ಜಿಲ್ಲೆಗಳು

ನಗರ ಪೊಲೀಸರಿಗೆ 4 ವರ್ಷಗಳಿಂದ ವೀಕ್ ಆಫ್ ಸಂಬಳವಿಲ್ಲ

ವಾರದ ರಜೆ ಸಿಗೋದು ಕಷ್ಟ;, ನಮಗೂ ಆರೋಗ್ಯ ಸಮಸ್ಯೆಗಳಿರುತ್ತವೆ; ಸಿಬ್ಬಂದಿ ಅಳಲು

ಬಿ.ಎನ್.ಧನಂಜಯಗೌಡ
ಮೈಸೂರು : ‘ವೀಕ್ ಆಫ್ ಅಲ್ಲಿ ಮಾಡಿದ ಕೆಲಸಕ್ಕೆ ಸಂಬಳ ಬಂದಿಲ್ಲ. ವೀಕ್ ಆಫ್ ಕೂಡ ಸರಿಯಾಗಿ ಸಿಗಲ್ಲ’
ಇದು ಮಳೆ, ಬಿಸಿಲು ಎನ್ನದೆ ಕೆಲಸ ಮಾಡುವ ನಗರದ ಪೊಲೀಸ ಸಿಬ್ಬಂದಿ ಅಳಲು. ಮನೆ, ಮಡದಿ, ಮಕ್ಕಳು, ಕುಟುಂಬದವರೊಂದಿಗಿಂತ ಜನರ ನಡುವೆ ಇದ್ದು, ನಗರದಲ್ಲಿನ ಶಾಂತಿ ಸುವ್ಯವ್ಥೆಯನ್ನು ಕಾಪಾಡುವ, ಅಪರಾಧ ತಡೆಗೆ ಶ್ರಮಿಸುವ ಆರಕ್ಷಕರಿಂದ ಇಂತಹದೊಂದು ದೂರು ಕೇಳಿ ಬಂದಿದೆ.
ಕೊರೊನಾ ಸಮಯದಲ್ಲಿ ಕೊರೊನಾ ವಾರಿಯರ್ಸ್ ರೀತಿ ಕೋವಿಡ್ ಹರಡುವಿಯನ್ನು ತಪ್ಪಿಸಲು ದುಡಿದ ಮತ್ತು ಜನರಲ್ಲಿ ಜಾಗೃತಿ ಮೂಡಿಸಿದ ಪೊಲೀಸರು, ಹಗಲಿರುಳು ಎನ್ನದೇ, ಮಳೆ, ಬಿಸಿಲು ನೋಡದೆ ವರ್ಷವೀಡಿ ದುಡಿಯುವ ಪೊಲೀಸ್ ಸಿಬ್ಬಂದಿಗೆ ತಿಂಗಳಿಗೆ ನಾಲ್ಕು ವಾರದ ರಜೆಗಳು ಇವೆ. ಆದರೆ, ಇದು ಶೇ.೮೦ ರಷ್ಟು ವಾರದ ರಜೆ ನೀಡುವ ನಿಯಮ ಪಾಲನೆಯಾಗುತ್ತಿಲ್ಲ.
ವಾರದ ರಜೆ ಸಿಗೋದು ಕಷ್ಟ: ನಮಗೂ ಸಂಸಾರವಿದೆ. ಅವರೊಂದಿಗೆ ಒಂದು ದಿನವಾದರೂ ಕಳೆಯಬೇಕು ಎಂಬ ಆಸೆ ಇರುತ್ತದೆ. ಕೆಲವು ಬಾರಿ ಎಂತಹ ಒತ್ತಡವಿದ್ದರೂ, ಅನಾರೋಗ್ಯವಿದ್ದರೂ ರಜೆ ಕೇಳದೆ ಕೆಲಸ ಮಾಡಿರುತ್ತೇವೆ. ಆದರೆ, ಇಲಾಖೆಯಿಂದ ನೀಡಿರುವ ತಿಂಗಳ ನಾಲ್ಕು ವಾರದ ರಜೆ ಕೂಡ ಸರಿಯಾಗಿ ಸಿಗುವುದಿಲ್ಲ. ಈ ನಾಲ್ಕು ರಜೆಗಳ ಪೈಕಿ ಎರಡು ವಾರದ ರಜೆಗಳಿಗೆ, ಬಂದೋಬಸ್ತ್ ಮತ್ತು ಇತ್ಯಾದಿ ಕಾರಣಗಳಿಂದ ಕತ್ತರಿ ಬೀಳುತ್ತದೆ ಎನ್ನುತ್ತಾರೆ ಪೊಲೀಸ್ ಸಿಬ್ಬಂದಿ.
ನಾಲ್ಕು ವರ್ಷದ ವೀಕ್ ಆಫ್ ಸಂಬಳ ಬಂದಿಲ್ಲ : ವಾರದ ರಜೆಗಳಲ್ಲಿ ಕೆಲಸ ಮಾಡಿದರೆ. ಅದಕ್ಕೆ, ಸಂಬಳ ನೀಡಬೇಕು. ಆದರೆ, ನಗರ ಪೊಲೀಸ್ ಸಿಬ್ಬಂದಿಗೆ ನಾಲ್ಕು ವರ್ಷಗಳಿಂದ ವಾರದ ರಜೆಯ ಸಂಬಳವೇ ಬಂದಿಲ್ಲ ಎನ್ನಲಾಗಿದೆ. ಇತ್ತ ವಾರದ ರಜೆಯೂ ಸರಿಯಾಗಿ ಸಿಗಲ್ಲ. ಆ ದಿನ ಕೆಲಸ ಮಾಡಿದ ಸಂಬಳವೂ ಇಲ್ಲ ಎಂದು ಸಿಬ್ಬಂದಿ ‘ಆಂದೋಲನ’ ದಿನಪತ್ರಿಕೆಯ ಜೊತೆಗೆ ಅಳಲು ತೋಡಿಕೊಂಡಿದ್ದಾರೆ.
ನಮಗೂ ಆರೋಗ್ಯ ಸಮಸ್ಯೆಗಳು ಇರುತ್ತವೆ: ಪೊಲೀಸರಾದ ಮಾತ್ರಕ್ಕೆ ನಮಗೇನು ಆರೋಗ್ಯ ಸಮಸ್ಯೆಗಳು ಇರುವುದಿಲ್ಲವೇ?. ಆದರೂ, ರಜೆಗಳನ್ನು ಕೇಳದೆ ಕೆಲಸ ಮಾಡುತ್ತೇವೆ. ಕುಟುಂಬದಲ್ಲಿ ಯಾರಿಗಾದರೂ ಆರೋಗ್ಯ ಸರಿಯಿಲ್ಲ ಎಂದರೇ ಊರಿಗೆ ಹೋಗಿ ನೋಡಿಕೊಂಡು ಬರಲು, ಅವರನ್ನು ವೈದ್ಯರ ಬಳಿ ಕರೆದೊಯ್ಯಲು ಸಹ ನಮಗೆ ಸಾಧ್ಯವಾಗುವುದಿಲ್ಲ. ಅಲ್ಲದೇ, ಒಂದು ದಿನವಾದರೂ ನಾವು ರೆಸ್ಟ್ ಮಾಡಬಾರದೇ? ಹೀಗಿರುವಾಗ ವಾರದ ರಜೆಯನ್ನು ಸಮರ್ಪಕವಾಗಿಯಾದರೂ ನೀಡಬೇಕು ಎಂಬುದು ನಮ್ಮ ಮನವಿ ಎನ್ನುತ್ತಾರೆ ಹೆಸರು ಹೇಳಲು ಇಚ್ಛಿಸಿದ ನಗರದ ಪೊಲೀಸ್ ಸಿಬ್ಬಂದಿಗಳು.



ನಾಲ್ಕು ವರ್ಷಗಳಿಂದ ವಾರದ ರಜೆಯಲ್ಲಿ ಕೆಲಸ ಮಾಡಿದ ಸಂಬಳ ನೀಡಿಲ್ಲ ಎಂಬುದರ ಬಗ್ಗೆ ಗಮನಹರಿಸುವೆ. ಈ ಬಾರಿಯ ದಸರಾ ಸಮಯದಲ್ಲಿ ವಾರದ ರಜೆಯಲ್ಲಿ ಕೆಲಸ ಮಾಡಿದ ಸಂಬಳವನ್ನು ನೀಡಲು ತಿಳಿಸಿದ್ದೇನೆ. ವಾರದ ರಜೆಯನ್ನು ಕಡ್ಡಾಯವಾಗಿ ನೀಡಲು ಸೂಚನೆ ನೀಡಲಾಗುವುದು. ಬಂದೋಬಸ್ತ್ ಮತ್ತು ಇತ್ಯಾದಿ ತೀರಾ ಅಗತ್ಯದ ಸಮಯದಲ್ಲಿ ಸಿಬ್ಬಂದಿ ವಾರದ ರಜೆಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಅದಕ್ಕೆ, ಸಂಬಳ ಪಾವತಿಸಲಾಗುವುದು. ಸಿಬ್ಬಂದಿ ಯಾವುದೇ ಸಮಸ್ಯೆಗಳಿದ್ದರೆ ನೇರವಾಗಿ ನನ್ನ ಗಮನಕ್ಕೆ ತರಬೇಕು.
-ರಮೇಶ್ ಬಿ.ಬಾನೋತ್, ನಗರ ಪೊಲೀಸ್ ಆಯುಕ್ತ, ಮೈಸೂರು


ಇತ್ತೀಚಿನ ದಿನಗಳಲ್ಲಿ ಒತ್ತಡದ ಜೀವನ ಹೆಚ್ಚು ಕಂಡು ಬರುತ್ತಿದೆ. ಹಾಗಾಗಿ, ಪೊಲೀಸ ಸಿಬ್ಬಂದಿಗೂ ವಿರಾಮ ಅಗತ್ಯ. ಇಲ್ಲವಾದರೆ, ಅವರಿಗೆ ಕೆಲಸದಲ್ಲಿ ಉತ್ಸಾಹ ಬರುವುದು ಹೇಗೆ?. ಆದ್ದರಿಂದ, ಅವರಿಗೆ ವಾರದ ರಜೆಗಳನ್ನು ನೀಡುವ ವ್ಯವಸ್ಥಿತವಾಗಿ ಕೊಡಬೇಕು.
ಶಂಕರೇಗೌಡ, ನಿವೃತ್ತ ಪೊಲೀಸ್ ಅಧಿಕಾರಿ

 

andolanait

Recent Posts

ಮೈಸೂರಿನಲ್ಲಿ ಮಾಗಿ ಉತ್ಸವ: ಸಂಗೀತದ ಹೊನಲು ಹರಿಸಿದ ವಿಜಯ್‌ ಪ್ರಕಾಶ್‌

ಮೈಸೂರು: ಮಾಗಿ ಉತ್ಸವದ ಅಂಗವಾಗಿ ಜಗತ್ಪ್ರಸಿದ್ಧ ಮೈಸೂರು ಅರಮನೆ ಆವರಣದಲ್ಲಿ ಇಂದು ಸಂಜೆ ಖ್ಯಾತ ಗಾಯಕ ವಿಜಯ್‌ ಪ್ರಕಾಶ್‌ ಅವರು…

37 mins ago

ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ

ಚಾಮರಾಜನಗರ: ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯದಲ್ಲಿ ಪಶು ವೈದ್ಯರ ಕೊರತೆ ಎದ್ದು ಕಾಣುತ್ತಿದ್ದು, ಹೊರಗುತ್ತಿಗೆ ಆಧಾರದಲ್ಲಿ ವೈದ್ಯರ ಹುದ್ದೆಯ ನೇಮಕಾತಿಗೂ ಜಾಹೀರಾತು…

1 hour ago

ರೈತರಿಗೆ ಮತ್ತೊಂದು ಸಂಕಷ್ಟ: ಈ ಬಾರಿ ಮಾವಿನ ಇಳುವರಿ ಭಾರೀ ಇಳಿಕೆ

ಬೆಂಗಳೂರು: ರಾಜ್ಯದಲ್ಲಿ ಸಂಭವಿಸಿದ ಪ್ರಕೃತಿ ವಿಕೋಪದಿಂದ ಹಣ್ಣುಗಳ ರಾಣಿ ಎಂದು ಕರೆಯಿಸಿಕೊಳ್ಳುವ ಮಾವಿಗೆ ಅನೇಕ ರೋಗಗಳು ಕಾಣಿಸಿಕೊಂಡಿದ್ದು, ರೈತರಿಗೆ ಇಳುವರಿ…

2 hours ago

ಬಂಡೀಪುರದಲ್ಲಿ ಮತ್ತೊಂದು ಕಾಡಾನೆ ಸಾವು

ಗುಂಡ್ಲುಪೇಟೆ: ಗಡಿ ಜಿಲ್ಲೆ ಚಾಮರಾಜನಗರದ ಗುಂಡ್ಲುಪೇಟೆ ತಾಲ್ಲೂಕಿನಲ್ಲಿರುವ ರಾಷ್ಟ್ರೀಯ ಉದ್ಯಾನವನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದಕೆರೆ ವಲಯದ ಚಿಕ್ಕ…

2 hours ago

ಪ್ರಮುಖ ಆಕರ್ಷಣೀಯ ಕೇಂದ್ರವಾಗಿ ಹೊರಹೊಮ್ಮಿದ ಅಯೋಧ್ಯೆ ರಾಮಮಂದಿರ

ಲಕ್ನೋ: ಆಕರ್ಷಣೀಯ ಪ್ರವಾಸಿತಾಣಗಳ ಪಟ್ಟಿಯಲ್ಲಿ ಅಯೋಧ್ಯೆ ರಾಮಮಂದಿರವು ತಾಜ್‌ಮಹಲನ್ನು ಹಿಂದಿಕ್ಕಿ ನಂಬರ್‌ ಒನ್‌ ಪಟ್ಟ ಪಡೆದಿದೆ. ಈ ಮೂಲಕ ಈಗ…

2 hours ago

ಪ್ರವಾಸಿಗರಿಗೆ ಬಿಗ್‌ ಶಾಕ್: ನಂದಿಗಿರಿಧಾಮದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್‌

ಚಿಕ್ಕಬಳ್ಳಾಪುರ: ನಂದಿಗಿರಿಧಾಮದಲ್ಲಿ ಹೊ ವರ್ಷಾಚರಣೆಗೆ ಬ್ರೇಕ್‌ ನೀಡಲಾಗಿದ್ದು, ಪ್ರವಾಸಿಗರಿಗೆ ಬಿಗ್‌ ಶಾಕ್‌ ಎದುರಾಗಿದೆ. ಪ್ರಕೃತಿ ಮಡಿಲಿನಲ್ಲಿ ಕುಣಿಸು ಕುಪ್ಪಳಿಸಿ ಹೊಸ…

2 hours ago