ಜಿಲ್ಲೆಗಳು

ಮೌನಾಚರಿಸಿ ಹುತಾತ್ಮರಿಗೆ ಗೌರವ ನಮನ

ಮೈಸೂರು: ನಗರದ ಮೆಟ್ರೊಪೋಲ್ ವೃತ್ತದಲ್ಲಿರುವ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಪ್ರತಿಮೆಯ ಮುಂಭಾಗ ಇಂದು ಸಂಜೆ 26/11 ವಾಣಿಜ್ಯ ಮಹಾನಗರಿ ಮುಂಬಯಿ ದಾಳಿಗೆ 14 ವರ್ಷದ ಪ್ರಯುಕ್ತ  ಯುವ ಭಾರತ್ ಸಂಘಟನೆ ಹಾಗೂ ಟೀo ಮೈಸೂರು ಮತ್ತು ವೀರ ಸಾವರ್ಕರ್ ಯುವ ಬಳಗ ವತಿಯಿಂದ ಹುತಾತ್ಮರನ್ನು ನೆನೆದು ಮೇಣದ ಬತ್ತಿ ಹಿಡಿದು ಅವರನ್ನು ಸ್ಮರಿಸಿ ಒಂದು ನಿಮಿಷ ಕಾಲ ಮೌನ ಆಚರಣೆ ಮಾಡಲಾಯಿತು. 

ಈ ಸಂದರ್ಭದಲ್ಲಿ ಮಾತನಾಡಿದ ಯುವ ಭಾರತ ಸಂಘಟನೆಯ ಅಧ್ಯಕ್ಷರಾದ ಜೋಗಿ ಮಂಜು ಅವರು 26/11 ಭಾರತೀಯರ ಪಾಲಿಗೆ ಅತ್ಯಂತ ಕರಾಳ ದಿನಕ್ಕೆ ಇವತ್ತಿನ ದಿನ ಬರೋಬ್ಬರಿ 14 ವರ್ಷಗಳ ಹಿಂದೆ ಇಸ್ಲಾಂ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾ ದಿಂದ ದೇಶದ ವಾಣಿಜ್ಯ ನಗರಿಯಲ್ಲಿರುವ ಮುಂಬಯಿನ ತಾಜ್ ಮಹಲ್ ಪ್ಯಾಲೆಸ್ ಹೋಟೆಲ್ ಸೇರಿದಂತೆ ಅನೇಕ ಸ್ಥಳಗಳ ಮೇಲೆ ನಡೆದ ಈ ದಾಳಿ ಮುಂಬಯಿನ ವಾಣಿಜ್ಯ,ವ್ಯಾಪಾರ ಮತ್ತು ವ್ಯವಹಾರ ತಲ್ಲಣಗೊಳಿಸಿದಲ್ಲದೇ ಇಡಿ ರಾಷ್ಟ್ರವನ್ನೇ ತಲ್ಲಣಗೊಳಿಸಿತ್ತು. 

ಅಂದು ಈ ದಾಳಿ ಬರೀ ಮುಂಬಯಿನ ಮೇಲೆ ದಾಳಿ ಅಲ್ಲ ಇದು ಪ್ರತಿಯೊಬ್ಬ ಭಾರತೀಯನ ಮನಸ್ಸಿನ ಮೇಲೆ ಆದ ದಾಳಿ ಅಂತಾ ಇಡೀ ದೇಶವೇ ಭಾವಿಸಿತ್ತು.ದಾಳಿಯಲ್ಲಿ ನಮ್ಮ ನಾಡಿನ ಹೆಮ್ಮೆಯ ಪುತ್ರ, ಮೇಜರ್ ಸಂದೀಪ ಉನ್ನಿಕೃಷ್ಣನ್ನ ಸೇರಿದಂತೆ ಪೋಲೀಸರು, ಸೈನಿಕರು,ಮುಂಬಯಿನ ನಿವಾಸಿಗಳು ಸೇರಿ 150ಕ್ಕೂ ಹೆಚ್ಚು ಜನ ಹುತಾತ್ಮವಾದರು,300 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದರು ಎಂದು ಹುತಾತ್ಮರು ನಮಗೆ ಸದಾ ಕಾಲ ಆದರ್ಶವಾಗಿರುತ್ತಾರೆ ಎಂದರು.

ನಂತರ ಟೀo ಮೈಸೂರು ತಂಡದ ಸಂಚಾಲಕರಾದ ಗೋಕುಲ್ ಗೋವರ್ಧನ್ ಮಾತನಾಡಿ ನಮ್ಮ ಇಂದಿನ ಸುಂದರ ಜೀವನ, ಸಂತೋಷಕ್ಕಾಗಿ ತಮ್ಮ ಅಂದಿನ ಜೀವನವನ್ನೇ ಅರ್ಪಿಸಿದ ಅಸಂಖ್ಯಾತ ಧೀರ ಯೋಧರ ಬಲಿದಾನ,ತ್ಯಾಗ ಸ್ಮರಿಸಿಕೊಳ್ಳೊಣ ಮತ್ತು ನೆನಪು ಮಾಡಿಕೊಳ್ಳೊಣ ಎಂದರು.

ಸಂಧರ್ಭದಲ್ಲಿ ಯುವ ಭಾರತ್ ಸಂಘಟನೆಯ ಅಧ್ಯಕ್ಷರಾದ ಜೋಗಿ ಮಂಜು, ವೀರ ಸಾವರ್ಕರ್ ಯುವ ಬಳಗದ ಅಧ್ಯಕ್ಷರಾದ ರಾಕೇಶ್ ಭಟ್, ಟೀo ಮೈಸೂರು ಮುಖ್ಯ ಸಂಚಾಲಕರಾದ ಗೋಕುಲ್ ಗೋವರ್ಧನ್, ಸಂದೇಶ್, ಪ್ರಮೋದ್ ಗೌಡ, ಟಿ ಎಸ್ ಅರುಣ್, ಎಸ್ ಎನ್ ರಾಜೇಶ್,ಅನೋಜ್, ಗಣೇಶ್ ಗೋಪಾಲ್, ಮಣಿರತ್ನಂ, ಚಂದ್ರಪ್ಪ, ಹರೀಶ್ ಬಾಬು, ಅನಿಲ್ ಜೈನ್, ಯತೀಶ್, ಮಿನುಗು, ಹಿರಿಯಣ್ಣ ಆನಂದ್, ರಘು, ಬಸವರಾಜು, ಹಾಗೂ ಇತರರು ಹಾಜರಿದ್ದರು.

andolanait

Recent Posts

ಸೆಲ್ಫಿ ವಿಡಿಯೋ ಮಾಡಿ ಆಟೋ ಚಾಲಕ ಆತ್ನಹತ್ಯೆಗೆ ಯತ್ನ

ನಂಜನಗೂಡು: 5 ಸಾವಿರ ರೂ ಸಾಲ ಪಾವತಿಗಾಗಿ ಮಾನಸಿಕವಾಗಿ ಕಿರುಕುಳ ನೀಡಿದ ವ್ಯಕ್ತಿ ಮನೆ ಮುಂದೆ ಸೆಲ್ಫಿ ವಿಡಿಯೋ ಮಾಡಿ…

1 hour ago

ಮಂಡ್ಯದಲ್ಲಿ ಭೀಕರ ಅಪಘಾತ: ಮೂವರು ಸ್ಥಳದಲ್ಲೇ ಸಾವು

ಮಂಡ್ಯ: ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು ಪಲ್ಟಿಯಾಗಿ ಬಿದ್ದ ಪರಿಣಾಮ ಸ್ಥಳದಲ್ಲೇ ಮೂವರು ಸಾವನ್ನಪ್ಪಿರುವ ಧಾರುಣ ಘಟನೆ ಮಂಡ್ಯದಲ್ಲಿ ನಡೆದಿದೆ.…

3 hours ago

ರಾಜ್ಯದಲ್ಲಿ ಮೂರು ದಿನ ದಟ್ಟ ಮಂಜು ಕವಿದ ವಾತಾವರಣ: ತೀವ್ರ ಚಳಿ ಮುನ್ಸೂಚನೆ

ಬೆಂಗಳೂರು: ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಬೆಳಗಿನ ಜಾವ ದಟ್ಟವಾದ ಮಂಜು ಕವಿದ ವಾತಾವರಣ ಇರಲಿದೆ.…

3 hours ago

ಯೂರಿಯಾ ಗೊಬ್ಬರ ತಿಂದು 11 ಮೇಕೆಗಳು ಸಾವು

ಕೊಳ್ಳೇಗಾಲ: ಮೇಯಲು ಬಿಟ್ಟಿದ್ದ ಮೇಕೆಗಳು ಯೂರಿಯಾ ಗೊಬ್ಬರ ತಿಂದು ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಜಾಗೇರಿ ಹಳೆ…

4 hours ago

ಚಾಮರಾಜನಗರ| ಹುಚ್ಚುನಾಯಿ ದಾಳಿಯಿಂದ 7 ಮಂದಿಗೆ ಗಾಯ

ಚಾಮರಾಜನಗರ: ಪಾದಾಚಾರಿಗಳ ಮೇಲೆ ಏಕಾಏಕಿ ಹುಚ್ಚುನಾಯಿ ದಾಳಿ ನಡೆಸಿದ ಪರಿಣಾಮ 7 ಮಂದಿ ಗಾಯಗೊಂಡಿರುವ ಘಟನೆ ಯಳಂದೂರು ಪಟ್ಟಣದಲ್ಲಿ ನಡೆದಿದೆ.…

4 hours ago

ದುಬಾರಿ ಗಿಫ್ಟ್‌ ತೆಗೆದುಕೊಳ್ಳುವುದು ತಪ್ಪಾಗುತ್ತದೆ: ಸಂಸದ ಯದುವೀರ್‌ ಒಡೆಯರ್‌

ಮಡಿಕೇರಿ: ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ತಮ್ಮ ವಸ್ತುಗಳು ಏನೇ ಇದ್ದರೂ ಅಫಿಡವಿಟ್‌ನಲ್ಲಿ ತೋರಿಸಿದ್ದರೆ ಯಾವುದೇ ಸಮಸ್ಯೆ ಆಗಲ್ಲ. ಈ ಹಿಂದೆ…

5 hours ago