತಿ ವಿವಿಯಿಂದ ನೇರವಾಗಿ ನಿರ್ವಹಿಸಲ್ಪಡುವ ಈ ಪ್ರವೇಶಾತಿ/ ಪದವಿಗಳ ಬಗ್ಗೆ ಯಾವುದೇ ತಕರಾರು ವ್ಯಕ್ತಪಡಿಸದಿದ್ದುದರಿಂದ ವಿದ್ಯಾರ್ಥಿಗಳಿಗೆ ಒತ್ತಾಸೆಯಾಗಿಯೇ ವಿವಿ ಪರವಾದ ಹಾಗೂ ದಾಖಲೆಗಳನ್ನು ಮಂಡಿಸಲಾಗಿದ್ದು ಈ ದಿವಸ ಈ ಮಹತ್ವದ ತೀರ್ಪಿಗೆ ದಾರಿಯಾಗಿದೆ.

ತೀರ್ಪಿನಲ್ಲಿ, ಕರಾಮುವಿಯು ೨ ತಿಂಗಳ ಅವಧಿಯೊಳಗೆ ಪರಿನಿಯಮಾನುಸಾರ ಪರೀಕ್ಷೆ ಬರೆದು ಪಾಸಾದ ಸದರಿ ಸಾಲುಗಳ ವಿದ್ಯಾರ್ಥಿಗಳಿಗೆ ಅಂಕಪಟ್ಟಿ ಹಾಗೂ ಪದವಿಗಳನ್ನು ನೀಡುವಂತೆ ಆದೇಶಿಸಿದೆ. ಜತೆಗೆ ರಾಜ್ಯ ಸರ್ಕಾರ ಹಾಗೂ ಅಂಗ ಸಂಸ್ಥೆಗಳು ಸದರಿ ಸಾಲಿನ ವಿದ್ಯಾರ್ಥಿಗಳ ಪದವಿ ಪರಿಗಣಿಸುವಂತೆ ಸೂಚಿಸಿದೆ.

ಯುಜಿಸಿ, ೬ ವಾರಗಳ ಅವದಿಯೊಳಗೆ ವಿಚಾರಣೆಯನ್ನು ನಡೆಸಿ ಕರಾಮುವಿಯ ಒಡಿಎಲ್  ಮತ್ತು ಇನ್ ಹೌಸ್ ವ್ಯವಸ್ಥೆಯ ಮೂಲಕ ರಿಟ್ ಅರ್ಜಿದಾರರ ವ್ಯಾಸಂಗವಾಗಿದೆಯೇ, ಈ ಸಂದರ್ಭದಲ್ಲಿ ವಿವಿಯಿಂದ ಯುಜಿಸಿಯ ನಿಯಮಗಳು, ಶೈಕ್ಷಣಿಕ ಮಾನದಂಡಗಳೇನಾದರೂ ಉಲ್ಲಂಘನೆಯಾಗಿವೆಯೇ ಎಂಬುದನ್ನು ಪರಿಶೀಲಿಸಿ ಮಾನ್ಯತೆ ನೀಡಲು ಪರಿಗಣಿಸತಕ್ಕದ್ದು ಹಾಗೂ ಈ ಪ್ರಕ್ರಿಯೆಗೆ ಕರಾಮುವಿಯು ಪೂರಕ ದಾಖಲೆಗಳನ್ನು ಒದಗಿಸತಕ್ಕದ್ದೆಂದು ಆದೇಶಿಸಿದೆ.

andolanait

Recent Posts

ಡೇವಿಡ್‌ ಬ್ಯಾಟಿಂಗ್‌ ಅಬ್ಬರ ; ಆರ್‌ಸಿಬಿಗೆ ವಿಕ್ಟರಿ, ಚೆನ್ನೈಗೆ ಸೋಲು

ಬೆಂಗಳೂರು : ನಾಯಕ ರಜತ್‌ ಪಾಟೀದಾರ್‌, ಟಿಮ್ ಡೇವಿಡ್, ದೇವ್‌ದತ್ ಪಡಿಕ್ಕಲ್ ಅವರ ಸ್ಪೋಟಕ ಬ್ಯಾಟಿಂಗ್‌ ನೆರವಿನಿಂದ ರಾಯಲ್‌ ಚಾಲೆಂಜರ್ಸ್‌…

6 hours ago

ಮತ್ತೆ ಬೆದರಿಕೆ ಒಡ್ಡಿದ ಟ್ರಂಪ್‌ ; ಕ್ಯಾರೆ ಎನ್ನದ ಇರಾನ್‌

ವಾಷಿಂಗ್ಟನ್ : ಹೊರ್ಮುಜ್ ಜಲಸಂಧಿಯನ್ನು ಸಂಚಾರಕ್ಕೆ ಮುಕ್ತಗೊಳಿಸದಿದ್ದರೆ ಇರಾನ್‌ನ ವಿದ್ಯುತ್ ಸ್ಥಾವರಗಳು ಮತ್ತು ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಅಮೆರಿಕದ…

9 hours ago

ಶರಣ್ಯ ಸುರಕ್ಷಿತ ; ಅಧಿಕಾರಿ, ಸಿಬ್ಬಂದಿ, ಬುಡಕಟ್ಟು ಜನರಿಗೆ ಅಭಿನಂದನೆ ಸಲ್ಲಿಸಿದ ಖಂಡ್ರೆ

ಬೆಂಗಳೂರು : ಕೊಡಗು ಜಿಲ್ಲೆಯ ತಡಿಯಾಂಡಮೋಳ್ ಶಿಖರಕ್ಕೆ ಕೇರಳದಿಂದ ಚಾರಣಕ್ಕಾಗಿ ಬಂದು ಏಪ್ರಿಲ್ 2 ರಂದು ನಾಪತ್ತೆಯಾಗಿದ್ದ ಜಿ.ಎಸ್. ಶರಣ್ಯ…

9 hours ago

KSOU | ಕುಲಸಚಿವೆಯಾಗಿ ಕೆಎಎಸ್‌ ಅಧಿಕಾರಿ ಕುಸುಮಾಕುಮಾರಿ ನೇಮಕ

ಮೈಸೂರು : ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಕುಲಸಚಿವರಾಗಿ ಕೆಎಎಸ್ ಅಧಿಕಾರಿ ಎಸ್.ಕುಸುಮಾಕುಮಾರಿ ಅವರನ್ನು ಸರ್ಕಾರ ನೇಮಕ ಮಾಡಿದೆ. ಈವರೆಗೆ…

9 hours ago

ಏ.9ರವರೆಗೆ ರಾಜ್ಯಾದ್ಯಂತ ಯಲ್ಲೋ ಅಲರ್ಟ್, ಮಳೆ ಮುನ್ಸೂಚನೆ

ಮೈಸೂರು : ಭಾರತೀಯ ಹವಾಮಾನ ಇಲಾಖೆಯು ಕರಾವಳಿ ಕರ್ನಾಟಕ, ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಏ.9ರವರೆಗೆ ಯಲ್ಲೋ…

10 hours ago

ಕಾಂತರಾಜು-ಹೆಗಡೆ ವರದಿಗಳು ಇನ್ನೂ ಸ್ಟೋರೇಜ್‌ನಲ್ಲೇ ಏಕಿದೆ? ; ಕುಮಾರಸ್ವಾಮಿ ಪ್ರಶ್ನೆ

ದಾವಣಗೆರೆ : ಕಾಂತರಾಜು ವರದಿ ಈಗ ನಿಮ್ಮ ಬಳಿಯೇ ಇದೆ. ಜಯಪ್ರಕಾಶ ಹೆಗಡೆ ಅವರ ವರದಿಯು ಸ್ವೀಕರಿಸಿದ್ದೀರಿ. ಎರಡು ವರದಿಗಳನ್ನು…

10 hours ago