ಜಿಲ್ಲೆಗಳು

ದಸರೆಗೆ ಬಂದ ರಾಷ್ಟ್ರಪತಿ: ಹಾಡಿ ಮಂದಿಗೆ ಸಂಭ್ರಮ

ಮೈಸೂರು: ಆದಿವಾಸಿ ಸಮುದಾಯದ ಪ್ರಜೆಯೊಬ್ಬರು ದೇಶದ ಪ್ರಥಮ ಪ್ರಜೆಯಾದಾಗ ಇಡೀ ದೇಶ ಸಂಭ್ರಮಿಸಿತ್ತು. ಅದರಲ್ಲೂ ಆದಿವಾಸಿ ಸಮುದಾಯ ಇದು ತಮಗೆ ದೊರೆತ ಗೌರವ ಎಂದು ಸಂಭ್ರಮಿಸಿತ್ತು. ವಿಶ್ವವಿಖ್ಯಾತ ಮೈಸೂರು ದಸರಾಗೆ ಸೋಮವಾರ (ಸೆ 26) ವಿಧ್ಯುಕ್ತ ಚಾಲನೆ ನೀಡಿದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಭೇಟಿ ಮೈಸೂರು ಭಾಗದ ಆದಿವಾಸಿ ಸಮುದಾಯಗಳಲ್ಲಿ ಪುಳಕ ಮೂಡಿಸಿದೆ.
ದೇಶದ ಪ್ರಥಮ ಪ್ರಜೆಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಇದೇ ಮೊದಲ ಬಾರಿಗೆ ಮೈಸೂರಿಗೆ ಆಗಮಿಸಿದ ರಾಷ್ಟ್ರಪತಿ ಮುರ್ಮು ಅವರಿಗೆ ಆದಿವಾಸಿಗಳ ಸಾಂಪ್ರದಾಯಿಕ ಸ್ವಾಗತದೊಂದಿಗೆ ಸ್ವಾಗತ ಕೋರಲಾಯಿತು. ಇದೇ ಮೈಸೂರು ಭಾಗದ ವಿವಿಧ ಹಾಡಿಗಳಿಗೆ ಸೇರಿದ 14 ಆದಿವಾಸಿಗಳಿಗೆ ರಾಷ್ಟ್ರಪತಿ ಜತೆ ಫೋಟೋ ತೆಗೆಸಿಕೊಳ್ಳುವ ಅವಕಾಶ ನೀಡಲಾಯಿತು.
ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಕೇಂದ್ರ ಮತ್ತು ರಾಜ್ಯದ ಗಣ್ಯರು ಭಾಗವಹಿಸಿದ್ದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು. ಬೆಳ್ಳಿರಥದಲ್ಲಿ ಆರೂಢಳಾದ ಮಹಿಷಾಸುರಮರ್ದಿನಿಯ ಪಂಚಲೋಹದ ವಿಗ್ರಹಕ್ಕೆ ರಾಷ್ಟ್ರಪತಿಗಳು ಪುಷ್ಪಾರ್ಚನೆ ಮಾಡುವುದರೊಂದಿಗೆ 412ನೇ ದಸರಾದ ವಿಧಿವಿಧಾನಗಳು ಆರಂಭವಾಗಿವೆ.
ಉದ್ಘಾಟನಾ ಕಾರ್ಯಕ್ರಮದ ಬಳಿಕ ಜಿಲ್ಲೆಯ ಆದಿವಾಸಿ ಸಮುದಾಯದ ಆಯ್ದ 14 ಮಂದಿ ‌ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ ಪುಷ್ಪಗುಚ್ಛ ನೀಡಿದರು. ಇದೇ ವೇಳೆ ಆದಿವಾಸಿಗಳ ಬೇಡಿಕೆಗೆ ಸಂಬಂಧಿಸಿದ ಪತ್ರವೊಂದನ್ನುಹುಣಸೂರು ತಾಲ್ಲೂಕಿನ ಶೆಟ್ಟಹಳ್ಳಿ ಹಾಡಿಯ ಜೇನುಕುರುಬ ಜನಾಂಗದ ಜಿ.ಟಿ.ರಾಜಪ್ಪ, ಶಿವಣ್ಣ, ಹನಗೋಡು ಹೋಬಳಿಯ ಪಕ್ಷಿರಾಜಪುರದ ಹಕ್ಕಿಪಿಕ್ಕಿ ಜನಾಂಗದ ಸೋನಿ, ನಾಗಪುರ ಐದನೇ ಘಟಕದ ಯರವ ಜನಾಂಗದ ವೀಣಾ, ಎಚ್.ಡಿ.ಕೋಟೆ ತಾಲ್ಲೂಕಿನ ಅಂಕನಾಥಪುರದ ಯರವ ಜನಾಂಗದ ವಿಠಲ, ಅಂತರಸಂತೆ ಹೋಬಳಿ ಆನೆಮಾಳದ ಹಾಡಿಯ ಜೇನುಕುರುಬ ಜನಾಂಗದ ರಾಮು, ಬಸವನಗಿರಿ ಬಿ.ಹಾಡಿಯ ಕಾಡುಕುರುಬ ಜನಾಂಗದ ಕಾಳಕಲ್ಕರ, ಪಿರಿಯಾಪಟ್ಟಣ ತಾಲ್ಲೂಕಿನ ಮರಳಕಟ್ಟೆ ಹಾಡಿಯ ಜೇನುಕುರುಬ ಜನಾಂಗದ ಎಂ.ಟಿ.ಕುಮಾರ, ರಾಣಿಗೇಟ್ ಹಾಡಿಯ ಸೋಲಿಗ ಜನಾಂಗದ ಆರ್.ಶಾಂತರಾಜ್, ಜೆ.ಡಿ.ಜಯಪ್ಪ, ಅಬ್ಬಳತಿ ಎ ಹಾಡಿಯ ಜೇನುಕುರುಬ ಜನಾಂಗದ ಪೂವಿ, ಜಾನಕಮ್ಮ, ಕರ್ನಾಟಕ ರಾಜ್ಯ ಬುಡಕಟ್ಟು ಹಿತರಕ್ಷಣಾ ಸಂಘದ ರಾಜ್ಯಾಧ್ಯಕ್ಷ, ಪರಿಶಿಷ್ಟ ಜನಾಂಗಕ್ಕೆ ಸೇರಿದ ಎಸ್.ಎಚ್.ಸುಭಾಷ್, ಹುಣಸೂರು ತಾಲ್ಲೂಕಿನ ಕೊಳವಿಗೆ ಹಾಡಿಯ ಜೇನುಕುರುಬ ಸಂಘದ ಗಣೇಶ್ ರಾಷ್ಟ್ರಪತಿ ಜತೆ ಫೋಟೋ ತೆಗೆಸಿಕೊಂಡರು.
ಮೈಸೂರು ದಸರಾಕ್ಕೂ ಗಿರಿಜನರಿಗೂ ಮೊದಲಿನಿಂದಲೂ ನಂಟಿದೆ. ಜಂಬೂಸವಾರಿಯ ಆಕರ್ಷಣೆಯಾದ ಗಜಪಡೆಯ ಸೇವಕರಲ್ಲಿ ಬಹುಪಾಲು ಜನ ಸೋಲಿಗರೇ. ಹಲವಾರು ವರ್ಷದಿಂದ ಜಂಬೂ ಸವಾರಿಯಲ್ಲಿ ಭಾಗಿಯಾಗುತ್ತಿರುವ ಗಿರಿಜನರಿಗೆ ಈ ಬಾರಿ ರಾಷ್ಟ್ರಪತಿ ಆಗಮನ ಮತ್ತು ಒಡನಾಟ ಹೊಸ ಅನುಭವ ನೀಡಿದೆ.

andolanait

Recent Posts

ಓದುಗರ ಪತ್ರ: ಸಾಧಕರಿಗೆ ಸಂದ ಗೌರವ

ಮೈಸೂರು ವಿಶ್ವವಿದ್ಯಾನಿಲಯಕ್ಕೆ ರಾಷ್ಟ್ರಕವಿ ಕುವೆಂಪು ಅವರು ನೀಡಿರುವ ಅಪಾರ ಕೊಡುಗೆಯ ಸ್ಮರಣಾರ್ಥ ಹಾಗೂ ಅವರ ಪರಿಕಲ್ಪನೆಯ ಮಾನಸಗಂಗೋತ್ರಿಯಲ್ಲಿ ಇರುವ ಬಯಲು…

2 hours ago

ಓದುಗರ ಪತ್ರ: ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಮುಂದಾಗಲಿ

ಕಾವೇರಿ ನದಿ ನೀರಿನ ಹಂಚಿಕೆಯ ವಿಷಯದಲ್ಲಿ ತಮಿಳುನಾಡು ಸರ್ಕಾರವು ಪದೇ ಪದೇ ಕರ್ನಾಟಕದ ಮೇಲೆ ಒತ್ತಡ ಹೇರುವುದು ಹಾಗೂ ಇದರಿಂದಾಗಿ…

2 hours ago

ಓದುಗರ ಪತ್ರ: ಡಿಜಿಟಲ್ ಲಗೇಜ್ ಲಾಕರ್ ಎಲ್ಲೆಡೆ ವಿಸ್ತರಿಸಲಿ

ರಾಜ್ಯದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಅತ್ಯಾಧುನಿಕ ಡಿಜಿಟಲ್ ಲಗೇಜ್ ಲಾಕರ್ ವ್ಯವಸ್ಥೆ ಆರಂಭಿಸಿರುವುದು ಶ್ಲಾಘನೀಯ ಹೆಜ್ಜೆಯಾಗಿದೆ. ಪ್ರತಿದಿನ ರಾಜದಾದ್ಯಂತ ಹೆಚ್ಚಿನ…

2 hours ago

ಮಗನ ನೆನಪಲ್ಲಿ ಪೋಷಕರ ಮಾದರಿ ಕಾರ್ಯ

ಪ್ರೊ. ಬಿ. ಜಯಪ್ರಕಾಶಗೌಡ, ಅಧ್ಯಕ್ಷರು, ಕರ್ನಾಟಕ ಸಂಘ, ಮಂಡ್ಯ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪಶಸ್ತಿ ಪ್ರೋತ್ಸಾಹ ಮಂಡ್ಯದ ಕರ್ನಾಟಕ…

2 hours ago

ಭತ್ತದ ಬೆಳೆಗೆ ಎಲೆ ಸುರುಳಿ-ಬೆಂಕಿ ರೋಗದ ಬಾಧೆ

ಸಿಂಗಿ ಸತೀಶ್ ತಾಕುಗಳನ್ನು ಪರಿಶೀಲಿಸಿದ ಕೃಷಿ ವಿಜ್ಞಾನಗಳು; ಮುನ್ನೆಚ್ಚರಿಕೆ ವಹಿಸಲು ಗೋಣಿಕೊಪ್ಪ ಕೃಷಿ ವಿಜ್ಞಾನ ಕೇಂದ್ರ ಸಲಹೆ  ಗೋಣಿಕೊಪ್ಪ: ಕೊಡಗಿನಲ್ಲಿ ಭತ್ತ…

3 hours ago

ಸಕ್ಕರೆ ನಾಡಿನಲ್ಲಿ ಬರದಿಂದ ಕಂಗಾಲಾದ ರೈತರು

ಹೇಮಂತ್‌ಕುಮಾರ್ ಮಂಡ್ಯ ಜಿಲ್ಲೆಯಲ್ಲಿ ೪೮,೫೯೧ ಹೆ. ಬೆಳೆ ಹಾನಿ ೫೪.೫೩ ಕೋಟಿ ರೂ. ನಷ್ಟದ ಅಂದಾಜು ಮಂಡ್ಯ: ಜಿಲ್ಲೆಯಲ್ಲಿ ಕಳೆದ…

3 hours ago