ಜಿಲ್ಲೆಗಳು

ದುರಸ್ತಿಯಾಗದ ಕುಡಿಯುವ ನೀರಿನ ಘಟಕ

ಕೆಟ್ಟು ವಾರಗಳೇ ಕಳೆದರೂ ದುರಸ್ತಿ ಮಾಡಲು ಮುಂದಾಗದ ಅಧಿಕಾರಿಗಳ ವಿರುದ್ಧ ಆಕ್ರೋಶ

ಯೋಗಾನಂದ

ಹುಣಸೂರು: ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ವಾರಗಳೇ ಕಳೆದರೂ ದುರಸ್ತಿ ಮಾಡಿಸದೆ ಶುದ್ಧ ಕುಡಿಯುವ ನೀರನ್ನೇ ಅವಲಂಬಿಸಿ ಜನ ಪರಿತಪಿಸುವಂತಾಗಿದೆ.
ತಾಲ್ಲೂಕಿನ ಗಾವಡಗೆರೆ ಗ್ರಾಮದಲ್ಲಿ ೩ ಶುದ್ಧ ಕುಡಿಯುವ ನೀರಿನ ಘಟಕಗಳಿದ್ದು, ಹುಣಸೂರು-ಕೆ.ಆರ್.ನಗರ ಮುಖ್ಯ ರಸ್ತೆಯ ಪಕ್ಕದಲ್ಲಿರುವ ಘಟಕವು ನಿರ್ವಹಣೆ ಸರಿ ಇಲ್ಲದೆ ಪಾಚಿಕಟ್ಟಿದೆ. ಆದರೆ, ಜನರು ಅನಿವಾರ್ಯವಾಗಿ ಅಲ್ಲಿನ ನೀರನ್ನೇ ಬಳಸಬೇಕಿದೆ. ಮತ್ತೊಂದು ಪಂಚಾಯಿತಿ ಕಚೇರಿ ಪಕ್ಕದಲ್ಲೆ ಇರುವ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟು ಕೆಲವು ದಿನಗಳು ಕಳೆದರೂ ಸಂಬಂಧಿಸಿದ ಯಾವ ಅಧಿಕಾರಿಗಳಾಗಲಿ, ಯಾವ ಜನಪ್ರತಿನಿಧಿಗಳಾಗಲಿ ಗಮನ ಕೊಡದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಈ ಘಟಕದಲ್ಲಿ ನೀರು ತೆಗೆದುಕೊಂಡು ಹೋಗುವ ಜನರು ಬೇರೆ ಘಟಕಗಳನ್ನು ಹುಡುಕುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಪಂಚಾಯಿತಿ ಹತ್ತಿರ ಇರುವ ಘಟಕ ಗ್ರಾಮಕ್ಕೆ ಮಧ್ಯಭಾಗದಲ್ಲಿದ್ದು ಬೇಗ ರಿಪೇರಿ ಮಾಡಿಸಿದರೆ ಎಲ್ಲರಿಗೂ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಗ್ರಾಮ ಪಂಚಾಯಿತಿ ಹತ್ತಿರ ಇರುವ ಶುದ್ಧ ಕುಡಿಯುವ ನೀರಿನ ಘಟಕದಲ್ಲಿ ಪ್ರತಿ ದಿನ ೧೫೦-೨೦೦ ಕ್ಯಾನ್ ನೀರು ಹೋಗುತ್ತಿತ್ತು. ಆದರೆ ಅದು ಕೆಟ್ಟ ನಂತರ ಜನರಿಗೆ ಶುದ್ಧ ನೀರು ಸಿಗುವುದು ಕಷ್ಟವಾಗಿದೆ. ಪ್ರತಿಯೊಬ್ಬರೂ q ಶುದ್ದ ನೀರು ಕುಡಿಯಬೇಕು ಎಂಬುದು ಸರ್ಕಾರದ ಉದ್ದೇಶ. ಈ ಘಟಕದ ಜವಾಬ್ದಾರಿ ಹೊತ್ತ ಸಂಸ್ಥೆಯವರು ಸರಿಯಾಗಿ ನಿರ್ವಹಣೆ ಮಾಡಿ ಜನರಿಗೆ ನೀರಿಗೆ ನೀರು ಒದಗಿಸಬೇಕು ಎಂದು ಗ್ರಾಪಂ ಮಾಜಿ ಸದಸ್ಯ ಪ್ರಮೋದ್ ಘಾಟ್ಕೆ ತಿಳಿಸಿದ್ದಾರೆ.


ಈ ಇಲಾಖೆಯವರು ನಮಗೆ ಜವಾಬ್ದಾರಿ ಕೊಟ್ಟಿಲ್ಲ. ಆದರೆ ಜನರ ಹಿತದೃಷ್ಟಿಯಿಂದ ರಿಪೇರಿ ಮಾಡಿಸುತ್ತಿದ್ದೇವೆ. ಇತ್ತೀಚೆಗೆ ೨ ಶುದ್ಧ ಕುಡಿಯುವ ನೀರಿನ ಘಟಕ ಕೆಟ್ಟಿದ್ದು, ಡಬಲ್ ಟ್ಯಾಂಕ್ ಹತ್ತಿರ ದುರಸ್ತಿ ಮಾಡಿಸಲಾಗಿದೆ. ಈ ಘಟಕವನ್ನೂ ಮೆಕಾನಿಕ್‌ಗೆ ರಿಪೇರಿ ಮಾಡಲು ತಿಳಿಸಿದ್ದೇನೆ.

ಮಂಜಳ , ಪಿಡಿಒ


ಶುದ್ಧ ಕುಡಿಯುವ ನೀರಿನ ಘಟಕ ನಿರ್ವಹಣೆಗೆ ಟೆಂಡರ್ ಆಗಿದ್ದು, ಅವರು ಬೇರೆ ಏಜೆನ್ಸಿಗೆ ನೀಡುತ್ತಾರೆ. ಆದರೆ ಈ ಘಟಕಗಳ ಜವಾಬ್ದಾರಿ ನಮ್ಮ ಇಲಾಖೆೆಯು ನೋಡಿಕೊಳ್ಳುತ್ತಿದ್ದು, ರಿಪೇರಿ ಮಾಡಿಸಲು ಕ್ರಮ ಕೈಗೊಳ್ಳುತ್ತೇನೆ.

ಮಹೇಶ್, ಎಇಇ, ಗ್ರಾಮೀಣ ಕುಡಿಯುವ ನೀರು ನೈರ್ಮಲ್ಯ ವಿಭಾಗ.

andolanait

Recent Posts

ವಿಭಿನ್ನ ಓದಿಗೆ ಆಹ್ವಾನಿಸುವುದೇ ಉತ್ತಮ ಸಾಹಿತ್ಯ

`ಹೊಸ ತಲೆಮಾರಿನ ಸಾಹಿತ್ಯ' ಕುರಿತ ವಿಚಾರಗೋಷ್ಠಿಯಲ್ಲಿ ವಿಮರ್ಶಕ ವಿಕ್ರಂ ವಿಸಾಜಿ ಅಭಿಮತ • ಜಿ.ತಂಗಂ ಗೋಪಿನಾಥಂ ಮಂಡ್ಯ: ಹೊಸ ತಲೆಮಾರಿನ…

1 min ago

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

10 hours ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

11 hours ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

11 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

12 hours ago