ವೀರಾಜಪೇಟೆ :ಅರಣ್ಯ ವೀಕ್ಷಕರು ಅರಣ್ಯದಲ್ಲಿ ಗಸ್ತು ಕರ್ತವ್ಯ ನಿರ್ವಹಿಸುತಿದ್ದ ವೇಳೆ ಕಾಣೆಯಾಗಿದ್ದರು ಇಂದು ನದಿಯ ತಳಭಾಗದಲ್ಲಿ ಅರಣ್ಯ ವೀಕ್ಷಕನ ಮೃತ್ತ ದೇಹ ಪತ್ತೆಯಾಗಿರುವ ಘಟನೆ ವೀರಾಜಪೇಟೆ ಗ್ರಾಮಾಂತರ. ವಿ.ಬಾಡಗ ಗ್ರಾಮ ಉಗ್ಗಿಹೊಳೆ, ಕೊಕ್ಕ ಭಾಗದಲ್ಲಿ ನಡೆದಿದೆ.
ತರುಣ್ ಕರ್ತವ್ಯಕ್ಕೆ ಸೇರಿ ಎರಡು ವರ್ಷಗಳಾಗಿವೆ. ಬಾಳಲೆಯ ಗ್ರಾಮದ ಗಂಧದಗುಡಿ ಎಂಬಲ್ಲಿ ತನ್ನ ಅಜ್ಜಿಯ ಮನೆಯಲ್ಲಿ ತಂಗಿ ಸೇವೆಗೆ ಬರುತಿದ್ದರು ಎನ್ನಲಾಗಿದೆ. ಬ್ರಹ್ಮಗಿರಿ ವನ್ಯಜೀವಿ ಮಾಕೂಟ್ಟ ವಲಯಕ್ಕೆ ಹೊಂದಿಕೊಂಡಿರುವ ವಿ.ಭಾಡಗ ಗ್ರಾಮದ ಕೊಕ್ಕ ಎಂಬಲ್ಲಿ ಅರಣ್ಯ ಶಿಭಿರದ ವ್ಯಾಪ್ತಿಯಲ್ಲಿ ಕಾಡುಬೇಟೆ ತಡೆ ಶಿಭಿರದಲ್ಲಿ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತಿದ್ದರು. ದಿನಾಂಕ ೨೩-೦೯-೨೦೨೨ ರಂದು ವಲಯ ಅರಣ್ಯಧೀಕಾರಿಗಳ ಆದೇಶದ ಮೇರೆಗೆ ಗಸ್ತು ನಿರ್ವಹಿಸಲು ಅರಣ್ಯ ರಕ್ಷಕರಾದ ಮಂಜುನಾಥ, ಮತ್ತು ದಿನಗೂಲಿ ಅರಣ್ಯ ವೀಕ್ಷಕರುಗಳಾದ ದರ್ಶನ್, ಮೋನಪ್ಪ, ಚೇತನ್ ಮತ್ತು ತರುಣ್ ಅವರೋಂದಿಗೆ ಬೆಳಿಗ್ಗೆ ೧೦-೦೦ ರ ಸಮಯದಲ್ಲಿ ಕೊಕ್ಕ ಶಿಭಿರದಿಂದ ಹೊರಡುತ್ತಾರೆ. ಕೊಕ್ಕ ಭಾಗದಲ್ಲಿ ಗಸ್ತು ನಿರ್ವಹಿಸುತಿದ್ದ ವೇಳೆ ತರುಣ್ ಅರಣ್ಯದ ಅಂಚಿನಲ್ಲಿ ಹರಿಯುತ್ತಿರುವ ಉಗ್ಗಿ ಹೊಳೆಗೆ ಕಾಲು ಜಾರಿ ಬಿದ್ದು ಕಾಣೆಯಾಗುತ್ತಾರೆ. ಈ ಸಂದರ್ಭದಲ್ಲಿ ಗಸ್ತುನಿರ್ವಹಿಸುತಿದ್ದ ಇತರರು ಹುಡುಕಾಟ ಆರಂಭಿಸುತ್ತಾರೆ. ತರುಣ್ ಅವರು ದೊರಕದಿದ್ದಾಗ ಸಂಜೆ ೦೬ ಗಂಟೆಯ ವೇಳೆಗೆ ಅರಣ್ಯಾಧೀಕಾರಿಗಳಿಗೆ ದೂರವಾಣಿ ಮುಖಾಂತರ ಮಾಹಿತಿ ನೀಡಲಾಗುತ್ತದೆ. ಅರಣ್ಯಧೀಕಾರಿಗಳು ಸ್ಥಳಕ್ಕೆ ಆಗಮಿಸುತ್ತಾರೆ. ಅಧಿಕಾರಿಗಳ ಮನವಿ ಮೇರೆಗೆ ಎನ್.ಡಿ.ಆರ್.ಎಫ್ ತಂಡವು ಸ್ಥಳಕ್ಕೆ ಆಗಮಿಸಿ ಶೋಧ ಕಾರ್ಯ ಮುಂದುವೆರೆಸುತ್ತಾರೆ. ಉಗ್ಗಿ ಹೊಳೆಯು ಕಿರಿದಾಗಿದ್ದರು. ಹೊಳೆಯಲ್ಲಿ ಕಿರಿದಾದ ಜಲಪಾತವಿದೆ ಮೃತರಾದ ತರುಣ್ ಅವರ ತಂದೆ ಮುನಿಯಪ್ಪ ಅವರು ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ದಿನಾಂಕ ೨೪-೦೯-೨೦೨೨ ರಂದು ಮಗ ಕಾಣೆಯಾಗಿರುವ ಬಗ್ಗೆ ದೂರು ದಾಖಲು ಮಾಡುತ್ತಾರೆ. ಉಗ್ಗಿ ಹೊಳೆಯು ಕಿರಿದಾಗಿದ್ದರು. ಹೊಳೆಯಲ್ಲಿ ಕಿರಿದಾದ ಜಲಪಾತವಿದೆ, ಹೊಳೆಯಲ್ಲಿ ನೀರಿನ ಹರಿವು ಮೆಲ್ಬಾಗದಲ್ಲಿ ಕಡಿಮೆವಿದ್ದರು ತಳಮಟ್ಟದಲ್ಲಿ ಅತಿವೇಗವಾಗಿರುವುದರಿಂದ ಶೋಧ ಕಾರ್ಯದಲ್ಲಿ ವಿಳಂಬವಾಗುತ್ತದೆ. ಎನ್.ಡಿ.ಆರ್.ಎಫ್ ತಂಡದೊಂದಿಗೆ, ಮಂಗಳೂರಿನ ಮುಳುಗು ತಜ್ಞರ ಸಹಕಾರ ಪಡೆಯಲಾಗುತ್ತದೆ. ಸತತ ಮೂರು ದಿನಗಳ ಶೋಧ ಕಾರ್ಯಾಚರಣೆಯ ಮೂಲಕ ಇಂದು ಬೆಳಿಗ್ಗೆ ಸುಮಾರು ೮-೩೦ ಗಂಟೆಗೆ ಉಗ್ಗಿ ಹೊಳೆಯ ತಳಭಾಗದಲ್ಲಿದ್ದ ತರುಣ್ ಮೃತದೇಹವು ಪತ್ತೆಯಾಗಿದೆ. ಮೃತರ ತಂದೆ ಮುನಿಯಪ್ಪ ಅವರು ನೀಡಿರುವ ದೂರಿನ ಮೇರೆಗೆ ವಿರಾಜಪೇಟೆ ಗ್ರಾಮಾಂತರ ಠಾಣೆಯಲ್ಲಿ ಆಕಸ್ಮಿಕ ಮರಣ ಪ್ರಕರಣ ದಾಖಲಾಗಿದ್ದು ವಿರಾಜಪೇಟೆ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಲಾಗಿರುತ್ತದೆ. ತದನಂತರದಲ್ಲಿ ಮೃತ ಶರೀರವನ್ನು ಸಂಭದಿಕರಿಗೆ ಹಸ್ತಾಂತರ ಮಾಡಲಾಗಿ ಪೊಲೀಸರು ಮುಂದಿನಕ್ರಮ ಕೈಗೊಂಡಿದ್ದಾರೆ.
ಶೋಧ ಕಾರ್ಯದ ವೇಳೆಯಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸು ಠಾಣೆಯ ಸಿಬ್ಬಂದಿಗಳು, ಎನ್.ಡಿ.ಅರ್.ಎಫ್ ತಂಡದ ಸಿಬ್ಬಂದಿಗಳು, ಅರಣ್ಯ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಸಾರ್ವಜನಿಕರು, ಗ್ರಾಮ ಪಂಚಾಯಿತಿ ಸದಸ್ಯರು ಹಾಜರಿದ್ದರು.
ಮುಂಬೈ : ಐಪಿಎಲ್ ತಂಡವಾದ ಕೋಲ್ಕತ್ತಾ ನೈಟ್ ರೈಡರ್ಸ್ ( ಕೆಕೆಆರ್) ತಂಡಕ್ಕೆ ನೆರೆಯ ಬಾಂಗ್ಲಾದೇಶದ ಆಟಗಾರನನ್ನು ಖರೀದಿಸಿರುವ ಬಾಲಿವುಡ್…
ಹುಬ್ಬಳ್ಳಿ : ಮರ್ಯಾದೆಗೇಡು ಹತ್ಯೆ ಅಂತಹ ಘಟನೆ ತಡೆಗೆ ಮಾನ್ಯಾ ಹೆಸರಿನಲ್ಲಿ ಪ್ರತ್ಯೇಕ ಕಾಯ್ದೆ ಜಾರಿಗೊಳಿಸುವ ಬಗ್ಗೆ ಗಂಭೀರ ಚಿಂತನೆ…
ಬೆಂಗಳೂರು: ರಾಜ್ಯದಲ್ಲಿ ನುಸುಳುಕೋರರು, ಬಾಂಗ್ಲಾದೇಶದವರು, ರೋಹಿಂಗ್ಯಾಗಳು ಯಾರು ಅಂತ ತನಿಖೆ ಮಾಡಿ, ಬಳಿಕ ಪುನರ್ ವಸತಿ ಕಲ್ಪಿಸಬೇಕು ಎಂದು ಶಾಸಕ…
ಸ್ವಿಟ್ಜರ್ಲೆಂಡ್: ಹೊಸ ವರ್ಷಾಚರಣೆ ವೇಳೆ ಸ್ವಿಟ್ಜರ್ಲೆಂಡ್‌ನಲ್ಲಿ ಸಂಭವಿಸಿದ ಭೀಕರ ಸ್ಫೋಟದಲ್ಲಿ 40 ಮಂದಿ ಸಾವನ್ನಪ್ಪಿದ್ದು, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.…
ಬೆಂಗಳೂರು: ಹೊಸ ವರ್ಷದ ಹಿನ್ನೆಲೆಯಲ್ಲಿ ಒಂದೇ ದಿನ 8.93 ಲಕ್ಷ ಜನರು ನಮ್ಮ ಮೆಟ್ರೋದಲ್ಲಿ ಪ್ರಯಾಣಿಸಿದ್ದು, 3.08 ಕೋಟಿ ರೂ…
ಬೆಂಗಳೂರು: ಹೊಸ ವರ್ಷಕ್ಕೆ ಕಾಲಿಡುತ್ತಿದ್ದಂತೆ ರಾಜ್ಯ ಸರ್ಕಾರ ಸಾರಿಗೆ ನೌಕರರಿಗೆ ಬಿಗ್ ಶಾಕ್ ನೀಡಿದೆ. 2026ರ ಜನವರಿ.1ರಿಂದ ಮುಂದಿನ ಆರು…