ಬೆಂಗಳೂರು : ಹಾಸನದಲ್ಲಿ ನಡೆಯುತ್ತಿರುವ ಹಾಸನಾಂಬ ಹಾಗೂ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವದಲ್ಲಿ ವಾರಾಂತ್ಯದ ಹಿನ್ನೆಯಲ್ಲಿ ಭಾನುವಾರ ಭಾರಿ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಿ ದೇವರ ದರ್ಶನ ಪಡೆದಿದ್ದಾರೆ.
ಇಂದು ಬೆಳಗ್ಗೆಯಿಂದಲೇ ಸರದಿ ಸಾಲಿನಲ್ಲಿ ನಿಂತು ಭಕ್ತರು ದೇವರ ದರ್ಶನ ಪಡೆದರೆ, ನಿಗದಿತ ಅವಧಿಯಲ್ಲಿ ಗಣ್ಯರು ಕೂಡ ಆಗಮಿಸಿ ದೇವರ ಪಡೆದರು. ದರ್ಶನಕ್ಕೆ ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿದ್ದು ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರು ಖುದ್ದು ದೇವಾಲದಲ್ಲೇ ಹಾಜರಿದ್ದು ಭಕ್ತರ ಕುಂದುಕೊರತೆಗಳನ್ನು ಬಗೆಹರಿಸುವ ಕೆಲಸ ಮಾಡುತ್ತಿದ್ದಾರೆ.
ಇದನನ್ನು ಓದಿ : ಹಾಸನಾಂಬೆ ದರ್ಶನಕ್ಕೆ ಟೂರ್ ಪ್ಯಾಕೇಜ್ : ಮೈಸೂರು, ಬೆಂಗಳೂರು ಮತ್ತಿತರ ಕಡೆಗಳಿಂದ ಸಾರಿಗೆ ಸೌಲಭ್ಯ
ಶುಕ್ರವಾರದಿಂದ ಆರಂಭವಾದ ಹಾಸನಾಂಬ ಹಾಗೂ ಸಿದ್ದೇಶ್ವರಸ್ವಾಮಿ ಜಾತ್ರಾ ಮಹೋತ್ಸವ ಭಕ್ತರ ಅಪಾರ ದರ್ಶನದಿಂದ ಕೇವಲ ಎರಡೇ ದಿನಗಳಲ್ಲಿ 2.24 ಕೋಟಿರೂ. ಆದಾಯ ದಾಖಲಿಸಿದೆ. ಭಾನುವಾರ ಬೆಳಿಗ್ಗೆ 8 ಗಂಟೆಯವರೆಗೆ ₹300 ವಿಶೇಷ ದರ್ಶನದಲ್ಲಿ ಒಟ್ಟು 27,759 ಟಿಕೆಟ್‌ಗಳು ಮಾರಾಟವಾಗಿವೆ. ಅದೇ ರೀತಿ ₹1000 ವಿಶೇಷ ದರ್ಶನದಲ್ಲಿ ಒಟ್ಟು 12,396 ಮಾರಾಟವಾಗಿವೆ.
ಇದೇ ವೇಳೆ ಲಾಡು ಪ್ರಸಾದ ಮಾರಾಟದ ಸಂಖ್ಯೆ 17,337 ಆಗಿದ್ದು, ಮೂರು ದಿನಗಳಲ್ಲಿ ಭಾರಿ ಆದಾಯ ಲಭಿಸಿದೆ. 300ರೂ. ವಿಶೇಷ ದರ್ಶನ ಟಿಕೆಟ್‌ಗಳಿಂದ ಒಟ್ಟು 83,27,700 ರೂ ಹಾಗೂ 1000 ರೂ. ವಿಶೇಷ ದರ್ಶನ ಟಿಕೆಟ್‌ಗಳಿಂದ 1,23,96,000 ರೂ. ಲಾಡು ಪ್ರಸಾದ ಮಾರಾಟದಿಂದ 17,33,700 ರೂ. ಸೇರಿ ಒಟ್ಟು ಆದಾಯ ₹2 ಕೋಟಿ 24 ಲಕ್ಷ 57 ಸಾವಿರ 400 ರೂ. ಸಂಗ್ರಹವಾಗಿದೆ ಎಂದು ಜಿಲ್ಲಾಡಳಿತ ಮಾಹಿತಿ ನೀಡಿದೆ. ಅಕ್ಟೋಬರ್ 23 ರಂದು ದೇವಿಯ ದರ್ಶನ ಮುಕ್ತಾಯವಾಗಲಿದೆ.
ಚಾಮರಾಜನಗರ: ಚಾ.ನಗರ-ನಂಜನಗೂಡು ಹೆದ್ದಾರಿಯಲ್ಲಿರುವ ಪಣ್ಯದಹುಂಡಿ ಬಳಿ ರೈಲ್ವೆ ಮೇಲ್ಸೇತುವೆ ನಿರ್ಮಾಣಕ್ಕೆ ಸ್ವಾಧಿನಪಡಿಸಿಕೊಂಡಿರುವ ಭೂಮಿಯ ದರ ನಿಗದಿ ಕಗ್ಗಂಟಿನ ವಿಚಾರ ಅಂತಿಮ…
ಮೈಸೂರು: ಪ್ರಸಿದ್ಧ ಯಾತ್ರಾ ಸ್ಥಳ ಚಾಮುಂಡಿ ಬೆಟ್ಟದ ಸಮಗ್ರ ಅಭಿವೃದ್ಧಿ ಕಾಮಗಾರಿಯು ಕೇಂದ್ರ ಸರ್ಕಾರದ ಪ್ರಸಾದ ಯೋಜನೆಯಡಿ ಜನವರಿ ಮೊದಲ…
ಗಿರೀಶ್ ಹುಣಸೂರು ಬಿಡಿ ಮೊಟ್ಟೆಗೆ ೭.೫೦ ರೂ.; ರಫ್ತು ಹೆಚ್ಚಳದಿಂದ ಭಾರೀ ಹೊಡೆತ ಮೈಸೂರು: ಮಾಗಿ ಚಳಿಗಾಲ ಆರಂಭ, ಚಂಡಮಾರುತದಿಂದ ಹವಾಮಾನ…
ಕೊಳ್ಳೇಗಾಲ: ಹಣ ದ್ವಿಗುಣಗೊಳಿಸಿಕೊಡುವುದಾಗಿ ಆಮಿಷ ಒಡ್ಡಿ, ಒಟ್ಟು ೨೮.೮೮ ಲಕ್ಷ ರೂ.ಗಳನ್ನು ವಂಚಿಸಿರುವ ಬಗ್ಗೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ಮಮತಾ…
ಯಳಂದೂರು:ತಾಲ್ಲೂಕಿನ ಅಂಬಳೆ ಗ್ರಾಮದಲ್ಲಿರುವ ಸುವರ್ಣಾವತಿ ನದಿ ದಡಲ್ಲಿರುವ ಐತಿಹಾಸಿಕ ಚಾಮುಂಡೇಶ್ವರಿ ದೇಗುದಲ್ಲಿ ಗುರುವಾರ ರಾತ್ರಿ ಕಳ್ಳತನ ನಡೆದಿದ್ದು, ಲಕ್ಷಾಂತರ ರೂ.…