ಕೊಡಗು

ಓಣಂ ಸಂಭ್ರಮಕ್ಕೆ ಸಜ್ಜುಗೊಂಡ ಕೊಡಗು

ಮಡಿಕೇರಿ : ಕೇರಳ ರಾಜ್ಯ ಮತ್ತು ಕೊಡಗು ಜಿಲ್ಲೆಗೆ ಹಿಂದಿನಿಂದಲೂ ಅವಿನಾವಭಾವ ಸಂಬಂಧವಿದೆ. ಕೇರಳ ರಾಜ್ಯದ ಪ್ರಮುಖ ಹಬ್ಬಗಳಲ್ಲಿ ಒಂದಾಗಿರುವ ಓಣಂ ಹಬ್ಬವನ್ನು ಆಚರಿಸಲು ಸಿದ್ಧತೆ ನಡೆದಿದ್ದು, ಕೊಡಗು ಜಿಲ್ಲೆಯಲ್ಲೂ ಇಂದು ವಿಭಿನ್ನ ಕಾರ್ಯಕ್ರಮಗಳೊಂದಿಗೆ ಸಂಭ್ರಮದಿಂದ ಓಣಂ ಆಚರಿಸಲಾಗುತ್ತಿದೆ.

ಓಣಂನ್ನು ವಿಶೇಷವಾಗಿ ಕೇರಳ ರಾಜ್ಯದಲ್ಲಿ ಸಡಗರ, ಸಂಭ್ರಮ ಮತ್ತು ಉತ್ಸಾಹದಿಂದ ಆಚರಿಸಲಾಗುತ್ತದೆ. ಈ ಹಬ್ಬವು ೧೦ ದಿನಗಳ ಕಾಲ ನಡೆಯುತ್ತದೆ. ಹತ್ತನೆ ದಿನವನ್ನು ತಿರುಓಣಂ ಎಂದು ಕರೆಯಲಾಗುತ್ತದೆ. ಮಲಯಾಳಂ ಕ್ಯಾಲೆಂಡರ್‌ನ ಚಿಂಗಮ್ ತಿಂಗಳಲ್ಲಿ ಓಣಂ ಹಬ್ಬವನ್ನು ಆಚರಿಸಲಾಗುತ್ತದೆ. ೧೦ ದಿನಗಳ ಕಾಲ ನಡೆಯುವ ಈ ಹಬ್ಬವು ವಿಶೇಷ ಮಹತ್ವವನ್ನು ಹೊಂದಿದ್ದು, ಈ ವರ್ಷ ಹಬ್ಬವು ಅಥಮ್‌ನೊಂದಿಗೆ ಪ್ರಾರಂಭವಾಗಿದೆ. ಅದರ ಪ್ರಮುಖ ಹಬ್ಬವಾದ ತಿರುವೋಣಂ ಅನ್ನು ಶುಕ್ರವಾರ ಆಚರಿಸಲಾಗುತ್ತಿದ್ದು, ಜನರು ಮಹಾಬಲಿಯನ್ನು ಸ್ವಾಗತಿಸಲು ಪುಷ್ಪ ರಂಗೋಲಿ ಹಾಕಿ ವಿವಿಧ ಭಕ್ಷ್ಯಗಳನ್ನು ತಯಾರಿಸಿ ಸಾಂಸ್ಕೃತಿಕ ಚಟುವಟಿಕೆಗಳೊಂದಿಗೆ ಆಚರಿಸಲು ಸಿದ್ಧತೆ ನಡೆಸಿದ್ದಾರೆ.

ಓಣಂ ಏಕೆ ವಿಶೇಷ?:
ರಾಜ ಮಹಾಬಲಿಯ ಪುನರಾಗಮನವನ್ನು ಸೂಚಿಸುವ ಈ ಹಬ್ಬವು ಪುರಾಣಗಳಲ್ಲಿ ಪ್ರಸಿದ್ಧಿ ಪಡೆದಿದೆ. ರಾಜ ಮಹಾಬಲಿ ತನ್ನ ಪ್ರಜೆಗಳನ್ನು ಭೇಟಿ ಮಾಡಲು ಭೂಮಿಗೆ ಹಿಂದಿರುಗುವುದನ್ನು ಸೂಚಿಸುವ ಹಬ್ಬ ಇದಾಗಿದ್ದು, ತನ್ನ ಆಳ್ವಿಕೆಯ ಕಾಲಾವಧಿಯಲ್ಲಿ ನ್ಯಾಯಯುತ ಮತ್ತು ಉದಾರ ಅರಸನಾಗಿದ್ದನೆಂದು ನಂಬಲಾಗಿದೆ.

ಮಹಾಬಲಿ ರಾಜನ ಆಳ್ವಿಕೆಯಲ್ಲಿ ಕೇರಳವು ಸಮೃದ್ಧವಾಗಿತ್ತು. ಅವನು ಹೆಚ್ಚು ಜನಪ್ರಿಯತೆಗಳಿಸುತ್ತಿದ್ದು ದೇವರಾಜ ಇಂದ್ರನನ್ನು ಅಸುರಕ್ಷಿತನನ್ನಾಗಿ ಮಾಡಿತು. ತನ್ನ ಕೀರ್ತಿಗೆ ದಕ್ಕೆಯಾಗುವುದನ್ನು ಅರಿತು ಇಂದ್ರನು ವಿಷ್ಣುವಿನಲ್ಲಿ ಸಹಾಯ ಬೇಡಿದನು. ಮಹಾ ವಿಷ್ಣು ವಾಮನ (ಕುಬ್ಜ ಬ್ರಾಹ್ಮಣ) ರೂಪವನ್ನು ತಾಳಿ ರಾಜ ಮಹಾಬಲಿಯಿಂದ ಮೂರು ಹೆಜ್ಜೆ ಭೂಮಿಯನ್ನು ದಾನವಾಗಿ ಕೇಳಿದನು. ಮಹಾಬಲಿ ಸಂತೋಷದಿಂದ ಈ ದಾನವನ್ನು ನೀಡಿದನು.

ಮೊದಲ ಹೆಜ್ಜೆಯಲ್ಲಿ, ವಾಮನನು ಇಡೀ ಭೂಮಿಯನ್ನು ಮತ್ತು ಎರಡನೇ ಹೆಜ್ಜೆಯಲ್ಲಿ ಇಡೀ ಆಕಾಶವನ್ನು ಅಳೆದನು. ಮೂರನೇ ಹೆಜ್ಜೆಗೆ ಸ್ಥಳವಿಲ್ಲದಿದ್ದಾಗ, ರಾಜ ಮಹಾಬಲಿ ತನ್ನ ತಲೆಯ ಮೇಲೆ ಪಾದವನ್ನು ಇಡುವಂತೆ ಹೇಳಿದನು. ರಾಜನ ಔದಾರ್ಯ ಮತ್ತು ಭಕ್ತಿಗೆ ಮೆಚ್ಚಿದ ವಿಷ್ಣು, ರಾಜನನ್ನು ಪಾತಾಳ ಲೋಕಕ್ಕೆ ಕಳುಹಿಸಿದನು. ಆದರೆ ವರ್ಷಕ್ಕೆ ಹತ್ತುದಿನಗಳ ಕಾಲ ತನ್ನ ಪ್ರಜೆಗಳನ್ನು ಭೇಟಿಯಾಗಲು ಭೂಮಿಗೆ ಹಿಂತಿರುಗುವ ವರವನ್ನು ನೀಡಿದನು. ಓಣಂ ದಿನದಂದು ಕೇರಳದ ಜನರು ತಮ್ಮ ರಾಜನನ್ನು ಸ್ವಾಗತಿಸಲು ತಯಾರಿ ನಡೆಸುವುದು ಇದೇ ಕಾರಣಕ್ಕೆ.

ಆಂದೋಲನ ಡೆಸ್ಕ್

Recent Posts

ಮೈಸೂರು | ನಾಲ್ಕೇ ದಿನಕ್ಕೆ ಮುರಿದು ಬಿದ್ದ ದಸರಾ ದೀಪಾಲಂಕಾರ ಕಟೌಟ್

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಸರಾ ದೀಪಾಲಂಕಾರ ಕಾಮಗಾರಿಯಲ್ಲೇ ಯಡವಟ್ಟಾಗಿದ್ದು, ನಗರದ ಗನ್ ಹೌಸ್ ವೃತ್ತದಲ್ಲಿ ಕಟ್ಟಲಾಗಿದ್ದ ದಸರಾ ದೀಪಾಲಂಕಾರದ…

7 hours ago

ಕಮಿಷನ್ ಆರೋಪ ಸುಳ್ಳು, ಎಸ್‌ಐಆರ್ ರದ್ದಾಗಬೇಕು: ಸಚಿವ ಪುಟ್ಟರಂಗಶೆಟ್ಟಿ

ಮಹಾದೇಶ್‌ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶಾಸಕರು ಕಮಿಷನ್ ಕೇಳುತ್ತಿದ್ದಾರೆ ಎಂಬ ಗುತ್ತಿಗೆದಾರರ ಆರೋಪ ಸುಳ್ಳು,ಮತದಾರರ ಪಟ್ಟಿಯ…

8 hours ago

ಯಳಂದೂರು ತಾಲ್ಲೂಕಿನಲ್ಲಿ ವರುಣನ ಕೃಪೆ: ಭತ್ತದ ನಾಟಿಗೆ ಮುಂದಾದ ರೈತರು

ಯಳಂದೂರು: ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ಸತತವಾಗಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ರೈತರು ಭತ್ತದ ನಾಟಿ ಕಾರ್ಯದಲ್ಲಿ…

8 hours ago

ಕಾವೇರಿ ತೀರ್ಥೋದ್ಭವಕ್ಕೆ ದಿನಗಣನೆ: ಕಾವೇರಿ ನೀರಾವರಿ ನಿಗಮದಿಂದ 2 ಕೋಟಿ ರೂ ಬಿಡುಗಡೆ

ಮಡಿಕೇರಿ: ನಾಡಿನ ಜೀವನದಿ ಕಾವೇರಿ ಉಗಮಸ್ಥಾನ ತಲಕಾವೇರಿಯಲ್ಲಿ ನಡೆಯಲಿರುವ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಶುರುವಾಗಿದ್ದು, ಇನ್ನೇನು ಕೇವಲ 15 ದಿನಗಳಷ್ಟೇ…

9 hours ago

ಮಂಡ್ಯ | ಕೇಂದ್ರದ ಬರ ಅಧ್ಯಯನ ತಂಡದಿಂದ ಕೆಆರ್‌ಎಸ್‌ ಹಾಗೂ ಬರಪೀಡಿತ ಹಳ್ಳಿಗಳ ಪರಿಶೀಲನೆ

ಮಂಡ್ಯ: ರಾಜ್ಯದಲ್ಲಿ ಕಂಡು ಕೇಳರಿಯದ ಬರಗಾಲ ಆವರಿಸಿರುವ ಹಿನ್ನೆಲೆಯಲ್ಲಿ ಇಂದು ಕೇಂದ್ರ ಬರ ಅಧ್ಯಯನ ಸಮಿತಿ ಸದಸ್ಯರು ಮಂಡ್ಯಕ್ಕೆ ಆಗಮಿಸಿ…

9 hours ago

ಓದುಗರ ಪತ್ರ: ಐತಿಹಾಸಿಕ ಸಂಗತಿ!

ಐತಿಹಾಸಿಕ ಸಂಗತಿ! ಸರ್ಕಾರದ ನಿರ್ದೇಶನದ ಮೇರೆಗೆ ಬೆಳಗಾವಿ ನಗರಪಾಲಿಕೆ ‘ಗಡಿ ವಿಷಯದಲ್ಲಿ ಮಹಾಜನ್ ವರದಿಯೇ ಅಂತಿಮ’ಎಂಬ ನಿರ್ಣಯ ಅಂಗೀಕರಿಸಿರುವುದು ಐತಿಹಾಸಿಕ…

13 hours ago