ಮೈಸೂರು : ಚಿನ್ನಸ್ವಾಮಿ ವಡ್ಡಗೆರೆ ಅವರು ಬರೆದಿರುವ ಪ್ರಯೋಗಶೀಲ ರೈತರ ಕರ್ಮ ಭೂಮಿಯಲ್ಲೇ ನಿಂತು ಅವರ ಬೇಸಾಯದ ಮಾದರಿಯನ್ನು ಅವಲೋಕಿಸಿ ಅವರ ಅನುಭವಗಳನ್ನು ದಾಖಲಿಸಿ ಕೊಟ್ಟಿರುವ ” ಬಂಗಾರದ ಮನುಷ್ಯರು ” ಕೃತಿಯ 2ನೇ ಮುದ್ರಣವು ಮಾರುಕಟ್ಟೆಗಳಲ್ಲಿ ಲಭ್ಯವಿದೆ.
ಈ ಕೃತಿ ಕನ್ನಡದ ಒಂದು ವಿಶಿಷ್ಟ ,ಅನನ್ಯ ಕೃಷಿ ಕೈಪಿಡಿಯಾಗಿದ್ದು, 18 ಜನ ಒಣಭೂಮಿ ಬೇಸಾಯಗಾರರು, 31 ಜನ ತೋಟಗಾರಿಕೆ ಹಾಗೂ ಕಾಡು ಕೃಷಿಯ ಬಗ್ಗೆ, 10 ಜನ ರೇಷ್ಮೆ ಮತ್ತು ಹೈನುಗಾರಿಕೆ ಕೃಷಿಯ ಬಗ್ಗೆ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ಜೊತೆಗೆ ಒಟ್ಟು 59 ವಿಶಿಷ್ಟ ಮಾದರಿಯ ಕೃಷಿ ಪದ್ಧತಿಗಳನ್ನು ಬಂಗಾರದ ಮನುಷ್ಯರು ಕೃತಿ ದಾಖಲಿಸಿದೆ. ಯಾರೇ ಈ ಪುಸ್ತಕವನ್ನು ಓದಿದರು ಅವರಲ್ಲಿ ಕೃಷಿಯ ಬಗ್ಗೆ ಆಸಕ್ತಿ ಮೂಡುವುದು ,ನಾವೂ ಕೃಷಿ ಕ್ಷೇತ್ರದ ಕಡೆಗೆ ಮುನ್ನಗ್ಗಬೇಕು ಎಂಬ ಹಂಬಲ ಮೂಡಿಸುವುದು ಈ ಗ್ರಂಥದ ವೈಶಿಷ್ಟ್ಯ. ಕೃಷಿ ಸಾಹಿತ್ಯದಲ್ಲೇ ಅಪರೂಪ ಎನ್ನಬಹುದಾದ ಮಾಹಿತಿಗಳನ್ನು ಒಳಗೊಂಡಿರುವ “ಬಂಗಾರದ ಮನುಷ್ಯರು” ಪ್ರತಿಯೊಬ್ಬ ಪ್ರಯೋಗಶೀಲ ಯುವ ರೈತನ ಮನೆಯಲ್ಲಿರಬೇಕಾದ ಸಂಗಾತಿ ಎನ್ನಬಹುದಾಗಿದೆ.
ಪುಸ್ತಕದ ಪ್ರತಿಗಳಿಗಾಗಿ ಅಭಿರುಚಿ ಗಣೇಶ್ 99805 60013 ಸಂಪರ್ಕಿಸಬಹುದಾಗಿದೆ.
ನವೀನ್ ಡಿಸೋಜ ೧,೯೪೬ ಲಸಿಕೆದಾರರು, ೮೫ ಮೇಲ್ವಿಚಾರಕರು ೯೭೩ ಮನೆ ಭೇಟಿ ನೀಡುವ ತಂಡ ರಚನೆ ಪ್ರವಾಸಿಗರು, ವಲಸೆ ಕಾರ್ಮಿಕರ…
ಸೂರ್ಯಪುತ್ರ ಯಾರಾದ್ರೂ ಮತ್ತೆ ಮತ್ತೆ ಸಿಗ್ತಾನೆ ಇದ್ರೆ ‘ಭೂಮಿ ದುಂಡಗಿದೆ, ಅದ್ಕೆ ಮತ್ತೆ ಮತ್ತೆ ಎದುರುಬದುರಾಗೋದು’ ಅನ್ನೋ ಮಾತು ಕೇಳಿರ್ತೇವೆ.…
ತೀರಿಹೋದ ಕನ್ನಡದ ಹಿರಿಯ ಸಾಹಿತಿ ಡಾ.ಎಸ್.ಎಲ್.ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಿಸಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳು ಘೋಷಿಸಿದ್ದಾರೆ. ಈ ಉದ್ದೇಶಿತ ಸ್ಮಾರಕದ…
ಮೈಸೂರು : ಆಧುನಿಕ ಕಾಲಕ್ಕೆ ತಕ್ಕಂತೆ ಮನ್ರೇಗಾ ಹೆಸರನ್ನು ಕೇಂದ್ರ ಸರ್ಕಾರ ಬದಲಾಯಿಸಿದೆ. ಆದರೆ, ಕಾಂಗ್ರೆಸ್ ಮಾಡುತ್ತಿರುವ ಆರೋಪಕ್ಕೆ ಯಾವ…
ಬೆಳಗಾವಿ : ರಾಜ್ಯ ಸರ್ಕಾರ ರೈತ ಪರ ಸರಕಾರವಾಗಿದ್ದು, ಕಬ್ಬು ಬೆಳೆಯುವ ಪ್ರದೇಶದಲ್ಲಿ ಮಣ್ಣಿನ ಆರೋಗ್ಯ ಮತ್ತು ನೀರಿನ ಸಮಗ್ರ…