ವಿಜಯನಗರ ನಾಲ್ಕನೇ ಹಂತದಲ್ಲಿರುವ ಸಮರ್ಥನಂ ಬುದ್ಧಿ ವಿಶೇಷ ಶಾಲೆಯ ಆವರಣದಲ್ಲಿ ಬುದ್ಧಿ ವಿಶೇಷ ಮಕ್ಕಳಿಂದ ಮಾಜಿ ಪಿಎಂ ಜವಾಹರಲಾಲ್‌ನೆಹರು ಜನ್ಮ ದಿನಾಚರಣೆಯ ಅಂಗವಾಗಿ ಮಕ್ಕಳ ದಿನಾಚರಣೆ ಆಚರಣೆ ಮಾಡಲಾಯಿತು
ಮೈಸೂರು: ಮೈಸೂರಿನ ವಿಜಯನಗರ ನಾಲ್ಕನೇ ಹಂತದಲ್ಲಿರುವ ಸಮರ್ಥನಂ ಬುದ್ಧಿ ವಿಶೇಷ ಶಾಲೆಯ ಆವರಣದಲ್ಲಿ ಬುದ್ಧಿ ವಿಶೇಷ ಮಕ್ಕಳಿಂದ ಮಾಜಿ ಪಿಎಂ ಜವಾಹರಲಾಲ್‌ನೆಹರು ಜನ್ಮ ದಿನಾಚರಣೆಯ ಅಂಗವಾಗಿ ಮಕ್ಕಳ ದಿನಾಚರಣೆ ಆಚರಣೆ ಮಾಡಲಾಯಿತು.
ಸಮರ್ಥನಂ ಸಂಸ್ಥೆಯ ಹಿತೈಷಿ ಸೀತಾಲಕ್ಷ್ಮೀ ಮಾತನಾಡಿ, ಮಕ್ಕಳು ನಾಳಿನ ಪ್ರಜೆಗಳು. ಹಾಗಾಗಿ ನಮ್ಮ ಭಾರತ ದೇಶದ ಯಾವುದೇ ಮಕ್ಕಳನ್ನು ವಿದ್ಯಾಭ್ಯಾಸದಿಂದ ವಂಚಿತರನ್ನಾಗಿ ಮಾಡಬಾರದು ಎಂದು ನೆಹರು ಸದಾ ಹೇಳುತ್ತಿದ್ದರು, ಇಂದು ನಾವು ಮಕ್ಕಳಿಗೆ ಒಳ್ಳೆಯ ಭವಿಷ್ಯವನ್ನು ರೂಪಿಸಿ ಕೊಟ್ಟರೆ ಮುಂದೆ ಮಕ್ಕಳು ನಮ್ಮ ರಾಷ್ಟ್ರಕ್ಕೆ ಭವಿಷ್ಯದ ಭದ್ರ ಬುನಾದಿ ಆಗಲಿದ್ದಾರೆ. ಹಾಗಾಗಿ ಇಂದಿನ ಮಕ್ಕಳನ್ನು ನಾವು ಹೇಗೆ ಬೆಳೆಸುತ್ತೇವೆ ಎಂಬುದರ ಮೇಲೆ ನಮ್ಮ ಇಡೀ ರಾಷ್ಟ್ರದ ಭವಿಷ್ಯ ನಿಂತಿದೆ ಎಂದು ತಿಳಿಸಿದರು.
ಸಮರ್ಥನಂ ಸಂಸ್ಥೆಯ ಶಿವರಾಜು ಮಾತನಾಡಿ, ಜವಾಹರಲಾಲ್ ನೆಹರು ಅವರು ತಮ್ಮ ಜೀವನದುದ್ದಕ್ಕೂ ಮಕ್ಕಳನ್ನು ಅವರ ಜಾತಿ, ಮತ, ಧರ್ಮ, ಸಂಸ್ಕೃತಿ ಅಥವಾ ಆರ್ಥಿಕ ಹಿನ್ನೆಲೆಯನ್ನು ಲೆಕ್ಕಿಸದೆ ಮೆಚ್ಚಿದರು ಮತ್ತು ಪ್ರೀತಿಸುತ್ತಿದ್ದರು. ಮಕ್ಕಳು ರಾಷ್ಟ್ರದ ಭವಿಷ್ಯವಾಗಿರುವುದರಿಂದ ಪಂಡಿತ್ ಜವಾಹರಲಾಲ್ ನೆಹರು ಅವರು ರಾಷ್ಟ್ರದ ಭವಿಷ್ಯದ ವಾಹಕರಾಗಿರುವುದರಿಂದ ಮಕ್ಕಳಿಗೆ ಪ್ರೀತಿ ಮತ್ತು ಗಮನವನ್ನು ನೀಡಬೇಕು ಎಂದು ನಂಬಿದ್ದರು ಎಂದು ಹೇಳಿದರು.
ಮುಖಂಡ ನರಸಿಂಹಮೂರ್ತಿ ಮಾತನಾಡಿ, ಪಂಡಿತ್ ಜವಾಹರಲಾಲ್ ನೆಹರು ಅವರು ರಾಷ್ಟ್ರದ ಭವಿಷ್ಯದ ವಾಹಕರಾಗಿರುವುದರಿಂದ ಮಕ್ಕಳಿಗೆ ಪ್ರೀತಿ ಮತ್ತು ಗಮನವನ್ನು ನೀಡಬೇಕು ಎಂದು ನಂಬಿದ್ದರು. ಮಕ್ಕಳು ನಿಜವಾಗಿಯೂ ಅವರಿಗೆ ಮೀಸಲಾದ ದಿನಕ್ಕೆ ಅರ್ಹರು. ಪ್ರಪಂಚದಾದ್ಯಂತ, ವಿವಿಧ ದೇಶಗಳು ಮಕ್ಕಳ ದಿನವನ್ನು ಆಚರಿಸುತ್ತವೆ. ನೀವೆಲ್ಲರೂ ಮುಗ್ಧತೆಯ ಚಿತ್ರವಾಗಿದ್ದೀರಿ ಮತ್ತು ಎಲ್ಲರೂ ಮಕ್ಕಳನ್ನು ಆರಾಧಿಸುತ್ತಾರೆ. ಇದು ಮಕ್ಕಳನ್ನು ಗೌರವಿಸಲು ಮತ್ತು ನಿಮ್ಮ ಉಪಸ್ಥಿತಿಯನ್ನು ಆಚರಿಸಲು ವಿಶೇಷವಾಗಿ ಮೀಸಲಿಟ್ಟ ದಿನವಾಗಿದೆ ಎಂದು ಹೇಳಿದರು.
ಶಾಲೆಯ ಮುಖ್ಯೋಪಾಧ್ಯಾಯಿನಿ ಭ್ರಮರಾಂಭ, ವಿಶೇಷ ಶಿಕ್ಷಕಿರಾದ ಪಿ. ಪದ್ಮ, ಹೆಚ್.ವಿದ್ಯಾವತಿ ಸಿಬ್ಬಂದಿಗಳಾದ ರಾಘವೇಂದ್ರ, ಪವಿತ್ರ ಹಾಜರಿದ್ದರು.
ವಿಶಾಖಪಟ್ಟಣಂ: ಭಾರತೀಯ ನೌಕಾಪಡೆಯ ವಿಶ್ವದ ವಿವಿಧ ದೇಶಗಳ ನೌಕಾಪಡೆಗಳೊಂದಿಗೆ ಸೇರಿ ತನ್ನ ಅಪ್ರತಿಮ ಶೌರ್ಯ ಹಾಗೂ ಸನ್ನದ್ಧತೆಯನ್ನು ಬುಧವಾರ ವಿಶಾಖಪಟ್ಟಣಂ…
ಮಹೇಂದ್ರ ಹಸಗೂಲಿ: ಗುಂಡ್ಲುಪೇಟೆ ತಾಲ್ಲೂಕು ವರದಿಗಾರರು ಗುಂಡ್ಲುಪೇಟೆ: ತಾಲ್ಲೂಕಿನ ಮಾದಾಪಟ್ಟಣ ಗ್ರಾಮದಲ್ಲಿ ಹಸುವಿನ ಮೇಲೆ ಹುಲಿ ದಾಳಿ ನಡೆಸಿ ಕೊಂದು…
ಬೆಂಗಳೂರು: ವಿಧಾನಸೌಧಕ್ಕೆ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರಿರುವ ರಾಜ್ಯ ಸರ್ಕಾರದ ಕ್ರಮದ ವಿರುದ್ಧ ಜೆಡಿಎಸ್ ಲೇವಡಿ ಮಾಡಿದೆ. ಪ್ರಶ್ನೆ ಕೇಳುವ…
ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಮಾಧ್ಯಮಗಳಿಗೆ ರಾಜ್ಯದ ಆಡಳಿತ ಶಕ್ತಿ ಕೇಂದ್ರ ವಿಧಾನಸೌಧದಲ್ಲಿ ನಿರ್ಬಂಧ ಹೇರಲಿದೆ. ಈ ಕುರಿತು ಸರ್ಕಾರದ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ಶ್ರೀ ಕ್ಷೇತ್ರ ಮಲೆ ಮಹದೇಶ್ವರ ಬೆಟ್ಟದಲ್ಲಿ ಐದು ದಿನಗಳ ಕಾಲ…
ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು ಹನೂರು: ತಾಲ್ಲೂಕಿನ ಮಲೆಮಹದೇಶ್ವರ ಬೆಟ್ಟದಲ್ಲಿ ಮಹಾಶಿವರಾತ್ರಿ ಜಾತ್ರಾ ಮಹೋತ್ಸವದ ಕೊನೆಯ ದಿನವಾದ…