ಜಿಲ್ಲೆಗಳು

ದಸರಾ ಉಪ ಸಮಿತಿ : ಗ್ರಾಮೀಣ ಮುಖಂಡರಿಗೂ ಅವಕಾಶ

ಹೆಸರು ಸೇರ್ಪಡೆಗೆ ನಾಯಕರಿಗೆ ದುಂಬಾಲು ಬಿದ್ದ ಮುಖಂಡರು

ಕೆ.ಬಿ.ರಮೇಶನಾಯಕ
ಮೈಸೂರು: ಚುನಾವಣೆಯ ವರ್ಷವಾಗಿರುವ ಕಾರಣ ದಸರಾ ಉಪ ಸಮಿತಿಗಳಲ್ಲಿ ನಗರ ಪ್ರದೇಶದ ಮುಖಂಡರಿಗೆ ಮಣೆ ಹಾಕುವ ಜತೆಗೆ ಮೊಟ್ಟ ಮೊದಲ ಬಾರಿಗೆ ಗ್ರಾಮಾಂತರ ಪ್ರದೇಶದವರಿಗೂ ಅವಕಾಶ ನೀಡಲು ಸರ್ಕಾರ ನಿರ್ಧರಿಸಿರುವುದು ಬಿಜೆಪಿ ಪಾಳಯದಲ್ಲಿ ಸಂತಸ ಮೂಡಿಸಿದೆ.

ದಸರಾ ಉಪ ಸಮಿತಿಗಳಲ್ಲಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ನೇಮಿಸುವ ವಿಚಾರ ಹೊರಬರುತ್ತಿದ್ದಂತೆ ಹಲವಾರು ಮುಖಂಡರು ತಮ್ಮ ಹೆಸರನ್ನು ಸೇರಿಸುವಂತೆ ನಾಯಕರಿಗೆ ದುಂಬಾಲು ಬಿದ್ದಿದ್ದಾರೆ. ಹೀಗಾಗಿ, ನಗರ ಮತ್ತು ಗ್ರಾಮಾಂತರ ಪ್ರದೇಶಗಳ ಮುಖಂಡರ ಹೆಸರು ಅಂತಿಮವಾದ ಮೇಲೆ ಪಟ್ಟಿ ಪ್ರಕಟಿಸಲು ತೀರ್ಮಾನಿಸಲಾಗಿದೆ ಎಂದು ಹೇಳಲಾಗಿದೆ.

ಯಾವ್ಯಾವ ಸಮಿತಿಗಳಿಗೆ ನೇಮಕ: ಸ್ತಬ್ಧಚಿತ್ರ, ಕ್ರೀಡೆ, ಸಾಂಸ್ಕೃತಿಕ ದಸರಾ, ಲಲಿತಕಲೆ, ದೀಪಾಲಂಕಾರ, ಕವಿಗೋಷ್ಠಿ, ಯೋಗ ದಸರಾ, ಯುವಸಂಭ್ರಮ-ಯುವ ದಸರಾ, ಮಹಿಳಾ ದಸರಾ, ಮಕ್ಕಳ ದಸರಾ, ಆಹಾರ ಮೇಳ, ಸ್ವಚ್ಛತೆ ಮತ್ತು ವ್ಯವಸ್ಥೆ, ಚಲನಚಿತ್ರ, ಕುಸಿ, ರೈತ, ಗ್ರಾಮೀಣ ದಸರಾ ಮುಂತಾದ ಉಪ ಸಮಿತಿಗಳಿಗೆ ಅಧ್ಯಕ್ಷರು, ಉಪಾಧ್ಯಕ್ಷರು, ತಲಾ ಒಂದೊಂದು ಸಮಿತಿಗೆ ೪೦ರಿಂದ ೫೦ ಸದಸ್ಯರನ್ನು ನೇಮಿಸಲಾಗುತ್ತದೆ. ಬಹುತೇಕ ಉಪ ಸಮಿತಿಗಳಿಗೆ ನಗರದ ಪ್ರಮುಖರು, ನಗರ ಬಿಜೆಪಿ ಪದಾಧಿಕಾರಿಗಳನ್ನು ನೇಮಿಸಲಾಗುತ್ತಿತ್ತು. ಈಗ ಗ್ರಾಮಾಂತರ ಪ್ರದೇಶದ ಮುಖಂಡರನ್ನು ಸೇರಿಸುವ ಕಾರಣ ನಗರ ಮತ್ತು ಗ್ರಾಮಾಂತರ ಬಿಜೆಪಿ ಸಮ್ಮಿಲನದಂತೆ ಆಯ್ಕೆ ಮಾಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಲಾಗಿದೆ.

ನಂಜನಗೂಡು ಕ್ಷೇತ್ರದಲ್ಲಿ ಬಿಜೆಪಿ ಶಾಸಕರು ಇದ್ದರೆ, ಕೆ.ಆರ್.ನಗರ, ಹುಣಸೂರು, ಪಿರಿಯಾಪಟ್ಟಣ, ಎಚ್.ಡಿ.ಕೋಟೆ ಕ್ಷೇತ್ರದ ಪ್ರಮುಖರಿಂದ ಪಟ್ಟಿ ಕೇಳಲಾಗಿದೆ. ಈ ಕ್ಷೇತ್ರಗಳಿಂದ ಬರುವ ಹೆಸರನ್ನು ಪರಿಶೀಲಿಸಿ ಸಲ್ಲಿಸುವಂತೆ ಜಿಲ್ಲಾಧ್ಯಕ್ಷೆ ಮಂಗಳಾ ಸೋಮಶೇಖರ್ ಅವರಿಗೆ ಹೇಳಲಾಗಿದೆ. ಅದೇ ರೀತಿ ಮೈಸೂರು ನಗರ ಬಿಜೆಪಿ ಅಧ್ಯಕ್ಷ ಟಿ.ಎಸ್.ಶ್ರೀವತ್ಸ ಅವರ ಸಮ್ಮುಖದಲ್ಲಿ ಪ್ರಧಾನ ಕಾರ್ಯದರ್ಶಿಗಳಾದ ಎಚ್.ಜಿ.ಗಿರಿಧರ್, ವಿ.ಸೋಮಸುಂದರ್, ವಾಣೀಶ್‌ಕುಮಾರ್ ಅವರು ಹೆಸರುಗಳನ್ನು ಆಯ್ಕೆ ಮಾಡುವ ಕೆಲಸದಲ್ಲಿ ನಿರತರಾಗಿದ್ದಾರೆ. ಈ ಎರಡೂ ಪಟ್ಟಿಗಳನ್ನು ಒಂದು ಕಡೆ ಇಟ್ಟುಕೊಂಡು ಮೌಲ್ಯಮಾಪನ ಮಾಡಿ ಪಕ್ಷದ ಹಿರಿಯರು, ಅವಕಾಶ ವಂಚಿತರು, ಪದಾಧಿಕಾರಿಗಳನ್ನು ಆಯ್ಕೆ ಮಾಡಿದ ಬಳಿಕ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಅಧ್ಯಕ್ಷ-ಉಪಾಧ್ಯಕ್ಷರನ್ನು ಅಂತಿಮಗೊಳಿಸಿದ ಬಳಿಕ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದು ಮುಖಂಡರೊಬ್ಬರು ಹೇಳಿದರು.

andolanait

Recent Posts

ಬಾ.ನಾ.ಸುಬ್ರಹ್ಮಣ್ಯ ವಾರದ ಅಂಕಣ:  ಕೆಳಗಿನ ಕೋರ್ಟಿನಲ್ಲಿ ನಟ ದಿಲೀಪ್ ಆರೋಪ ಮುಕ್ತ;  ಅವಳೊಂದಿಗೆ v/s ದಿಲೀಪ್ ಪರ

ಜನಪ್ರಿಯ ನಟರು ಜೈಲಲ್ಲಿದ್ದರೆ, ಜಾಮೀನಿನಿಂದ ಹೊರಬಂದರೆ ಅಂತಹ ಪ್ರಕರಣದ ತೀರ್ಪಿನ ಬಗ್ಗೆ ಜನರ ಕುತೂಹಲ ಹೆಚ್ಚು. ಮಲಯಾಳ ಚಿತ್ರರಂಗದ ಹೆಸರಾಂತ…

9 mins ago

ರೈತರು ಬೆಳೆದ ಕಾಫಿ, ಅಡಿಕೆ, ಮೆಣಸು ಕಳ್ಳರ ಪಾಲು

ರಾತ್ರೋರಾತ್ರಿ ಬೆಳೆ ಕಳವು ಗಸ್ತು ಹೆಚ್ಚಳ ಸೇರಿದಂತೆ ಸೂಕ್ತ ಕ್ರಮಕ್ಕೆ ಬೆಳೆಗಾರರ ಒತ್ತಾಯ ಸಿದ್ದಾಪುರ: ವನ್ಯಜೀವಿಗಳ ಉಪಟಳ, ಹವಾಮಾನ ವೈಪರೀತ್ಯ,…

38 mins ago

ಸರಗೂರು ಸಾರಿಗೆ ಬಸ್‌ ನಿಲ್ದಾಣದಲ್ಲಿ ಅವ್ಯವಸ್ಥೆ

ದಾಸೇಗೌಡ  ಓವರ್‌ಹೆಡ್ ಟ್ಯಾಂಕ್‌ಗಳ ನಡುವೆ ತಪ್ಪಾದ ಸಂಪರ್ಕ; ಪೋಲಾಗುತ್ತಿರುವ ನೀರು; ಸಾರ್ವಜನಿಕರ ಆಕ್ರೋ ಸರಗೂರು : ಪಟ್ಟಣದ ಕೆಎಸ್‌ಆರ್‌ಟಿಸಿ ಬಸ್…

3 hours ago

19 ಬೇಚರಾಕ್ ಹಳ್ಳಿಗಳು ಇನ್ಮುಂದೆ ಕಂದಾಯ ಗ್ರಾಮಗಳು

ಹುಣಸೂರು ತಾಲ್ಲೂಕಿನ ಜನರ ನಾಲ್ಕು ದಶಕಗಳ ಕನಸು ನನಸು; ಗ್ರಾಮಸ್ಥರು ಫುಲ್ ಖು ಹುಣಸೂರು: ತಾಲ್ಲೂಕಿನ ೧೯ ಬೇಚರಾಕ್ ಗ್ರಾಮಗಳನ್ನು…

3 hours ago

ಹೊಸ ವರ್ಷಕ್ಕೆ ಇಂದಿರಾ ಕಿಟ್

ಗಿರೀಶ್ ಹುಣಸೂರು ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಪ್ರಯೋಜನ ಮೈಸೂರು: ನ್ಯಾಯಬೆಲೆ ಅಂಗಡಿಗಳಲ್ಲಿ ಹೊಸ ವರ್ಷಾರಂಭದ ಜನವರಿ ತಿಂಗಳಿಂದ ಅನ್ನಭಾಗ್ಯ ಯೋಜನೆಯಡಿ…

3 hours ago