ಹೈದ್ರಾಬಾದ್‌ನಿಂದ ಪೊಲೀಸ್ ಭದ್ರತೆಯಲ್ಲಿ ಸರಬರಾಜು; ನೂತನ ಜಿಲ್ಲಾಧಿಕಾರಿ ಕಚೇರಿ ಸಮೀಪದ ವೇರ್‌ಹೌಸ್‌ನಲ್ಲಿ ಸಂಗ್ರಹ
ಮೈಸೂರು: ಮುಂಬರುವ ರಾಜ್ಯ ವಿಧಾನಸಭಾ ಚುನಾವಣೆಗೆ ರಾಜಕೀಯ ಪಕ್ಷಗಳು ಸಜ್ಜಾಗುತ್ತಿರುವಂತೆ, ಮತ್ತೊಂದೆಡೆ ಕೇಂದ್ರ ಚುನಾವಣಾ ಆಯೋಗವು ವೇಳಾಪಟ್ಟಿ ಪ್ರಕಟಿಸುವ ಮುನ್ನವೇ ಮೈಸೂರಿಗೆ ಹೊಸ ಎಂ ೩ ಮಾದರಿಯ ಮತ ಯಂತ್ರಗಳು ಸರಬರಾಜಾಗಲಿದೆ.
ಮೈಸೂರು ಜಿಲ್ಲೆಗೆ ೫,೬೩೫ ಬ್ಯಾಲೆಟ್ ಯೂನಿಟ್, ೩,೯೫೮ ಕಂಟ್ರೋಲ್ ಯೂನಿಟ್‌ಗಳು ಇನ್ನೆರಡು ದಿನಗಳಲ್ಲಿ ಬರಲಿವೆ. ಕೇಂದ್ರ ಚುನಾವಣಾ ಆಯೋಗವು ಯಾವುದೇ ರಾಜ್ಯಕ್ಕೆ ಚುನಾವಣೆಗಳು ನಡೆದಾಗ ದೇಶದ ಯಾವುದೇ ರಾಜ್ಯಗಳಿಂದ ಮತ ಯಂತ್ರಗಳನ್ನು ಕಳುಹಿಸಿ ಕೊಡಲಾಗುತ್ತಿತ್ತು. ಆದರೆ, ಈಗ ಆಯಾ ಜಿಲ್ಲೆಗೆ ನೇರವಾಗಿ ಕಳುಹಿಸುವ ಕೆಲಸ ಮಾಡುತ್ತಿದೆ. ಹೈದರಾಬಾದ್‌ನಲ್ಲಿರುವ ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ(ಇಸಿಐ)ನಿಂದ ಮತ ಯಂತ್ರಗಳನ್ನು ತಯಾರು ಮಾಡಲಾಗುತ್ತಿದೆ. ಅಲ್ಲಿಂದ ನೇರವಾಗಿ ಮೈಸೂರಿಗೆ ತರಲಾಗುತ್ತಿರುವುದು ವಿಶೇಷ.
ಮುಡಾ ಆಯುಕ್ತರ ತಂಡ ನೇತೃತ್ವ: ಹೈದ್ರಾಬಾದ್‌ನಿಂದ ಕಂಟೇನರ್‌ನಲ್ಲಿ ಮತಯಂತ್ರಗಳನ್ನು ತರಲು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್ ಕುಮಾರ್ ತಂಡ ಪಯಣ ಬೆಳೆಸಿದೆ. ಕಂಟೇನರ್ ಜತೆಗೆ ಆಯುಕ್ತರ ತಂಡ, ಜಿಪಿಎಸ್ ಹೊಂದಿರುವ ಎಸ್ಕಾರ್ಟ್‌ನೊಂದಿಗೆ ಹತ್ತು ಮಂದಿ ಪೊಲೀಸರು ಭದ್ರತೆಯ ಹೊಣೆ ಹೊತ್ತಿದ್ದಾರೆ. ಜಿಲ್ಲಾಡಳಿತದ ಮೂಲಗಳ ಪ್ರಕಾರ ಭಾನುವಾರದ ಹೊತ್ತಿಗೆ ಕಂಟೇನರ್ ಬರುತ್ತಿದ್ದಂತೆ ಪರಿಶೀಲಿಸಿ ಇವಿಎಂ ವೇರ್‌ಹೌಸ್‌ನಲ್ಲಿ ಇಡಲಾಗುತ್ತದೆ ಎಂದು ಹೇಳಲಾಗಿದೆ.
ಹೊಸ ಮಷಿನ್: ಈ ಬಾರಿ ಹೊಸ ಎಂ ೩ ಹೆಸರಿನ ಮಾದರಿ ಮತ ಯಂತ್ರಗಳು ಚುನಾವಣೆಯಲ್ಲಿ ಬಳಕೆಯಾಗಲಿದೆ. ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಹೈದ್ರಾಬಾದ್‌ನಲ್ಲಿರುವ ಇಸಿಐ ಕಂಪೆನಿಯವರು ತಯಾರು ಮಾಡಿದ್ದಾರೆ. ಈ ಯಂತ್ರದ ವಿಶೇಷತೆ, ಬ್ಯಾಲೆಟ್, ವಿವಿ ಬ್ಯಾಲೆಟ್ ಕುರಿತು ನಿಖರತೆ ಇರುತ್ತದೆ. ಚುನಾವಣೆ ಹೊತ್ತಿಗೆ ರಾಜಕೀಯ ಪಕ್ಷಗಳ ಸಭೆ ಕರೆದು ಇದರ ಬಗ್ಗೆ ಡೆಮೋ ನೀಡಲಾಗುತ್ತದೆ. ಅಲ್ಲಿಯವರೆಗೂ ಮಾಹಿತಿ ಸೋರಿಕೆಯಾಗದಂತೆ ನೋಡಿಕೊಳ್ಳಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದರು.
ಮೈಸೂರಿನ ಸುಭಾಷ್ ನಗರದ ೪ನೇ ಮುಖ್ಯರಸ್ತೆಯಲ್ಲಿರುವ ಮರಗಳ ಕೊಂಬೆಗಳು ವಿದ್ಯುತ್ ತಂತಿಗಳಿಗೆ ತಗುಲುತ್ತಿದ್ದು, ಗಾಳಿ ಅಥವಾ ಮಳೆಯ ಸಮಯದಲ್ಲಿ ಶಾರ್ಟ್…
ರಾಜ್ಯದಲ್ಲಿ ೩೧೫ ಕುಸ್ತಿಪಟುಗಳಿಗೆ ಉಚಿತವಾಗಿ ನುರಿತ ಕುಸ್ತಿ ತರಬೇತುದಾರರಿಂದ ವೈಜ್ಞಾನಿಕ ಕ್ರೀಡಾ ತರಬೇತಿ ನೀಡಲಾಗುತ್ತಿದೆ ಹಾಗೂ ರಾಜ್ಯದಲ್ಲಿ ಕ್ರೀಡಾ ಅಭಿವೃದ್ಧಿಗಾಗಿ…
ರಾಜ್ಯ ಸರ್ಕಾರಿ ನೌಕರರು ಕಚೇರಿಗೆ ಬರುವಾಗ ಸಭ್ಯ ಉಡುಪುಗಳನ್ನು ಧರಿಸಿಕೊಂಡು ಬರುವಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿರುವುದು ಸ್ವಾಗತಾರ್ಹವಾಗಿದೆ. ಕೆಲವು…
ಮೈಸೂರಿನ ಲಲಿತಾದ್ರಿಪುರ ರಿಂಗ್ ರಸ್ತೆಯಲ್ಲಿರುವ ಮಾರ್ವೆಲ್ ಶಾಲಾ- ಕಾಲೇಜು ಮುಂಭಾಗದಿಂದ ಸ್ವಲ್ಪ ದೂರ ಸಾಗಿದರೆ ವರುಣ ನಾಲೆ ಕಾಲುವೆ ಸಿಗುತ್ತದೆ.…
ಬೆಂಗಳೂರು: ಸಿಎಂ ಸಿದ್ದರಾಮಯ್ಯ ವಿರುದ್ಧದ ಮುಡಾ ಹಗರಣ ಪ್ರಕರಣದಲ್ಲಿ ಲೋಕಾಯುಕ್ತ ನೀಡಿರುವ ಕ್ಲೀನ್‌ಚಿಟ್ ಕುರಿತು ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಆದೇಶ…
ಕಾಶ್ಮೀರದಿಂದ ಕನ್ಯಾಕುಮಾರಿಯವರೆಗಿನ ಭಾರತದಲ್ಲಿ ಹಲವಾರು ರಾಜ್ಯ, ಹಲವಾರು ಧರ್ಮ, ಹಲವಾರು ಆಹಾರ ವೈವಿಧ್ಯತೆ, ಹಲವಾರು ಭಾಷೆ, ಹಲವಾರು ಸಂಸ್ಕ ತಿಗಳು…