ಜಿಲ್ಲೆಗಳು

ನಕಲಿ ಆಧಾರ್ ಕಾರ್ಡ್ ಸೃಷ್ಟಿ ಜಾಲ ಸಕ್ರಿಯ?

ಬೆಂಗಳೂರು, ಚಾಮರಾಜನಗರ, ಪರಿಯಾಪಟ್ಟಣದಲ್ಲಿ ಪತ್ತೆಯಾಗ್ದಿ ನಕಲಿ ಕಾರ್ಡ್ ಜಾಲv

ವರದಿ : ಬಿ.ಎನ್.ಧನಂಜಯಗೌಡ

ಮೈಸೂರು : ಶಂಕಿತ ಉಗ್ರ ಶಾರಿಖ್ ನಕಲಿ ಆಧಾರ್ ಕಾರ್ಡ್ ಅನ್ನು ಬಳಸಿಕೊಂಡು ಮೈಸೂರಿನಲ್ಲಿ ಬಾಡಿಗೆ ಮನೆ ಪಡೆದಿದ್ದ ಎಂಬ ತನಿಖಾ ಅಂಶವನ್ನು ಗಮನಿಸಿದರೆ, ರಾಜ್ಯದಲ್ಲಿ ನಕಲಿ ಆಧಾರ್ ಕಾರ್ಡ್ ಸೃಷ್ಟಿಸುವ ಜಾಲ ಸಕ್ರಿಯವಾಗಿದೆಯೇ? ಎಂಬ ಅನುಮಾನಗಳು ಹುಟ್ಟಿಕೊಂಡಿವೆ. ಇನ್ನು ನಕಲಿ ಕಾರ್ಡ್ ಸೃಷ್ಟಿಯಲ್ಲಿ ರಾಜ್ಯವೂ ಎರಡನೇ ಸ್ಥಾನದಲ್ಲಿ ಇದೆ ಎಂದು ಕೆಲವು ಪೊಲೀಸ್ ಮೂಲಗಳು ಹೇಳುತ್ತಿವೆ.

ಹಾಗಾದ್ರೆ ನಕಲಿ ಆಧಾರ್ ಕಾರ್ಡ್ ಸೃಷ್ಟಿ ಹೇಗೆ ?

  • ಮೊದಲಿಗೆ ನಕಲಿ ಆಧಾರ್ ಕಾರ್ಡ್ ಬೇಕಿರುವ ವ್ಯಕ್ತಿಗಳ ಪೋಟೋ ಮತ್ತು ಸ್ವವಿವರ ಸಂಗ್ರಹಿಸುವುದು. ನಕಲಿ ಲೆಟರ್‌ಹೆಡ್ ತಯಾರಿಸಿ ಗೆಜೆಟೆಡ್ ಅಧಿಕಾರಿಗಳ ಮೊಹರು ವಿಳಾಸ ನಮೂದಿಸುವುದು ಪೋಟೋ ಶಾಪ್ ಮೂಲಕ ಆಧಾರ್ ಕಾರ್ಡ್ ಪಡೆಯುವ ವ್ಯಕ್ತಿಗಳ ಹೆಸರು ಉಲ್ಲೇಖಿಸುವುದು. ಆಧಾರ್ ಸೇವಾ ಕೇಂದ್ರಕ್ಕೆ ಅರ್ಜಿ ಸಲ್ಲಿಸಿ, ಕಾರ್ಡ್ ಬಂದ ನಂತರ ಹಣ ನೀಡುವುದು.
  • ಅಕ್ರಮ ಚಟುವಟಿಕೆಗಳಿಗಾಗಿ ಅಸಲಿ ಆಧಾರ್ ಕಾರ್ಡ್ ಕೊಟ್ಟರೆ ಸ್ವವಿವರ ತಿಳಿಯುತ್ತದೆ ಎಂಬ ಕಾರಣಕ್ಕೆ ವೈಯಕ್ತಿಕ ವಿವರಗಳನ್ನು ತಿದ್ದಿ, ಲ್ಯಾಮಿನೇಷನ್ ಮೂಲಕ ನಕಲಿ ಆಧಾರ್ ಕಾರ್ಡ್ ಸೃಷ್ಟಿಸುವುದು.
  • ನಾನಾ ಸೇವಾ ಸೌಲಭ್ಯಗಳಿಗೆ ಆಧಾರ್ ಕಾರ್ಡ್ ಮಾಹಿತಿ ಹಂಚಿಕೊಳ್ಳುವುದರಿಂದ ಆಧಾರ ಮಾಹಿತಿ ದುರ್ಬಳಕೆಯಾಗುವ ಸಾಧ್ಯತೆಯೂ ಇದೆ.

ಕೆಲವು ಪ್ರಕರಣಗಳು ಪತ್ತೆ :

  • ಎರಡು ವರ್ಷಗಳ ಹಿಂದೆ ಚಾಮರಾಜನಗರದಲ್ಲೂ ನಕಲಿ ಆಧಾರ್ ಕಾರ್ಡ್ ಸೃಷ್ಟಿಸುವ ಜಾಲ ಪತ್ತೆಯಾಗಿತ್ತು. ೨ ಸಾವಿರ ರೂ.ಪಡೆದು ನಕಲಿ ಆಧಾರ್ ಮಾಡಿಕೊಡುತ್ತಿದ್ದ ಮೂವರು ಆರೋಪಿಗಳನ್ನು ಇಲ್ಲಿನ ಪೊಲೀಸರು ಬಂಧಿಸಿದ್ದರು.
  • ಕಳೆದ ವರ್ಷ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಚಾಲನ ಪರವಾನಿಗಿ ಸೇರಿದಂತೆ ಇನ್ನಿತರ ನಕಲಿ ಕಾರ್ಡ್‌ಗಳನ್ನು ತಯಾರಿಸುತ್ತಿದ್ದ ಜಾಲವನ್ನು ಬೆಂಗಳೂರು ಪೊಲೀಸರು ಭೇದಿಸಿದ್ದರು. ರಾಜಸ್ಥಾನ ಮೂಲದ ಕಮಲೇಶ್ ಸೇರಿ ಒಟ್ಟು ಹತ್ತು ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರಿಂದ ಹೆಸರು ವಿಳಾಸವಿಲ್ಲದ ೨೮,೦೦೦ ನಕಲಿ ಚುನಾವಣಾ ಗುರುತಿನ ಚೀಟಿ, ೯,೦೦೦ ನಕಲಿ ಆರ್ಧಾ ಕಾರ್ಡ್‌ಗಳು, ೯,೦೦೦ ಪಾನ್ ಕಾರ್ಡ್‌ಗಳನ್ನು, ೧೨,೨೦೦ ಆರ್‌ಸಿ ಕಾರ್ಡ್‌ಗಳು, ೨ ಪ್ರಿಂಟರ್ ಹಾಗೂ ಕಂಪ್ಯೂಟರ್‌ಗಳನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.
  • ಸುಮಾರು ಆರು ತಿಂಗಳುಗಳ ಹಿಂದೆ ಪಿರಿಯಾಪಟ್ಟಣದಲ್ಲಿಯೂ ೨ ರಿಂದ ೩ ಸಾವಿರ ರೂ.ಪಡೆದು ನಕಲಿ ಆಧಾರ್ ಕಾರ್ಡ್ ಮಾಡಿಕೊಡುತ್ತಿದ್ದ ಅಂಗಡಿ ಮಾಲೀಕರೊಬ್ಬರನ್ನು ವಶಕ್ಕೆ ಪಡೆಯಲಾಗಿತ್ತು.

ನಕಲಿ ಆಧಾರ್ ಕಾರ್ಡ್ ಬಳಕೆ ಎಲ್ಲಿ ?

  • ವಂಚಿಸುವ ಉದ್ದೇಶದಿಂದ ಬ್ಯಾಂಕ್ ಸಾಲ ಪಡೆಯಲು.
  • ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ವೈಯಕ್ತಿಕ ಮಾಹಿತಿ ತಿದ್ದುವುದು.
  • ಬಾಲ ಕಾರ್ಮಿಕರನ್ನು ವಿವಿಧ ಕೆಲಸಗಳಿಗೆ ಬಳಸಿಕೊಳ್ಳಲು ವಯಸ್ಸನ್ನು ತಿದ್ದುವುದು.
  • ನೆರೆ ದೇಶಗಳಿಗೆ ಅಕ್ರಮವಾಗಿ ನುಸುಳಲು.
  • ಮಾನವ ಕಳ್ಳ ಸಾಗಣೆಗಾಗಿ

ನಕಲಿ ಅಂತ ಗೊತ್ತಾಗುವುದು ಹೇಗೆ?

ಸಾಮಾನ್ಯವಾಗಿ ಹೀಗೆ ಪಡೆಯಲಾಗುವ ನಕಲಿ ಆಧಾರ್ ಕಾರ್ಡ್‌ಗಳನ್ನು ಬಹುತೇಕ ಕಡೆಗಳಲ್ಲಿ ತಕ್ಷಣ ಯುಪಿಐ ಕೋಡ್ ಸ್ಕ್ಯಾನ್ ಮಾಡಿ ಪರಿಶೀಲಿಸುವುದಿಲ್ಲ. ಹೀಗಾಗಿ, ತಕ್ಷಣಕ್ಕೆ ನಕಲಿ ಕಾರ್ಡ್ ಅನ್ನು ಪತ್ತೆ ಮಾಡಲು ಸಾಧ್ಯವಾಗುವುದಿಲ್ಲ. ಅದನ್ನು ಸ್ಕ್ಯಾನ್ ಮಾಡಿ ಪರಿಶೀಲಿಸಿದಾಗ ತಕ್ಷಣ ನಕಲಿ ಎಂದು ಪತ್ತೆ ಮಾಡಬಹುದು.

ಮೈಸೂರಿನಲ್ಲಿ ಇದ್ದ ಎನ್ನಲಾದ ಶಂಕಿತ ಉಗ್ರ ಪ್ರೇಮ್‌ರಾಜ್ ಎಂಬಾತನ ಆಧಾರ್ ಕಾರ್ಡ್ ಡೇಟಾವನ್ನು ದುರ್ಬಳಕೆ ಮಾಡಿಕೊಂಡು ನಕಲಿ ಆಧಾರ್ ಕಾರ್ಡ್ ಸೃಷ್ಟಿಸಿಕೊಂಡಿದ್ದ. ಅದನ್ನು ಸ್ಕ್ಯಾನ್ ಮಾಡಿದಾಗ ನಕಲಿ ಎಂಬುದು ಗೊತ್ತಾಗಿದೆ. ಇಂತಹ ಕಾನೂನು ಬಾಹಿರ ಚಟುವಟಿಕೆಗಳೇನಾದರೂ ನಗರದಲ್ಲಿ ಇವೇಯಾ ಎಂಬ ಬಗ್ಗೆ ನಗರದ ಎಲ್ಲ ಠಾಣೆಗಳ ಪೊಲೀಸರಿಂದ ಮಾಹಿತಿ ಪಡೆಯಲಾಗುವುದು.
-ರಮೇಶ್ ಬಾನೋತ್, ನಗರ ಪೊಲೀಸ್ ಆಯುಕ್ತ, ಮೈಸೂರು.

 

andolana

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

10 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

10 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

10 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

11 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

11 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

11 hours ago