ಕೊಡಗು

ಮಡಿಕೇರಿಯಲ್ಲಿ ಬಿಜೆಪಿ ವಿರುದ್ಧ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ

ಮಡಿಕೇರಿ: ಬಿಜೆಪಿ ಕಾರ್ಯಕರ್ತ ವಿನಯ್ ಸೋಮಯ್ಯ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗಿನ ಶಾಸಕದ್ವಯರ ಹೆಸರನ್ನು ತಳಕು ಹಾಕುತ್ತಿರುವ ಬಿಜೆಪಿಗರ ವಿರುದ್ಧ ಇಂದು ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ ನಡೆಸಿತು.

ಜನರಲ್‌ ತಿಮ್ಮಯ್ಯ ಸರ್ಕಲ್‌ನಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಮಾಜಿ ಸಂಸದ ಪ್ರತಾಪ್‌ ಸಿಂಹ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಕಾಂಗ್ರೆಸ್‌ ಕಾರ್ಯಕರ್ತರು ಗಾಂಧಿ ಮಂಟಪದಿಂದ ಜಿ.ಟಿ.ಸರ್ಕಲ್‌ವರೆಗೂ ಪ್ರತಿಭಟನಾ ಮೆರವಣಿಗೆ ನಡೆಸಿದರು. ಮೆರವಣಿಗೆಯುದ್ದಕ್ಕೂ ಬಿಜೆಪಿ ನಾಯಕರ ವಿರುದ್ಧ ವಿವಿಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ಮಡಿಕೇರಿಯ ಗಾಂಧಿ ಮೈದಾನದಲ್ಲಿ ಸಭೆ ಸೇರಿ ಶಾಸಕ ಪೊನ್ನಣ್ಣ ಹಾಗೂ ಮಂತರ್‌ ಗೌಡರಿಗೆ ಬೆಂಬಲ ನೀಡಿ, ಯಾವುದೇ ಕಾರಣಕ್ಕೂ ನೀವು ಹೆದರಬೇಡಿ. ನಿಮ್ಮ ಪರ ನಾವಿದ್ದೇನೆ ಎಂದು ಬಹಿರಂಗವಾಗಿಯೇ ಧೈರ್ಯ ಹೇಳಿದರು.

ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ ಅವರು, ವಿನಯ್‌ ಸೋಮಯ್ಯ ಆತ್ಮಹತ್ಯೆಗೂ ನಮ್ಮ ಶಾಸಕರಿಗೂ ಯಾವುದೇ ಸಂಬಂಧವಿಲ್ಲ. ಬಿಜೆಪಿಯವರು ಸಾವಿನಲ್ಲೂ ರಾಜಕೀಯ ಮಾಡುತ್ತಿದ್ದಾರೆ. ಇದು ಸರಿಯಲ್ಲ. ಇದು ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಜನರೇ ಬಿಜೆಪಿಗೆ ತಕ್ಕಪಾಠ ಕಲಿಸುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

 

 

ಕೆಂಡಗಣ್ಣಸ್ವಾಮಿ

ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹಂಚೀಪುರ ಗ್ರಾಮದವನಾದ ನಾನು ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪದವಿ ಪಡೆದಿದ್ದೇನೆ. ಪದವಿ ನಂತರದಲ್ಲಿ ಪತ್ರಿಕೋದ್ಯಮ ಕ್ಷೇತ್ರದಲ್ಲಿ 5 ವರ್ಷಗಳ ಕಾಲ ಅನುಭವ ಪಡೆದಿದ್ದೇನೆ. ಸದ್ಯ ಮೈಸೂರಿನ ಪ್ರತಿಷ್ಠಿತ ಆಂದೋಲನ ಪತ್ರಿಕೆಯ ಡಿಜಿಟಲ್‌ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ನಾನು ನೈಸರ್ಗಿಕ ಕೃಷಿ ಹಾಗೂ ಪಶು ಸಂಗೋಪನೆಗೆ ಹೆಚ್ಚು ಒತ್ತು ಕೊಡುತ್ತೇನೆ.‌ ಪರಿಸರ ಸಂರಕ್ಷಣೆ ಜೊತೆ ಜೊತೆಗೆ ಪ್ರಾಣಿ ಪಕ್ಷಿಗಳ ಉಳಿವಿಗಾಗಿ ನಾನು ಶ್ರಮ ವಹಿಸುತ್ತಿದ್ದೇನೆ.‌ ನನ್ನ ಮೊಬೈಲ್‌ ಸಂಖ್ಯೆ: 9964859626, 9606570286

Recent Posts

ಕಾರುಗಳ ನಡುವೆ ಮುಖಾಮುಖಿ ಡಿಕ್ಕಿ: 9 ಮಂದಿಗೆ ಗಾಯ

ಹನೂರು: ಕಾರುಗಳ ನಡುವೆ ಮುಖಾಮುಖಿ ಡಿಕ್ಕಿಯಾಗಿ 9 ಜನರು ಗಾಯಗೊಂಡಿರುವ ಘಟನೆ ಹನೂರು ಪಟ್ಟಣದ ಹೊರವಲಯದ ಮಹದೇಶ್ವರ ಐಟಿಐ ಕಾಲೇಜು…

1 hour ago

ಹುಬ್ಬೆ ಹುಣಸೆ ಡ್ಯಾಂ ಭರ್ತಿ, ಇದು ಮಾದಪ್ಪನ ಕೃಪೆ ಎಂದ ಶಾಸಕ ಮಂಜುನಾಥ್

ಹನೂರು : ಕ್ಷೇತ್ರದ ಅಧಿದೇವತೆ ಮಲೆ ಮಾದೇಶ್ವರ ಸ್ವಾಮಿ ಕೃಪೆಯಿಂದಲೇ ಈ ಬಾರಿ ಉತ್ತಮ ಮಳೆಯಾಗಿ, ಬರಗಾಲದಿಂದ ಕಂಗೆಟ್ಟಿದ್ದ ರೈತರ…

1 hour ago

ಓದುಗರ ಪತ್ರ: ‘ಜಗವೆ ಕೊಂಡಾಡುವ ಹಾಗೆ’

‘ಜಗವೆ ಕೊಂಡಾಡುವ ಹಾಗೆ’ ಕರುನಾಡ ಕಂಬನಿ, ಜನಮನದ ನಾಡಿ ಅರ್ಜುನನಿಗೆ ಅಶ್ರುತರ್ಪಣೆ ಅಭಿಮಾನದ ಅಭಿಮನ್ಯುಗೆ ಹೃದಯದ ಅಭಿನಂದನೆ ಅಂಬಾರಿಯ ಹೊತ್ತು…

5 hours ago

ಓದುಗರ ಪತ್ರ: ಮೈಕ್ರೋ ಜೆರಾಕ್ಸ್ ಹಾವಳಿಗೆ ಕಡಿವಾಣ ಹಾಕಿ

ಪರೀಕ್ಷಾ ಸಮಯದಲ್ಲಿ ಬಹುತೇಕ ಜೆರಾಕ್ಸ್ ಅಂಗಡಿಗಳ ಮುಂದೆ ವಿದ್ಯಾರ್ಥಿಗಳ ದಂಡೇ ನೆರೆದಿರುತ್ತದೆ. ಪರೀಕ್ಷಾ ಸಮಯದಲ್ಲಿ ನೋಟ್ಸ್‌ಗಳನ್ನು ಜೆರಾಕ್ಸ್ ಮಾಡಿಸಲು ಬರುವವರಿಗಿಂತ…

5 hours ago

ಓದುಗರ ಪತ್ರ: ಅಂಬೇಡ್ಕರ್ ಪ್ರತಿಮೆಗೆ ದೀಪಾಲಂಕಾರ ವ್ಯವಸ್ಥೆಯಾಗಲಿ

ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿ ಆವರಣದಲ್ಲಿ ಕಳೆದ  ಕೆಲವು ದಿನಗಳಿಂದ ೨೦೨೬ರ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡಿರುವ ಯುವ ಸಂಭ್ರಮ…

5 hours ago

ಓದುಗರ ಪತ್ರ: ಮಿತಿ ಹೆಚ್ಚಳ ಕಾರ್ಮಿಕ ಸ್ನೇಹಿ ನಿರ್ಧಾರ

ಸಾಮಾಜಿಕ ಭದ್ರತೆಯ ಒಂದು ಭಾಗವಾದ ನೌಕರರ ಭವಿಷ್ಯ ನಿಧಿ ವ್ಯಾಪ್ತಿಗೆ ಒಳಪಡುವ ನೌಕರರ ವೇತನ ಮಿತಿಯನ್ನು ೧೫ ಸಾವಿರ ರೂಪಾಯಿಗಳಿಂದ…

5 hours ago