ಮಡಿಕೇರಿ ದಸರಾದಲ್ಲಿ ಕಾಫಿಯ ಗಮಲಿಗೆ ಫಿಧಾ ಆದ ಸಚಿವರು
ಮಡಿಕೇರಿ: ಕೊಡುಗು ಜಿಲ್ಲೆಗೆ ಈ ಬಾರಿ ಇಬ್ಬರು ಉತ್ಸಾಹಿ ಯುವ ಶಾಸಕರ ಬಲ ಸಿಕ್ಕಿದೆ. ಶಾಸಕರಾದ ಪೊನ್ನಣ್ಣ ಹಾಗೂ ಮಂತರ್ ಗೌಡ ಅತ್ಯಂತ ಕ್ರೀಯಾಶೀಲರಾಗಿ ಕೆಲಸ ಮಾಡುತ್ತಿದ್ದು, ಪ್ರತಿ ಇಲಾಖೆಯ ಸಚಿವರನ್ನು ನಿರಂತರವಾಗಿ ಬೆನ್ನು ಹತ್ತಿ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ತರುತ್ತಿದ್ದಾರೆ. ಪ್ರತಿ ದಿನ ಅವರಿಗೆ ಅಭಿವೃದ್ಧಿಯದ್ದೇ ಜಪ, ಅಭಿವೃದ್ಧಿ ಎಂದರೆ ಕೇವಲ ಕಟ್ಟಡ ರಸ್ತೆ ಮಾತ್ರವಲ್ಲ.ಸಮಗ್ರ ಅಭಿವೃದ್ಧಿಯೇ ಅವರ ಕಾಳಜಿ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಯುವ ಶಾಸಕರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಭಾನುವಾರ ಗಾಂಧಿ ಮೈದಾನದಲ್ಲಿ ನಡೆದ ಕಾಫಿ ದಸರಾವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಂತರ್ ಗೌಡ ಅವರಂತು ಬೆಳಿಗ್ಗೆಯಿಂದ ರಾತ್ರಿ ವರಗೆ ಕ್ಷೇತ್ರಕ್ಕಾಗಿ ಏನಾದರೂ ಹೊಸತು ತರಲು ತವಕಿಸುತ್ತಲೇ ಇದ್ದಾರೆ. ಇಬ್ಬರೂ ಶಾಸಕರಿಗೆ ಅಭಿನಂದನೆಗಳು, ಈ ಇಬ್ಬರ ಮೇಲೆ ನಿಮ್ಮ ಆಶೀರ್ವಾದ ನಿರಂತರವಾಗಿರಲಿ ಎಂದು ಕೊಡಗು ಜನತೆಗೆ ಹೇಳಿದರು.
ಮಡಿಕೇರಿ ದಸರಾ ಜನೋತ್ಸವ ಎಂಬ ಹಿರಿಮೆಗೆ ಪಾತ್ರವಾಗಿದ್ದು, ಇಂತಹ ದಸರಾದಲ್ಲಿ ಶಾಸಕರಾದ ಮಂತರ್ ಗೌಡ ಅವರ ಪ್ರಯತ್ನದಿಂದ ಈ ಬಾರಿ ಕಾಫಿ ದಸರಾ ಕೂಡ ಸೇರ್ಪಡೆ ಆಗುತ್ತಿರುವುದು ನಿಜಕ್ಕೂ ಹೆಮ್ಮೆಯ ವಿಚಾರ. ಈ ಪ್ರಯತ್ನ ಇಂದ ಕಾಫಿ ಮಾತ್ರವಲ್ಲದೆ ಇತರ ಕೃಷಿಗೆ ಕೂಡ ಸಹಕಾರ ದೊರಕಲಿದೆ ಬೆಳಗಾರರಿಗೆ ಪ್ರೋತ್ಸಾಹ ದೊರಕಲಿದೆ ಎಂದರು.
ಕೊಡಗು ದೇಶದಲ್ಲೇ ವಿಭಿನ್ನ ಜೀವ ಸಂಸ್ಕೃತಿಯ ನೆಲ, ವೀರ ಯೋಧರ ನಾಡು. ಸೇನಾ ಮಹಾ ದಂಡನಾಯಕರಾದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ,ಜನರಲ್ ತಿಮ್ಮಯ್ಯ ಸೇರದಂತೆ ಅನೇಕ ಮಹನೀಯರು ಈ ದೇಶದ ರಕ್ಷಣೆಗೆ ನೀಡಿರುವ ಸೇವೆ ಅನನ್ಯವಾದದ್ದು. ಹಾಗೇ ಹಾಕಿ ಕ್ರೀಡೆಗೂ ಕೊಡಗು ದೊಡ್ಡ ಕೊಡುಗೆ ನೀಡುತ್ತಲೇ ಬಂದಿದೆ. ಜೀವ ನದಿ ಕಾವೇರಿಯ ಉಗಮವೂ ಇದೇ ಪುಣ್ಯ ಭೂಮಿಯಲ್ಲಿ ಅಗಿರುವುದು ನಮಗೆಲ್ಲ ಹೆಮ್ಮೆ ಎಂದು ಕೊಡಗು ಬಗ್ಗೆ ಅಭಿಮಾನ ವ್ಯಕ್ತಪಡಿಸಿದರು.
ಕಾಫಿ ಈ ನೆಲೆದ ಬೆಳೆ. ಜಗತ್ತಿನ ಅತೀ ಉತ್ಕೃಷ್ಟ ಕಾಫಿ ಇಲ್ಲಿ ಬೆಳೆಯಲಾಗುತ್ತಿದ್ದು, ರೈತರಿಗೆ ಹಾಗೂ ಕಾಫಿ ಉತ್ತೇಜನಕ್ಕೆ ಪೂರಕವಾಗಿ ಕಾಫಿ ಉತ್ಸವ ಆಯೋಜಿಸಿರುವುದು ಪ್ರಶಂಸನೀಯ. ಹಾಗೇ ಕೃಷಿ ಇಲಾಖೆ ವತಿಯಿಂದಲೂ ಪ್ರದರ್ಶನ ಮತ್ತು ಪ್ರಾತ್ಯಕ್ಷಿಕೆ ಮಳಿಗೆ ತೆರೆಯಲಾಗಿದೆ ಎಂದರು.
ಭಾರತದಲ್ಲೇ ಅತ್ಯಧಿಕ ಕಾಫಿ ಬೆಳೆ ಬೆಳೆಯುವ ರಾಜ್ಯ ಎಂಬ ಹಿರಿಮೆ ಹೊಂದಿರುವ ಕರ್ನಾಟಕದಲ್ಲಿ ಕೊಡಗು ಕೂಡ ಅತ್ಯಧಿಕ ಕಾಫಿ ಬೆಳೆಯುವ ಮೂಲಕ ದೇಶಕ್ಕೆ ಮತ್ತು ರಾಜ್ಯಕ್ಕೆ ಸ್ವಾದಿಷ್ಟ ಕಾಫಿಯನ್ನು ನೀಡುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಕೊಡಗಿನ ಹಿರಿಮೆಗೆ ಇಲ್ಲಿನ ಕಾಫಿ ಕೂಡ ಮಹತ್ವದ ಕೊಡುಗೆ ನೀಡಿದೆ ಎಂದು ತಿಳಿಸಿದರು.
ಕಾಫಿ ಬೆಳೆ ಕೇವಲ ಬೆಳೆಗಾರರು ಮಾತ್ರವಲ್ಲದೆ ಸಾವಿರಾರು ಕೃಷಿಕರಿಗೂ ಜೀವನ ನೀಡಿದೆ. ಕೊಡಗಿನ ಬೆಳೆಗಾರರು ತಮ್ಮ ಕಾಫಿ ತೋಟದಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರಿಗೆ ಅತ್ಯುತ್ತಮ ಸೌಲಭ್ಯ ಕಲ್ಪಿಸಿ ಅವರನ್ನು ಉತ್ತಮ ಸ್ಥಿತಿಯಲ್ಲಿ ಇರಿಸಿಕೊಂಡು ಮಾದರಿ ಕೃಷಿಕರಾಗಿದ್ದಾರೆ ಎಂದರು.
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…