ಜಿಲ್ಲೆಗಳು

ದಸರಾ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗಿಲ್ಲ ಸ್ಥಾನ : ಸರ್ಕಾರದ ಮಲತಾಯಿ ಧೋರಣೆಗೆ ಖಂಡನೆ!

ಮೈಸೂರು : ವಿಶ್ವವಿಖ್ಯಾ ಮೈಸೂರು ದಸರಾ 2022 ರ ಅಂಗವಾಗಿ ನಾಡಿ ಗಮನ ಸೆಳೆಯುವ ಕವಿಗೋಷ್ಠಿ ಕಾರ್ಯಕ್ರಮದಲ್ಲಿ ವಿವಿಧ ಬಾಷೆಗಳ ಕವಿಗಳು ಭಾಗವಹಿಸುವ ಕವಿಗೋಷ್ಠಿಯಲ್ಲಿ ತುಳು, ಕೊಂಕಣಿ, ಕೊಡವ, ಅರೆಭಾಷೆ ಮತ್ತು ಎರವ ಭಾಷೆಗಳ ಕವಿತೆಗಳಿಗೆ ಈ ವರ್ಷ ಅವಕಾಶ ನೀಡಲಾಗಿದೆ. ಆದರೆ ಈ ಬಾರಿ ಕರಾವಳಿಯ ಬಹುಮುಖ್ಯವಾದ ಭಾಷೆಯಾದ ಬ್ಯಾರಿ ಭಾಷೆಯನ್ನು ಕಡೆಗಣಿಸಲಾಗಿದೆ. ಬ್ಯಾರಿ ಭಾಷೆಯ ಯಾವೊಬ್ಬ ಕವಿಗಳಿಗೂ ಅವಕಾಶ ನೀಡಿಲ್ಲ ಎಂದು ಕವಿಗಳು ಹಾಗೂ ಬ್ಯಾರೀಸ್ ವೆಲ್ ಫೇರ್ ಅಸೋಸಿಯೇಷನ್ ನ ಪದಾಧಿಕಾರಿಗಳಾದ  ಬಿ.ಎಂ.ಹನೀಫ್ ಮತ್ತು ಟಿ.ಕೆ.ಷರೀಫ್ ಅವರು ಸರ್ಕಾರದ ನಡೆಗೆ ಬೇಸರವನ್ನು ವ್ಯಕ್ತಪಡಿಸಿದ್ದಾರೆ.

ಮುಂದುವರಿದು, ಬ್ಯಾರಿ ಭಾಷೆಯನ್ನು ರಾಜ್ಯದಲ್ಲಿ ಸುಮಾರು 12 ಲಕ್ಷಕ್ಕೂ ಅಧಿಕ ಮಂದಿ ಮಾತನಾಡುತ್ತಾರೆ. ನೂರಾರು ಕವಿಗಳು ಈ ಭಾಷೆಯಲ್ಲಿ ಕವಿತೆಗಳನ್ನು ರಚಿಸುತ್ತಿದ್ದಾರೆ. ಬ್ಯಾರಿ ಭಾಷೆಯ ಬೆಳವಣಿಗೆಗೆ ರಾಜ್ಯ ಸರಕಾರವೇ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನೂ ರಚಿಸಿದೆ. ಹೀಗಿರುವಾಗ ನಾಡಿನ ಪ್ರತಿಷ್ಠಿತ ದಸರಾ ಉತ್ಸವದ ಕವಿಗೋಷ್ಠಿಯಲ್ಲಿ ಬ್ಯಾರಿ ಭಾಷೆಗೆ ಈ ರೀತಿಯ ಅವಮಾನ ಮಾಡಿರುವುದು ಖಂಡಿತಾ ಸರಿಯಲ್ಲ.ಕನ್ನಡ ಸಾಹಿತ್ಯಕ್ಕೆ ಬ್ಯಾರಿ ಮಾತೃಭಾಷೆಯ ಹತ್ತಾರು ಲೇಖಕರು ಮಹತ್ವದ ಕೊಡುಗೆ ನೀಡಿದ್ದಾರೆ. ಕನ್ನಡದ ಮಹತ್ವದ ಮುಸ್ಲಿಂ ಹಿನ್ನೆಲೆಯ ಲೇಖಕರಲ್ಲಿ ಹೆಚ್ಚಿನವರು ಬ್ಯಾರಿ ಭಾಷಿಕರು. ದಸರಾ ಕವಿಗೋಷ್ಠಿ ಉಪಸಮಿತಿಗೆ ಇದ್ಯಾವುದೂ ಗೊತ್ತಿಲ್ಲವೇ? ಅಥವಾ ಗೊತ್ತಿದ್ದೂ ತಾರತಮ್ಯ ನೀತಿ ಅನುಸರಿಸಿದೆಯೆ? ಎಂದು ಪ್ರಶ್ನಿಸಿದ್ದಾರೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಗೆ ಈಗ ಅಧ್ಯಕ್ಷರೂ ಇಲ್ಲದೆ, ಪೂರ್ಣಾವಧಿ ರಿಜಿಸ್ಟ್ರಾರ್ ಕೂಡಾ ಇಲ್ಲದೆ ಅಕಾಡೆಮಿಯ ಚಟುವಟಿಕೆಗಳು ಕುಂಠಿತಗೊಂಡಿವೆ. ಇದ್ದ ಅಧ್ಯಕ್ಷರನ್ನು ಸರಕಾರ ಹಠಾತ್ತಾಗಿ ವಜಾ ಮಾಡಿ ಹಲವು ತಿಂಗಳಾದವು. ಹೊಸ ಅಧ್ಯಕ್ಷರ ನೇಮಕದ ಬಗ್ಗೆಯೂ ಕನ್ನಡ ಸಂಸ್ಕೃತಿ ಇಲಾಖೆ ನಿರ್ಲಕ್ಷ್ಯ ಮನೋಭಾವ ಹೊಂದಿದೆ. ಬ್ಯಾರಿ ಭಾಷೆಯ ಕುರಿತ ಈ ತಾರತಮ್ಯವನ್ನು ನಾವು ಕಟುವಾಗಿ ಖಂಡಿಸಿದ್ದಾರೆ.

andolanait

Recent Posts

ಕಾಣೆಯಾಗಿದ್ದ ವ್ಯಕ್ತಿಯ ಮೃತದೇಹ ಪತ್ತೆ

ಶನಿವಾರಸಂತೆ: ಕಾಣೆಯಾಗಿದ್ದ ವ್ಯಕ್ತಿಯೊಬ್ಬರ ಮೃತದೇಹ ಮಂಗಳವಾರ ಸಂಜೆ ಕಾಫಿ ತೋಟದಲ್ಲಿ ಪತ್ತೆಯಾಗಿದ್ದು, ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಕೊಡಗು ಜಿಲ್ಲಾ…

2 hours ago

ದೇವರಾಜ ಅರಸು ಸೇತುವೆ ಮೇಲೆ ಸಂಚಾರ ನಿರ್ಬಂಧ

ಎಸ್.ಎಸ್.ಭಟ್ ನಂ.ಗೂಡು: ಹೊಸ ಸೇತುವೆಯಲ್ಲಿ ದ್ವಿಮುಖ ಸಂಚಾರಕ್ಕೆ ಪೂರ್ವಸಿದ್ಧತೆ ಕೈಗೊಳ್ಳದಿದ್ದರೆ ಅಪಾಯದ ಭೀತಿ ನಂಜನಗೂಡು: ಕಬಿನಿ ನದಿಯ ದೇವರಾಜ ಅರಸು…

2 hours ago

2 ತಿಂಗಳಾದರೂ ಕೋಟೆ ತಾಲ್ಲೂಕು ಬಿಜೆಪಿ ಅಧ್ಯಕ್ಷ ಸ್ಥಾನ ಖಾಲಿ

ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ಅಸಮಾಧಾನ; ಶೀಘ್ರದಲ್ಲಿ ನೇಮಕ ಮಾಡಲು ಆಗ್ರಹ  ಮಂಜು ಕೋಟೆ ಎಚ್.ಡಿ.ಕೋಟೆ: ಬಿಜೆಪಿ ತಾಲ್ಲೂಕು ಅಧ್ಯಕ್ಷ ಸ್ಥಾನ…

2 hours ago

ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಬೇಕು ಸರ್ಜರಿ

ದೇವರಾಜ ಅರಸು ಕಾಲೋನಿ, ಪೌರಕಾರ್ಮಿಕರ ಕಾಲೋನಿಯಲ್ಲಿ ನೀರಿನ ಸಮಸ್ಯೆ ಪ್ರಶಾಂತ್ ಎಸ್. ಮೈಸೂರು: ಮಹಾನಗರ ಪಾಲಿಕೆ ವಾರ್ಡ್ ಸಂಖ್ಯೆ ೬೨ರ…

2 hours ago

ತಗ್ಗದ ಗ್ಯಾಸ್ ಟ್ರಬಲ್; ಕೈಸುಡುತ್ತಿದೆ ತಿಂಡಿ ಬಿಲ್!

ಚಿರಂಜೀವಿ ಸಿ ಹುಲ್ಲಹಳ್ಳಿ ಮೈಸೂರು: ಮಧ್ಯಪ್ರಾಚ್ಯ ದೇಶಗಳ ನಡುವಿನ ಯುದ್ಧದ ಪರಿಣಾಮ ಜಿಲ್ಲೆಯಲ್ಲಿ ತಿಂಗಳು ಕಳೆದರೂ ಗ್ಯಾಸ್ ಟ್ರಬಲ್ ತಗ್ಗಿಲ್ಲ.…

2 hours ago