ಕೆಟ್ಟು ವಾರಗಳೇ ಕಳೆದರೂ ದುರಸ್ತಿ ಮಾಡಲು ಮುಂದಾಗದ ಅಧಿಕಾರಿಗಳ ವಿರುದ್ಧ ಆಕ್ರೋಶ
ಯೋಗಾನಂದ
ಹುಣಸೂರು: ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ವಾರಗಳೇ ಕಳೆದರೂ ದುರಸ್ತಿ ಮಾಡಿಸದೆ ಶುದ್ಧ ಕುಡಿಯುವ ನೀರನ್ನೇ ಅವಲಂಬಿಸಿ ಜನ ಪರಿತಪಿಸುವಂತಾಗಿದೆ.
ತಾಲ್ಲೂಕಿನ ಗಾವಡಗೆರೆ ಗ್ರಾಮದಲ್ಲಿ ೩ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಹುಣಸೂರು-ಕೆ.ಆರ್.ನಗರ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಘಟಕವು ನಿರ್ವಹಣೆ ಸರಿ ಇಲ್ಲದೆ ಪಾಚಿಕಟ್ಟಿದೆ. ಆದರೆ, ಜನರು ಅನಿವಾರ್ಯವಾಗಿ ಅಲ್ಲಿನ ನೀರನ್ನೇ ಬಳಸಬೇಕಿದೆ. ಮತ್ತೊಂದು ಪಂಚಾಯಿತಿ ಕಚೇರಿ ಪಕ್ಕದಲ್ಲೆ ಇರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಕೆಲವು ದಿನಗಳು ಕಳೆದರೂ ಸಂಬಂಧಿಸಿದ ಯಾವ ಅಧಿಕಾರಿಗಳಾಗಲಿ, ಯಾವ ಜನಪ್ರತಿನಿಧಿಗಳಾಗಲಿ ಗಮನ ಕೊಡದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.
ಈ ಘಟಕದಲ್ಲಿ ನೀರು ತೆಗೆದುಕೊಂಡು ಹೋಗುವ ಜನರು ಬೇರೆ ಘಟಕಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪಂಚಾಯಿತಿ ಹತ್ತಿರ ಇರುವ ಘಟಕ ಗ್ರಾಮಕ್ಕೆ ಮಧ್ಯಭಾಗದಲ್ಲಿದ್ದು ಬೇಗ ರಿಪೇರಿ ಮಾಡಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಹತ್ತಿರ ಇರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಪ್ರತಿ ದಿನ ೧೫೦-೨೦೦ ಕ್ಯಾನ್ ನೀರು ಹೋಗುತ್ತಿತ್ತು. ಆದರೆ ಅದು ಕೆಟ್ಟ ನಂತರ ಜನರಿಗೆ ಶುದ್ಧ ನೀರು ಸಿಗುವುದು ಕಷ್ಟವಾಗಿದೆ. ಪ್ರತಿಯೊಬ್ಬರೂ q ಶುದ್ದ ನೀರು ಕುಡಿಯಬೇಕು ಎಂಬುದು ಸರ್ಕಾರದ ಉದ್ದೇಶ. ಈ ಘಟಕದ ಜವಾಬ್ದಾರಿ ಹೊತ್ತ ಸಂಸ್ಥೆಯವರು ಸರಿಯಾಗಿ ನಿರ್ವಹಣೆ ಮಾಡಿ ಜನರಿಗೆ ನೀರಿಗೆ ನೀರು ಒದಗಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಪ್ರಮೋದ್ ಘಾಟ್ಕೆ ತಿಳಿಸಿದ್ದಾರೆ.
ಈ ಇಲಾಖೆಯವರು ನಮಗೆ ಜವಾಬ್ದಾರಿ ಕೊಟ್ಟಿಲ್ಲ. ಆದರೆ ಜನರ ಹಿತದೃಷ್ಟಿಯಿಂದ ರಿಪೇರಿ ಮಾಡಿಸುತ್ತಿದ್ದೇವೆ. ಇತ್ತೀಚೆಗೆ ೨ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿದ್ದು, ಡಬಲ್ ಟ್ಯಾಂಕ್ ಹತ್ತಿರ ದುರಸ್ತಿ ಮಾಡಿಸಲಾಗಿದೆ. ಈ ಘಟಕವನ್ನೂ ಮೆಕಾನಿಕ್‌ಗೆ ರಿಪೇರಿ ಮಾಡಲು ತಿಳಿಸಿದ್ದೇನೆ.
–ಮಂಜಳ , ಪಿಡಿಒ
ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆಗೆ ಟೆಂಡರ್ ಆಗಿದ್ದು, ಅವರು ಬೇರೆ ಏಜೆನ್ಸಿಗೆ ನೀಡುತ್ತಾರೆ. ಆದರೆ ಈ ಘಟಕಗಳ ಜವಾಬ್ದಾರಿ ನಮ್ಮ ಇಲಾಖೆೆಯು ನೋಡಿಕೊಳ್ಳುತ್ತಿದ್ದು, ರಿಪೇರಿ ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ.
–ಮಹೇಶ್, ಎಇಇ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ.
ಸಂತೋಷ ಕೌಲಗಿ ಒಬ್ಬ ವ್ಯಕ್ತಿಯ ಜೀವನದಲ್ಲಿ ಅವನ ತಂದೆಯ ಪಾತ್ರ ಬಹಳ ದೊಡ್ಡದು. ಒಬ್ಬ ಆದರ್ಶ ಮನೋಭಾವದ, ಮಕ್ಕಳನ್ನು ಸಮಾನವಾಗಿ…
ನಾನು ಇಂಗ್ಲೆಂಡಿಗೆ ಹೋದ ಎರಡನೆಯ ವರ್ಷದ ಕೊನೆಯಲ್ಲಿ ನನಗೆ ಇಬ್ಬರು ಥಿಯಾಸಫಿಸ್ಟರ ಪರಿಚಯವಾಯಿತು. ಅವರಿಬ್ಬರೂ ಅಣ್ಣ ತಮ್ಮಂದಿರು ಮತ್ತು ಅವಿವಾಹಿತರು.…
ಹಳೆಯ ನೆನಪು, ಹೊಸ ತಂತ್ರಜ್ಞಾನ ೧೯೭೦-೮೦ರ ದಶಕದ ರೂಪದಲ್ಲಿ ಹೊಸ ತಲೆಮಾರು -ಡಾ.ಎಂ.ಲೋಕೇಶ ಒಮ್ಮೆ ಯೋಚಿಸಿ ನೋಡಿ... ಇಂದು ತೆಗೆದ…
ಜಾತಿ ಯಾವುದು?" - ಒಂದು ಪ್ರಶ್ನೆಯ ಹಿಂದೆ ಅಡಗಿರುವ ಮನಸ್ಥಿತಿ ಟಿ.ಕೆ.ಹರೀಶ್ ನೀವು ಯಾವ ಜಾತಿ?... ಪರಿಚಯವಾದ ಕೆಲವೇ ಕ್ಷಣಗಳಲ್ಲಿ…
ಸೆಪ್ಟೆಂಬರ್ ೪, ೫, ೬ ರಂದು ಅಮೆರಿಕಾದ ಫಿಲಡೆಲಿಯಾದಲ್ಲಿ ನಡೆದ ‘ಅಕ್ಕ’ ಸಮ್ಮೇಳನದಲ್ಲೂ ಕನ್ನಡಿಗರ ಹೆಮ್ಮೆ ನಂದಿನಿ ಅಂಗಡಿ ಇದ್ದದ್ದು…