ಕೊಡಗು

ಬಿಜೆಪಿ ಕಾರ್ಯಕ್ರಮದಲ್ಲಿ ಕಳ್ಳರ ಕೈಚಳಕ: ಒಟ್ಟು 13 ಮಂದಿ ಆರೋಪಿಗಳ ಬಂಧನ

ಮಡಿಕೇರಿ: ಕುಶಾಲನಗರ ಹಾಗೂ ಮಡಿಕೇರಿಯಲ್ಲಿ ನಡೆದ ಬಿಜೆಪಿ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರ ಜೇಬಿನಲ್ಲಿದ್ದ ಲಕ್ಷಾಂತರ ರೂ.ಗಳನ್ನು ಅಪಹರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಡಗು ಜಿಲ್ಲಾ ಪೊಲೀಸರು 13ಮಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ ಆರೋಪಿಗಳಿಂದ 12 ಮೊಬೈಲ್ ಫೋನ್ ಗಳು, ತಲಾ ಒಂದು ಟೊಯೋಟಾ ಇನ್ನೋವಾ ಹಾಗೂ ಇಟಿಯೋಸ್ ಕಾರುಗಳು ಹಾಗೂ 65,960ರೂ.ನಗದು ವಶಪಡಿಸಿಕೊಳ್ಳಲಾಗಿದೆ.
ಬಂಧನಕ್ಕೊಳಗಾದ ಆರೋಪಿಗಳನ್ನು ಶಿವಮೊಗ್ಗ ಜಿಲ್ಲೆಯ ಭದ್ರಾವತಿಯ ಜಯಣ್ಣ (38 ವರ್ಷ) ಪುಟ್ಟರಾಜು (39), ನಾಗರಾಜ.ಸಿ, (43), ವೆಂಕಟೇಶ್ ಆರ್. (44) ರಾಮು (43), ಉಮೇಶ ಕೆ, (36) ಜಯಣ್ಣ (53), ಬೋಜಪ್ಪ (50), ಮೆಹಬೂಬ್ ಸುಭಾನ್(48), ಗಿರೀಶ ಡಿ, (31) ಬಾಲು (35), ಬೆಂಗಳೂರು ಹೆಬ್ಬಗೋಡಿಯ ಹರೀಶ (35), ರಂಗಣ್ಣ (50) ಎಂದು ಗುರುತಿಸಲಾಗಿದೆ.
ಮಾ.27ರಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ‌ ಅವರು ಕೊಡಗಿಗೆ ಭೇಟಿ ನೀಡಿದ ಸಂದರ್ಭ ಕುಶಾಲನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಕುಶಾಲನಗರ ಇಂದಿರಾ ಬಡವಾಣೆ ನಿವಾಸಿ ಎಂ.ಎಂ ಚರಣ್ ಜೇಬಿನಲ್ಲಿದ್ದ 32 ಸಾವಿರ, ಅವರ ಸ್ನೇಹಿತರಾದ ಡಿ.ಹೆಚ್. ಚಂದ್ರಶೇಖರ್ ಅವರ ಜೇಬಿನಿಂದ 50 ಸಾವಿರ ಹಾಗೂ ಹೆಚ್. ಮಣಿ ಅವರ ಜೇಬಿನಿಂದ 15 ಸಾವಿರ‌ ಮತ್ತು ಅದೇ ದಿನ ಮಡಿಕೇರಿ ಕ್ರಿಸ್ಟಲ್ ಕೋರ್ಟ್ ಹಾಲ್‌ನಲ್ಲಿ ನಡೆದ ಬಿಜೆಪಿ ಪಕ್ಷದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ರಂಗಸಮುದ್ರ ನಿವಾಸಿ ನಿತಿನ್ ಹೆಚ್.ಎಸ್ ಅವರ ಜೇಬಿನಿಂದ 50ಸಾವಿರ, ವೀರಾಜಪೇಟೆ ನಿವಾಸಿ ಯೋಗೇಶ್ ಅವರ ಜೇಬಿನಿಂದ 32,300 ರೂ. ಮಾಜಿ ಸ್ಪೀಕರ್ ಕೆ.ಜಿ. ಬೋಪಯ್ಯ ಅವರ ಜೇಬಿನಿಂದ 17‌ಸಾವಿರ ರೂ. ಕಳವಾಗಿತ್ತು.
ಈ ಸಂಬಂಧ ದಾಖಲಾಗಿದ್ದ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಒಟ್ಟು 1,96,300 ರೂ.ನಗದು ಕಳ್ಳತನ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪತ್ತೆ ಹಚ್ಚಲು ಸೋಮವಾರಪೇಟೆ ಉಪ ವಿಭಾಗದ ಡಿವೈಎಸ್ಪಿ ಆರ್.ವಿ.ಗಂಗಾಧರಪ್ಪ, ಕುಶಾಲನಗರ ವೃತ್ತ ನಿರೀಕ್ಷಕ‌ ಬಿ.ಜಿ.ಪ್ರಕಾಶ್, ಕುಶಾಲನಗರ ನಗರ ಠಾಣೆ ಪಿಎಸ್ಐ ಉಮಾ.ಬಿ.ಎಸ್, ಪಿಎಸ್‌ಐ ಹಾಗೂ ಉಪವಿಭಾಗ ಮಟ್ಟದ ಅಪರಾಧ ತನಿಖಾ ಸಿಬ್ಬಂದಿಗಳ ವಿಶೇಷ ತಂಡವನ್ನು ರಚಿಸಲಾಗಿತ್ತು. ಈ ತಂಡ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ಏ.2ರಂದು ಒಟ್ಟು 13 ಜನ ಆರೋಪಿಗಳನ್ನು ಬಂಧಿಸಿ ನ್ಯಾಯಾಲುಕ್ಕೆ ಹಾಜರುಪಡಿಸಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.
ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಶ್ಲಾಘಿಸಿರುವ ಅವರು, ವಿವಿಧ ರಾಜಕೀಯ ಪಕ್ಷಗಳು ಚುನಾವಣೆ ಪ್ರಚಾರಕ್ಕಾಗಿ ಕಾರ್ಯಕ್ರಮವನ್ನು ಆಯೋಜಿಸುವ ಸ್ಥಳಗಳಲ್ಲಿ ಕಾರ್ಯಕ್ರಮಕ್ಕೆ ಸೇರುವ ಜನರ ಮಧ್ಯೆ ಸೇರಿಕೊಂಡು ನಗದು, ಮೊಬೈಲ್, ಚಿನ್ನಾಭರಣಗಳನ್ನು ಕಳ್ಳತನ ಮಾಡುವ ಸಾಧ್ಯತೆಗಳಿರುವುದರಿಂದ ಅಪಾರ ಜನಸಂದಣಿಯಾಗುವ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವ ಸಂದರ್ಭ ಮುನ್ನೆಚ್ಚರಿಕೆ ವಹಿಸುವಂತೆ ಸಾರ್ವಜನಿಕರಲ್ಲಿ ಕೋರಿದ್ದಾರೆ. ಅಲ್ಲದೆ ಯಾವುದೇ ಅನುಮಾನಾಸ್ಪದ ವ್ಯಕ್ತಿಗಳು ಕಂಡುಬಂದಲ್ಲಿ ಸ್ಥಳೀಯ ಪೊಲೀಸ್ ಠಾಣೆ, ತುರ್ತು ಸಹಾಯವಾಣಿ 112 ಕ್ಕೆ ಕರೆ ಮಾಡಿ ಅಥವಾ ಕೆ.ಎಸ್.ಪಿ ತಂತ್ರಾಶದ ಮೂಲಕ ಮಾಹಿತಿ ನೀಡಿ ಸಹಕರಿಸುವಂತೆ ಸಾರ್ವಜನಿಕರಲ್ಲಿ ಕೋರಿದ್ದಾರೆ.
110:20
AddThis Website Tools
andolana

Recent Posts

ಹರಿವ ಕಾಲಕ್ಕೆ ಆದಿ ಯಾವುದು? ಅಂತ್ಯವೆಲ್ಲಿ

ಈ ಕಾಲನೆಂಬುವ ಪ್ರಾಣಿ ಕೈಗೆ ಸಿಕ್ಕಿದ್ದರೆ ಚೆನ್ನಾಗಿ ಥಳಿಸಬೇಕೆಂದಿದ್ದೆ. ಎಲ್ಲೋ ತಲೆ ಮರೆಸಿಕೊಂಡು ಓಡಾಡುತ್ತಿದ್ದಾನೆ. ಆಕಾಶದಲಿ ಮಿಂಚಿ ಭೂಕಂಪದಲಿ ಗದ…

18 mins ago

ಓದುಗರ ಪತ್ರ: ಸಾಕಾರ…?!

ಸಾಕಾರ...?! ಪ್ರತಿ ನುಡಿಜಾತ್ರೆಯಲ್ಲೂ ಒಕ್ಕೊರಲಿನಿಂದ ಆಗುತ್ತವೆ ನಿರ್ಣಯಗಳು ಅಂಗೀಕಾರ... ಕಾದು ನೋಡೋಣ ಯಾವಾಗ ಆಗುತ್ತವೆಯೋ ಸಂಪೂರ್ಣ ಸಾಕಾರ...?! -ಮ.ಗು.ಬಸವಣ್ಣ, ಜೆಎಸ್‌ಎಸ್…

25 mins ago

ಓದುಗರ ಪತ್ರ: ಖಾಲಿ ಹುದ್ದೆಗಳು ಶೀಘ್ರ ಭರ್ತಿಯಾಗಲಿ

ರಾಜ್ಯದ ವಿವಿಧ ಇಲಾಖೆಗಳಲ್ಲಿ ಸುಮಾರು ೨.೭೬ ಲಕ್ಷ ಹುದ್ದೆಗಳು ಖಾಲಿ ಉಳಿದಿವೆ ಎಂದು ‘ಆಂದೋಲನ’ ದಿನಪತ್ರಿಕೆಯಲ್ಲಿ ವರದಿಯಾಗಿದ್ದು, ಯುವಕರಿಗೆ ಆತಂಕ…

28 mins ago

ಓದುಗರ ಪತ್ರ: ಪ್ರವಾಸಿಗರನ್ನು ಸೆಳೆದ ಫಲಪುಷ್ಪ ಪ್ರದರ್ಶನ

ಮೈಸೂರಿನ ಅರಮನೆ ಆವರಣದಲ್ಲಿ ಮಾಗಿ ಉತ್ಸವದ ಅಂಗವಾಗಿ ಆಯೋಜಿಸಿರುವ ಫಲಪುಷ್ಪ ಪ್ರದರ್ಶನವು ಪ್ರವಾಸಿಗರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಈ ಫಲಪುಷ್ಪ ಪ್ರದರ್ಶನದಲ್ಲಿ…

32 mins ago

ಕಾಣೆ ಆದವರು: ಜ್ವಲಂತ ಸಮಸ್ಯೆ, ಹೊಸ ‘ಭಾಷೆ’

ಜಿ.ಪಿ.ಬಸವರಾಜು ಸಾಹಿತ್ಯ, ಸಂಗೀತ, ನಾಟಕ, ಚಿತ್ರಕಲೆ, ಸಿನಿಮ - ಹೀಗೆ ಸೃಜನಶೀಲ ಕಲೆಯ ಯಾವುದೇ ಪ್ರಕಾರದಲ್ಲಾಗಲಿ, ಗಂಭೀರವಾಗಿ ತೊಡಗುವ ಕಲೆ…

35 mins ago

ಜುಗ್ನು ಎಂಬ ರೆಡ್‌ಲೈಟ್ ಪ್ರದೇಶವಾಸಿಗಳ ‘ಬೆಳಕಿನ ಹುಳ’!

ಪಂಜುಗಂಗೊಳ್ಳಿ ನಸೀಮಾ ಖಾಟೂನ್ ಬಿಹಾರದ ಮುಝಾಫರ್‌ಪುರದ ಚತುರ್ಭುಜ ಆಸ್ಥಾನ ಎಂಬ ರೆಡ್‌ಲೈಟ್ ಪ್ರದೇಶದಲ್ಲಿ ಹುಟ್ಟಿ ಬೆಳೆದ ಒಬ್ಬ ವೇಶ್ಯೆಯ ಮಗಳು.…

41 mins ago