ಪ್ರವಾಸಿಗರ ಸ್ವರ್ಗ, ದಕ್ಷಿಣ ಕಾಶ್ಮೀರ ಖ್ಯಾತಿಯ ಕೊಡಗು ಜಿಲ್ಲೆಯಲ್ಲಿ ಮಳೆಯ ಪ್ರವಾಣ ಕಡಿಮೆಯಾಗಿದ್ದು, ಪ್ರವಾಸೋದ್ಯಮ ಚೇತರಿಸಿ ಕೊಳ್ಳುತ್ತಿದೆ. ಏಳು-ಬೀಳುಗಳ ನಡುವೆ ಪ್ರವಾಸೋದ್ಯಮ ಅವಲಂಭಿತರು ಲಾಭದತ್ತ ಮುಖ ವಾಡಿದ್ದಾರೆ. ಪ್ರವಾಸೋದ್ಯಮ ಚೇತರಿಕೆ ಸಂಬಂಧ ಇಂದಿನಿಂದ ‘ಆಂದೋಲನ’ ದಿನಪತ್ರಿಕೆ ಸರಣಿ ವಿಶೇಷ ವರದಿಗಳನ್ನು ಪ್ರಕಟಿಸಲಿದೆ.
ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ನಿರ್ಧಾರ; ಕೊಡಗಿನತ್ತ ಹೆಚ್ಚಿನ ಪ್ರವಾಸಿಗರು ಆಗಮಿಸುವ ನಿರೀಕ್ಷೆ
ನವೀನ್ ಡಿಸೋಜ
ಮಡಿಕೇರಿ: ಪ್ರಕೃತಿ ವಿಕೋಪ, ಕೊರೊನಾ ಸೋಂಕಿನಿಂದ ಸಂಕಷ್ಟದಲ್ಲಿದ್ದ ಕೊಡಗು ಪ್ರವಾಸೋದ್ಯಮ ಚೇತರಿಕೆಯಲ್ಲಿದೆ. ಈ ಬಾರಿ ಅದ್ಧೂರಿ ದಸರಾ ಆಚರಣೆಗೆ ಸಿದ್ಧತೆ ನಡೆದಿದ್ದು, ಚೇತರಿಕೆುಂಲ್ಲಿರುವ ಪ್ರವಾಸೋದ್ಯಮಕ್ಕೆ ಮತ್ತಷ್ಟು ಟಾನಿಕ್ ಒದಗಿಸಲಿದೆ.
೨೦೧೮ರಿಂದ ಪ್ರಕೃತಿ ವಿಕೋಪ ಹಾಗೂ ಕಳೆದ ಎರಡು ವರ್ಷಗಳಿಂದ ಕೊರೊನಾ ಕಾರಣಗಳಿಂದ ಕೊಡಗಿನ ಪ್ರವಾಸೋದ್ಯಮ ನಷ್ಟ ಅನುಭ ವಿಸುವಂತಾಗಿತ್ತು. ಆದರೆ, ಈ ಬಾರಿ ಬೇಸಿಗೆ ರಜೆಯಲ್ಲಿಯೇ ಪ್ರವಾಸೋದ್ಯಮ ಚೇತರಿಕೆ ಕಂಡಿತ್ತು. ಮಳೆಯಿಂದ ಪ್ರವಾಸಿಗರು ಜಿಲ್ಲೆಯತ್ತ ಆಗಮಿಸಲು ಕೊಂಚ ಹಿಂದೇಟು ಹಾಕಿದರೂ ಪ್ರವಾಸೋದ್ಯಮ ಲಾಭದಲ್ಲಿಯೇ ಮುಂದುವರಿದಿತ್ತು. ಈ ನಡುವೆ ಈ ಬಾರಿ ಅದ್ಧೂರಿ ದಸ ರಾ ಆಚರಣೆಗೆ ಸರ್ಕಾರ ಸಿದ್ಧತೆ ನಡೆಸಿರುವುದು ಪ್ರವಾಸೋದ್ಯಮ ಅವಲಂಭಿತರಲ್ಲಿ ಭರವಸೆ ಮೂಡಿಸಿದೆ.
ಮಡಿಕೇರಿ ದಸರಾಕ್ಕೆ ತನ್ನದೇ ಆದ ಇತಿಹಾಸವಿದೆ. ದಸರಾವನ್ನು ಮೈಸೂರು ಸ್ವಾಗತಿಸಿದರೆ ಮಡಿಕೇರಿ ಬೀಳ್ಕೊಡುತ್ತದೆ ಎನ್ನಲಾಗುತ್ತದೆ. ಮೈಸೂರಿನಲ್ಲಿ ಹಗಲು ನಡೆಯುವ ಜಂಬೂ ಸವಾರಿ ಗತ ದಿನಗಳ ರಾಜವೈಭವವನ್ನು ಕಣ್ಮುಂದೆ ತಂದರೆ, ಮಡಿಕೇರಿಯಲ್ಲಿ ರಾತ್ರಿ ನಡೆುುಂ ವ ದಶಮಂಟಪಗಳ ಮೆರವಣಿಗೆ ದೇವಲೋಕಕ್ಕೆ ಕರೆದೊಯ್ಯುತ್ತದೆ. ಹೀಗಾಗಿ ಮೈಸೂರು ದಸರಾ ನೋಡಿಕೊಂಡು ಕೊಡಗಿನತ್ತ ಹೆಚ್ಚಿನ ಪ್ರವಾಸಿಗರು ಭೇಟಿ ನೀಡುತ್ತಾರೆ.
ಈ ಬಾರಿ ಮಡಿಕೇರಿ ದಸರಾಕ್ಕೆ ೧ ಕೋಟಿ ರೂ. ಅನುದಾನವನ್ನು ರಾಜ್ಯ ಸರ್ಕಾರ ಮಂಜೂರು ವಾಡಿದೆ. ಹೀಗಾಗಿ ವಿಜೃಂಭಣೆಯಿಂದ ದಸರಾ ಆಚರಿಸಲು ದಸರಾ ಸಮಿತಿ ಹಾಗೂ ದಶಮಂಟಪ ಸಮಿತಿಗಳು ನಿರ್ಧರಿಸಿವೆ. ಅದ್ಧೂರಿ ದಸರಾ ಆಚರಣೆ ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲಿದೆ.
ಚಲನವಲನಗಳನ್ನು ಒಳಗೊಂಡ ಕಲಾಕೃತಿಗಳ ಕಥಾ ಹಂದರವನ್ನು ಮಂಟಪಗಳಲ್ಲಿ ಅಳವಡಿಸಿ ನೋಡುಗರನ್ನು ಸೆಳೆಯಲು ದಶ ಮಂಟಪಗಳು ನಿರ್ಧರಿಸಿವೆ. ವಿಜಯದಶಮಿ ದಿನ ರಾತ್ರಿ ಮಡಿಕೇರಿ ನಗರದ ಪ್ರಮುಖ ಬೀದಿಗಳಲ್ಲಿ ನಡೆಯಲಿರುವ ಮಂಟಪಗಳ ಶೋಭಾ ಯಾತ್ರೆ ವೀಕ್ಷಿಸಲು ಜಿಲ್ಲೆಯ ಜನರೇ ಸಾವಿರಾರು ಸಂಖ್ಯೆಯಲ್ಲಿ ಜವಾಯಿಸುತ್ತಾರೆ. ಇದರೊಂದಿಗೆ ಪ್ರವಾಸಿಗರು ಆಗಮಿಸಲಿದ್ದು, ಪ್ರವಾಸಿಗರನ್ನು ಅವಲಂಭಿಸಿರುವ ಉದ್ಯಮಗಳಿಗೆ ಲಾಭವಾಗುವ ನಿರೀಕ್ಷೆ ಹೊಂದಲಾಗಿದೆ.
ಹೊಟೇಲ್, ಹೋಂಸ್ಟೆ, ರೆಸಾರ್ಟ್, ಸ್ಪ್ತ್ಯೈಸಸ್ ಮಳಿಗೆಗಳು ಸೇರಿದಂತೆ ಕೊಡಗಿನ ಆಟೋ, ಟ್ಯಾಕ್ಸಿ ಮತ್ತಿತರ ಉದ್ಯಮಗಳಿಗೂ ಪ್ರವಾಸಿಗರ ಆಗಮನದಿಂದ ಆರ್ಥಿಕವಾಗಿ ಚೇತರಿಸಿಕೊಳ್ಳಲು ಸಹಕಾರಿಯಾಗಿಲಿದೆ.
ಕಳೆದ ಬಾರಿ ದಸರಾ ಉತ್ಸವಕ್ಕೆ ೧ ಕೋಟಿ ರೂ. ಅನುದಾನ ಬಿಡುಗಡೆಾಂಗಿತ್ತು. ಅದರಲ್ಲಿ ೨೫ ಲಕ್ಷ ರೂ. ದಸರಾ ಉತ್ಸವಕ್ಕೆ ಬಳಸಿ ಉಳಿದ ೭೫ ಲಕ್ಷ ರೂ.ಗಳನ್ನು ಅಭಿವೃದ್ಧಿ ಕಾಂರ್ುಕ್ಕೆ ಬಳಸಲಾಗಿತ್ತು. ಈ ಬಾರಿ ೧ ಕೋಟಿ ರೂ. ಅನುದಾನ ಮಂಜೂರಾಗಿದ್ದು, ಎಲ್ಲ ಅನುದಾನವನ್ನು ದಸರಾಕ್ಕೆ ಬಳಸಲಾಗುತ್ತದೆ. ಈ ಬಾರಿ ವಿಜೃಂಭಣೆಯಿಂದ ದಸರಾ ಆಚರಿಸಲಾಗುವುದು
ಈ ಬಾರಿ ದಸರಾವನ್ನು ಅದ್ಧೂರಿಾಂಗಿ ಆಚರಿಸುವ ನಿಟ್ಟಿನಲ್ಲಿ ದಶಮಂಟಪಗಳು ಸಿದ್ಧತೆ ಕೈಗೊಂಡಿವೆ. ಮಂಟಪಗಳ ತೀರ್ಪುಗಾರಿಕೆಗೆ ಉತ್ತಮ ತೀರ್ಪುಗಾರರನ್ನೇ ನೇಮಿಸಿ ಪಾರದರ್ಶಕವಾಗಿ ತೀರ್ಪುಗಾರಿಕೆ ನಡೆಸಲಾಗುತ್ತದೆ. ೧ ಕೋಟಿ ರೂ. ಅನುದಾನದಲ್ಲಿ ಕರಗ ಹಾಗೂ ಮಂಟಪಗಳಿಗೆ ಸೇರಿಸಿ ೬೦ ಲಕ್ಷೃ ರೂ. ಅನುದಾನಕ್ಕೆ ದಸರಾ ಸಮಿತಿಗೆ ಮನವಿ ವಾಡಲು ಚಿಂತನೆ ನಡೆಸಲಾಗಿದೆ.
ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್ ಪ್ರಕಾಶ್ ಅವರು…
ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…
ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…
ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…
ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್ ಒನ್ ಪಟ್ಟ ಪಡೆದಿದೆ. ಈ ಮೂಲಕ ಈಗ…
ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್ ಶಾಕ್ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…