ಜಿಲ್ಲೆಗಳು

ಹನೂರು : ಮಾಜಿ ಶಾಸಕಿ ಪರಿಮಳ ನಾಗಪ್ಪ & ಬಿ. ವೆಂಕಟೇಶ್ ಬೆಂಬಲಿಗರ ನಡುವೆ ಮಾತಿನ ಚಕಮಕಿ

ಹನೂರು: ಪಟ್ಟಣದ ಬಿಜೆಪಿ ಕಚೇರಿಯಲ್ಲಿ ನಡೆದ ಎಸ್ ಸಿ ಮೋರ್ಚಾ ಸಭೆಯಲ್ಲಿ ಮಾಜಿ ಶಾಸಕಿ ಪರಿಮಳ ನಾಗಪ್ಪ ಹಾಗೂ ಬಿಜೆಪಿ ಜಿಲ್ಲಾ ಸಂಯೋಜಕ ಜನಧ್ವನಿ ಬಿ ವೆಂಕಟೇಶ್ ಅವರ ಬೆಂಬಲಿಗರು ಮಾತಿನ ಚಕಮಕಿ ನಡೆಸಿ ವಾಗ್ವಾದ ನಡೆಸಿದ್ದಾರೆ.

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಎಸ್ ಸಿ ಮೋರ್ಚಾ ಸಭೆಯನ್ನು ಆಯೋಜಿಸಲಾಗಿತ್ತು. ಕಾರ್ಯಕ್ರಮಕ್ಕೆ ಎಸ್ ಸಿ ಮೋರ್ಚಾ ಅಧ್ಯಕ್ಷ ರುಗಳು ಪದಾಧಿಕಾರಿಗಳನ್ನು ಆಹ್ವಾನಿಸಲಾಗಿತ್ತು. ಈ ಕಾರ್ಯಕ್ರಮಕ್ಕೆ ಜನಧ್ವನಿ ಬಿ ವೆಂಕಟೇಶ್ ಅವರನ್ನೂ ಕರೆದಿರಲಿಲ್ಲ ಆದರೆ ಸಭೆಗೆ ಮಾಜಿ ಶಾಸಕಿ ಪರಿಮಳ ನಾಗಪ್ಪ ಹಾಗೂ ಪ್ರೀತಂ ನಾಗಪ್ಪ ಆಗಮಿಸಿದ ಹಿನ್ನೆಲೆ ಜನಧ್ವನಿ ಬಿ ವೆಂಕಟೇಶ್ ರವರ ಬೆಂಬಲಿಗರು ನಾಯಕರುಗಳ ಜತೆ ವಾಗ್ವಾದ ನಡೆಸಿ ಹರಿಹಾಯ್ದಿದ್ದಾರೆ.
ಕಳೆದ ತಿಂಗಳು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹನೂರು ಪ್ರವಾಸ ಕೈಗೊಳ್ಳುವ ಸಂದರ್ಭದಲ್ಲಿ ಪಕ್ಷ ಯಾರಿಗಾದರೂ ಟಿಕೆಟ್ ನೀಡಲಿ ಅಲ್ಲಿಯವರೆಗೆ ಪರಿಮಳ ನಾಗಪ್ಪ,ಜನಧ್ವನಿ ಬಿ ವೆಂಕಟೇಶ್ ಡಾ. ದತ್ತೇಶ್ ಕುಮಾರ್, ಪ್ರೀತಂ ನಾಗಪ್ಪ ಎಲ್ಲಾ ನಾಯಕರುಗಳು ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡು ಮುಂದಿನ ವಿಧಾನಸಭಾ ಚುನಾವಣೆಗೆ ತಯಾರಾಗುವಂತೆ ವರಿಷ್ಠರು ಆದೇಶ ನೀಡಿದ್ದರು. ಈ ಹಿನ್ನೆಲೆ ಹನೂರು ಪಟ್ಟಣದಲ್ಲಿ ನರೇಂದ್ರ ಮೋದಿ ರವರ ಹುಟ್ಟುಹಬ್ಬದ ಪ್ರಯುಕ್ತ ಒಬಿಸಿ ಮೋರ್ಚಾ ವತಿಯಿಂದ ಕಾರ್ಯಕ್ರಮ ಹಮ್ಮಿಕೊಂಡು ಒಗ್ಗಟ್ಟು ಪ್ರದರ್ಶಿಸಿದ್ದರು.ಆದರೆ ವರಿಷ್ಠರು ಸೂಚನೆ ನೀಡಿ ಇನ್ನೂ ಸಹ 1ತಿಂಗಳು ಕಳೆದಿಲ್ಲ ಆಗಲೇ ಬಣ ರಾಜಕೀಯ ಭುಗಿಲೆದ್ದು ಕಾರ್ಯಕರ್ತರಲ್ಲಿ ಗೊಂದಲ ಉಂಟಾಗಿದೆ.

andolanait

Recent Posts

ಫಾಲ್ಕೆ ಪ್ರಶಸ್ತಿ ಕಲಾಸೇವೆಗೆ ಸಂದ ಗೌರವ: ಅನಂತ್ ನಾಗ್‌

ಸಂದರ್ಶನ: ಬಾನಾಸು  ಇಂದು ಗುಜರಾತಿನ ಕೆವಾಡಿಯಾದಲ್ಲಿ ೭೨ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರದಾನ ನಡೆಯಲಿದೆ. ಚಿತ್ರರಂಗಕ್ಕೆ ಸಲ್ಲಿಸಿದ ಅಮೋಘ ಸೇವೆಗಾಗಿ…

46 seconds ago

ಕೊಡಗಿನಲ್ಲಿ ಅಂದಾಜು ೨,೨೭೯ ಹೆಕ್ಟೇರ್ ಬೆಳೆ ಹಾನಿ

ನವೀನ್ ಡಿಸೋಜ ಬೆಳೆ ನಷ್ಟಕ್ಕೊಳಗಾಗಿರುವ ರೈತರಿಗೆ ೧.೯೩ ಕೋಟಿ ರೂ. ಪರಿಹಾರಕ್ಕೆ ಸರ್ಕಾರಕ್ಕೆ ವರದಿ ಮಡಿಕೇರಿ: ಸಾಮಾನ್ಯವಾಗಿ ಮುಂಗಾರು ಮಳೆಯೊಂದಿಗೆ…

8 mins ago

ದಸರಾ ಗೋಲ್ಡ್ ಕಾರ್ಡ್, ಟಿಕೆಟ್ ಮಾರಾಟ ಶುರು

ಕೆ.ಬಿ.ರಮೇಶ್ ನಾಯಕ ಟಿಕೆಟ್ ಜೀನಿ ಸಂಸ್ಥೆಗೆ ಟಿಕೆಟ್ ಮಾರಾಟದ ಹೊಣೆ; ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಮೈಸೂರು: ನಾಡಹಬ್ಬ ದಸರಾ…

13 mins ago

ಸರ್ಕಾರಿ ಶಾಲಾ ಮಕ್ಕಳಿಗೆ ಕಳಪೆ ಶೂ; ಲೋಕಾಯುಕ್ತರಿಂದ ತನಿಖೆ?

ಎಸ್.ಎಸ್.ಭಟ್ ನಂಜನಗೂಡು: ರಾಜ್ಯ ಸರ್ಕಾರ ಸರ್ಕಾರಿ ಶಾಲೆಯ ಮಕ್ಕಳಿಗೆ ಪೂರೈಕೆ ಮಾಡುತ್ತಿರುವ ಶೂಗಳು ಕಳಪೆಯಾಗಿದ್ದು ಅಳತೆಯೂ ಸರಿ ಇಲ್ಲ ಎಂಬ…

17 mins ago

ಭಾರೀ ಮಳೆಗೆ ಕೊಚ್ಚಿ ಹೋದ ಚೆಕ್ ಡ್ಯಾಂ: 15 ಅಡಿಗೂ ಹೆಚ್ಚು ಪ್ರವಾಹ

ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…

17 hours ago