ಕೊಡಗು

ಕಲ್ಯಾಣ ಕರ್ನಾಟಕದ ಪ್ರಮುಖ ನಾಯಕರು ಕಾಂಗ್ರೆಸ್‌ಗೆ ಬರಲಿದ್ದಾರೆ : ಸಚಿವ ಬೋಸರಾಜು

ಮಡಿಕೇರಿ : ಕಲ್ಯಾಣ ಕರ್ನಾಟಕದಿಂದ ಹಲವು ಪ್ರಮುಖ ನಾಯಕರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎಂದು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಬೋಸರಾಜು ಹೇಳಿದ್ದಾರೆ.

ಮಡಿಕೇರಿಯಲ್ಲಿ ಮಾತಾನಾಡಿದ ಅವರು ಕಲ್ಯಾಣ ಕರ್ನಾಟಕದಿಂದ ಈಗಾಗಲೇ ಅನೇಕರು ತನ್ನೊಂದಿಗೆ ಸಂಪರ್ಕದಲ್ಲಿ ಇದ್ದಾರೆ. ಈಗಾಗಲೇ ನಮ್ಮ ನಾಯಕರ ಜೊತೆಯಲ್ಲಿ ಅವರು ಬರುವ ಬಗ್ಗೆ ಮಾಹಿತಿ ನೀಡಿದ್ದಾರೆ. ಹಲವಾರು ಮಂದಿ ನಮ್ಮ ಪಕ್ಷಕ್ಕೆ ಬರುವುದರಿಂದ ಅವರಿಂದ ಆಗುವಂತಹ ಅನುಕೂಲ ಹಾಗೂ ಅನಾನುಕೂಲಗಳ ಬಗ್ಗೆ ಮಾಹಿತಿಯನ್ನು ರಾಜ್ಯ ನಾಯಕರಿಗೆ ನೀಡಲಾಗಿದೆ ಎಂದರು.

ಇಷ್ಟೇ ಜನರು ಬರುತ್ತಾರೆ ಎಂದು ಸ್ಪಷ್ಟವಾಗಿ ಹೇಳಲು ಆಗಲ್ಲ. ಅನೇಕ ಹೊಸ ಹೊಸ ಮುಖಗಳು ನಾವು ನಂಬಲು ಆಗದೇ ಇರುವಂತಹ ಮುಖಗಳು ಪಕ್ಷಕ್ಕೆ ಬರುತ್ತಿದೆ. ಬಿಜೆಪಿಯಿಂದ ಕೆಲ ಶಾಸಕರು ಮಾಜಿ ಶಾಸಕರು ಅತಿ ಮುಖ್ಯವಾದ ನಾಯಕರು ಕಲ್ಯಾಣ ಕರ್ನಾಟಕ ಭಾಗದಿಂದ ಬರುತ್ತಿದ್ದಾರೆ ಎಂದು ತಿಳಿಸಿದರು.

ಬಿಜೆಪಿಯವರು ಮೋದಿ ಅವರ ಆಧಾರದಿಂದ ಲೋಕಸಭೆ ಚುನಾವಣೆಗೆ ಹೋಗುತ್ತಾರೆ. ಕಳೆದ ಚುನಾವಣೆಯಲ್ಲಿ ರಾಜ್ಯಕ್ಕೆ 26 ಬಾರಿ ಮೋದಿ ಅವರು ಚುನಾವಣೆಗೆ ಬಂದು ನಾನಾ ರೀತಿಯ ಸಭೆಗಳು, ರೋಡ್ ಶೋ ಮಾಡಿದ್ರು. ಆದರೂ ಯಾವುದೇ ಪ್ರಯೋಜನ ಆಗಿಲ್ಲ. ಬಿಜೆಪಿ ಅಥವಾ ಜೆಡಿಎಸ್ ನಾಯಕತ್ವದಲ್ಲಿ ಯಾವ ರೀತಿ ಮುಂದುವರಿಯಬೇಕು ಎಂಬುದು ಕಾಣುತ್ತಿಲ್ಲ ಎಂದರು.

ಇದುವರೆಗೂ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡದೆ ಇರುವುದು ಬಿಜೆಪಿ ಅವರ ದುಸ್ಥಿತಿಯಾಗಿದೆ. ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿ ನಮ್ಮ ತಪ್ಪುಗಳನ್ನು ತೋರಿಸುವ ಕೆಲಸ ಆಗಬೇಕು ಎಂದು ಬೋಸರಾಜು ಆಗ್ರಹಿಸಿದರು.

lokesh

Recent Posts

ಸಂಧಾನ ಯಶಸ್ವಿ : ಮುಷ್ಕರ ಹಿಂಪಡೆದ ವೈದ್ಯರು

 ಬೆಂಗಳೂರು: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ರಾಜ್ಯ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ನಾಳೆಯಿಂದ  (ಮಾರ್ಚ್ 11) ಕರೆ ನೀಡಿದ್ದ ಅನಿರ್ದಿಷ್ಟಾವಧಿ ಮುಷ್ಕರವನ್ನು…

1 hour ago

ಪರಿಷತ್‌ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ : ಜೆಡಿಎಸ್‌ಗೆ 1 ಸೀಟು

ಬೆಂಗಳೂರು : ಕರ್ನಾಟಕ ವಿಧಾನಪರಿಷತ್‌ನ ನಾಲ್ಕು ಕ್ಷೇತ್ರಗಳ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಮೈತ್ರಿ ಪಕ್ಷ ಜೆಡಿಎಸ್‌ಗೆ ಒಂದು…

3 hours ago

ಎಲ್‌ಪಿಜಿ ಸಿಲಿಂಡರ್‌ ವ್ಯತ್ಯಯ, ಬೆಲೆ ಏರಿಕೆ : ಬಾಯಿ ಬಿಡದ ಬಿಜೆಪಿ ; ಡಿ.ಕೆ.ಶಿವಕುಮಾರ್‌ ಆರೋಪ

ಬೆಂಗಳೂರು : ಅಂತರರಾಷ್ಟ್ರೀಯ ಮಹಿಳಾ ದಿನದಂದೆ ಗ್ಯಾಸ್ ಸಿಲಿಂಡರ್ ಬೆಲೆಯನ್ನ ಕೇಂದ್ರ ಸರ್ಕಾರ 60 ರೂಪಾಯಿ ಏರಿಕೆ ಮಾಡಿದೆ. ಜೊತೆಗೆ…

3 hours ago

ಹುಲಿ ದಾಳಿಗೆ ಹಸು ಬಲಿ ; ರೈತ ಪಾರು

ಗುಂಡ್ಲುಪೇಟೆ : ಜಮೀನಿನಲ್ಲಿ ಮೇಯುತ್ತಿದ್ದ ಹಸುವಿನ ಮೇಲೆ ಹುಲಿಯೊಂದು ದಾಳಿ ನಡೆಸಿದೆ. ಈ ವೇಳೆ ರೈತ ತನ್ನ ಹಸು ರಕ್ಷಿಸಲು…

3 hours ago

ಎಲ್‌ಪಿಜಿ ಕೊರತೆ | ಕೇಂದ್ರದಿಂದ 1955ರ ಕಾಯ್ದೆ ಜಾರಿ ; ಏನಿದು ಅಗತ್ಯ ಸರಕು ಕಾಯ್ದೆ?

ಹೊಸದಿಲ್ಲಿ : ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಜಾಗತಿಕ ಇಂಧನ ಪೂರೈಕೆಯ ಮೇಲೆ ಹೆಚ್ಚುತ್ತಿರುವ ಒತ್ತಡದ ನಡುವೆ, ದೇಶೀಯ ಇಂಧನ ಮಾರುಕಟ್ಟೆಯನ್ನು…

4 hours ago

ನ್ಯಾಯಾಂಗ ಭ್ರಷ್ಟಾಚಾರ ಕುರಿತ ಅಧ್ಯಾಯ ವಿವಾದ ; ಸಾರ್ವಜನಿಕ ಕ್ಷಮೆ ಯಾಚಿಸಿದ ಎನ್‌ಸಿಇಆರ್‌ಟಿ

ಹೊಸದಿಲ್ಲಿ : ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಪರಿಷತ್ (ಎನ್‌ಸಿಇಆರ್‌ಟಿ) ಇತ್ತೀಚೆಗೆ ಪ್ರಕಟಿಸಿದ್ದ 8ನೇ ತರಗತಿಯ ಸಮಾಜ ವಿಜ್ಞಾನ…

4 hours ago