ಕೊಡಗು

ಕುಶಾಲನಗರ ಮಸೀದಿಯಲ್ಲಿ‌ ಕಳ್ಳತನ: ಆರೋಪಿ ಬಂಧನ

ಕುಶಾಲನಗರ: ಮಸೀದಿಯಲ್ಲಿ‌ ಕಳ್ಳತನ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.

ವಿರಾಜಪೇಟೆ ನಗರದ ಸುಣ್ಣದ ಬೀದಿಯ ನಿವಾಸಿಯಾದ ಮಹಮ್ಮದ್ ಶೋಯಬ್(32) ಎಂಬುವವನೇ ಬಂಧಿತ ಆರೋಪಿಯಾಗಿದ್ದಾನೆ. ಕುಶಾಲನಗರ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಇಂದಿರಾ ಬಡಾವಣೆಯಲ್ಲಿರುವ ಮಸೀದಿಯ ಒಳಗೆ ಇಟ್ಟಿದ್ದ ಕಾಣಿಕೆ ಹುಂಡಿಯನ್ನು ಮತ್ತು ಮಸೀದಿಯ ಧ್ವನಿ ವರ್ಧಕಕ್ಕೆ ಅಳವಡಿಸುವ ಆಂಪ್ಲಿಫೈರ್ ಹಾಗೂ ಅದರ ಉಪಕರಣವನ್ನು ಡಿ.19ರಂದು ಕಳ್ಳತನ ಮಾಡಿರುವ ಬಗ್ಗೆ ಪ್ರಕರಣ ದಾಖಲಾಗಿತ್ತು. ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಅಪರಾಧ ಕೃತ್ಯಕ್ಕೆ ಸಂಬಂಧಿಸಿದ ಮಾಹಿತಿ ಹಾಗೂ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ್ದರು.

ಪ್ರಕರಣದ ಆರೋಪಿಗಳ ಪತ್ತೆಯ ಸಲುವಾಗಿ ಸೋಮವಾರಪೇಟೆ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ, ಪಿಐ ಪ್ರಕಾಶ್.ಬಿ.ಜಿ, ಕುಶಾಲನಗರ ನಗರ ಠಾಣೆಯ ಪಿಎಸ್‌ಐ ಗೀತಾ, ಅಪರಾಧ ಪತ್ತೆ ಸಿಬ್ಬಂದಿಗಳು, ತಾಂತ್ರಿಕ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಿ ತನಿಖೆ ಕೈಗೊಳ್ಳಲಾಗಿತ್ತು. ಇಂದು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಬಂಧಿತನಿಂದ ಕಳ್ಳತನವಾಗಿದ್ದ ಧ್ವನಿ ವರ್ಧಕಕ್ಕೆ ಅಳವಡಿಸುವ ಒಂದು ಆಂಪ್ಲಿಫೈರ್ ಮತ್ತು ಅದರ ಸಲಕರಣೆಗಳು ಹಾಗೂ ರೂ. 3000 ನಗದನ್ನು ವಶಪಡಿಕೊಳ್ಳಲಾಗಿದೆ.
ಆರೋಪಿಯು ಮಡಿಕೇರಿ ಹಾಗೂ ಪಿರಿಯಾಪಟ್ಟಣದ ಮಸೀದಿಗಳಲ್ಲಿ ಕಳ್ಳತನ ನಡೆಸಿರುವುದು ಕೂಡ ತನಿಖೆಯಲ್ಲಿ ತಿಳಿದುಬಂದಿದೆ. ಇದೆಲ್ಲರ ಜೊತೆಗೆ ಪಿರಿಯಾಪಟ್ಟಣ ಠಾಣೆ ವ್ಯಾಪ್ತಿಯ ಮಸೀದಿಯೊಂದರಲ್ಲಿ ಕಳ್ಳತನ ಮಾಡಿದ್ದ 2 ಆಂಪ್ಲಿಫೈರ್‌ಗಳು, ಡಿಜಿಟಲ್ ಎಕೋ ರಿವರ್ ಮಿಕ್ಸರ್ & ಮಾನಿಟರ್ ಹಾಗೂ ಮಡಿಕೇರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮಸೀದಿಯೊಂದರಿಂದ ಕಳ್ಳತನ ಮಾಡಿದ ಒಂದು ಆಂಪ್ಲಿಫೈರ್, ಸೌಂಡ್ ಮಿಕ್ಸರ್ ಉಪಕರಣಗಳನ್ನು ಮತ್ತು ಆರೋಪಿಯು ಕೃತ್ಯಕ್ಕೆ ಬಳಸಿದ್ದ 2 ಮೊಬೈಲ್‌ಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ. ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಿ ಕಳವು ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಎಸ್‌ಪಿ ಕೆ.ರಾಮರಾಜನ್ ಶ್ಲಾಘಿಸಿದ್ದಾರೆ.

ಆಂದೋಲನ ಡೆಸ್ಕ್

Recent Posts

ಮಧ್ಯ ಪ್ರಾಚ್ಯ ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು: ಪಾಕಿಸ್ತಾನದಲ್ಲಿ ಗಣರಾಜ್ಯೋತ್ಸವ ಮೆರವಣಿಗೆ ರದ್ದು

ಇಸ್ಲಾಮಾಬಾದ್:‌ ಇರಾನ್‌, ಅಮೇರಿಕಾ-ಇಸ್ರೇಲ್‌ ಯುದ್ಧದಿಂದಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ತೈಲ ಬಿಕ್ಕಟ್ಟು ಉಲ್ಬಣಗೊಂಡಿದೆ. ಇದರಿಂದ ಪಾಕಿಸ್ತಾನದಲ್ಲಿ ಗಣರಾಜ್ಯೋತ್ಸವ ಮೆರವಣಿಗೆ ರದ್ದಾಗಿದೆ. ಮಾರ್ಚ್.‌23ರಂದು…

2 hours ago

ಯುಗಾದಿ ಸಂಭ್ರಮ: ಓಂಕಾರೇಶ್ವರ ದೇವಾಲಯದಲ್ಲೂ ಬೇವು ಬೆಲ್ಲ ವಿತರಣೆ

ಮಡಿಕೇರಿ: ನಾಡಿನಾದ್ಯಂತ ಇಂದು ಹೊಸ ವರ್ಷ ಯುಗಾದಿ ಸಂಭ್ರಮ ಮನೆ ಮಾಡಿದ್ದು, ಕೊಡಗಿನ ಮನೆ ಮನೆಯಲ್ಲೂ ಯುಗಾದಿ ಹಬ್ಬದ ಸಡಗರ…

2 hours ago

ಟಿ.ನರಸೀಪುರ| ಯುಗಾದಿ ಸಂಭ್ರಮ: ತ್ರಿವೇಣಿ ಸಂಗಮಕ್ಕೆ ಹರಿದುಬಂದ ಭಕ್ತಸಾಗರ

ಟಿ.ನರಸೀಪುರ: ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಪುಣ್ಯಸ್ನಾನಕ್ಕೆಂದು ತ್ರಿವೇಣಿ ಸಂಗಮಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಮೈಸೂರು ಜಿಲ್ಲೆ…

3 hours ago

ಹುಣಸೂರು: ರೈಲ್ವೆ ಹಳಿ ತಡೆಗೋಡೆಗೆ ಸಿಲುಕಿ ಒದ್ದಾಡಿದ ಕಾಡಾನೆ

ಹುಣಸೂರು: ರೈಲ್ವೆ ಹಳಿ ತಡೆಗೋಡೆಗೆ ಸಿಲುಕಿ ಕಾಡಾನೆಯೊಂದು ಕೆಲಕಾಲ ಒದ್ದಾಟ ನಡೆಸಿದ ಘಟನೆ ತಾಲ್ಲೂಕಿನ ಉಡುವೆಪುರ ಬಳಿ ನಡೆದಿದೆ. ನಾಗರಹೊಳೆ…

3 hours ago

ಮೈಸೂರು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಭಾರೀ ಪ್ರಮಾಣದ ಹಾನಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ…

4 hours ago

ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ: ಹಳ್ಳಿಗಳಲ್ಲಿ ಹೊನ್ನೇರು ಕಟ್ಟಿ ಸಂಭ್ರಮಿಸಿದ ಅನ್ನದಾತರು

ಮೈಸೂರು: ರೈತರು ಸಡಗರದಿಂದ ಕೃಷಿ ಚಟುವಟಿಕೆ ಆರಂಭಿಸುವ ಮೊದಲ ಹೆಜ್ಜೆ ಯುಗಾದಿಯಾಗಿದ್ದು, ಜಿಲ್ಲೆಯ ಹಲವೆಡೆ ಅನ್ನದಾತರು ಹೊನ್ನೇರು ಕಟ್ಟಿ ಭೂಮಿ…

4 hours ago