ಕೊಡಗು

ಅಕ್ರಮವಾಗಿ ಕೇರಳಕ್ಕೆ ಜಾನುವಾರು ಸಾಗಾಟ: ಇಬ್ಬರ ಬಂಧನ

ಮಡಿಕೇರಿ: ಗೋವುಗಳನ್ನು ಸಾಕಣೆ ಮಾಡಲೆಂದು ಖರೀದಿಸಿ ಅಕ್ರಮವಾಗಿ ಕೇರಳದ ಕಸಾಯಿಖಾನೆಗೆ ಸಾಗಣೆ ಮಾಡಲು ಯತ್ನಿಸಿದ್ದ ಇಬ್ಬರನ್ನು ವಿರಾಜಪೇಟೆ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಕೇರಳದ ಇನ್ನೂರು ತಳಿಪರಂಬಾ ನಿವಾಸಿ ಸಾಧಿಕ್‌ ಹಾಗೂ ಅಬ್ದುಲ್‌ ಅಹಮ್ಮದ್‌ ತಂಜಲ್‌ ಎಂಬುವವರೇ ಬಂಧಿತ ಆರೋಪಿಗಳಾಗಿದ್ದಾರೆ. ಬಂಧಿತರು ತಳಿಪರಂಬಾದಿಂದ ಬಂದು ಪಿರಿಯಾಪಟ್ಟಣ ತಾಲ್ಲೂಕಿನ ವಿವಿಧೆಡೆ ದನ ಕರುಗಳನ್ನು ಖರೀದಿಸಿ ನಡುರಾತ್ರಿ ಸಾಗಿಸುತ್ತಿದ್ದರು. ರಾಸುಗಳನ್ನು ತುಂಬಿಸಿಕೊಂಡು ಅನುಮಾನ ಬರದಂತೆ ಆಲೂಗೆಡ್ಡೆ ಮೂಟೆಗಳನ್ನು ತುಂಬಿಸಿದ್ದರು.

ಲಾರಿ ಹೊರಡುತ್ತಿದ್ದ ವಿಷಯ ತಿಳಿದ ಗೋರಕ್ಷಕರು ಪೆರುಂಬಾಡಿ ಪೊಲೀಸ್‌ ತಪಾಸಣೆ ಕೇಂದ್ರದ ಬಳಿ ಕಾಯುತ್ತಿದ್ದರು. ಮುಂಜಾನೆ ಲಾರಿ ತಪಾಸಣೆ ಕೇಂದ್ರದ ಬಳಿ ಬರುತ್ತಿದ್ದಂತೆ ಲಾರಿ ಪರಿಶೀಲಿಸಿದ್ದಾರೆ. ಈ ವೇಳೆ 10ಕ್ಕೂ ಹೆಚ್ಚು ಗೋವುಗಳು ಪತ್ತೆಯಾಗಿವೆ. ವಿರಾಜಪೇಟೆ ನಗರ ಠಾಣಾಧಿಕಾರಿ ಪ್ರಮೋದ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಲಾರಿ ಮತ್ತು ಜಾನುವಾರುಗಳನ್ನು ವಶಕ್ಕೆ ಪಡೆದಿದ್ದಾರೆ.

ಆಂದೋಲನ ಡೆಸ್ಕ್

Recent Posts

ಮಲ್ಲಿಕಾರ್ಜುನ ಖರ್ಗೆ ವಿರುದ್ಧ ಸಂಸದ ಯದುವೀರ್‌ ಒಡೆಯರ್‌ ಕಿಡಿ

ಮಡಿಕೇರಿ: ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಆರ್‌ಎಸ್‌ಎಸ್‌ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಂಸದ ಯದುವೀರ್‌…

25 mins ago

ಯುದ್ಧದ ವಿಚಾರದಲ್ಲಿ ರಾಜಕೀಯ ‌ಮಾಡುವುದು ಬೇಕಾಗಿಲ್ಲ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಯುದ್ಧದ ವಿಚಾರದಲ್ಲಿ ರಾಜಕೀಯ ಮಾಡುವುದು ಬೇಡ ಎಂದು ಮೈಸೂರು-ಕೊಡಗು ಸಂಸದ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಹೇಳಿದ್ದಾರೆ. ಈ…

26 mins ago

ಯುದ್ಧ ಅಂತ್ಯಗೊಂಡಿಲ್ಲ: ಕದನ ವಿರಾಮವಷ್ಟೇ ಎಂದ ಮೊಜ್ತಬಾ ಖಮೇನಿ

ಟೆಹರಾನ್:‌ ಇರಾನ್‌ ಮೇಲಿನ ಯುದ್ಧಕ್ಕೆ ಅಮೇರಿಕಾ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಎರಡು ವಾರಗಳ ಕದನ ವಿರಾಮ ಘೋಷಣೆ ಮಾಡಿದ್ದಾರೆ. ಕದನ…

1 hour ago

ಹಲಗೂರು: ಬೆಂಕಿಗೆ ಆಹುತಿಯಾದ ತೆಂಗಿನ ತೋಟ

ಹಲಗೂರು: ಇಲ್ಲಿಗೆ ಸಮೀಪದ ಮುತ್ತತ್ತಿ ರಸ್ತೆಯ ಬೈಪಾಸ್ ಬಳಿ ಭೀಮಾನದಿ ಸೇತುವೆಯ ಬಫರ್ ಜೋನ್ ಪ್ರದೇಶದಲ್ಲಿ ಸಂಭವಿಸಿದ ಅಗ್ನಿ ಅವಘಡದಲ್ಲಿ…

2 hours ago

ಗುಂಡ್ಲುಪೇಟೆ ತಾಲ್ಲೂಕಿನ ಪಡಗೂರು ಗ್ರಾಮದಲ್ಲಿ ಚಿರತೆ ಸೆರೆ

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು  ಗುಂಡ್ಲುಪೇಟೆ: ಹುಲಿಯನ್ನು ಸೆರೆ ಹಿಡಿಯಲು ಇಟ್ಟಿದ್ದ ಬೋನಿಗೆ ಚಿರತೆ ಬಿದ್ದಿರುವ ಘಟನೆ ತಾಲ್ಲೂಕಿನ…

3 hours ago

ತಂಬಾಕು ಬೆಳೆಗಾರರ ಸಮಸ್ಯೆ: ಜಿಎಸ್‌ಟಿ ಮೂಲಕ ತೆರಿಗೆ ಹಾಕುವ ಕೇಂದ್ರವು ಪರಿಹಾರ ನೀಡಲಿ ಎಂದ ಎಂ.ಲಕ್ಷ್ಮಣ್

ಮೈಸೂರು: ಕಾರ್ಪೋರೇಷನ್ ನೀರಿನ ದರ ಏರಿಕೆ ಮಾಡುತ್ತಿದ್ದಾರೆ ಎಂದು ಅರ್ಧ ಪೈಸೆ ಜಾಸ್ತಿಯಾಗಿರುವುದಕ್ಕೆ ಹೋರಾಟ ಮಾಡುತ್ತಾರೆ. ಆದರೆ ರೈತರ ಸಮಸ್ಯೆಗಳ…

3 hours ago