ಹನೂರು; ಕ್ಷೇತ್ರದ ಅಭಿವೃದ್ಧಿಗೆ ತಮ್ಮದೇಯಾದ ಕೊಡುಗೆ ನೀಡುವುದರ ಮೂಲಕ ಅಭಿವೃದ್ಧಿಗೆ ಹೆಚ್ಚಿನ ಒತ್ತನ್ನು ನೀಡಿದ್ದ ದಿ. ನಾಗಪ್ಪ ಅವರ ಕುಟುಂಬಕ್ಕೆ ತಮ್ಮೆಲ್ಲರ ಆಶೀರ್ವಾದ ಅಗತ್ಯವಾಗಿದೆ ಎಂದು ಸಿದ್ಧಗಂಗ ಮಠದ ಶ್ರೀ ಸಿದ್ಧಲಿಂಗ ಮಹಾಸ್ವಾಮೀಜಿ ತಿಳಿಸಿದರು.
ಪಟ್ಟಣದ ಗೌರಿ ಶಂಕರ ಕಲ್ಯಾಣ ಮಂಟಪದ ಬಳಿ ಕಾಮಗೆರೆ ಶ್ರೀ ಹೆಚ್. ನಾಗಪ್ಪ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ಧ ದಿವಂಗತ ಹೆಚ್. ನಾಗಪ್ಪ ಅವರ 20ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನರಹಂತಕ ವೀರಪ್ಪನ್ ಸಚಿವರಾಗಿದ್ದ ನಾಗಪ್ಪ ಅವರನ್ನು ಹತ್ಯೆಗೈದಿರುವುದು ನೋವಿನ ಸಂಗತಿ. ಇವರ ಅಗಲಿಕೆ ಕುಟುಂಬಕ್ಕೆ ಮಾತ್ರವಲ್ಲ ಇಡೀ ರಾಜ್ಯಕ್ಕೆ ಅನ್ವಯಿಸಿದೆ. ಇವರು ಅದರೂ ಆದರ್ಶದ ಬದುಕನ್ನು ರೂಪಿಸಿಕೊಳ್ಳುವುದರ ಮೂಲಕ ಎಲ್ಲರನ್ನು ಪ್ರೀತಿಸುವ ಗುಣವನ್ನು ಹೊಂದಿದ್ದ ಇವರು ಶಾಸಕ, ಸಚಿವರಾಗಿ ಹನೂರು ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ್ದು, ತಮ್ಮದೇಯಾದ ಕನಸನ್ನು ಕಟ್ಟಿಕೊಂಡಿದ್ದರು. ಆದ್ದರಿಂದ ನಾಗಪ್ಪ ಅವರ ಆಶಯ ಈಡೇರಬೇಕಾದರೆ ಪುತ್ರ ಡಾ.ಪ್ರೀತನ್ ನಾಗಪ್ಪ ಅವರಿಗೆ ತಮ್ಮೆಲ್ಲರ ಪ್ರೀತಿ, ಆಶೀರ್ವಾದ ಅತ್ಯಗತ್ಯವಾಗಿದೆ. ಹಾಗಾಗಿ ಅವರಿಗೆ ಸಹಕಾರ ನೀಡುವಂತೆ ತಿಳಿಸಿದರು.
ಮರಳೇಗವಿ ಮಠದ ಶ್ರೀ ಮುಮ್ಮಡಿ ಶಿವರುದ್ರ ಸ್ವಾಮೀಜಿ ಮಾತನಾಡಿ, ಹನೂರು ಕ್ಷೇತ್ರವನ್ನು ಅಭಿವೃದ್ಧಿ ಮಾಡಬೇಕೆಂದು ಕನಸು ಕಂಡಿದ್ದ ದಿ.ನಾಗಪ್ಪ ಅವರನ್ನು ಇದೀಗ ಪುತ್ರ ಡಾ.ಪ್ರೀತನ್ ನಾಗಪ್ಪ ಅವರಲ್ಲಿ ಕಂಡಾಗ ಅವರ ಕನಸು ಈಡೇರುತ್ತದೆ. ಈ ದಿಸೆಯಲ್ಲಿ ಪ್ರತಿಯೊಬ್ಬರೂ ಮನಸ್ಸನ್ನು ಶುದ್ಧಿ ಮಾಡಿಕೊಳ್ಳಬೇಕಿದೆ. ಈ ಮೂಲಕ ಕ್ಷೇತ್ರದಲ್ಲಿ ಬದಲಾವಣೆ ತರಬಹುದು. ಬದಲಾವಣೆ ಅಭಿವೃದ್ಧಿಯ ಪ್ರತೀಕ. ಆದ್ದರಿಂದ ನಾಗಪ್ಪ ಅವರ ಕುಟುಂಬಕ್ಕೆ ಆಶೀರ್ವಾದ ಅಗತ್ಯ ಎಂದರು.
ಸಂಸದ ವಿ. ಶ್ರೀನಿವಾಸ್ ಮಾತನಾಡಿ, ರಾಜಕೀಯಕ್ಕೆ ಪ್ರವೇಶಿಸಿ 50 ವರ್ಷಗಳಾಗಿದ್ದು, ಸತತ 9 ಬಾರಿ ಗೆದ್ದಿದ್ದೇನೆ. ಈ ಅವಧಿಯಲ್ಲಿ ಸಾಕಾಷ್ಟು ಏಳುಬೀಳನ್ನು ಕಂಡಿದ್ದೇನೆ. ಆದರೂ ನನ್ನ ತತ್ವಕ್ಕೆ ಅನುಗುಣವಾಗಿ ಸ್ವಾಭಿಮಾನಿಯಾಗಿ ಕೆಲಸ ಮಾಡಿದ್ದೇನೆ. ಚುನಾವಣೆಯ ವೇಳೆ ಹನೂರು ಭಾಗಕ್ಕೆ ಅಗಮಿಸಿದ್ದ ವೇಳೆ ನನಗೆ ಹಳ್ಳಿಗಳನ್ನು ಪರಿಚಯ ಮಾಡಿಸಿದವರು ದಿ.ನಾಗಪ್ಪ ಅವರು. ಆದ್ದರಿಂದ ಅವರ ನಿಸ್ವಾರ್ಥ ಸೇವೆ ನಮ್ಮೆಲ್ಲರಿಗೂ ಮಾದರಿ ಎಂದು ತಿಳಿಸಿದರು.
ಮಾಜಿ ಶಾಸಕಿ ಪರಿಮಳ ನಾಗಪ್ಪ ಮಾತನಾಡಿ ದಿವಂಗತ ಎಚ್ ನಾಗಪ್ಪ ರವರು ಮೃತ ಪಟ್ಟು 20 ವರ್ಷಗಳೆ ಕಳೆದರೂ ಕ್ಷೇತ್ರದ ಜನ ಅವರ ಮೇಲೆ ಇಟ್ಟಿರುವ ಅಭಿಮಾನ ಇಂದಿಗೂ ಕಡಿಮೆಯಾಗಿಲ್ಲ, ಈ ಪುಣ್ಯ ಸ್ಮರಣೆ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಎಲ್ಲರೂ ಬಂದಿರುವುದು ಸಂತಸದ ವಿಚಾರ, ಕಳೆದ ಮೂರು ಚುನಾವಣೆಗಳಿಂದ ಸತತ ಸೋಲು ಕಂಡಿದ್ದೇವೆ ನನ್ನ ಮಗ ಪ್ರೀತಂನನ್ನು ನಿಮ್ಮ ಮಡಿಲಿಗೆ ಹಾಕಿದ್ದೇನೆ. ಅವನು ನಿಮ್ಮ ಮನೆ ಮಗ ಅವನಿಗೆ ಆಶೀರ್ವಾದ ಮಾಡಿ ನಾಗಪ್ಪನವರ ದೂರದೃಷ್ಟಿಯ ಕಾರ್ಯಕ್ರಮಗಳನ್ನು ಮುಂದುವರೆಸಲು ಸಹಕಾರ ನೀಡಿ ಎಂದು ಮನವಿ ಮಾಡಿದರು. ಕೆಲವು ಸಣ್ಣಪುಟ್ಟ ತಪ್ಪುಗಳಿಂದ ಚುನಾವಣೆಯಲ್ಲಿ ಸೋಲು ಕಂಡಿದ್ದೇವೆ, ನೊಂದಿದ್ದೇವೆ, ಹನೂರು ಕ್ಷೇತ್ರದ ಜನರ ನಿಮ್ಮ ವಿಶ್ವಾಸ, ನಿಮ್ಮ ಬೆಂಬಲದಿಂದ ನಾವು ಮುಂದಿನ ಹೆಜ್ಜೆ ಇಡುತ್ತೇವೆ, ಕ್ಷೇತ್ರದ ಅಭಿವೃದ್ಧಿಗೆ ಪ್ರಾಮಾಣಿಕರನ್ನು ಆಯ್ಕೆ ಮಾಡಿ ಹನೂರು ಕ್ಷೇತ್ರದ ಮತದಾರರು ಪ್ರಜ್ಞಾವಂತರು ನೀವು ನನಗೆ ನೀಡಿದ ಅಲ್ಪಾವಧಿ ಸಮಯದಲ್ಲಿ ನನ್ನ ಕೈಲಾದ ಸೇವೆ ಮಾಡಿದ್ದೇನೆ ನನ್ನ ಮಗನು ಸಹ ಅದೇ ನಿಟ್ಟಿನಲ್ಲಿ ನಿಮ್ಮ ಸೇವೆ ಮಾಡಲು ಬೆಂಬಲಿಸಿ ಎಂದರು.
ಇದೇ ವೇಳೆ ನಾಗಪ್ಪ ಅವರ ದಿನದರ್ಶಿಕೆಯನ್ನು ಬಿಡುಗಡೆ ಮಾಡಲಾಯಿತು. ಈ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿ ವಾಟಾಳು ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ, ಕುದೇರು ಮಠದ ಗುರುಶಾಂತ ಸ್ವಾಮೀಜಿ, ಸಾಲೂರು ಬೃಹನ್ಮಠದ ಪೀಠಾಧಿಪತಿ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಮುಡಿಗುಂಡ ವಿರಕ್ತ ಮಠದ ಶ್ರೀಕಂಠಸ್ವಾಮೀಜಿ, ಹರವೆ ಮಠದ ಸರ್ವಭೂಷಣ ಸ್ವಾಮೀಜಿ ಹಾಗೂ ಶಾಸಕರಾದ ಎನ್.ಮಹೇಶ್, ನಿರಂಜನ್ ಕುಮಾರ್, ಕೆ ಆರ್ ಐಡಿ ಎಲ್ ಅಧ್ಯಕ್ಷ ರುದ್ರೇಶ್, ತಮಿಳುನಾಡಿನ ಮಾಜಿ ಶಾಸಕ ಧರ್ಮಲಿಂಗಂ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ.ಎಸ್ ದತ್ತೇಶ್‍ಕುಮಾರ್, ಮಾಜಿ ಶಾಸಕರುಗಳಾದ ಜಿ.ಎನ್ ನಂಜುಂಡಸ್ವಾಮಿ,ಡಾ. ಭಾರತೀ ಶಂಕರ್,ಪರಿಮಳ ನಾಗಪ್ಪ ಪುತ್ರ ಪ್ರೀತಮ್ ನಾಗಪ್ಪ, ಬಿಜೆಪಿ ಮಂಡಲ ಅಧ್ಯಕ್ಷ ಸಿದ್ದಪ್ಪ,ಕಾರ್ಯದರ್ಶಿ ಭರತ್ ಬಂಡಳ್ಳಿ, ಮುಖಂಡರಾದ ಬಿಕೆ ಶಿವಕುಮಾರ್, ಮಾಧ್ಯಮ ವಕ್ತಾರ ಕಾಮಗೆರೆ ಮಧು ಸೇರಿದಂತೆ ಇನ್ನಿತರರು ಹಾಜರಿದ್ದರು.
ಮೈಸೂರು: ಸಕ್ಕರೆ ನಾಡು ಮಂಡ್ಯದಲ್ಲಿ ಇಂದಿನಿಂದ (ಡಿ.20) 87ನೇ ಕನ್ನಡ ಸಾಹಿತ್ಯ ಸಮ್ಮೇಳನ ಶುರುವಾಗಿದೆ. ಆದರೆ ಈ ಸಮ್ಮೇಳನವನ್ನು ಯಾವ…
ಮಂಡ್ಯ: ಹಾಸ್ಯ ಸಾಹಿತ್ಯ ಆಧುನಿಕ ಬದುಕಿನಗೆ ಔಷಧಿಯಾಗಿದೆ ಎಂದು ಪ್ರಾಧ್ಯಾಪಕ ಡಾ.ಜೆ.ಕರಿಯಪ್ಪ ಮಾಳಿಗೆ ಹೇಳಿದರು. 87ಅಖಿಲ ಭಾರತ ಕನ್ನಡ ಸಾಹಿತ್ಯ…
ಮಡಿಕೇರಿ: ಸಿ ಮತ್ತು ಡಿ ಭೂಮಿಗೆ ಸಂಬಂಧಿಸಿದಂತೆ ಕಂದಾಯ ಸಚಿವರು ಉನ್ನತ ಮಟ್ಟದ ಸಮಿತಿ ರಚನೆಗೆ ಮುಂದಾಗಿದ್ದು, ಸಮಸ್ಯೆ ಪರಿಹಾರವಾಗಲಿ…
ಬೆಂಗಳೂರು: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಕ್ಷೇಪಾರ್ಹ ಪದ ಬಳಸಿದ್ದಾರೆ ಎಂಬ ಆರೋಪದ ಮೇಲೆ ಎಂಎಲ್‌ಸಿ ಸಿ.ಟಿ.ರವಿಯವರನ್ನು ಪೊಲೀಸರೇ ಕೊಲೆ…
ವಿರಾಜಪೇಟೆ: ಗೋಣಿಕೊಪ್ಪ-ಕೇರಳ ಹೆದ್ದಾರಿಯ ಬಿಟ್ಟಂಗಾಲ ಆಟೋ ನಿಲ್ದಾಣದ ಬಳಿ ಚಿರತೆ ಬೆಕ್ಕೊಂದು ಅಪಘಾತಕೀಡಾಗಿ ಸಾವನಪ್ಪಿದ ಘಟನೆ ಶುಕ್ರವಾರ ರಾತ್ರಿ 9…
ಮೈಸೂರು: ನಟ ದರ್ಶನ್ ಅವರು ಮೈಸೂರಿನ ತಿ.ನರಸೀಪುರ ಮುಖ್ಯರಸ್ತೆಯಲ್ಲಿರುವ ಕೆಂಪಯ್ಯನಹುಂಡಿ ಬಳಿಯ ತಮ್ಮ ಫಾರ್ಮ್‌ಹೌಸ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ. ಶುಕ್ರವಾರ ಇಲ್ಲಿಗ…