ಮೈಸೂರು : ಟ್ವಿಲೈಟ್ ವಿಸ್ಪರ್ಸ ಆಫ್ ಹಂಪಿ ಛಾಯಾಚಿತ್ರ ಪ್ರದರ್ಶನವನ್ನು ಜಿಲ್ಲಾಧಿಕಾರಿ ಡಾ.ರಾಜೇಂದ್ರ.ಕೆ.ವಿ ಉದ್ಘಾಟನೆ ನೀಡಿದರು.
ನಗರದ ಕಾಫಿ ಸಿಟಿಯ ನೆರಳು ಬೆಳಕು ಗ್ಯಾಲರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮವನ್ನು ಉಸ್ಗಾಟನೆ ಮಾಡಿ ಮಾತನಾಡಿದ ಅವರು, ಹಂಪಿಯ ಮತ್ತು ಮೈಸೂರಿನ ಸಾಂಸ್ಕೃತಿಕ ಸಂಬಂಧ ನೆನೆಯುತ್ತಾ ಶಿವಶಂಕರ್ ಬಣಗಾರ್ ಅವರ ಚಿತ್ರಗಳು ಹಂಪಿಯ ಸ್ಮಾರಕಗಳನ್ನು ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯವಾಗಿ ತಲುಪಿಸಲು ಹಾಗೂ ಪ್ರವಾಸಿಗರನ್ನು ಸೆಳೆಯಲು ಯಶಸ್ವಿಯಾಗಿವೆ ಎಂದರು.
ಇದರಿಂದ ಸ್ಥಳೀಯ ಆರ್ಥಿಕ ವಹಿವಾಟಿಗೂ ಸಹಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟರು. ಛಾಯಾಗ್ರಾಹಕರನ್ನು ಉತ್ತೇಜಿಸುವ ಮೂಲಕ ಅವರಲ್ಲಿನ ಕ್ರಿಯಾಶೀಲತೆಯನ್ನು ಪ್ರೊತ್ಸಾಹಿಸಿ ಅದರ ಲಾಭವನ್ನು ಸಮಾಜಕ್ಕೆ ಸಲ್ಲಿಸುವಲ್ಲಿ ಆಡಳಿತದ ನೆರವು ಅಗತ್ಯ. ದಸರಾವನ್ನು ಕೂಡ ಈ ನಿಟ್ಟಿನಲ್ಲಿ ಮುಂದೆ ಯೋಚಿಸಲಾಗುವುದು ಎಂದರು.
ಶಿವಶಂಕರ್ ಬಣಗಾರ್ ಅವರು ನನ್ನ ನೆಚ್ಚಿನ ಛಾಯಾಗ್ರಾಹಕರು, ನಾನು ಅವರ ಚಿತ್ರಗಳನ್ನು ನಿರಂತರವಾಗಿ ನೋಡಿ ಆನಂದಿಸಿರುವೆ. ಕಲಾವಿದರ ಚಿತ್ರಗಳನ್ನು ಕೊಳ್ಳುವ ಮೂಲಕ ಸಮಾಜ ಪ್ರೊತ್ಸಾಹಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಬಣಗಾರ್ ಅವರ ಒಂದು ಚಿತ್ರವನ್ನು ಜಿಲ್ಲಾಧಿಕಾರಿ ಖರೀದಿಸಿದರು. ಬಳಿಕ ಬಣಗಾರ್ ಅವರ ಚಿತ್ರಗಳನ್ನೊಳಗೊಂಡ ಕ್ಯಾಲೆಂಡರ್ ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಗೌರೀಶ್ ಕಪನಿ, ಜಿಕೆ ಕುಲಕರ್ಣಿ, ರಾಜಶೇಖರ ಜಮದಂಡಿ ಮತ್ತು ರಿಶಬ್ ವೆಂಚುರ್ಸ್ ಸಿಇಓ ಮಧು ಬಳ್ಳಾಕಿ ಅವರು ಉಪಸ್ಥಿತರಿದ್ದರು.
ಟ್ವಿಲೈಟ್ ವಿಸ್ಪರ್ಸ ಆಫ್ ಹಂಪಿ ಛಾಯಾಚಿತ್ರ ಪ್ರದರ್ಶನವು ಇಂದಿನಿಂದ ೨೯ ಫೆಬ್ರುವರಿ ೨೦೨೪ರ ಬೆಳಗ್ಗೆ ೯ ರಿಂದ ಸಂಜೆ ೯ರವರೆ ಸಾರ್ವಜನಿಕರ ವೀಕ್ಷಣೆಗೆ ತೆರೆದಿರುತ್ತದೆ ಎಂದು ತಿಳಿಸಿದ್ದಾರೆ.
ಮೈಸೂರು : ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಹೋರಾಟದ ಬದುಕು ಮತ್ತು ಅವರು ಪ್ರತಿಪಾದಿಸಿದ ಸಮಾನತೆಯ ತತ್ವಗಳನ್ನು ಪ್ರತಿಯೊಬ್ಬರೂ ತಮ್ಮ…
ಚಾಮರಾಜನಗರ : ತಾಲ್ಲೂಕಿನ ವಿ.ಸಿ.ಹೊಸೂರು ಗ್ರಾಮಸ್ಥರು ತಮ್ಮ ಊರಿಗೆ ಇನ್ನೂ ಪೂರ್ವ ಮುಂಗಾರು ಮಳೆ ಪ್ರವೇಶ ಆಗದ ಹಿನ್ನೆಲೆಯಲ್ಲಿ ಮಳೆಗಾಗಿ…
ಬೆಂಗಳೂರು : ರಾಜ್ಯದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಪಾರದರ್ಶಕ ನೇಮಕಾತಿ ಮಾಡಬೇಕಾದ ಕರ್ನಾಟಕ ಲೋಕಸೇವಾ ಆಯೋಗ ಅಕ್ರಮಗಳಲ್ಲಿ ಮುಳುಗಿದೆ. ಸರ್ಕಾರ ಒಂದೇ…
ಶ್ರೀರಂಗಪಟ್ಟಣ : ಶ್ರೀರಂಗಪಟ್ಟಣದ ಟೌನ್‌ನಲ್ಲಿ ನಡೆದ ಮುತ್ತು ಮಾರಮ್ಮ ದೇವಿ ಕರಗದ ವೇಳೆ ಕೊಂಡದಲ್ಲಿ ಬಿದ್ದು ಇಬ್ಬರು ಗಾಯಗೊಂಡ ಘಟನೆ…
ಮಂಡ್ಯ : ಆಧುನಿಕ ಜಗತ್ತಿನಲ್ಲಿ ಪುರುಷರ ಮೇಲಿನ ದೌರ್ಜನ್ಯ ಮತ್ತು ದಬ್ಬಾಳಿಗೆ ಹತ್ತಿಕ್ಕಲು ರಾಜ್ಯ ಮಾನವ ಹಕ್ಕುಗಳ ಪುರುಷರ ಹಿತರಕ್ಷಣಾ…
ಬೆಂಗಳೂರು : ಬಾಬಾಸಾಹೇಬ್ ಅಂಬೇಡ್ಕರ್ ಅವರು ನೀಡಿದ ಸಂವಿಧಾನದ ಶಕ್ತಿಯಿಂದಲೇ ನಾನಿಂದು ಮುಖ್ಯಮಂತ್ರಿಯಾಗಿ ಜನಸೇವೆ ಸಲ್ಲಿಸಲು ಸಾಧ್ಯವಾಗಿದೆ ಎಂದು ಮುಖ್ಯಮಂತ್ರಿ…