ಗುಂಡ್ಲುಪೇಟೆ: ಕಡಿಮೆ ಬೆಲೆಗೆ ತಿಂಡಿ, ಊಟ ಸಿಗುತಿದ್ದ ಇಂದಿರಾ ಕ್ಯಾಂಟೀನ್‌ಗೆ ಸಬ್ಸಿಡಿ ನೀಡುತ್ತಿಲ್ಲ ಎಂಬ ಕಾರಣ ಹೇಳಿ ಗುತ್ತಿಗೆದಾರರು ಕ್ಯಾಂಟೀನ್‌ಗೆ ಬೀಗ ಹಾಕಿದ ಪರಿಣಾಮ ಬಡವರ ಹೊಟ್ಟೆಗೆ ಬರೆ ಎಳೆದಂತಾಗಿದೆ.
ಒಂದು ವರ್ಷದಿಂದ ಜಿಲ್ಲೆುಂ ನಾಲ್ಕು ಇಂದಿರಾ ಕ್ಯಾಂಟೀನ್‌ಗಳು ಕಾಂರ್ು ನಿರ್ವಹಿಸುತ್ತಿದ್ದು , ವರ್ಷದಿಂದ ನಮಗೆ ಸಹಾುಂಧನ ಬಿಡುಗಡೆಾಂಗಿಲ್ಲ. ಹಾಗಾಗಿ ನಮಗೆ ಹೊರೆಾಂಗುತ್ತಿದ್ದು ಕ್ಯಾಂಟೀನ್ ಮುಂದುವರಿಸಲು ಸಾಧ್ಯವಾಗುತಿಲ್ಲ. ಡಿಸೆಂಬರ್ ೧೦ ರಿಂದ ನಾಲ್ಕೂ ಇಂದಿರಾ ಕ್ಯಾಂಟೀನ್‌ಗಳನ್ನು ಮುಚ್ಚಲಾಗುವುದು ಎಂದು ಗುತ್ತಿಗೆದಾರರು ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಕ್ಯಾಂಟೀನ್ ಬಂದ್ ವಾಡಿದ್ದರಿಂದ ಜನಸಾವಾನ್ಯರಿಗೆ ತೊಂದರೆಯಾಗುತ್ತಿದೆ. ಇದರಿಂದ ಕಾರ್ಮಿಕ ವರ್ಗ, ನಿರಾಶ್ರಿತರ ಹೊಟ್ಟೆಯ ಮೇಲೆ ಬರೆ ಎಳೆಯುವ ಕೆಲಸ ವಾಡಿದ್ದಾರೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಪಟ್ಟಣದ ರಾಷ್ಟ್ರೀುಂ ಹೆದ್ದಾರಿುಂ ಬದಿುಂಲ್ಲಿರುವ ಇಂದಿರಾ ಕ್ಯಾಂಟೀನ್‌ನ್ನು ಈಗಾಗಲೇ ಮುಚ್ಚಲಾಗಿದ್ದು, ಇದು ಪುರಸಭೆ ಅಧೀನಕ್ಕೆ ಒಳಪಡುತ್ತದೆ. ಆದರೆ ಈ ವಿಚಾರ ಪುರಸಭೆ ಅಧ್ಯಕ್ಷರ ಗಮನಕ್ಕೆ ಬಂದಿಲ್ಲವೇ ಎಂಬುದೇ ಪ್ರಶ್ನೆಯಾಗಿದೆ. ಶಾಸಕರು ಪ್ರತಿನಿತ್ಯ ತಮ್ಮ ಕಚೇರಿಗೆ ತೆರಳುವಾಗ ಇಂದಿರಾ ಕ್ಯಾಂಟೀನ್ ಮುಂಭಾಗವೇ ಹೋಗುತ್ತಾರೆ. ಆದರೆ ಕ್ಯಾಂಟೀನ್ ಮುಚ್ಚಿರುವುದನ್ನು ಗಮನಿಸದೆ ಇರುವುದು ದುರ್ದೈವ ಎಂದು ಸಾರ್ವಜನಿಕರು ದೂರಿದ್ದಾರೆ.
ಬಡ ವರ್ಗದ ಕಾರ್ಮಿಕರು, ನಿರ್ಗತಿಕರಿಗೆ ಅನುಕೂಲವಾಗಿದ್ದ ಇಂದಿರಾ ಕ್ಯಾಂಟೀನ್ ಬಾಗಿಲು ಮುಚ್ಚಿದ ಪರಿಣಾಮ ಅನೇಕ ಜನರಿಗೆ ತೊಂದರೆಾಂಗುತ್ತಿದೆ. ೫-೧೦ ರೂ.ಗಳಿಗೆ ಬೆಳಿಗ್ಗೆ ತಿಂಡಿ, ಊಟ ಸಿಗುತಿದ್ದ ಕ್ಯಾಂಟೀನ್ ಬಿಟ್ಟು ಬಡವರ್ಗದ ಕಾರ್ಮಿಕರು ನಿತ್ಯ ೫೦-೧೦೦ ರೂ. ಕೊಟ್ಟು ಹೋಟೆಗಳಲ್ಲಿ ತಿನ್ನುವ ಪರಿಸ್ಥಿತಿ ನಿರ್ವಾಣವಾಗಿದೆ. ಹಾಗಾಗಿ ಕೂಡಲೇ ಜಿಲ್ಲಾಧಿಕಾರಿಗಳು ಪುರಸಭೆುಂ ಗಮನಕ್ಕೆ ತಂದು ಇಂದಿರಾ ಕ್ಯಾಟೀನ್‌ಅನ್ನು ಯಥಾವತ್ತಾಗಿ ಮುಂದುವರಿಸುವ ಮೂಲಕ ಬಡ ವರ್ಗದವರಿಗೆ ನೆರವಾಗಬೇಕು ಎಂಬುದು ಸಾರ್ವಜನಿಕರ ಒತ್ತಾುಂವಾಗಿದೆ.
ಸರ್ಕಾರ ಬಡವರ್ಗದವರಿಗೆ ಅನುಕೂಲವಾಗಿರುವ ಇಂದಿರಾ ಕ್ಯಾಂಟೀನ್ ಅಭಿವೃದ್ಧಿುಂತ್ತ ಚಿಂತಿಸಬೇಕು. ಉತ್ತಮವಾಗಿ ಕಾಂರ್ು ನಿರ್ವಹಿಸುವ ಗುತ್ತಿಗೆದಾರರಿಗೆ ಟೆಂಡರ್ ನೀಡಬೇಕು ಎಂಬುದು ಸಾರ್ವಜನಿಕರ ಆಗ್ರಹ.
ಸರ್ಕಾರ ಜನಸಾವಾನ್ಯರಿಗೆ ಅನುಕೂಲ ವಾಡಿಕೊಡದ ಮೇಲೆ ಇನ್ಯಾರಿಗೆ ಉಪೋಂಗ ವಾಡುತ್ತಾರೆ. ಸ್ಥಳೀುಂ ಅಧಿಕಾರಿಗಳು, ಶಾಸಕರು ಸರ್ಕಾರದ ಗಮನಕ್ಕೆ ತಂದು ಇಂದಿರಾ ಕ್ಯಾಂಟೀನ್‌ನ್ನು ಮತ್ತೆ ಆರಂಭಿಸಬೇಕು. ಕ್ಯಾಂಟೀನ್ ಮುಚ್ಚಿರುವುದರಿಂದ ಬಡವರ್ಗದವರಿಗೆ ತೊಂದರೆಾಂಗುತ್ತಿದೆ.-ಎಚ್.ಎಂ.ಗಣೇಶ್‌ಪ್ರಸಾದ್, ಕಾಂಗ್ರೆಸ್ ಮುಖಂಡ
ಒಂದು ವರ್ಷದಿಂದ ಸಹಾುಂಧನ ನೀಡಿಲ್ಲ. ಇದರಿಂದ ಕ್ಯಾಂಟೀನ್ ನಡೆಸಲು ಸಾಧ್ಯವಾಗುತಿಲ್ಲ ಎಂದು ಇಂದಿರಾ ಕ್ಯಾಂಟಿನ್ ಗುತ್ತಿಗೆದಾರರು ಜಿಲ್ಲಾಧಿಕಾರಿಗೆ ಅರ್ಜಿ ಬರೆದು ಮೂರು ದಿನಗಳಿಂದ ಸೇವೆ ಸ್ಥಗಿತಗೊಳಿಸಿದ್ದಾರೆ. ಈ ಬಗ್ಗೆ ಚರ್ಚಿಸಲಾಗುವುದು.
-ಪಿ.ಗಿರೀಶ್, ಪುರಸಭೆ ಅಧ್ಯಕ್ಷ
ಇಂದಿರಾ ಕ್ಯಾಂಟೀನ್ ಹಸಿವು ಮುಕ್ತ ಧ್ಯೇುಂದಿಂದ ಪ್ರಾರಂಭವಾಗಿದೆ. ರಾಜಕೀಯ ಉದ್ದೇಶದಿಂದ ಇದನ್ನು ಮುಚ್ಚುವ ದುರಾಲೋಚನೆ ಇದೆ. ಇದನ್ನು ಮತ್ತೆ ಆರಂಭಿಸಬೇಕು. ಇದರಿಂದ ಎಷ್ಟೋ ನಿರಾಶ್ರಿತರಿಗೆ ಅನುಕೂಲವಾಗಲಿದೆ. ರಾಜಕೀಯ ಉದ್ದೇಶದಿಂದ ಮುಚ್ಚಿದ್ದರೆ ಅದನ್ನು ಖಂಡಿಸುತ್ತೇನೆ. -ಸುಭಾಶ್ ವಾಡ್ರಹಳ್ಳಿ , ವಾನವ ಬಂಧುತ್ವ ಜಿಲ್ಲಾ ಸಂಚಾಲಕ.
ಶ್ರಮಿಕರು, ಬಡವರ್ಗದವರಿಗೆ ನೆರವಾಗಿದ್ದ ಇಮದಿರಾ ಕ್ಯಾಂಟೀನ್ ಮುಚ್ಚುವ ಮೂಲಕ ಬಿಜೆಪಿ ಶ್ರೀಮಂತರ ಪರ ಎಂಬುದನ್ನು ಸಾಬೀತು ವಾಡಿದೆ. ಬಡವರ ಹೊಟ್ಟೆ ಮೇಲೆ ಹೊಡೆುುಂವುದೇ ಇವರ ಕೆಲಸವಾಗಿದೆ. ಎಸ್ಸಿ-ಎಸ್ಟಿ ಮಕ್ಕಳಿಗೆ ವಿದ್ಯಾರ್ಥಿ ವೇತನ, ಸೈಕಲ್ ನೀಡಿಲ್ಲ, ಈ ಸರ್ಕಾರಕ್ಕೆ ಬಡವರ ಬಗ್ಗೆ ಕಾಳಜಿ ಇಲ್ಲ. -ಪಿ ಗಿರೀಶ್, ಸಾರ್ವಜನಿಕ
ಬಡವರು, ನಿರ್ಗತಿಕರು, ಕೂಲಿ ಕಾರ್ಮಿಕರಿಗೆ ಅನುಕೂಲವಾಗಿದ್ದ ಇಂದಿರಾ ಕ್ಯಾಂಟೀನ್‌ನ್ನು ಮುಚ್ಚಿರುವುದು ಖಂಡನೀುಂ. ಎಷ್ಟೋ ಕೂಲಿ ಕಾರ್ಮಿಕರಿಗೆ ಇದರಿಂದ ತೊಂದರೆಾಂಗಿದೆ. ಆದಷ್ಡು ಬೇಗ ಪುನರಾರಂಭಿಸಬೇಕು. -ಅಬ್ದುಲ್ ವಾಲಿಕ್, ಕಾವಲುಪಡೆ ಅಧ್ಯಕ್ಷ
ಹೊಸ ವರ್ಷಕ್ಕೆ ಕಾಲಿಟ್ಟ ಬಳಿಕ ಕನ್ನಡ ಚಿತ್ರರಂಗದಲ್ಲಿ ಮೊದಲ ದಿನವೇ ತೀರ್ಥರೂಪ ತಂದೆಯವರಿಗೆ ಎಂಬ ಚಿತ್ರ ಬಿಡುಗಡೆಯಾಗಿದೆ. ಈ ಹಿಂದೆ…
ಮಂಡ್ಯ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಣ್ಣ ಹಾಗೂ ಅತಿ ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ನೀಡಿ ಜಿಲ್ಲೆಯಲ್ಲಿನ ಯುವಕರಿಗೆ ಉದ್ಯೋಗ ಸೃಷ್ಟಿಸಬೇಕು ಎಂದು…
ಮಂಡ್ಯ: ಮನೆ ಬಾಗಿಲಿಗೆ ಸರ್ಕಾರಿ ಸೇವೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಮಂಡ್ಯ ಶಾಸಕ ರವಿಕುಮಾರ್ ತಿಳಿಸಿದರು. ಮಂಡ್ಯ ತಾಲ್ಲೂಕಿನ…
ಮೈಸೂರು: ದಲಿತರೇ ಸಿಎಂ ಆಗಿದ್ದರೂ ಸಿದ್ದರಾಮಯ್ಯ ಅವರಷ್ಟು ದಲಿತರಿಗೆ ಕಾರ್ಯಕ್ರಮ ಕೊಡುತ್ತಿರಲಿಲ್ಲ ಎಂದು ಪರಿಷತ್ ಸದಸ್ಯ ಕೆ.ಶಿವಕುಮಾರ್ ಸಿಎಂ ಸಿದ್ದರಾಮಯ್ಯರನ್ನು…
ಮೈಸೂರು: ವೈಚಾರಿಕ, ವೈಜ್ಞಾನಿಕ ಶಿಕ್ಷಣ ಪಡೆಯದಿದ್ದರೆ ನಾವೆಲ್ಲಾ ಮೌಡ್ಯಕ್ಕೆ ದಾಸರಾಗುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಈ ಕುರಿತು ಮಾನಸ…
ಮೈಸೂರು: 2028ರವರೆಗೂ ಸಿದ್ದರಾಮಯ್ಯ ತಮ್ಮ ಅವಧಿಯನ್ನು ಪೂರೈಸಬೇಕು ಎಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಹೇಳಿದರು. ಈ ಕುರಿತು…