ಜಿಲ್ಲೆಗಳು

ಜನಮನದಲ್ಲಿ ನೆಲೆಯಾದ ಜ್ಞಾನಯೋಗಿ : ಪ್ರಧಾನಿ ಮೋದಿ ಜೊತೆ ವೇದಿಕೆ ಹಂಚಿಕೊಂಡಿದ್ದೇ ಕೊನೆ ಕಾರ್ಯಕ್ರಮ

ಕೆ.ಬಿ.ರಮೇಶನಾಯಕ

ಮೈಸೂರು: ದೂರದ ವಿಜಯಪುರ(ಹಿಂದಿನ ಬಿಜಾಪುರ)ಜ್ಞಾನ ಯೋಗಾಶ್ರಮಕ್ಕೂ-ಕಪಿಲ ತಟದಲ್ಲಿರುವ ಸುತ್ತೂರು ಮಠಕ್ಕೂ ಬಿಡಿಸಲಾರದ ನಂಟು. ಶ್ರೀರಾಜೇಂದ್ರ ಸ್ವಾಮೀಜಿಗಳ ಕಾಲದಿಂದಲೂ ಸುತ್ತೂರು ಮಠದೊಂದಿಗೆ ಇದ್ದ ಉತ್ತಮ ಬಾಂಧವ್ಯ ಈತನಕ ಮುಂದುವರಿದ ಪರಿಣಾಮವಾಗಿ ೪೫ ದಿನಗಳ ಆಧ್ಯಾತ್ಮಿಕ ಶಿಬಿರ ಸೇರಿದಂತೆ ಒಂದು ವರ್ಷದಲ್ಲಿ ಹತ್ತಾರು ಕಾರ್ಯಕ್ರಮಗಳಲ್ಲಿ ಸಿದ್ಧೇಶ್ವರ ಸ್ವಾಮೀಜಿ ಪಾಲ್ಗೊಂಡಿದ್ದು ಇನ್ನು ನೆನಪು ಮಾತ್ರ.

೧೯೮೬ ರಿಂದಲೂ ಮೈಸೂರಿನಲ್ಲಿ ನಡೆದ ಹಲವಾರು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡಿದ್ದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ಜೂ.೨೦ರಂದು ಚಾಮುಂಡಿಬೆಟ್ಟದ ತಪ್ಪಲಿನ ಸುತ್ತೂರು ಮಠದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೇ ಕೊನೆಯ ಸಾರ್ವಜನಿಕ ಕಾರ್ಯಕ್ರಮವಾಗಿದೆ.

೧೯೯೬ರಲ್ಲಿ ಮೊದಲ ಪ್ರವಚನ: ಜೆಎಸ್‌ಎಸ್ ಆಸ್ಪತ್ರೆಯ ಹಳೆಯ ಕಟ್ಟಡದಲ್ಲಿ ೧೯೯೬ರಲ್ಲಿ ಮೊದಲ ಬಾರಿಗೆ ಆಯೋಜಿಸಿದ್ದ ಪ್ರವಚನ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕತೆ ಕುರಿತು ಉಪನ್ಯಾಸ ನೀಡಿದ್ದರು. ಅಲ್ಲಿಂದ ಶುರುವಾದ ಇವರ ಪ್ರವಚನ ಯಾತ್ರೆಯು ಸುತ್ತೂರು ಮಠ, ಊಟಿಯ ಜೆಎಸ್‌ಎಸ್ ಫಾರ್ಮಾಸಿ ಕಾಲೇಜು, ಜೆ.ಪಿ.ನಗರ ಪಬ್ಲಿಕ್ ಶಾಲೆ, ಎಸ್‌ಜೆಸಿಇ ಕ್ಯಾಂಪಸ್, ಗುಂಡ್ಲುಪೇಟೆಯಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಪಾಲ್ಗೊಂಡಿದ್ದರು. ಪ್ರತಿ ವರ್ಷ ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆಯೋಜಿಸುತ್ತಿದ್ದ ಶಿಬಿರದಲ್ಲಿ ಪಾಲ್ಗೊಳ್ಳಲು ಬಂದಾಗ ಸುಮಾರು ೫೦ರಿಂದ ೬೦ ದಿನಗಳ ಕಾಲ ಉಳಿಯುತ್ತಿದ್ದರು. ನಿತ್ಯ ಪ್ರವಚನ ನೀಡುತ್ತಿದ್ದರೂ ಕೂಡ ಶನಿವಾರ ಮತ್ತು ಭಾನುವಾರ ಆಂಗ್ಲಭಾಷೆಯಲ್ಲೂ ಉಪನ್ಯಾಸ ನೀಡಿ ಎಲ್ಲರನ್ನೂ ಮೂಕವಿಸ್ಮಿತರನ್ನಾಗಿಸುತ್ತಿದ್ದರು.

ಮೋದಿ ಜತೆ ಕೊನೆಯ ಕಾರ್ಯಕ್ರಮ: ರಾಷ್ಟ್ರಪತಿ, ಪ್ರಧಾನಿ, ರಾಜ್ಯಪಾಲರು,ಮುಖ್ಯಮಂತ್ರಿಗಳು ಪಾಲ್ಗೊಳ್ಳುತ್ತಿದ್ದ ಹಲವು ಕಾರ್ಯಕ್ರಮಗಳಲ್ಲಿ ಸಾನ್ನಿಧ್ಯವಹಿಸಲು ಆಗಮಿಸುತ್ತಿದ್ದ ಶ್ರೀಗಳು ಜೂ.೨೦ರಂದು ನರೇಂದ್ರ ಮೋದಿ ಅವರೊಂದಿಗಿನ ವೇದಿಕೆ ಕಾರ್ಯಕ್ರಮವೇ ಕೊನೆಯಾಗಿದೆ. ಮೋದಿ ಅವರು ಶ್ರೀಗಳಿಗೆ ಎರಡು ಕೈಗಳನ್ನು ಜೋಡಿಸಿ ನಮಿಸಿದಾಗ ಅಷ್ಟೇ ಕೃತಜ್ಞತೆಯಿಂದ ಕೈಮುಗಿದು ಹಾರೈಸಿದ್ದರು. ಈ ಕಾರ್ಯಕ್ರಮ ಮುಗಿಸಿ ವಾಪಸ್ ಆಶ್ರಮಕ್ಕೆ ತೆರಳಿದ್ದ ಶ್ರೀಗಳು ಎಡವಿ ಬಿದ್ದಿದ್ದರಿಂದ ಕಾಲಿಗೆ ಸಣ್ಣ ಗಾಯವಾಗಿತ್ತು. ನಂತರ ಅವರು ಆಶ್ರಮದಲ್ಲೇ ಹೆಚ್ಚು ಕಾಲ ಕಳೆಯುತ್ತಾ ಹೊರಗಿನ ಕಾರ್ಯಕ್ರಮಗಳಿಂದ ದೂರ ಉಳಿದಿದ್ದರು.ಇದರಿಂದಾಗಿ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ೨೦ ದಿನಗಳಿಂದ ಮೂರು ಬಾರಿ ಭೇಟಿ ನೀಡಿ ಯೋಗಕ್ಷೇಮ ವಿಚಾರಿಸಿ ಬಂದಿದ್ದರು ಎಂದು ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್ ನೆನಪಿಸಿಕೊಳ್ಳುತ್ತಾರೆ.


ಪ್ರವಚನಕ್ಕಾಗಿ ಕಾಯುತ್ತಿದ್ದ ಜನರು

ಸುತ್ತೂರು ಶ್ರೀ ಕ್ಷೇತ್ರದಲ್ಲಿ ಆಯೋಜಿಸುತ್ತಿದ್ದ ಶಿಬಿರದಲ್ಲಿ ಶ್ರೀಸಿದ್ಧೇಶ್ವರ ಸ್ವಾಮೀಜಿ ಪ್ರವಚನ ನೀಡುತ್ತಿದ್ದರಿಂದ ಮುಂಜಾನೆಯೇ ಜನರು ಕಾದು ಕುಳಿತುಕೊಳ್ಳುತ್ತಿದ್ದರು. ಮುಂಜಾನೆ ನಾಲ್ಕು ಗಂಟೆಗೆ ಮೈಸೂರಿನಿಂದ ಜೆಎಸ್‌ಎಸ್ ಕಾಲೇಜು ಬಸ್,ಖಾಸಗಿ ವಾಹನಗಳಿಂದ ಸುತ್ತೂರು ತಲುಪಿ ಒಂದು ಗಂಟೆ ಕಾಲ ಅವರ ಮಾತುಗಳನ್ನು ಆಲಿಸುತ್ತಿದ್ದರು. ವಿಶೇಷವಾಗಿ ಸಾರ್ವಜನಿಕರು ಅವರ ಮಾತುಗಳಿಂದ ಮನಸ್ಸು ಬದಲಾಗಿ ಇತರರನ್ನು ಕರೆತರುತ್ತಿದ್ದರು. ಇದರಿಂದಾಗಿ ಶಿಬಿರದ ಕೊನೆಯ ದಿನಗಳಲ್ಲಿ ನಿರೀಕ್ಷೆಗೂ ಮೀರಿದ ಜನರು ಅವರ ಪ್ರವಚನ ಕೇಳಲು ಬರುತ್ತಿದ್ದರೆಂದು ತೆರಕಣಾಂಬಿ ಜೆಎಸ್‌ಎಸ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕರೊಬ್ಬರು ಹೇಳಿದರು.

 

 

 

 

andolanait

Recent Posts

ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪ್ರಕರಣ: ಗಾಯಾಳು ರವಿಗೆ ಮುಂದುವರಿದ ಚಿಕಿತ್ಸೆ

ಪ್ರಶಾಂತ್‌ ಎನ್‌ ಮಲ್ಲಿಕ್‌  ಮೈಸೂರು: ಸುತ್ತೂರು ಜಾತ್ರೆ ವೇಳೆ ರಾತ್ರಿ ಗದ್ದೆಯಲ್ಲಿ ಮಲಗಿದ್ದ ವ್ಯಕ್ತಿಗಳ ಮೇಲೆ ಕಾರು ಹರಿದ ಪರಿಣಾಮ…

4 hours ago

ಕಾಫಿ ಮಳಿಗೆಯಲ್ಲಿದ್ದ ಹಣ ಕಳವು: ಆರೋಪಿ ಬಂಧನ

ಸಿದ್ದಾಪುರ: ವಿರಾಜಪೇಟೆ ರಸ್ತೆಯಲ್ಲಿರುವ ಎಸ್‌ವೈಎಸ್ ಕಾಫಿ ಅಂಗಡಿಯಲ್ಲಿ ನಡೆದ ನಗದು ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿದ್ದಾಪುರ ಪೊಲೀಸರು ಕೇರಳ ಮೂಲದ…

4 hours ago

ಕಾಡಾನೆ ದಾಳಿ: ಅಪಾರ ಪ್ರಮಾಣದ ಬೆಳೆ ನಾಶ

ಮಹಾದೇಶ್‌ ಎಂ ಗೌಡ  ಹನೂರು: ತಾಲ್ಲೂಕಿನ ಕೆವಿಎನ್ ದೊಡ್ಡಿ ಗ್ರಾಮದ ಜಮೀನೊಂದರಲ್ಲಿ ಕಾಡಾನೆ ಲಗ್ಗೆ ಇಟ್ಟು ಅಪಾರ ಪ್ರಮಾಣದ ಬೆಳೆ…

5 hours ago

ಬೆಂಗಳೂರಿನಲ್ಲೇ ಐಪಿಎಲ್ ಉದ್ಘಾಟನಾ ಪಂದ್ಯ

ಬೆಂಗಳೂರು: ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ…

5 hours ago

ಪೌರಾಯುಕ್ತೆಗೆ ಧಮ್ಕಿ ಹಾಕಿದ್ದ ಪ್ರಕರಣ: ರಾಜೀವ್‌ ಗೌಡಗೆ ಹೈಕೋರ್ಟ್‌ ತರಾಟೆ

ಬೆಂಗಳೂರು: ಶಿಡ್ಲಘಟ್ಟ ಪೌರಾಯುಕ್ತೆ ಅಮೃತಾ ಅವರಿಗೆ ಜೀವ ಬೆದರಿಕೆ ಹಾಕಿದ್ದ ಪ್ರಕರಣ ಸಂಬಂಧ ಕಾಂಗ್ರೆಸ್‌ ಮುಖಂಡ ರಾಜೀವ್‌ಗೌಡಗೆ ಹೈಕೋರ್ಟ್‌ ತೀವ್ರ…

5 hours ago

ರೇಣುಕಾಸ್ವಾಮಿ ಕೊಲೆ ಪ್ರಕರಣ: ಪವಿತ್ರಾಗೌಡಗೆ ವಾರಕ್ಕೊಮ್ಮೆ ಮನೆ ಊಟ ಆದೇಶಕ್ಕೆ ತಡೆ

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಪ್ರಮುಖ ಆರೋಪಿ ಪವಿತ್ರಾ ಗೌಡಗೆ ವಾರಕ್ಕೊಮ್ಮೆ ಮನೆ ಊಟ…

5 hours ago