ಚಾಮರಾಜನಗರ: ನಗರದ ರೋಟರಿ ಭವನದ ಕೊಠಡಿಗಳನ್ನು ಡಯಾಲಿಸಸ್ ಕೇಂದ್ರವನ್ನಾಗಿ ಮಾರ್ಪಾಡು ಮಾಡುವ ಕಾರ್ಯಕ್ಕೆ ಜಿಲ್ಲಾ ಗೌರ್ನರ್ ರೋಟರಿ ಎನ್.ಪ್ರಕಾಶ್ ಕಾರಂತ್ ಮಂಗಳವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ನಗರದಲ್ಲಿ ರೋಟರಿ ಸಂಸ್ಥೆ ವತಿಯಿಂದ ಜನೋಪಯೋಗಿ ಸೇವೆ ಕಾರ್ಯಕ್ರಮಗಳನ್ನು ಮತ್ತಷ್ಟು ವಿಸ್ತರಿಸುವ ಸಲುವಾಗಿ ಸ್ವಂತ ಕಟ್ಟಡ ನಿರ್ಮಾಣ ಮಾಡಲಾಗುವುದು. ಹೆಚ್ಚು ಯಂತ್ರಗಳನ್ನು ಅಳವಡಿಸಲಾಗುವುದು ಎಂದರು.
ರೋಟರಿ ಸಂಸ್ಥೆ ತನ್ನ ೧೦೦ ಸೇವಾ ಕಾರ್ಯಕ್ರಮವಾಗಿ ಡಯಾಲಿಸಿಸ್ ಕೇಂದ್ರ ನಿರ್ಮಾಣ ಕೈಗೊಂಡಿದೆ. ಇದಕ್ಕೆ ಚಾಲನೆ ನೀಡಿದ್ದು ಸಂತಸ ತಂದಿದೆ. ಜಿಲ್ಲೆಯ ಜನರ ಅಗತ್ಯತೆಯನ್ನು ಪೂರೈಸಲಿ ಎಂದು ಆಶಿಸಿದರು.
ಪ್ರಸ್ತುತ ದಿನಗಳಲ್ಲಿ ಡಯಾಲಿಸಿಸ್, ಸಕ್ಕರೆ ಖಾಯಿಲೆ ಸಾಮಾನ್ಯವಾಗಿ ಕಾಣುತ್ತಿವೆೆ. ಇಂತಹ ಸಂದರ್ಭದಲ್ಲಿ ರೋಟರಿ ಸಂಸ್ಥೆಯು ಸ್ವಂತ ಕಟ್ಟಡ ನಿರ್ಮಾಣ ಅತ್ಯಂತ ಪೂರಕವಾಗಿದೆ. ರೋಟರಿ ಆಶಯಗಳನ್ನು ಜನಸಾಮಾನ್ಯರಿಗೆ ಅರಿವು ಮೂಡಿಸುವ ಕೆಲಸ ಮಾಡುತ್ತಿದೆ ಎಂದು ಆಶಿಸಿದರು.
ಈ ಸಂದರ್ಭದಲ್ಲಿ ರೋಟರಿ ಸಹಾಯಕ ಗೌರ್ನರ್ ಡಾ.ಆರ್.ಉಮಾಶಂಕರ, ವಲಯ ಸೇನಾನಿ ರೋ.ಆರ್.ಎಂ.ಸ್ವಾಮಿ, ಸ್ಥಾಪಕರಾದ ಸದಸ್ಯ ಜಿ.ಆರ್.ಅಶ್ವಥ್ ನಾರಾಯಣ್, ಸಿ.ವಿ.ಶ್ರೀನಿವಾಸಶೆಟ್ಟಿ, ರೋಟರಿ ಅಧ್ಯಕ್ಷ ಕೆ.ಎಂ.ಮಹದೇವಸ್ವಾಮಿ, ಕಾರ್ಯದರ್ಶಿ ಕಾಗಲವಾಡಿ ಚಂದ್ರು, ಡಾ.ನಾಗಾರ್ಜನ, ಸ್ವಾಗತ್‌ರಮೇಶ್, ಪ್ರಕಾಶ್, ಸುಭಾಷ್, ರತ್ನಮ್ಮ, ನಾಗಶ್ರೀಪ್ರತಾಪ್, ಕಾಳನಹುಂಡಿ ಗುರುಸ್ವಾಮಿ, ಚಂದ್ರಪ್ರಭ ಜೈನ್, ಸಿದ್ದಮಲ್ಲಪ್ಪ ಎಚ್.ಎಸ್., ಗಂಘಾಧರ್, ಕಾವೇರಿ ಡಯಗ್ನೋಸ್ಟಿಕ್ ಸೆಂಟರ್ ರಾಮು, ಡಿ.ನಾಗರಾಜು, ಕಮಲ್‌ರಾಜ್, ಡೀನಾ ಇತರರಿದ್ದರು.
ಮಂಡ್ಯ : ತಾಲ್ಲೂಕಿನ ಕಚ್ಚಿಗೆರೆ ಗ್ರಾಮದ ದಲಿತ ಮಹಿಳೆ ರಜನಿ ಎಂಬವರ ಮೇಲೆ ಹಲ್ಲೆ ನಡೆಸಿ ದೌರ್ಜನ್ಯ ಎಸಗಿರುವ ಆರೋಪಿಗಳನ್ನು…
ಮೈಸೂರು : ಕೃಷಿ ಪದ್ಧತಿಯಲ್ಲಿ ರಾಸಾಯನಿಕ ಗೊಬ್ಬರದ ಬಳಕೆ ಕಡಿಮೆ ಮಾಡಿ ಹಸಿರೆಲೆ ಹಾಗೂ ಜೈವಿಕ ಗೊಬ್ಬರಗಳನ್ನು ಸರಿಯಾದ ರೀತಿಯಲ್ಲಿ…
ಮೈಸೂರು : ರಂಗಭೂಮಿ ಎಂಬುದು ಧರ್ಮಾತೀತ, ಜಾತ್ಯತೀತ ಅಲ್ಲದೇ ದೇಶಾತೀತ ಎಂದು ಹಿರಿಯ ರಂಗಕರ್ಮಿ ಸಿ.ಬಸವಲಿಂಗಯ್ಯ ಬಣ್ಣಿಸಿದರು. ನಗರದ ಜೆಎಲ್‌ಬಿ…
ಬೆಂಗಳೂರು : ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು 2020 ಹಾಗೂ 2021ನೇ ಸಾಲಿನ ರಾಜ್ಯ ಚಲನಚಿತ್ರ ವಾರ್ಷಿಕ ಸಾಹಿತ್ಯ…
ಬೆಂಗಳೂರು : ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಆರೋಪಿ ಆಗಿರುವ ಪವಿತ್ರಾ ಗೌಡಗೆ ಮನೆಯಿಂದ ಊಟ ತರಿಸಿಕೊಳ್ಳಲು ಅಂತಿಮವಾಗಿ…
ಬೀದರ್: ನಮ್ಮ ತಂದೆ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ವೈದ್ಯರು ಸತತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ್ ಖಂಡ್ರೆ…