ಮೈಸೂರು: ದಲಿತರು ಸಹ ಮನುಷ್ಯ ಎಂದು ಗುರುತಿಸಲು ಎಲ್ಲಿವರೆಗೆ ಕಾಯಬೇಕು. ಈ ಕಾಯುವಿಕೆಗೆ ಸದ್ಯಕ್ಕೆ ಕೊನೆ ಇಲ್ಲ. ಇದು ಬಹಳಷ್ಟು ಜನರಿಗೆ ಇದು ಕಣ್ಣಿಗೆ ಕಾಣುವುದಿಲ್ಲ, ಮನಸ್ಸಿಗೂ ತಾಗುತ್ತಿಲ್ಲ ಎಂದು ಸಾಹಿತಿ, ವಿಮರ್ಶಕ ಓ.ಎಲ್.ನಾಗಭೂಷಣಸ್ವಾಮಿ ಹೇಳಿದರು.
ನಗರದ ದಿ ಇನ್‌ಸ್ಟಿಟ್ಯೂಷ್ ಆಫ್ ಇಂಜಿನಿಯರ್ ಸಭಾಂಗಣದಲ್ಲಿ ಅನ್ವೇಷಣಾ ಸೇವಾ ಟ್ರಸ್ಟ್ ವತಿಯಿಂದ ಸೋಮವಾರ ಆಂಜಿಸಿದ್ದ ಡಾ.ಎಲ್.ಹನುಮಂತಯ್ಯ ಅವರ ಆಂ ೧೦೧ ಕವಿತೆಗಳ ಸಂಕಲನ ‘ಅಂತರಾಳದ ಒಳದನಿಗಳು’ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಜಾತಿ ಸಮಾಜಕ್ಕೆ ಅಂಟಿದೆ. ಕವಚ ತೆಗೆದರೆ ಕರ್ಣ ಸಾಂತ್ತಾನೆ. ಆದರೆ, ಕೆಳಸ್ತರದವರು ಸತ್ತರೂ ಜಾತಿಯ ಕವಚ ತೆಗೆಯಲು ಆಗಲ್ಲ. ಕೆಲವರು ಜಾತಿ ಕವಚ ಬಳಸಿಕೊಂಡು ಉತ್ತಮ ಬದುಕು ಕಟ್ಟಿಕೊಂಡು ಮುಂದೆ ಬಂದಿದ್ದಾರೆ. ದಲಿತರಿಗೆ ಮಾತ್ರ ‘ಏಕೆ ಈ ಜಾತಿಯಲ್ಲಿ ಹುಟ್ಟಿದ್ದವು’ ಎಂಬ ಅವಮಾನ ನಿತ್ಯವೂ ಕಾಡುತ್ತಿದೆ. ಈಗ ಜಾತಿ ನಿರ್ಮೂಲನೆ ಕುರಿತು ಬರೀ ಬಾಯಿ ಮಾತು, ಭಾಷಣವಾಗಿ ಉಳಿದುಕೊಂಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
೨೦೨೨ರಲ್ಲೂ ಜಾತಿ ಅವಮಾನ ಮುಂದುವರಿದಿದೆ. ದಲಿತ ಮಹಿಳೆ ನೀರು ಕುಡಿದರು ಎಂಬ ಕಾರಣಕ್ಕೆ ಟ್ಯಾಂಕ್‌ನಲ್ಲಿದ್ದ ನೀರನ್ನು ಖಾಲಿ ಮಾಡಿ ಗಂಜಲ ಹಾಕಿ ಶುದ್ಧೀಕರಣ ಮಾಡಿರುವ ಘಟನೆ ಈಗಲೂ ಜಾತಿ ಪದ್ಧತಿ ಜೀವಂತವಾಗಿದೆ ಎಂಬುದಕ್ಕೆ ತಾಣ ಉದಾಹರಣೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
ದಲಿತರು ಸಹ ಮನುಷ್ಯ ಎಂದು ಗುರುತಿಸಲು ಎಲ್ಲಿವರೆಗೆ ಕಾಯಬೇಕು. ಈ ಕಾಯುವಿಕೆಗೆ ಸದ್ಯಕ್ಕೆ ಕೊನೆ ಇಲ್ಲ. ಜಾತಿಯ ಕಾರಣಕ್ಕೆ ಲಕ್ಷಾಂತರ ಜನರು ನರಳಾಡುತ್ತಿದ್ದಾರೆ. ಆದರೆ, ಬಹಳಷ್ಟು ಜನರಿಗೆ ಇದು ಕಣ್ಣಿಗೆ ಕಾಣುತ್ತಿಲ್ಲ. ಮನಸ್ಸಿಗೂ ತಾಗುತ್ತಿಲ್ಲ. ಅವರು ತಮ್ಮ ಜೀವನದಲ್ಲೇ ಸುಖವಾಗಿ ಜೀವಿಸುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.
ನಮ್ಮ ಧರ್ಮ, ಸಂಸ್ಕೃತಿ, ಆಚಾರ-ವಿಚಾರ, ಊಟವೇ ಶ್ರೇಷ್ಠ ಎಂಬ ಭ್ರಮೆ ಸೃಷ್ಟಿಯಾಗಿದೆ. ಇದುವೇ ಸಂಕಷ್ಟ ಸೃಷ್ಟಿಗೂ ಕಾರಣವಾಗಿದೆ. ಈಗ ಇದರೊಂದಿಗೆ ದೇಶಪ್ರೇಮ, ಜಾತಿ ಭ್ರಮೆಯು ಸೇರಿಕೊಂಡಿದೆ. ಇಲಿಗಳು ಸಿಂಹ ಎಂಬ ಭ್ರಮೆಯಲ್ಲಿ ತೇಲಾಡುತ್ತಿದ್ದಾರೆ. ಇದರಿಂದ ಸುಖದ ಬದುಕಿನ ಆಲದ ಮರವೇ ನಾಶವಾಗುತ್ತಿದೆ ಎಂದು ಮಾರ್ಮಿಕವಾಗಿ ಹೇಳಿದರು.
ಈಗಿನ ರಾಜಕಾರಣಿಗಳಿಗೆ ಮಾತಿನ ಮೇಲೆ ಹತೋಟಿ ಇಲ್ಲ. ಅಸಂಬದ್ಧ ಪ್ರಲಾಪದ ಮೂಲಕ ಸಮಾಜದಲ್ಲಿ ದ್ವೇಷವನ್ನು ಬಿತ್ತುತ್ತಿದ್ದಾರೆ. ಈ ಕುರಿತು ಎಚ್ಚರಿಸುವ ಸಾಹಿತಿಗಳ ಮಾತನ್ನು ಯಾರೂ ಕೇಳುತ್ತಿಲ್ಲ. ಅಧಿಕಾರಕ್ಕಾಗಿ ಸುಳ್ಳು ಬಿತ್ತಲಾಗುತ್ತಿದೆ. ಶತಮಾನಗಳ ಹಿಂದಿನ ರಾಜನ ಕುರಿತು ಅಧಿಕಾರಕ್ಕಾಗಿ ಈಗ ಸುಳ್ಳ-ಸತ್ಯ, ಸರಿ-ತಪ್ಪು ಎಂದು ಹೇಳಲಾಗುತ್ತಿದೆ.
ಆದರೆ, ಆಳ್ವಿಕೆ ನಡೆಸಿರುವ ಯಾವ ರಾಜರು ಒಳ್ಳೆಯವರಲ್ಲ. ‘ತನಗಾಗಿ, ತಮ್ಮವರಿಗಾಗಿ ಲಾಭ ಮಾಡಿಕೊಟ್ಟು, ಜನರ ಮೇಲೆ ಹತೋಟಿ ಸಾಧಿಸುವನೇ ರಾಜ’ ಎಂದು ಪಂಪ ಆ ಕಾಲದಲ್ಲೇ ಹೇಳಿರುವ ಮಾತು ಈಗಲೂ ಕಟ್ಟುಸತ್ಯವೇ ಎಂದು ಕಿಡಿಕಾರಿದರು.
ವಿಧಾನ ಪರಿಷತ್ ಸದಸ್ಯ ಡಾ.ಡಿ.ತಿಮ್ಮಯ್ಯ,ಲೇಖಕರೂ ಆದ ರಾಜ್ಯಸಭಾ ಸದಸ್ಯ ಡಾ.ಎಲ್.ಹನುಮಂತಯ್ಯ, ತವರು ಅರಸು ಮಹಿಳಾ ಸಂಘದ ಅಧ್ಯಕ್ಷೆ ವಿಜಯಲಕ್ಷಿ ಅರಸು, ಕರ್ನಾಟಕ ನಾಟಕ ಅಕಾಡೆಮಿಯ ಮಾಜಿ ಸದಸ್ಯ ಎಚ್.ಎಸ್.ಸುರೇಶ್‌ಬಾಬು, ಕೃತಿ ಸಂಪಾದಕ ಡಾ.ಎಂ.ಜಿ.ಆರ್.ಅರಸ್ ಕಾರ್ಯಕ್ರಮದಲ್ಲಿ ಹಾಜರಿದ್ದರು.
ಸಮಾನತೆ ಭಿಕ್ಷೆಯಲ್ಲ. ಇದು ಎಲ್ಲ ಮನುಷ್ಯರಿಗೂ ದೊರೆಯಬೇಕು. ಈಗಿನ ಕಾಲಘಟ್ಟದಲ್ಲಿ ಅದುವೇ ಕಷ್ಟದ ಸಂಗತಿ. ಅಧಿಕಾರ, ಹಣ, ಜಾತಿ, ತೊಳ್ಬಲದಿಂದ ಜನರನ್ನು ಗುರುತಿಸಲಾಗುತ್ತಿದೆ. ಇದನ್ನು ಬಿಟ್ಟು ಮನುಷ್ಯರಾಗಿ ಗುರುತಿಸುವುದನ್ನು ಕಲಿಯುವುದು ಯಾವಾಗ?.
– ಓ.ಎಲ್.ನಾಗಭೂಷಣಸ್ವಾಮಿ, ವಿಮರ್ಶಕ
ಹನೂರು: ತಾಲ್ಲೂಕಿನ ಶಾಗ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಲಾಜರ್ ದೊಡ್ಡಿ ಗ್ರಾಮದಲ್ಲಿ ಒಡಿಪಿ ಸಂಸ್ಥೆಯಿಂದ ನಿರ್ಮಾಣ ಮಾಡಿದ್ದ ಚೆಕ್ ಡ್ಯಾಂ…
ಹನೂರು: ತಾಲ್ಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವೈಶಂಪಾಳ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ ಮನೆ ಸಂಪೂರ್ಣ…
ನವದೆಹಲಿ: ಧರ್ಮಸ್ಥಳ ಸೌಜನ್ಯ ಪ್ರಕರಣದ ಮರು ತನಿಖೆಗೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ನವದೆಹಲಿಯಲ್ಲಿ ನಡೆದ ವಿಚಾರಣೆಯಲ್ಲಿ, ಹಲವು…
ಸರಗೂರು: ಆಸ್ಪತ್ರೆಗೆ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಸರಗೂರು ತಾಲ್ಲೂಕಿನ ಕಾಡಗೆರೆ ಗ್ರಾಮದ…
ಬ್ರಿಟೀಷರ ವಿರುದ್ಧ ಸಮಾಜವನ್ನು ಅದರಲ್ಲೂ ಯುವಜನರನ್ನು ಸಂಘಟಿಸಿ, ದೇಶಭಕ್ತಿಯನ್ನು ಜಾಗೃತಿಗೊಳಿಸುವ ಮೂಲಕ ಅವರನ್ನು ಸ್ವಾತಂತ್ರ್ಯಸಂಗ್ರಾಮಕ್ಕೆ ಸಜ್ಜುಗೊಳಿಸುವ ಉದ್ದೇಶದಿಂದ ಆರಂಭವಾದ ಸಾರ್ವಜನಿಕ…
ಬೆಂಗಳೂರು ಡೈರಿ: ಆರ್.ಟಿ.ವಿಠ್ಠಲಮೂರ್ತಿ ಅವರ ವಾರದ ಅಂಕಣ ಕಳೆದ ಮೂರು ವರ್ಷಗಳಿಂದ ಅಧಿಕಾರ ಹಂಚಿಕೆಯ ಸಂಘರ್ಷದಲ್ಲಿ ಮುಳುಗಿದ್ದ ಆಡಳಿತಾರೂಢ ಕಾಂಗ್ರೆಸ್…