ಜಿಲ್ಲೆಗಳು

ಅಮೃತ ಸ್ವಾತಂತ್ರ್ಯೋತ್ಸವದ ಅಂಗವಾಗಿ ಎರಡು ದಿನ ‘ಇಳೆ-ಮಳೆ’ ನಾಟಕ ಪ್ರದರ್ಶನ

ಮೈಸೂರು : ನೃತ್ಯ ಗಿರಿಯ ಬೆಳ್ಳಿ ಹಬ್ಬ ಅಂಗವಾಗಿ ಮತ್ತು ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದ ಅಂಗವಾಗಿ ಪ್ರಪ್ರಥಮ ಬಾರಿಗೆ ಮೋನೋಡ್ರಾಮ ‘ಇಳೆ – ಮಳೆ’ ಏಕವ್ಯಕ್ತಿಯ ನಾಟಕವನ್ನು  ನಗರದ ಗಾನಭಾರತೀಯಲ್ಲಿ ಪ್ರದರ್ಶಿಸಲಾಗುತ್ತಿದೆ. ನಾಟಕವು ಆಗಸ್ಟ್ 13 ಹಾಗೂ 14ನೇ ತಾರೀಖಿನಂದು ಸಂಜೆ 6:30ಕ್ಕೆ ಮೊದಲ ಪ್ರದರ್ಶನ ಮತ್ತು 7:30ಕ್ಕೆ ಎರಡನೇ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ನಾಟಕ ನೋಡಲು ಬರುವವರಿಗೆ ಪ್ರವೇಶ ದರವು 50 ರೂ ಗಳನ್ನು ನಿಗದಿ ಮಾಡಲಾಗಿದೆ.

ಇಳೆ – ಮಳೆ ನಾಟಕವನ್ನು ಎಂ. ಎಸ್. ವೇಣು ಗೋಪಾಲ್ ರವರು ರಚನೆ ಮಾಡಿದ್ದು, ನಾಟಕದ ನಿರ್ದೇಶನವನ್ನು ನಾ. ಶ್ರೀನಿವಾಸ್, ಹಾಗೂ ಸಂಗೀತ ಪ್ರಭು ರಾವ್ ಹಾಗೂ ಮೃತ್ಯುಂಜಯ ಹಿರೇಮಠ್ ರವರು ನೀಡಿದ್ದಾರೆ.

 

ತಂಡದಲ್ಲಿ

ತಬಲಾ – ರಮೇಶ್ ಧನುರ್,

ರಂಗ ವಿನ್ಯಾಸ – ಡಾ. ಗೀತಾಂಜಲಿ ಆಚಾರ್,

ವಿಶೇಷ ವಾದ್ಯ – ಡಿಡ್ ಗಿರೋ – ಮೇಘಾ

ಇವರುಗಳು ನಿರ್ವಹಣೆ ಮಾಡಲಿದ್ದಾರೆ. ಎಂದು ನೃತ್ಯ ಗಿರಿ ನಿರ್ದೇಶಕರಾದ ಡಾ. ಕೃಪಾ ಫಡ್ಕೆ ರವರು ತಿಳಿಸಿದ್ದಾರೆ.

andolanait

Recent Posts

ಟಿ.ನರಸೀಪುರ| ಯುಗಾದಿ ಸಂಭ್ರಮ: ತ್ರಿವೇಣಿ ಸಂಗಮಕ್ಕೆ ಹರಿದುಬಂದ ಭಕ್ತಸಾಗರ

ಟಿ.ನರಸೀಪುರ: ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದ್ದು, ಪುಣ್ಯಸ್ನಾನಕ್ಕೆಂದು ತ್ರಿವೇಣಿ ಸಂಗಮಕ್ಕೆ ಭಕ್ತರ ದಂಡೇ ಹರಿದು ಬರುತ್ತಿದೆ. ಮೈಸೂರು ಜಿಲ್ಲೆ…

6 mins ago

ಹುಣಸೂರು: ರೈಲ್ವೆ ಹಳಿ ತಡೆಗೋಡೆಗೆ ಸಿಲುಕಿ ಒದ್ದಾಡಿದ ಕಾಡಾನೆ

ಹುಣಸೂರು: ರೈಲ್ವೆ ಹಳಿ ತಡೆಗೋಡೆಗೆ ಸಿಲುಕಿ ಕಾಡಾನೆಯೊಂದು ಕೆಲಕಾಲ ಒದ್ದಾಟ ನಡೆಸಿದ ಘಟನೆ ತಾಲ್ಲೂಕಿನ ಉಡುವೆಪುರ ಬಳಿ ನಡೆದಿದೆ. ನಾಗರಹೊಳೆ…

19 mins ago

ಮೈಸೂರು ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆ

ಮೈಸೂರು: ಮೈಸೂರು ಜಿಲ್ಲೆಯಲ್ಲಿ ಧಾರಾಕಾರ ಮಳೆ ಸುರಿದಿದ್ದು, ಭಾರೀ ಪ್ರಮಾಣದ ಹಾನಿಯಾಗಿದೆ. ಮೈಸೂರು ಜಿಲ್ಲೆಯಲ್ಲಿ ನಿನ್ನೆ ಸುರಿದ ಭಾರೀ ಮಳೆಯಿಂದಾಗಿ…

38 mins ago

ನಾಡಿನಾದ್ಯಂತ ಯುಗಾದಿ ಹಬ್ಬದ ಸಂಭ್ರಮ: ಹಳ್ಳಿಗಳಲ್ಲಿ ಹೊನ್ನೇರು ಕಟ್ಟಿ ಸಂಭ್ರಮಿಸಿದ ಅನ್ನದಾತರು

ಮೈಸೂರು: ರೈತರು ಸಡಗರದಿಂದ ಕೃಷಿ ಚಟುವಟಿಕೆ ಆರಂಭಿಸುವ ಮೊದಲ ಹೆಜ್ಜೆ ಯುಗಾದಿಯಾಗಿದ್ದು, ಜಿಲ್ಲೆಯ ಹಲವೆಡೆ ಅನ್ನದಾತರು ಹೊನ್ನೇರು ಕಟ್ಟಿ ಭೂಮಿ…

53 mins ago

ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ

ಮೈಸೂರು: ಇಂದು ನಾಡಿನೆಲ್ಲೆಡೆ ಯುಗಾದಿ ಹಬ್ಬದ ಸಂಭ್ರಮ ಮನೆಮಾಡಿದೆ. ಬೆಲೆ ಏರಿಕೆ, ಮಧ್ಯಪ್ರಾಚ್ಯ ಯುದ್ಧ ಭೀತಿಯ ನಡುವೆಯೂ ಜನರು ಸಾಂಪ್ರದಾಯಿಕವಾಗಿ…

1 hour ago

ಓದುಗರ ಪತ್ರ: ಮೈಸೂರಿನಲ್ಲಿ ಸುಸಜ್ಜಿತ ಫುಡ್ ಸ್ಟ್ರೀಟ್ ನಿರ್ಮಾಣವಾಗಲಿ

ಸಾಂಸ್ಕೃತಿಕ ನಗರಿ ಮೈಸೂರು ಆಹಾರ ಪ್ರಿಯರ ಸ್ವರ್ಗವೂ ಹೌದು. ಮೈಸೂರು ಪಾಕ್‌ನಿಂದ ಹಿಡಿದು ಮೈಲಾರಿ ದೋಸೆಯವರೆಗೆ ಇಲ್ಲಿನ ರುಚಿ ಪ್ರಸಿದ್ಧವಾಗಿದೆ.…

1 hour ago