ಜಿಲ್ಲೆಗಳು

ಕೆಸರು ಗದ್ದೆಯಂತಾದ ಯೂರೋ ಶಾಲೆ ರಸ್ತೆ

ಸೂಕ್ತ ರಸ್ತೆ ನಿರ್ಮಾಣವಾಗದೆ ಕೆಸರಿನಲ್ಲಿಯೇ ಶಾಲೆಗೆ ತೆರಳುವ ಮಕ್ಕಳು; ರಸ್ತೆ ದುರಸ್ತಿಗೆ ಆಗ್ರಹ

ಶಂಕರ ಎಚ್.ಎಸ್.
ಮೈಸೂರು: ವಿಜಯನಗರ ೩ನೇ ಹಂತದ ‘ಸಿ’ ಬ್ಲಾಕ್‌ನಲ್ಲಿರುವ ಯೂರೋ ಶಾಲೆ ಮುಂಭಾಗದ ರಸ್ತೆ ಕಳೆದ ಒಂದು ವಾರದಿಂದ ರಾತ್ರಿ ಸುರಿದ ಮಳೆಯಿಂದಾಗಿ ಕೆಸರು ಗದ್ದೆಯಂತಾಗಿದ್ದು, ಮಕ್ಕಳು ಕೆಸರಿನಲ್ಲಿಯೇ ಶಾಲೆ ಸೇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.

ಒಂದು ತಿಂಗಳ ಹಿಂದೆ ಒಳಚರಂಡಿ ಕಾಮಗಾರಿಗಳಿಗಾಗಿ ಅಗೆದಿದ್ದ ಮಣ್ಣನ್ನು ಡಾಂಬರು ರಸ್ತೆುಂಲ್ಲಿಯೇ ಹಾಕಿರುವುದರಿಂದ ಕೆಸರು ಗದ್ದೆಯಂತಾದ ರಸ್ತೆಯಲ್ಲೇ ಪೋಷ ಕರು ಮಕ್ಕಳನ್ನು ಶಾಲೆಗೆ ಕರೆದು ಹೋಗಿ ಬಿಡುತ್ತಿದ್ದಾರೆ. ಆ ಕೆಸರಿನಲ್ಲಿ ಸಂಚರಿಸುವಾಗ ಬಹಳಷ್ಟು ಜನ ಕಾಲು ಜಾರಿ ಬಿದ್ದು ಗಾಯಗೊಂಡಿರುವ ಉದಾಹರಣೆಗಳಿವೆ.
ಸೊಳ್ಳೆಗಳ ಕಾಟ: ಶಾಲೆಯ ಪಕ್ಕದಲ್ಲೇ ಚರಂಡಿ ಹಾದು ಹೋಗಿದ್ದು, ಮಣ್ಣು, ತ್ಯಾಜ್ಯ ಚರಂಡಿಯಲ್ಲಿ ಶೇಖರಣೆಯಾಗಿ ನೀರು ಸರಾಗವಾಗಿ ಹರಿಯದೆ ಸೊಳ್ಳೆಗಳ ತಾಣ ವಾಗಿ ಮಾರ್ಪಟ್ಟಿದೆ. ಇದರಿಂದ ಸಾಂಕ್ರಾಮಿಕ ಕಾಯಿಲೆಗಳು ಹರಡುವ ಭೀತಿ ಎದುರಾಗಿದ್ದು, ಸೊಳ್ಳೆಗಳ ಕಾಟದಿಂದ ಸಣ್ಣ ಮಕ್ಕಳು ಶಾಲೆಯಲ್ಲಿ ಕುಳಿತು ಪಾಠ ಕೇಳಲು ಕಿರಿಕಿರಿ ಅನುಭವಿಸುವಂತಾಗಿದೆ.
ವಿಜಯನಗರ ೧ನೇ ಹಂತದ ಬಸವ ಸಮಿತಿಯ ಪಕ್ಕದ ರಸ್ತೆ ಮಳೆಗೆ ಅದ್ವಾನಗೊಂಡಿರುವುದು ಮತ್ತು ರಸ್ತೆಯಲ್ಲೇ ಕಟ್ಟಡದ ತ್ಯಾಜ್ಯ ಸುರಿದಿರುವುದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗಿದೆ. ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ ರಸ್ತೆ ದುರಸ್ತಿಪಡಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಮಳೆಯಿಂದಾಗಿ ರಸ್ತೆ ಅಧ್ವಾನವಾಗಿರುವುದರಿಂದ ನಮ್ಮ ಶಾಲೆಯ ಮಕ್ಕಳು ನಡೆದುಕೊಂಡು ಬರಲು ಬಹಳ ತೊಂದರೆಯಾಗುತ್ತಿದೆ. ನಗರಪಾಲಿಕೆಯವರು ಆದಾಷ್ಟು ಬೇಗ ರಸ್ತೆಯನ್ನು ದುರಸ್ತಿಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಬೇಕು.
-ಪ್ರೇಮಲತಾ, ಪ್ರಾಂಶುಪಾಲರು.

andolanait

Recent Posts

ರಸ್ತೆಯಲ್ಲಿ ಮಲಗಿದ್ದ ಬೀದಿನಾಯಿಯನ್ನು ಹೊತ್ತೊಯ್ದ ಚಿರತೆ

ರಾಮನಗರ: ರಸ್ತೆಯಲ್ಲಿ ಮಲಗಿದ್ದ ಬೀದಿನಾಯಿಯನ್ನು ಚಿರತೆ ಹೊತ್ತೊಯ್ದ ಘಟನೆ ಚನ್ನಪಟ್ಟಣ ತಾಲ್ಲೂಕಿನ ದೇವರಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ. ತಡರಾತ್ರಿ ಗ್ರಾಮದ ಹೊರವಲಯದ…

19 mins ago

4 ಲಕ್ಷ ಲಂಚ ಸ್ವೀಕರಿಸುವಾಗ ಸಿಕ್ಕಿಬಿದ್ದ ಇನ್ಸ್‌ಪೆಕ್ಟರ್‌ ಗೋವಿಂದರಾಜು ಸಸ್ಪೆಂಡ್‌

ಬೆಂಗಳೂರು: ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಬಲೆಗೆ ಬಿದ್ದ ಬೆಂಗಳೂರಿನ ಕೆ.ಪಿ.ಅಗ್ರಹಾರ ಪೊಲೀಸ್‌ ಠಾಣೆಯ ಇನ್ಸ್‌ಪೆಕ್ಟರ್‌ ಗೋವಿಂದರಾಜು ಅವರನ್ನು ಸೇವೆಯಿಂದ ಅಮಾನತುಗೊಳಿಸಿ…

30 mins ago

ಜೈಲಿಗೆ ಹೋಗಿ ಬಂದ್ರೂ ಬುದ್ಧಿ ಕಲಿಯದ ರಜತ್:‌ ಮತ್ತೊಂದು ಯಡವಟ್ಟು.!

ಮೈಸೂರು: ಪಾರಂಪರಿಕ ಕಟ್ಟಡದ ಬಳಿ ಸಿಗರೇಟ್‌ ಸೇದುತ್ತಾ ರಜತ್‌ ಫೋಟೋಶೂಟ್‌ ಮಾಡಿಸಿದ್ದು, ಬಿಗ್‌ಬಾಸ್‌ ಹುಡುಗನ ಹುಚ್ಚಾಟಕ್ಕೆ ನೆಟ್ಟಿಗರು ತೀವ್ರ ಆಕ್ರೋಶ…

1 hour ago

ಮೈಸೂರು: ಲೋಕಾಯುಕ್ತ ಪೊಲೀಸರಿಂದ ಏಳು ಕಡೆ ದಾಳಿ: ದಾಖಲೆಗಳ ಪರಿಶೀಲನೆ

ಮೈಸೂರು: ಆದಾಯಕ್ಕಿಂತ ಹೆಚ್ಚು ಹಣ ಸಂಪಾದಿಸಿದ್ದಾರೆ ಎಂಬ ಆರೋಪದ ಮೇರೆಗೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ಏಳು ಕಡೆ ದಾಳಿ ನಡೆಸಿದ್ದಾರೆ.…

2 hours ago

ಸರಗೂರು| ಕಾಡಾನೆ ದಾಳಿ: ದೇವಸ್ಥಾನದ ಕಾವಲುಗಾರ ಸಾವು

ಸರಗೂರು: ಬಹುರ್ದೆಸೆಗೆಂದು ಬಯಲಿಗೆ ತೆರಳಿದ್ದ ವ್ಯಕ್ತಿಯ ಮೇಲೆ ಕಾಡಾನೆಯೊಂದು ದಾಳಿ ನಡೆಸಿದ ಪರಿಣಾಮ ವ್ಯಕ್ತಿಯ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಮೈಸೂರು…

3 hours ago

ಓದುಗರ ಪತ್ರ: ವಾಲ್ಮೀಕಿ ಭವನ ಉದ್ಘಾಟಿಸಿ

ಮೈಸೂರು ತಾಲ್ಲೂಕಿನ ಜಯಪುರ ಹೋಬಳಿಯ ಅರಸಿನಕೆರೆ ಗ್ರಾಮದಲ್ಲಿ ವಾಲ್ಮೀಕಿ ಭವನ ನಿರ್ಮಾಣವಾಗಿ ಎರಡು ವರ್ಷ ಕಳೆದಿದ್ದರೂ ಉದ್ಘಾಟನೆಯಾಗದೇ ಇರುವುದರಿಂದ ಸಾರ್ವಜನಿಕರು…

6 hours ago