ಜಿಲ್ಲೆಗಳು

ದೀಪಾವಳಿ; ಶಬ್ದ, ವಾಯು ಮಾಲಿನ್ಯ ಹೆಚ್ಚಳ

ಮೈಸೂರು: ದೀಪಾವಳಿ ಹಬ್ಬದ ಸಂದರ್ಭದಲ್ಲಿ ಮೈಸೂರು ನಗರದಲ್ಲಿ ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಲ್ಲಿ ಕೊಂಚ ಹೆಚ್ಚಳವಾಗಿದೆ.

ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ ಅಳೆಯಲು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿ ವತಿಯಿಂದ ಮೈಸೂರಿನ ಹೆಬ್ಬಾಳ್‌ನಲ್ಲಿರುವ ಮಂಡಳಿಯ ಕಚೇರಿ ಆವರಣ ಹಾಗೂ ನಗರದ ಹೃದಯ ಭಾಗವಾದ ಕೆ.ಆರ್.ವೃತ್ತದ ಬಳಿ ಮಾಪನ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಈ ಎರಡೂ ಮಾಪನ ಕೇಂದ್ರಗಳಲ್ಲಿ ದೀಪಾವಳಿ ಹಬ್ಬದ ಪೂರ್ವದಲ್ಲಿ ಅ.೧೮ರಂದು ಮತ್ತು ದೀಪಾವಳಿ ಹಬ್ಬದ ವೇಳೆ ನ.೨೪ ರಿಂದ ೨೬ರವರೆಗೆ ಮೂರು ದಿನಗಳ ಕಾಲ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯವನ್ನು ಅಳೆಯಲಾಗಿದೆ.

ಹೆಬ್ಬಾಳ್ ಮಾಪನ ಕೇಂದ್ರದಲ್ಲಿ ದೀಪಾವಳಿ ಹಬ್ಬದ ಪೂರ್ವದಲ್ಲಿ ೨೦೨೧ರಲ್ಲಿ ವಾಯು ಮಾಲಿನ್ಯ ಪ್ರಮಾಣ ೩೪ ಪಾಯಿಂಟ್ ದಾಖಲಾಗಿದ್ದರೆ, ಹಬ್ಬದ ಮೂರು ದಿನಗಳ ಕಾಲ ೩೫, ೫೩ ಹಾಗೂ ೭೨ ಪಾಯಿಂಟ್ ದಾಖಲಾಗಿತ್ತು. ಈ ವರ್ಷ ಹಬ್ಬದ ಪೂರ್ವದಲ್ಲಿ ೪೪ ಪಾಯಿಂಟ್ ಇದ್ದ ಮಾಲಿನ್ಯದ ಪ್ರಮಾಣ ಹಬ್ಬದ ಮೂರು ದಿನಗಳಲ್ಲಿ ಕ್ರಮವಾಗಿ ೬೪, ೭೧ ಹಾಗೂ ಹಬ್ಬದ ದಿನ ಗರಿಷ್ಠ ೧೧೭ ಪಾಯಿಂಟ್ ಮಾಲಿನ್ಯ ಪ್ರಮಾಣ ದಾಖಲಾಗಿದೆ.

ಶಬ್ದ ಮಾಲಿನ್ಯ ೨೦೨೧ರಲ್ಲಿ ದೀಪಾವಳಿ ಹಬ್ಬದ ಪೂರ್ವದಲ್ಲಿ ೬೬ ಪಾಯಿಂಟ್ ದಾಖಲಾಗಿದ್ದರೆ, ಹಬ್ಬದ ಮೂರು ದಿನಗಳಲ್ಲಿ ೬೫, ೬೪ ಹಾಗೂ ೬೯ ಪಾಯಿಂಟ್, ಈ ವರ್ಷ ಹಬ್ಬದ ಪೂರ್ವ ಅ.೧೮ರಂದು ೬೧ ಪಾಯಿಂಟ್ ಇದ್ದ ಮಾಲಿನ್ಯ ಪ್ರಮಾಣ ಹಬ್ಬದ ಮೂರು ದಿನಗಳಲ್ಲಿ ೬೫ ಮತ್ತು ಮೂರನೇ ದಿನ ೭೪ ಪಾಯಿಂಟ್ ದಾಖಲಾಗಿದೆ.

ಮೂರು ದಿನಗಳ ದೀಪಾವಳಿ ಹಬ್ಬದ ಸಂದರ್ಭದಲ್ಲಿ ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯದಲ್ಲಿ ಮೈಸೂರು ರಾಜ್ಯದಲ್ಲಿ ೧೯ನೇ ಸ್ಥಾನದಲ್ಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಶಬ್ದ ಮಾಲಿನ್ಯ ಶೇ.೧೬.೫ರಷ್ಟಿದೆ, ವಾಯು ಮಾಲಿನ್ಯ ಶೇ.೫೩ರಷ್ಟು ಹೆಚ್ಚಳವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಗಣೇಶ್ ತಿಳಿಸಿದ್ದಾರೆ.

 

 

 

 

andolana

Recent Posts

ಶಿವಾಜಿ ಗಣೇಶನ್‌ ಅವರ ವಾರದ ಅಂಕಣ: ಬಿಹಾರದಲ್ಲಿ ನಿತೀಶ್ ಕುಮಾರ್ ಆಡಳಿತಕ್ಕೆ ಎಳ್ಳುನೀರು

ಬಿಹಾರ ವಿಧಾನಸಭೆಗೆ ಚುನಾವಣೆ ನಡೆದು ಮೂರೂವರೆ ತಿಂಗಳಾಗುವಷ್ಟರಲ್ಲಿ ಮತ್ತೆ ಮುಖ್ಯಮಂತ್ರಿ ಬದಲಾವಣೆಗೆ ಏಕಿಷ್ಟು ಆತುರ? ಏನು ಕಾರಣ ಎನ್ನುವುದಕ್ಕೆಲ್ಲ ಉತ್ತರ…

2 hours ago

ಕೊಡಗಿನಲ್ಲಿ ಜೀತ ಪದ್ಧತಿ ಇನ್ನೂ ಜೀವಂತ

ಕೃಷ್ಣ ಸಿದ್ದಾಪುರ ತೋಟದ ಮಾಲೀಕನ ದೌರ್ಜನ್ಯಕ್ಕೆ ತುತ್ತಾದ ೮ ಕುಟುಂಬಗಳ ೨೬ ಮಂದಿ ರಕ್ಷಣೆ; ಸಾಬೀತಾಗದ ಆರೋಪ  ಸಿದ್ದಾಪುರ: ವ್ಯವಸ್ಥೆಯಲ್ಲಿ ಶತಮಾನಗಳಿಂದ…

2 hours ago

ಹನೂರು: ಗ್ರಾಮದೇವತೆ ಬೆಟ್ಟಳ್ಳಿ ಮಾರಮ್ಮ ಜಾತ್ರೆಗೆ ಸಿದ್ಧತೆ

ಮಹಾದೇಶ್‌ ಎಂ ಗೌಡ  ಮಾ.೯ರಿಂದ ೫ ದಿನಗಳ ಕಾಲ ನಡೆಯಲಿರುವ ಹಬ್ಬ; ಸಾವಿರಾರು ಜನರು ಸೇರುವ ನಿರೀಕ್ಷೆ ಹನೂರು: ಪಟ್ಟಣದ…

2 hours ago

ಮಹಿಳಾ ದಿನದಂದು ಮಹಾರಾಣಿ ವಾಣಿವಿಲಾಸ ಸ್ಮರಣೆ

ಸಿರಿ ಮೈಸೂರು ಮೈಸೂರಿನ ನ್ಯಾಯಾಲಯದ ಮುಂಭಾಗದಿಂದ ಮಾಧವ ರಾವ್ ವೃತ್ತದವರೆಗೂ (ಅಗ್ರಹಾರ ವೃತ್ತ) ಇರುವ ರಸ್ತೆಯನ್ನು ವಾಣಿವಿಲಾಸ ರಸ್ತೆ ಎಂದು…

2 hours ago

ಊರ ಕಾಯುವ ಹೆಣ್ಣು ದೇವಿಯರು ನಮ್ಮನ್ನು ಪೊರೆಯುವ ಸ್ತ್ರೀ ಚೈತನ್ಯದ ಕಥೆ ಹೇಳುವರು

ರಾಧಾ ಆದಿಕಾಲದಿಂದ ಮಾನವರನ್ನು ಮೂಕವಿಸ್ಮಿತನನ್ನಾಗಿ ಮಾಡುತ್ತಾ ಬಂದ ವಿಚಿತ್ರಮಯ ಜಗತ್ ಸೃಷ್ಟಿ ಅವರ ಪಾಲಿಗೆ ಬಿಡಿಸಲಾರದ ಒಗಟು. ಆದಿಮಾನವರಿಗಂತೂ, ಭೂಮ್ಯಾಕಾಶಗಳಲ್ಲಿ…

2 hours ago

ಯಾಕೆ ಇವತ್ತಿನ ಈ ಮಹಿಳಾ ದಿನ?

ಸುಕನ್ಯಾ ಕನಾರಳ್ಳಿ ಹೆಣ್ಣು ನಿಮ್ಮ ಆಸ್ತಿಗೆ ವಾರಸುದಾರರನ್ನ ಹುಟ್ಟಿಸುವ ಕೇವಲ ಗರ್ಭ ಅಲ್ಲ, ಅವಳೊಬ್ಬ ಪ್ರಜೆ, ಅಂತ ಸಾರಿ ಸಾರಿ…

2 hours ago