ಮೈಸೂರು: ಚಲನಚಿತ್ರ ನಟ, ನಿರ್ದೇಶಕ ಹಾಗೂ ನಿರ್ಮಾಪಕ ಆಸ್ಕರ್ ಕೃಷ್ಣ ಸಾರಥ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಕಲಾಭೂಮಿ ಪ್ರತಿಷ್ಠಾನದ ಉದ್ಘಾಟನೆಯು ಶನಿವಾರ ನೆರವೇರಿತು.
ಮೈಸೂರಿನ ವಿಜಯನಗರ ಒಂದನೇ ಹಂತದಲ್ಲಿರುವ ಜಿಲ್ಲಾ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮವನ್ನು ಖ್ಯಾತ ಚಲನಚಿತ್ರ ನಟ ಜೈ ಜಗದೀಶ್ ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು ಇತ್ತೀಚಿನ ದಿನಗಳಲ್ಲಿ ಇಂತಹ ಕಲಿಕಾ ಶಾಲೆಗಳನ್ನು ಮಾಡುವುದು ತುಂಬಾ ಕಷ್ಟದ ಕೆಲಸ. ಸುಲಭದ್ದಾಗಿದ್ದರೆ ಚಿತ್ರರಂಗದಲ್ಲಿರುವ ನಾವೇ ಮಾಡುತ್ತಿದ್ದೆವು. ಇದಕ್ಕೆ ಬಹಳ ಸಮಯ ಕೊಡಬೇಕಾಗುತ್ತದೆ. ಸಾಕಷ್ಟು ಹಣವೂ ಬೇಕಾಗುತ್ತದೆ. ಚಿತ್ರೀಕರಣಕ್ಕಾಗಿ ಎಲ್ಲೆಲ್ಲೋ ಅಲೆಯುವ ನಾವುಗಳು ಇಂತಹ ಸಂಸ್ಥೆಗಳನ್ನು ನಡೆಸಲಾಗದು. ಯುವ ನಟ, ನಿರ್ದೇಶಕ ಆಸ್ಕರ್ ಕೃಷ್ಣ ಈ ಪ್ರಯತ್ನ ಮಾಡುತ್ತಿದ್ದಾರೆ. ಇದರಲ್ಲಿ ಇವರಿಗೆ ಯಶಸ್ಸು ಸಿಗಲಿ. ಇಲ್ಲಿ ಕಲಿಯುವವರು ದೊಡ್ಡ ಮಟ್ಟದಲ್ಲಿ ಬೆಳೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಅಧ್ಯಕ್ಷರಾದ ಭಾ.ಮ ಹರೀಶ್ ರವರು ಮಾತನಾಡಿ ಆಸ್ಕರ್ ಕೃಷ್ಣ ಪ್ರಾರಂಭಿಸಿರುವ ‘ಕಲಾಭೂಮಿ’ ಸಂಸ್ಥೆಯು ಮೈಸೂರಿನಲ್ಲಿ ಒಂದು ಮಾದರಿ ಸಂಸ್ಥೆಯಾಗಿ ಬೆಳೆಯಲಿ ಅದಕ್ಕೆ ಬೇಕಾದ ಎಲ್ಲಾ ಸಹಕಾರಗಳನ್ನು ನಾವು ನೀಡುತ್ತೇವೆ. ಮೈಸೂರು ಭಾಗದ ಪ್ರತಿಭೆಗಳು ಈ ‘ಕಲಾಭೂಮಿ’ಯಿಂದ ಚಿತ್ರರಂಗಕ್ಕೆ ಪರಿಚಯವಾಗಲಿ ಎಂಬ ಬೆಂಬಲದ ಮಾತುಗಳನ್ನಾಡಿದರು.
ರಂಗಾಯಣದ ಉಪ ನಿರ್ದೇಶಕಿ ನಿರ್ಮಲ ಮಠಪತಿ ಮಾತನಾಡಿ ಕಲಾವಲಯದಲ್ಲಿ ಶಾಲೆ ಆರಂಭಿಸುವವರು ಕೇವಲ ಒಂದು ಕಲೆಯ ಬಗ್ಗೆಯಷ್ಟೇ ಕೇಂದ್ರೀಕರಿಸುತ್ತಾರೆ. ಆದರೆ ಇವರು ಮೂರು ಮಾಧ್ಯಮಗಳ ಬಗ್ಗೆ ಕಲಿಕಾ ಶಾಲೆ ಮಾಡಿರುವುದು ವಿಶೇಷವಾಗಿದೆ. ತಂತ್ರಜ್ಞಾನದ ಜೊತೆಗೆ ಬೆಳೆದಿರುವ ಕಲಾ ಮಾಧ್ಯಮಗಳು ಸಮಾಜಕ್ಕೆ ಯಾವ ಸಂದೇಶ ನೀಡುತ್ತಿವೆ ಎಂಬುದನ್ನು ನೋಡಬೇಕಾಗುತ್ತದೆ. ಸಾಮಾಜಿಕ ಜವಾಬ್ದಾರಿಯು ಎಲ್ಲಾ ಮಾಧ್ಯಮ ಪ್ರಾಕಾರಗಳ ಮೇಲೂ ಇದೆ. ಅವು ನೈತಿಕ ಮೌಲ್ಯಗಳನ್ನು ಬೆಳೆಸಬೇಕು ಎಂದು ಆಶಿಸಿದರು.
‘ಕಲಾಭೂಮಿ’ ಸಂಸ್ಥಾಪಕ ಅಧ್ಯಕ್ಷ ಆಸ್ಕರ್ ಕೃಷ್ಣ ಮಾತನಾಡಿ, ಸಿನಿಮಾ, ನಾಟಕ ಹಾಗೂ ಲಲಿತಕಲಾ ಶಾಲೆಯಾಗಿ ‘ಕಲಾಭೂಮಿ’ಯು ಕಾರ್ಯ ನಿರ್ವಹಿಸಲಿದೆ. ಸಿನಿಮಾ ರಂಗಕ್ಕೆ ಸಂಬಂಧಿಸಿದಂತೆ ಪ್ರಾಯೋಗಿಕವಾಗಿ ಕಲಿಸುವ ಉದ್ದೇಶ ಹೊಂದಲಾಗಿದೆ ಎಂದು ತಿಳಿಸಿದರು.
ಚಿತ್ರನಟ ಶಂಕರ ಅಶ್ವಥ್, ಜಾರಿ ನಿರ್ದೇಶನಾಲಯದ ಎಸ್.ಪಿ ಡಾ. ಕವಿತಾ, ಸಮಾಜ ಸೇವಕಿ ಪ್ರೇಮ ಬೋಧಿ, ರಂಗಭೂಮಿ ಮತ್ತು ಸಿನಿಮಾ ತಂತ್ರಜ್ಞ ಮಂಜು ಸ್ವಾಮಿ ಮತ್ತು ರಂಗಕರ್ಮಿ ಗಿರೀಶ್ ಮಾಚಳ್ಳಿ ಅವರನ್ನು ಸನ್ಮಾನಿಸಲಾಯಿತು.
ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್, ಸಾಹಿತಿ, ಚಿಂತಕ ಡಾ. ಕೃಷ್ಣಮೂರ್ತಿ ಚಮರಂ, ಹಿರಿಯ ಚಿತ್ರ ಸಾಹಿತಿ ಬಿ.ಎ ಮಧು, ನಿರ್ಮಾಪಕರಾದ ಟಿ.ಪಿ ಸಿದ್ದರಾಜು ಹಾಗೂ ಅಂಚೆಹಳ್ಳಿ ಶಿವಕುಮಾರ್ ಉಪಸ್ಥಿತರಿದ್ದರು.
ಬೆಂಗಳೂರು: ಈ ಬಾರಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ 5.46,698 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕರ್ನಾಟಕಕ್ಕೆ ಮೊದಲ ಬಾರಿ ಶೇ.86.48ರಷ್ಟು ಫಲಿತಾಂಶ ಬಂದಿದೆ…
ದಾವಣಗೆರೆ/ಬಾಗಲಕೋಟೆ: ರಾಜ್ಯದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಇಂದು ಮತದಾನ ನಡೆದಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.…
ಬೆಂಗಳೂರು: ನಾಡಿನ ಅಧಿದೇವತೆ ನೆಲೆಸಿರುವ ಮೈಸೂರಿನ ಚಾಮುಂಡಿಬೆಟ್ಟದಲ್ಲಿ ಕೇಂದ್ರ ಸರ್ಕಾರದ ಅನುದಾನದಡಿ ನಡೆಯುತ್ತಿದ್ದ ಕಾಮಗಾರಿಗಳಿಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಹೈಕೋರ್ಟ್…
ಬೆಂಗಳೂರು: ನಗರದಲ್ಲಿ ಮುಂದಿನ ಮೂರು ದಿನಗಳ ಕಾಲ ಅಧಿಕ ಉಷ್ಣಾಂಶ ದಾಖಲಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಬಿಸಿ…
ಕೋಲ್ಕತ್ತಾ: ಪಶ್ಚಿಮ ಬಂಗಾಳ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಜನರಿಗೆ ಆರು ಗ್ಯಾರಂಟಿಗಳನ್ನು ನೀಡುತ್ತೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.…
ಮುಂಬೈ: ಪಶ್ಚಿಮ ಏಷ್ಯಾ ಸಂಘರ್ಷದ ಮಧ್ಯೆ ಭಾರತದ ಧ್ವಜ ಹೊಂದಿರುವ 15,400 ಟನ್ ಎಲ್‌ಪಿಜಿ ಹೊತ್ತ ಟ್ಯಾಂಕರ್ ಹಾರ್ಮುಜ್ ಜಲಸಂಧಿಯನ್ನು…