ಎಸ್.ಎಸ್.ಭಟ್
ನಂಜನಗೂಡು: ರಾಜ್ಯ ಸರ್ಕಾರ ಸರ್ಕಾರಿ ಶಾಲೆಯ ಮಕ್ಕಳಿಗೆ ಪೂರೈಕೆ ಮಾಡುತ್ತಿರುವ ಶೂಗಳು ಕಳಪೆಯಾಗಿದ್ದು ಅಳತೆಯೂ ಸರಿ ಇಲ್ಲ ಎಂಬ ದೂರು ಶಿಕ್ಷಕರು, ಮಕ್ಕಳು ಹಾಗೂ ಪೋಷಕರಿಂದ ಕೇಳಿಬರಲಾರಂಭಿಸಿದೆ.
ಸರ್ಕಾರವೇ ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳ ಮಕ್ಕಳಿಗೆ ಪೂರೈಕೆ ಮಾಡುತ್ತಿರುವ ಶೂಗಳು ಎಲ್ಲಿ ಸಿದ್ಧವಾಗಿವೆ? ಯಾವ ಕಂಪೆನಿಯ ಶೂ ಎಂಬ ವಿವರಗಳೇ ಇಲ್ಲದೆ, ಶೂ ಸರಬರಾಜಾಗುತ್ತಿರುವುದು ಶಿಕ್ಷಣ ಇಲಾಖೆಯ ಕಾರ್ಯವೈಖರಿಗೆ ಸಾಕ್ಷಿಯಾಗಿದೆ. ಮೈಸೂರು ಜಿಲ್ಲೆಯಲ್ಲಿನ ಸುಮಾರು ೧.೧೭ ಲಕ್ಷ ಮಕ್ಕಳಿಗೆ ಶೂ ವಿತರಿಸಬೇಕಿದ್ದು, ಕೆ.ಆರ್.ನಗರ ಹಾಗೂ ಪಿರಿಯಾಪಟ್ಟಣ ತಾಲ್ಲೂಕುಗಳ ಮಕ್ಕಳಿಗೆ ಈವರೆಗೂ ಶೂ ಬಂದಿಲ್ಲ. ಮೈಸೂರು ನಗರ ಸೇರಿದಂತೆ ನಂಜನಗೂಡು, ಎಚ್.ಡಿ.ಕೋಟೆ, ತಿ.ನರಸೀಪುರ, ಹುಣಸೂರು, ಸರಗೂರು, ಮೈಸೂರು ತಾಲ್ಲೂಕುಗಳ ಸರ್ಕಾರಿ ಶಾಲಾ ಮಕ್ಕಳಿಗೆ ಈಗಾಗಲೇ ಶೇ.೫೦ರಷ್ಟು ಶೂಗಳು ಸರಬರಾಜಾಗಿದ್ದು, ತಾಲ್ಲೂಕು ಕೇಂದ್ರಗಳಿಂದ ಆಯಾ ಶಾಲೆಗಳಿಗೆ ರವಾನೆಯಾಗಲಾರಂಭಿಸಿದೆ.
ಕಂಪೆನಿಯ ಹೆಸರು, ನಂಬರ್ ಯಾವುದೂ ಇಲ್ಲದ ಶೂಗಳು ಅತ್ಯಂತ ಕಳಪೆಯಾಗಿದ್ದು, ಶೇ.೫೦ರಷ್ಟು ಶೂಗಳು ಈಗಾಗಲೆ ಶಾಲೆ ತಲುಪಿದಾಗಲೇ ಅವುಗಳ ಕಳಪೆ ಮಟ್ಟ ಬೆಳಕಿಗೆ ಬಂದಿದೆ.
ಮಕ್ಕಳ ಶೂ ಎಂದು ಸರಬರಾಜಾದ ಕೆಲವೆಡೆ ಪೋಷಕರ ಕಾಲಿನ ಅಳತೆಗೂ ಅದು ದೊಡ್ಡದಾಗಿದೆ ಎಂಬ ದೂರುಗಳು ಕೇಳಿಬರ ಲಾರಂಭಿಸಿವೆ. ಹೊಸ ಶೂ ಎಂದು ಮಕ್ಕಳು ಕಾಲಿಗೆ ಧರಿಸಿದ ಕೆಲವೇ ನಿಮಿಷಗಳಲ್ಲಿ ಆ ಶೂ ಹರಿದ ದೂರುಗಳು ಕೂಡ ಬರಲಾರಂಭಿಸಿವೆ.
ಕಂಪೆನಿಯ ಹೆಸರೇ ಇಲ್ಲದ ಕಳಪೆ ಶೂಗಳ ಕುರಿತು ಯಾರಿಗೆ ದೂರು ನೀಡಬೇಕು ಎಂಬುದೇ ಶಿಕ್ಷಕರ ತಲೆನೋವಿಗೆ ಕಾರಣವಾಗಿದೆ. ಹಿಂದೆ ಆಯಾ ಶಾಲೆಯ ಶಿಕ್ಷಕರೇ ಸ್ಥಳೀಯ ಅಂಗಡಿಗಳಿಂದ ಕಂಪೆನಿಯ ಶೂ ತಂದಾಗ ಕಳಪೆಯಾದರೆ ಅವರ ವಿರುದ್ಧ ಕ್ರಮ ಎಂಬ ಕೂಗು ಕೇಳಿ ಬರುತ್ತಿತ್ತು. ಆದರೆ ರಾಜ್ಯ ಸರ್ಕಾರ ರಾಜ್ಯದಾದ್ಯಂತ ವಿತರಿಸುತ್ತಿರುವ ಶೂಗಳಿಗೆ ಗುಣಮಟ್ಟವೂ ಇಲ್ಲ, ಕಂಪೆನಿಯ ಹೆಸರೂ ಇಲ್ಲ, ಅಳತೆಯೂ ಇಲ್ಲ. ಈಗ ಯಾರ ಮೇಲೆ ಕ್ರಮವಾಗುತ್ತದೆ ಎಂಬುದು ನಾಗರಿಕರ ಪ್ರಶ್ನೆಯಾಗಿದೆ.
” ೨೮೫ ಮಕ್ಕಳಿಗೆ ಸರಬರಾಜಾದ ಶೂಗಳಲ್ಲಿ ೧೫೦ ಕ್ಕೂ ಹೆಚ್ಚು ಮಕ್ಕಳಿಗೆಅವರ ಅಳತೆಯ ಶೂಗಳು ಬಂದೇ ಇಲ್ಲ. ಬಂದಿರುವ ಶೂಗಳು ನಮ್ಮ ಶಾಲೆಯ ಮಕ್ಕಳ ಅಳತೆಯದ್ದು ಅಲ್ಲವೇ ಅಲ್ಲ.”
ನೊಂದ ಶಿಕ್ಷಕ
” ರಾಜ್ಯ ಸರ್ಕಾರದಿಂದಲೇ ಶೂಗಳು ತಾಲ್ಲೂಕು ಕೇಂದ್ರಗಳಿಗೆ ಪೂರೈಕೆಯಾಗುತ್ತಿದ್ದು, ಸರಬರಾಜಾದ ಶೂಗಳ ಗುಣಮಟ್ಟದ ಕುರಿತು ಮಕ್ಕಳು ಹಾಗೂ ಪೋಷಕರಿಂದ ಅಪಸ್ವರ ಕೇಳಿ ಬರುತ್ತಿರುವುದು ನಿಜ. ಆದರೆ, ಅದರ ಗುಣಮಟ್ಟ ಹೇಳಲು ನಾವು ಶೂ ತಜ್ಞರಲ್ಲ. ಮೈಸೂರು ಜಿಲ್ಲೆಯಲ್ಲಿ ಈಗಾಗಲೇ ಶೇ.೫೦ರಷ್ಟು ಅಂದರೆ ೬೦,೦೦೦ಕ್ಕೂ ಹೆಚ್ಚು ಶೂಗಳು ವಿತರಣೆಯಾಗಿವೆ.”
– ಉದಯ್ ಕುಮಾರ್
” ಕಳಪೆ ಶೂ ವಿತರಣೆಯ ಆರೋಗಳು ಕೇಳಿ ಬರುತ್ತಿರುವ ಸಮಯದಲ್ಲೇ ಲೋಕಾಯುಕ್ತ ಪೊಲೀಸರು ಕಂಪೆನಿಯ ಹೆಸರೇ ಇಲ್ಲದ ಈ ಶೂ ಗಳ ಗುಣಮಟ್ಟದ ತನಿಖೆ ಆರಂಭಿಸಿದ್ದು ಹಲವೆಡೆ ವಿತರಣೆಗೆ ಕಡಿವಾಣ ಹಾಕಿದ್ದಾರೆ.”
ಕೆ.ಬಿ.ರಮೇಶ್ ನಾಯಕ ಟಿಕೆಟ್ ಜೀನಿ ಸಂಸ್ಥೆಗೆ ಟಿಕೆಟ್ ಮಾರಾಟದ ಹೊಣೆ; ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ಮೈಸೂರು: ನಾಡಹಬ್ಬ ದಸರಾ…
ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…
ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…
ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…
ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…