ಮಳೆಯಿಂದ ತೇವಾಂಶ ಹೆಚ್ಚಾಗಿ ನೀರುಪಾಲಾಗುತ್ತಿರುವ ಭತ್ತ: ಗುಣಮಟ್ಟ ಕಳೆದುಕೊಳ್ಳುತ್ತಿರುವ ಕಾಫಿ ಬೆಳೆ
ಸೋಮವಾರಪೇಟೆ: ತಾಲೂಕಿನದ್ಯಂತ ಅಕಾಲಿಕ ಮಳೆ, ಮೋಡ ಕವಿದ ವಾತಾವರಣ ಮುಂದುವರೆದಿದ್ದು, ಮಳೆಯಿಂದ ಭತ್ತ ಹಾಗೂ ಕಾಫಿ ಬೆಳೆಗಾರರು ಸಂಕಷ್ಟಕ್ಕೀಡಾಗಿದ್ದರೆ.
ಅಕಾಲಿಕ ಮಳೆಯು ಭತ್ತದ ಕೃಷಿಯ ಮೇಲೆ ಪ್ರತಿಕೂಲ ಪರಿಣಾಮ ಬೀರಿದ್ದು, ಕೊಯ್ಲು ಮಾಡಿದ ಭತ್ತವನ್ನು ಮನೆ ತುಂಬಿಸಿಕೊಳ್ಳಲು ಅಸಾಧ್ಯವಾದ ಪರಿಸ್ಥಿತಿ ನಿರ್ಮಾಣವಾಗಿದೆ. ಗದ್ದೆಗಳಲ್ಲಿ ಕೊಯ್ಲು ಮಾಡಿದ ಫಸಲನ್ನು ಹಾಗೆಯೇ ಬಿಟ್ಟಿದ್ದು, ಮಳೆಯಿಂದ ತೇವಾಂಶ ಹೆಚ್ಚಾಗಿ ಭತ್ತ ಮಣ್ಣು ಪಾಲಾಗುತ್ತಿದೆ. ತಾಲೂಕಿನ ಶಾಂತಲ್ಲಿ ಹಾಗು ಸೋಮವಾರಪೇಟೆ ಕಸಬಾ ಹೋಬಳ್ಳಿ ವ್ಯಾಪ್ತಿಯಲ್ಲಿ ಈಗಾಗಲೇ ಕೆಲ ರೈತರು ಭತ್ತ ಕಟಾವು ಮಾಡಿದ್ದು ಅಕಾಲಿಕ ಮಳೆಗೆ ಸಿಲುಕಿಕೊಂಡಿದ್ದಾರೆ. ಒಂದೆಡೆ ಕಾಡು ಪ್ರಾಣಿಗಳ ಹಾವಳಿ ಇನ್ನೊಂದೆಡೆ ಮಳೆಯಾದರೆ ಇದು ರೈತರಲ್ಲಿ ಚಿಂತೆಗೆಡು ಮಾಡಿದೆ.
ಭತ್ತ ಹಾಗೂ ಕಾಫಿ ಎರಡು ಕೃಷಿಯು ಒಂದೇ ಬಾರಿ ಕೂಯ್ಲಿಗೆ ಬಂದಿದ್ದು ರೈತರು ಆತಂಕ ಪಡಬೇಕಾದ ಪರಿಸ್ಥಿತಿಯಲ್ಲಿದ್ದಾರೆ. ಕೊಯ್ಲು ಮಾಡಿದ ಹಣ್ಣನ್ನು ಪಲ್ಟಿಂಗ್ ಮಾಡಿಸಿ ಮನೆಯ ಅಂಗಳ ಕಣದಲ್ಲಿ ಹಾಕಲಾಗಿದೆ. ಅಲ್ಲಿಯೂ ಕಾಫಿ ಗುಣಮಟ್ಟ ಕಳೆದುಕೊಳ್ಳುತ್ತಿದೆ. ಪಾರ್ಚ್‌ಮೆಂಟ್ ಕಾಫಿ ಒಣಗಿಸಲು ಹಲವು ದಿನಗಳ ಬೇಕು. ಆದರೆ, ಕಳೆದ ಒಂದು ವಾರದಿಂದ ಮೋಡದ ವಾತಾವರಣ ಮುಂದುವರಿದಿದ್ದು, ಕಾಫಿ ಬೀಜ ಬಣ್ಣ ಹಾಗೂ ಗುಣಮಟ್ಟ ಕಳೆದುಕೊಳ್ಳುತ್ತಿರುವುದರಿಂದ ಬೆಳೆಗಾರರು ದೊಡ್ಡಮಟ್ಟದ ನ? ಅನುಭವಿಸುವಂತಾಗಿದೆ.
ಕಳೆದ ವ? ಅರೇಬಿಕಾ ಕಾಫಿಗೆ ಉತ್ತಮ ಬೆಲೆ ಸಿಕ್ಕಿತ್ತು. ೫೦ ಕೆ.ಜಿ. ತೂಕದ ಅರೇಬಿಕಾ ಪಾರ್ಚ್‌ಮೆಂಟ್‌ಗೆ ೧೫ ರಿಂದ ೧೬ ಸಾವಿರ ಹಾಗೂ ಅರೇಬಿಕಾ ಚೆರಿಗೆ ೫ರಿಂದ ೭ಸಾವಿರ ಸಿಕ್ಕಿತ್ತು. ಇದ್ದಕ್ಕಿದ್ದಂತೆ ತೋಟಗಳಲ್ಲಿ ಬಿಳಿಕಾಂಡಕೊರಕ ಕೀಟ ಬಾಧೆ ಹೆಚ್ಚಾಗಿ ಆರೇಬಿಕಾ ತೋಟದಲ್ಲಿ ಗಿಡಗಳು ಕಾಣೆಯಾಗುತ್ತಿದ್ದು, ಉಳಿದಿರುವ ಆರೇಬಿಕಾ ಕಾಫಿ ಆಕಾಲಿಕ ಮಳೆಯಿಂದಾಗಿ ಬೆಳೆಗಾರರ ಕೈ ಸೇರುತ್ತಿಲ್ಲ.
ಸೋಮವಾರಪೇಟೆ ವ್ಯಾಪ್ತಿಯಲ್ಲಿ ಹೆಚ್ಚು ಅರೇಬಿಕಾ ಬೆಳೆಗಾರರಿದ್ದರೂ ಕಾಫಿ ಬೀಜಗಳನ್ನು ವೈಜ್ಞಾನಿವಾಗಿ ಒಣಗಿಸುವ ಘಟಕಗಳು ಇಲ್ಲ. ಒಂದಿಬ್ಬರು ಮಾತ್ರ ಡ್ರೈಯಿಂಗ್ ಯಾರ್ಡ್‌ಗಳನ್ನು ನಿರ್ಮಿಸಿಕೊಂಡಿದ್ದು, ಅವರ ತೋಟದ ಕಾಫಿಗೆ ವರದಾನವಾಗಿದೆ. ಸೋಮವಾರಪೇಟೆಯ ಕನಿ? ನಾಲೈದು ಭಾಗಗಳಲ್ಲಿ ಕಾಫಿ ಒಣಗಿಸುವ ಡ್ರೈಯಿಂಗ್ ಯಾರ್ಡ್ ನಿರ್ಮಿಸಿದಲ್ಲಿ ಕೃಷಿಕರಿಗೆ ಅನುಕೂಲವಾಗಲಿದೆ.
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಆದಾಯ ತೆರಿಗೆ ಪಾವತಿದಾರರಲ್ಲಿ ಬಹುಭಾಷಾ ನಟಿ ರಶ್ಮಿಕಾ ಮಂದಣ್ಣ ಮೊದಲ ಸ್ಥಾನದಲ್ಲಿದ್ದಾರೆ. ಕಿರಿಕ್ ಪಾರ್ಟಿ ಮೂಲಕ…
ಬಳ್ಳಾರಿ: ಬಳ್ಳಾರಿ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶ್ರೀರಾಮುಲು ಗಂಭೀರ ಆರೋಪ ಮಾಡಿದ್ದಾರೆ. ಪ್ರಕರಣ ಕುರಿತು ಮಾತನಾಡಿದ ಮಾಜಿ…
ರಾಜೇಶ್ ಬೆಂಡರವಾಡಿ ಚಾಮರಾಜನಗರ: ತಾಲ್ಲೂಕಿನ ಬೆಂಡರವಾಡಿ ಗ್ರಾಮದ ಬಳಿ ಲಾರಿ ಹಾಗೂ ಕೆಎಸ್‌ಆರ್‌ಟಿಸಿ ಬಸ್ ನಡುವೆ ಮಂಗಳವಾರ ರಾತ್ರಿ ಮುಖಾಮುಖಿ…
ಚಾಮರಾಜನಗರ ತಾಲ್ಲೂಕಿನ ಆಲೂರು ಗ್ರಾಮದ ಪರಿಶಿಷ್ಟ ಜಾತಿಯ ಕುಟುಂಬಗಳಿಗೆ ದಿ.ಬಿ.ರಾಚಯ್ಯ ಅವರು ಸಚಿವರಾಗಿದ್ದಾಗ ಹರದನಹಳ್ಳಿ ಡಿಸ್ಟ್ರಿಕ್ಟ್ ಫಾರೆಸ್ಟ್ ಸರ್ವೆ ನಂ.೩ರಲ್ಲಿ…
ಮೈಸೂರಿನ ರೈಲು ನಿಲ್ದಾಣ ಸೇರಿದಂತೆ, ರಾಜ್ಯದ ಯಾವುದೇ ರೈಲು ನಿಲ್ದಾಣ ಮತ್ತು ರೈಲು ಗಾಡಿಗಳಲ್ಲಿ ಕುಡಿಯುವ ನೀರಿನ ಅರ್ಧ ಲೀಟರ್…
ಮೈಸೂರು ಮಹಾ ನಗರ ಪಾಲಿಕೆ ಚುನಾಯಿತ ಸದಸ್ಯರ ಅವಧಿ ಮುಗಿದು ಎರಡು ವರ್ಷಗಳೆ ಕಳೆದಿದೆ. ಆದರೆ ಸರ್ಕಾರ ಚುನಾವಣೆ ನಡೆಸಲು ಮುಂದಾಗುತ್ತಿಲ್ಲ.…