ಜಿಲ್ಲೆಗಳು

ಮನೆ ಕನ್ನ ನಿಯಂತ್ರಣಕ್ಕೆ ‘ಇ-ಬೀಟ್’ ವ್ಯವಸ್ಥೆ

ನಗರದಲ್ಲಿ ೧,೪೬೮ ಬೀಟ್ ಪಾಯಿಂಟ್, ಬೀಟ್ ಮಾನಿಟರಿಂಗ್, ಬೀಟ್ ಕಮಿಟಿಯೂ ಇದೆ

ವರದಿ:  ಬಿ.ಎನ್.ಧನಂಜಯಗೌಡ

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಹೆಚ್ಚುತ್ತಿರುವ ಮನೆ ಕಳ್ಳತನ ಮತ್ತು ಪುಂಡು-ಪೋಕರಿಗಳ ಉಪಟಳ ನಿಯಂತ್ರಿಸಲು ಪೊಲೀಸರು ಜಾರಿಗೆ ತಂದಿರುವ ‘ಸ್ಮಾರ್ಟ್ ಇ-ಬೀಟ್ ವ್ಯವಸ್ಥೆ’ ಅತ್ಯುತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಮನೆ ಕಳವು, ಪುಂಡು-ಪೋಕರಿಗಳ ಉಪಟಳ ತಡೆಯಲು ನಗರದಲ್ಲಿ ೧೪೬೮ ಬೀಟ್ ಪಾಯಿಂಟ್ ವ್ಯವಸ್ಥೆ ಮಾಡಲಾಗಿದೆ.

ಪೊಲೀಸ್ ನೈಟ್ ಬೀಟ್ ವ್ಯವಸ್ಥೆ ಸರಿಯಿಲ್ಲ, ಬೀಟ್‌ನಲ್ಲಿರುವ ಪೊಲೀಸ್ ಸಿಬ್ಬಂದಿ ಸಮರ್ಪಕವಾಗಿ ಕಾರ್ಯ ನಿರ್ವಹಿಸುವುದಿಲ್ಲ, ವಾರಕ್ಕೊಮ್ಮೆ ಬಂದು ಹಾಜರಾತಿಗೆ ಇಡೀ ವಾರದ ಸಹಿ ಮಾಡುತ್ತಾರೆ ಎಂಬಿತ್ಯಾದಿ ದೂರುಗಳ ಹಿನ್ನೆಲೆಯಲ್ಲಿಯೇ ಒಂದು ವರ್ಷದ ಹಿಂದೆಯೇ ‘ಸ್ಮಾರ್ಟ್ ಇ-ಬೀಟ್ ವ್ಯವಸ್ಥೆ’ ಜಾರಿ ಮಾಡಲಾಗಿದೆ.

ಏನಿದು ಇ-ಬೀಟ್ ವ್ಯವಸ್ಥೆ ?: ಎಲೆಕ್ಟ್ರಾನಿಕ್ ಇ-ಬೀಟ್ ವ್ಯವಸ್ಥೆಯಲ್ಲಿ ಪೊಲೀಸ್ ಸಿಬ್ಬಂದಿಗೆ ಅಭಿವೃದ್ಧಿ ಪಡಿಸಿದ ಆ್ಯಪ್ ಅನ್ನು ಸಿಬ್ಬಂದಿಯ ಮೊಬೈಲ್‌ಗಳಿಗೆ ಅಳವಡಿಸಲಾಗುತ್ತದೆ. ಬೀಟ್‌ನ ನಿಗದಿತ ಪಾಯಿಂಟ್‌ಗೆ ತೆರಳುವ ಪೊಲೀಸ್ ಸಿಬ್ಬಂದಿ ನಿರ್ದಿಷ್ಟ ಪ್ರದೇಶದಲ್ಲಿ ನಿಂತು ಆ್ಯಪ್ ಆನ್ ಮಾಡಬೇಕು. ಒಂದು ವೇಳೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದರೆ, ಸ್ಥಳಕ್ಕೆ ಭೇಟಿ ನೀಡಿಲ್ಲ ಎಂಬುದು ಪತ್ತೆಯಾಗುತ್ತದೆ. ಇನ್ನು ಈ ಆ್ಯಪ್ ಮೂಲಕವೇ ಸಿಬ್ಬಂದಿ ಬೀಟ್‌ನಲ್ಲಿ ಇದ್ದಾರಾ, ಇಲ್ಲವಾ ಎಂಬುದನ್ನು ಮೇಲಧಿಕಾರಿಗಳು ಖಾತ್ರಿ ಪಡಿಸಿಕೊಳ್ಳಬಹುದು.

ಪತ್ತೆ ಪ್ರಕರಣ: ವಿಜಯನಗರ ಪೊಲೀಸ್ ಠಾಣೆ ವ್ಯಾಪ್ತಿಯ ಮನೆಕಳ್ಳತನ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜುಲೈ ೧೮ರಂದು ಮೈಸೂರು ನಗರ ಸಿಟಿ ಬಸ್ ನಿಲ್ದಾಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಲಾಗಿತ್ತು. ಆರೋಪಿಯು ತನ್ನ ಇನ್ನಿಬ್ಬರು ಸಹಚರರ ಜತೆ ಮೈಸೂರು ನಗರ, ಮೈಸೂರು, ಮಂಡ್ಯ ಹಾಗೂ ಬೆಂಗಳೂರು ಜಿಲ್ಲೆಗಳಲ್ಲಿ ಮನೆ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದನು.

ಈ ಇಬ್ಬರು ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಒಟ್ಟು ೯ ಮನೆ ಕಳ್ಳತನ ಪ್ರಕರಣಗಳಿಗೆ ಸಂಬಂಧಪಟ್ಟಂತೆ, ೧೦.೧೫ ಲಕ್ಷ ರೂ. ಮೌಲ್ಯದ ೧೯೧ ಗ್ರಾಂ ತೂಕದ ಚಿನ್ನಾಭರಣ, ೮.೩೩೦ ಗ್ರಾಂ ತೂಕದ ಬೆಳ್ಳಿ ಪದಾರ್ಥಗಳು, ಏರ್ ಗನ್ ವಶಪಡಿಸಿಕೊಳ್ಳಲಾಗಿತ್ತು. ಈ ಪ್ರಕರಣದಿಂದ ವಿಜಯನಗರ ಠಾಣೆ, ಮೇಟಗಳ್ಳಿ ಠಾಣೆ, ಕೆಆರ್‌ಎಸ್ ಠಾಣೆ, ಬೆಂಗಳೂರಿನ ಕುಂಬಳಗೋಡು ಠಾಣೆಯ ತಲಾ ೧ ಪ್ರಕರಣ. ಇಲವಾಲ ಠಾಣೆಯ ೨, ಮೈಸೂರು ದಕ್ಷಿಣ ಠಾಣೆಗೆ ಸಂಬಂಧಿಸಿದ ೩ ಪ್ರಕರಣಗಳು ಪತ್ತೆಯಾದಂತಾಗಿವೆ.

ಹೆಚ್ಚಿನ ಪ್ರಕರಣಗಳು ಎಲ್ಲಿ : ಪ್ರಸ್ತಕ ವರ್ಷ ಜುಲೈವರೆಗೂ ೫೬ ಮನೆ ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ ೧೬ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಶೇ.೫೦ರಷ್ಟು ಕುವೆಂಪುನಗರ, ವಿಜಯನಗರ, ಮೇಟಗಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎನ್ನುತ್ತವೆ ಪೊಲೀಸ್ ಮೂಲಗಳು.

ಮೈಸೂರಿನಲ್ಲಿ ಅತ್ಯುತ್ತಮವಾದ ಸ್ಮಾರ್ಟ್ ಇ-ಬೀಟ್ ವ್ಯವಸ್ಥೆ ಇದೆ. ಬೀಟ್ ಸಿಬ್ಬಂದಿ ಎಲ್ಲಿ ಹೋಗುತ್ತಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದು ಗೊತ್ತಾಗುತ್ತದೆ. ಈ ಸಂಬಂಧ ಬೀಟ್ ಕಮಿಟಿ ಮಾಡಲಾಗಿದೆ. ನಗರದಲ್ಲಿ ಬೀಟ್ ವ್ಯವಸ್ಥೆ ಮೊದಲಿಗಿಂತಲೂ ಉತ್ತಮವಾಗಿದೆ. ಮನೆಗೆ ಬೀಗ ಹಾಕಿಕೊಂಡು ಬೇರೆ ಊರುಗಳಿಗೆ ಹೋಗುವವರು ತಮ್ಮ ವ್ಯಾಪ್ತಿಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು. ಸಹಾಯವಾಣಿ ೧೧೨ಕ್ಕೆ ಕರೆ ಮಾಡಿಯೂ ಮಾಹಿತಿ ನೀಡಬಹುದು.  -ಡಾ.ಚಂದ್ರಗುಪ್ತ, ನಗರ ಪೊಲೀಸ್ ಆಯುಕ್ತ, ಮೈಸೂರು

andolana

Recent Posts

ರಾಜ್ಯದ 50 ವರ್ಷಗಳ ಹಳೆಯ ಎಲ್ಲಾ ಡ್ಯಾಂ ಗೇಟ್‌ ಬದಲಾವಣೆಗೆ ನಿರ್ಧಾರ: ಡಿಸಿಎಂ ಡಿ.ಕೆ.ಶಿವಕುಮಾರ್‌

ಬೆಂಗಳೂರು: ರಾಜ್ಯದಲ್ಲಿ ಇರುವ 50 ವರ್ಷ ಹಳೆಯ ಎಲ್ಲಾ ಜಲಾಶಯಗಳ ಗೇಟ್‌ಗಳನ್ನು ಬದಲಾವಣೆ ಮಾಡಲು ನಮ್ಮ ಸರ್ಕಾರ ನಿರ್ಧಾರ ಮಾಡಿದೆ…

5 hours ago

ಗೃಹ ಬಳಕೆ ಗ್ಯಾಸ್‌ ಸಿಲಿಂಡರ್‌ಗೆ ಸಮಸ್ಯೆ ಇಲ್ಲ: ಸಚಿವ ಮುನಿಯಪ್ಪ

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಗ್ಯಾಸ್‌ ಸಿಲಿಂಡರ್‌ ಕೊರತೆ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಆಹಾರ ಇಲಾಖೆ ಸಚಿವ ಮುನಿಯಪ್ಪ ಪ್ರತಿಕ್ರಿಯೆ…

5 hours ago

ಗುಂಡ್ಲುಪೇಟೆ: ಬರಗಿ ಗ್ರಾಮದಲ್ಲಿ ದೇವಸ್ಥಾನದ ಬಾಗಿಲು ಮುರಿದು ದೇವರನ್ನೇ ಹೊತ್ತೋಯ್ದ ಕಳ್ಳರು

ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು  ಗುಂಡ್ಲುಪೇಟೆ: ತಾಲ್ಲೂಕಿನಾದ್ಯಂತ ಗ್ರಾಮೀಣ ಭಾಗದ ದೇವಸ್ಥಾನಗಳ ಕಳ್ಳತನ ಪ್ರಕರಣ ಸಂಖ್ಯೆ ದಿನದಿಂದ ದಿನಕ್ಕೆ…

5 hours ago

ನಮ್‌ ಜೀವನ ನಮ್ದಲ್ಲಾ.? ಕನ್ನಡದಲ್ಲೇ ಪೋಸ್ಟ್‌ ಹಾಕಿದ ರಶ್ಮಿಕಾ ಮಂದಣ್ಣ

ವಿವಾಹದ ಬಳಿಕ ಭಾರೀ ಸುದ್ದಿಯಲ್ಲಿರುವ ನಟಿ ರಶ್ಮಿಕಾ ಮಂದಣ್ಣ ಅವರು ಕನ್ನಡದಲ್ಲಿಯೇ ಪೋಸ್ಟ್‌ ಒಂದನ್ನು ಹಾಕಿದ್ದಾರೆ. ಇಲ್ಲಿ ತನಕ ನನಗೆ…

5 hours ago

ಅನೈತಿಕ ಸಂಬಂಧ; ಜೋಡಿ ಕೊಲೆ: ಮಹಿಳೆ ಸೋದರನಿಂದಲೇ ಕೃತ್ಯ

ಮಡಿಕೇರಿ: ಅನೈತಿಕ ಸಂಬಂಧ ಹಿನ್ನೆಲೆ ಸಹೋದರಿ ಹಾಗೂ ಆಕೆಯ ಜೊತೆ ಸಹ ಜೀವನ ನಡೆಸುತ್ತಿದ್ದ ವ್ಯಕ್ತಿಯನ್ನು ೭೦ ವರ್ಷದ ವೃದ್ಧ…

5 hours ago

ಬಿಕ್ಲು ಶಿವ ಕೊಲೆ ಪ್ರಕರಣ: ಶಾಸಕ ಭೈರತಿ ಬಸವರಾಜುಗೆ ಜಾಮೀನು ಮಂಜೂರು

ಬೆಂಗಳೂರು: ರೌಡಿಶೀಟರ್‌ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಬಿಜೆಪಿ ಶಾಸಕ ಭೈರತಿ ಬಸವರಾಜುಗೆ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ಕೋರ್ಟ್‌ ಜಾಮೀನು…

6 hours ago