ಜಿಲ್ಲೆಗಳು

ಕೊಳ್ಳೇಗಾಲ ನಗರಸಭೆ : 25 ನಾಮಪತ್ರಗಳ ಸಲ್ಲಿಕೆ

ಕೊಳ್ಳೇಗಾಲ: ನಗರಸಭೆ ಉಪ ಚುನಾವಣೆಗೆ ಕೊನೆಯ ದಿನವಾದ ಸೋಮವಾರ ಒಟ್ಟು ೨೫ ಮಂದಿ ನಾಮಪತ್ರಗಳು ಸಲ್ಲಿಕೆಾಂಗಿವೆ. ಕಾಂಗ್ರೆಸ್‌ನಿಂದ ಏಳು, ಬಿಜೆಪಿಯಿಂದ ಏಳು, ಬಿಎಸ್ಪಿಯಿಂದ ಮೂರು, ಜಾ.ದಳದಿಂದ ಎರಡು, ಕೆ.ಆರ್.ಎಸ್. ಪಕ್ಷದಿಂದ ಒಂದು , ಎಸ್.ಡಿ.ಪಿ.ಐ.ನಿಂದ ಒಂದು ಹಾಗೂ ನಾಲ್ವರು ಪಕ್ಷೇತರರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು.

ಅನರ್ಹಗೊಂಡಿದ್ದ ಏಳು ಮಂದಿ ಸದಸ್ಯರ ಪೈಕಿ ಆರು ಮಂದಿ ಕಣದಲ್ಲಿ ಇದ್ದಾರೆ. (೨ನೇ ವಾರ್ಡ್‌ನಿಂದ ನಾಗಮಣಿ ಗೋಪಾಲ್, ೭ನೇ ವಾರ್ಡ್‌ನಿಂದ ನಾಸಿರ್ ಷರೀಫ್, ೧೩ ನೇ ವಾರ್ಡ್‌ನಿಂದ ಪವಿತ್ರ ರಮೇಶ್, ೨೧ ನೇ ವಾರ್ಡ್‌ನಿಂದ ಪ್ರಕಾಶ್, ೨೫ನೇ ವಾರ್ಡ್‌ನಿಂದ ರಾಮಕೃಷ್ಣ, ೨೬ ನೇ ವಾರ್ಡ್‌ನಿಂದ ನಾಗಸುಂದ್ರಮ್ಮ ಜಗದೀಶ್, ೬ ನೇ ವಾರ್ಡಿನಲ್ಲಿ ವಾತ್ರ ಅನರ್ಹಗೊಂಡಿದ್ದ ಗಂಗಮ್ಮರ ಬದಲು ಅವರ ಸಂಬಂಧಿ ಮಾನಸ ಜಂಗು ನಾಮಪತ್ರ ಸಲ್ಲಿಸಿದ್ದಾರೆ.
೨೫ನೇ ವಾರ್ಡಿನಿಂದ ಕಾಂಗ್ರೆಸ್ ಪಕ್ಷದ ವಾಜಿ ನಗರಸಭೆ ಅಧ್ಯಕ್ಷ ಎಸ್.ರಮೇಶ್, ೨ ನೇ ವಾರ್ಡ್‌ನಿಂದ ಭಾಗ್ಯ, ೬ ನೇ ವಾರ್ಡ್‌ನಿಂದ ಸಂಪತ್ತು ಕುಮಾರಿ, ೭ ನೇ ವಾರ್ಡ್‌ನಿಂದ ಅಹಮದ್ ಕಿಜರ್, ೧೩ನೇ ವಾರ್ಡ್ ನಿಂದ ಹಾಲಿ ನಗರಸಭೆ ಸದಸ್ಯ ಮನೋಹರ್ ಪತ್ನಿ ಪಿ.ಎಲ್. ಸರಸ್ವತಿ ಮನೋಹರ್, ೨೧ನೇ ವಾರ್ಡ್ ಕೆ.ಕೆ.ಮೂರ್ತಿ, ೨೬ ನೇ ವಾರ್ಡ್‌ನಿಂದ ಸುನೀತಾ ಮಹದೇಶ್ ನಾಮಪತ್ರ ಸಲ್ಲಿಸಿದ್ದಾರೆ.

ಬಿಎಸ್ಪಿ ಪಕ್ಷದಿಂದ ೨೫ನೇ ವಾರ್ಡಿನಿಂದ ರಂಗಸ್ವಾಮಿ, ೭ನೇ ವಾರ್ಡ್ ನಿಂದ ಇನಾುಂತ್ ಪಾಷ, ೨೧ನೇ ವಾರ್ಡ್‌ನಿಂದ ಲೋಕೇಶ್, ೨೬ ನೇ ವಾರ್ಡ್‌ನಿಂದ ಜಾ.ದಳ ಅಭ್ಯರ್ಥಿ ಮಂಗಳಮ್ಮ, ೭ ನೇ ವಾರ್ಡ್‌ನಿಂದ ಜಾ.ದಳ ಅಭ್ಯರ್ಥಿ ಇರ್ಫಾನ್, ೨ ನೇ ವಾರ್ಡ್‌ನಿಂದ ಎಸ್.ಡಿ.ಪಿ.ಐ ಅಭ್ಯರ್ಥಿ ಹೆಚ್.ಕೆ ಶಾಂತಲಕ್ಷ್ಮಿ, ೨೬ ನೇ ವಾರ್ಡ್‌ನಿಂದ ಕವಿತಾ ಶೇಖರ್, ಪಕ್ಷೇತರರಲ್ಲಿ ೭ ನೇ ವಾರ್ಡ್‌ನಿಂದ ಶಿವಶಂಕರ್ ನಾಮಪತ್ರ ಸಲ್ಲಿಸಿದ್ದಾರೆ. ೨೧ ನೇ ವಾರ್ಡ್‌ನಿಂದ ಕೆ.ಆರ್.ಎಸ್ ಪಕ್ಷದ ಜಗದೀಶ್, ೨೫ ನೇ ವಾರ್ಡ್‌ನಿಂದ ಪಕ್ಷೇತರ ಅಭ್ಯರ್ಥಿ ನಿವೃತ್ತ ಯೋಧ ಎಂ.ಮಹದೇವ, ೨೫ ನೇ ವಾರ್ಡ್‌ನಿಂದ ಶಿವಮಲ್ಲು ಪಕ್ಷೇತರರಾಗಿ ಸ್ಪರ್ಧೆಯಲ್ಲಿದ್ದಾರೆ.

andolanait

Recent Posts

ಮೋಟಾರ್ ವಾಹನ ಸೆಸ್ ಕೈಬಿಟ್ಟ ಮೈಸೂರು ಮಹಾನಗರ ಪಾಲಿಕೆ

ಮೈಸೂರು : ಮೈಸೂರು ಮಹಾನಗರಪಾಲಿಕೆ 2026-27ನೇ ಹಣಕಾಸು ವರ್ಷಕ್ಕೆ ಜಾರಿಗೊಳಿಸಲು ಘೋಷಿಸಿದ್ದ ಮೋಟಾರ್ ವಾಹನ ಸೆಸ್ ಅನ್ನು ರದ್ದುಗೊಳಿಸಿದೆ. ಇತ್ತೀಚಿಗೆ…

5 hours ago

ದಿಢೀರ್‌ ಕುಸಿದುಬಿದ್ದ ಲೋಕಾಯುಕ್ತ ನಿ.ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ, ಆಸ್ಪತ್ರೆಗೆ ದಾಖಲು

ಬೆಂಗಳೂರು : ಕರ್ನಾಟಕದ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ್‌ ಹೆಗ್ಡೆ ಅವರ ಆರೋಗ್ಯದಲ್ಲಿ ಏರುಪೇರೆ ಉಂಟಾಗಿ ಕುಸಿದು ಬಿದ್ದಿದ್ದು, ಆಸ್ಪತ್ರೆಗೆ…

6 hours ago

ರೋಹಿಣಿ ಸಿಂಧೂರಿ ವಿರುದ್ಧ ತನಿಖೆ : ಮಾಜಿ ಸಚಿವ ಸಾ.ರಾ.ಮಹೇಶ್‌ ಹೇಳಿದಿಷ್ಟು?

ಮೈಸೂರು : ಬಟ್ಟೆ ಬ್ಯಾಗ್ ಖರೀದಿಯಲ್ಲಿ ಆಗಿರುವ ಅವ್ಯವಹಾರದ ಬಗ್ಗೆ ತನಿಖೆ ನಡೆಸಲು ಹೈಕೋರ್ಟ್ ಅನುಮತಿ ನೀಡಿರುವ ಕುರಿತು ಪ್ರತಿಕ್ರಿಯಿಸಿದ…

7 hours ago

ಆರ್‌ಸಿಬಿ ವಿರುದ್ಧದ ಪಂದ್ಯಕ್ಕೆ ಧೋನಿ ಲಭ್ಯ?

ಬೆಂಗಳೂರು : ಮಹೇಂದ್ರ ಸಿಂಗ್ ಧೋನಿ ಅವರು ಚೆನ್ನೈ ಸೂಪರ್ ಕಿಂಗ್ಸ್ ಅಭಿಮಾನಿಗಳಲ್ಲಿ ಹೊಸ ಆಶಾಕಿರಣ ಮೂಡಿಸಿದ್ದಾರೆ. ಸ್ನಾಯು ಸೆಳೆತದಿಂದ…

8 hours ago

24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಜೆಟ್‌ಗಳನ್ನು ಹೊಡೆದುರುಳಿಸಿದ್ದೇವೆ : ಇರಾನ್

ಟೆಹ್ರಾನ್ : ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಕಳೆದ 24 ಗಂಟೆಗಳಲ್ಲಿ ಅಮೆರಿಕದ ಎರಡು F-35 ಸ್ಟೆಲ್ತ್…

9 hours ago

ಬಿಜೆಪಿಯವರು ಸುಳ್ಳು ಹೇಳುವುದರಲ್ಲಿ ನಿಸ್ಸೀಮರು : ಮುಖ್ಯಮಂತ್ರಿ ಟೀಕೆ

ಬಾಗಲಕೋಟೆ : ಸೋಮಣ್ಣ ಬಿಜೆಪಿಯಲ್ಲಿ ಕೆಲಸವಿಲ್ಲದಿರುವ ಮಂತ್ರಿ. ಅವರಿಗೆ ಯಾವ ಕಡತವೂ ಹೋಗುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದರು.…

9 hours ago