ಮೈಸೂರು: ದಸರಾ ಮಹೋತ್ಸವ ಅಂಗವಾಗಿ ಅರಮನೆ ವೇದಿಕೆಯಲ್ಲಿ ಅ.1ರಂದು ರಾತ್ರಿ 8 ಗಂಟೆಗೆ ಗ್ರ್ಯಾಂಡ್ ಸಿತಾರ್ ಸಿಂಫೋನಿ ಕಾರ್ಯಕ್ರಮ ಏರ್ಪಡಿಸಲಾಗಿದೆ.
ಬೆಂಗಳೂರಿನ ಮನೋ ಮ್ಯೂಸಿಕ್ ಲೈನ್ಸ್ ತಂಡ ಈ ವಿಶಿಷ್ಟ ಕಾರ್ಯಕ್ರಮವನ್ನು ಒಂದೂವರೆ ಗಂಟೆಯವರೆಗೆ ಪ್ರಸ್ತುತಪಡಿಸಲಿದೆ. ಸುಮಾರಾಣಿ, ಶ್ರುತಿ ಕಾಮತ್, ಜ್ಯೋತಿ ಶ್ಯಾಮ್, ಸಿ.ಎಸ್. ಸರ್ವಮಂಗಳಾ, ಹಂಸಿಣಿ ಭಾರದ್ವಾಜ್, ಎಚ್.ಪಿ. ಶ್ರೀನಿವಾಸನ್, ವಿಜಯ್ ಗೋನಾಳ ಹಾಗೂ ಋತ್ವಿಕ್ ರಾವ್ ಅವರು ಸಿತಾರ್ ನುಡಿಸುವರು. ಇವರಿಗೆ ಕೊಳಲಿನಲ್ಲಿ ಗಣೇಶ್, ತಬಲಾದಲ್ಲಿ ಪ್ರದ್ಯುಮ್ನ ಸೊರಬ ಹಾಗೂ ಕಾರ್ತೀಕ್ ಭಟ್ ಸಾಥ್ ನೀಡುವರು.
ಪ್ರವೀಣ್ ಷಣ್ಮುಗಂ ಅವರು ಡ್ರಮ್, ಕೀಬೋರ್ಡ್ ನಲ್ಲಿ ವೇಣುಗೋಪಾಲ್ ಸಹಕರಿಸುವರು. ಸುಮುಖ್ ರವಿಶಂಕರ್ ಅವರು ಇತರ ಲಯವಾದ್ಯಗಳನ್ನು ನುಡಿಸುವರು.
ಸಿತಾರ್ ಜೊತೆಗೆ ತಬಲಾ, ಕೊಳಲು, ಡ್ರಮ್ ಹಾಗೂ ಕೀ ಬೋರ್ಡ್ ವಾದ್ಯಗಳ ಮೂಲಕ
ಶಾಸ್ತ್ರೀಯವಾಗಿ ರಾಗಗಳನ್ನು ಸಂಯೋಜಿಸಿ ಭಿನ್ನವಾದ ಸಂಗೀತ ನೀಡುವ ಮೂಲಕ ಎಲ್ಲ ವರ್ಗದ ಅದರಲ್ಲೂ ಯುವ ತಲೆಮಾರು ತಲುಪುವ ಉದ್ದೇಶ ತಂಡಕ್ಕಿದೆ.
ಈಗಾಗಲೇ ರಾಜ್ಯ ಹಾಗೂ ಅಂತರರಾಜ್ಯಗಳಲ್ಲಿ ಕಾರ್ಯಕ್ರಮ ನೀಡಿದ ಹೆಗ್ಗಳಿಕೆ ಈ ತಂಡದ್ದು.
ಸಿತಾರ್ ಸಿಂಫೋನಿಯ ರೂವಾರಿ ಸಂದೀಪ್ ವಸಿಷ್ಠ. ಅವರು ಕೊಳಲು ಹಾಗೂ ಸ್ಯಾಕ್ಸ್ ಫೋನ್ ನುಡಿಸುವ ಕಲಾವಿದರು.
ಕನ್ನಡಿಗರೇ ಇರುವ, ಎಲ್ಲ ವಯೋಮಾನದವರು ಇರುವ ಈ ತಂಡದಲ್ಲಿ ಸಿತಾರ್ ಸಂಗೀತವನ್ನು ಹೆಚ್ಚು ಜನರ ಬಳಿಗೆ ಕೊಂಡೊಯ್ಯಲು ಹಾಗೂ ಆಕರ್ಷಿಸಲು ಈ ತಂಡ ಸಜ್ಜಾಗಿದೆ.
ದೊಡ್ಡಕವಲಂದೆ: 3 ವರ್ಷಗಳಾದರೂ ನಿರ್ಮಾಣವಾಗದ ಶೌಚಾಲಯ; ಗುತ್ತಿಗೆದಾರ ನಾಪತ್ತೆ ಶ್ರೀಧರ್ ಆರ್. ಭಟ್ ನಂಜನಗೂಡು: ಸ್ವಚ್ಛತೆಗಾಗಿ ಕೇಂದ್ರ ಮತ್ತು ರಾಜ್ಯ…
ಬಿ. ಆರ್. ಜೋಯಪ್ಪ ಕೊಡಗಿನಲ್ಲಿ ಸ್ಥಳೀಯರು ‘ಕಾಡುಪಾಪ’ವನ್ನು ‘ಚೀಂಗೆ ಕೋಳಿ’ ಎಂದು ಕರೆಯುತ್ತಾರೆ. ಇದೊಂದು ನಿಶಾಚರಿ, ನಿರುಪದ್ರವಿ ಕಾಡಿನ ಜೀವಿ.…
ಚಾಮರಾಜನಗರ ನೆಲದ ಕಲಾವಿದರು, ಅಲ್ಲಿನ ಆಡುಭಾಷೆಯನ್ನೇ ಜೀವಾಳವಾಗಿಸಿಕೊಂಡು ಗೆದ್ದ ಅನ್ನ ಚಲನಚಿತ್ರ ರಶ್ಮಿ ಕೋಟಿ ಮನೆಗೆ ಕರೆದುಕೊಂಡು ಹೋಗಲು ಬಂದ…
ತುಳುನಾಡಿನಲ್ಲಿ ಹುಟ್ಟಿ ಬೆಳೆದ ಎಚ್. ನಾಗವೇಣಿಯವರ ಕತೆಗಳಲ್ಲಿ ಕೂಡ ಈ ತಾಯ್ನೆಲದ ಮಣ್ಣಿನ ತುಡಿತ ಮಿಡಿತಗಳು ನರನಾಡಿಯಂತೆ ವ್ಯಾಪಿಸಿರುತ್ತವೆ. ಆ…
ಐಐಟಿ, ಐಐಎಂ, ಐಐಎಸ್ಪಿ, ಎನ್ಐಟಿಯಂತಹ ರಾಷ್ಟ್ರೀಯ ಸಂಸ್ಥೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪ. ಜಾತಿ ಮತ್ತು ಪ.ಪಂಗಡಗಳ ವಿದ್ಯಾರ್ಥಿಗಳಿಗೆ ನೀಡುವ ಪ್ರೋತ್ಸಾಹಧನವನ್ನು…
ಶಾಲಾ ಶಿಕ್ಷಣ ಇಲಾಖೆಯ ಪದವಿ ಪೂರ್ವ ಕಾಲೇಜುಗಳಲ್ಲಿ ಸುಮಾರು ನಾಲ್ಕು ಸಾವಿರದಷ್ಟು ಉಪನ್ಯಾಸಕ ಹುದ್ದೆಗಳು ಖಾಲಿ ಇದ್ದು, ಮುಖ್ಯಮಂತ್ರಿಗಳ ಅನುಮತಿ…