ಮೈಸೂರು : ನಗರದ ಚಾಮುಂಡಿ ಬೆಟ್ಟದಲ್ಲಿಂದು ಚಾಮುಂಡೇಶ್ವರಿ ಮಹಾರಥೋತ್ಸವವು ಅದ್ದೂರಿಯಾಗಿ ನಡೆಯಿತು. ಮಹಾರಥೋತ್ಸವಕ್ಕೆ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಲನೆ ನೀಡಿದರು.
ಜಂಬೂಸವಾರಿ ಬಳಿಕ ಮೊದಲ ಹುಣ್ಣಿಮೆಯಲ್ಲಿ ಬೆಟ್ಟದಲ್ಲಿ ಜರುಗುವ ಮಹಾರಥೋತ್ಸವವು ಇಂದು ಬೆಳಿಗ್ಗೆ 7.50 ರಿಂದ 8.10ರೊಳಗೆ ಸಲ್ಲುವ ಶುಭ ಘಳಿಗೆಯಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು.
ಮಹಾರಥೋತ್ಸವದಲ್ಲಿ ರಾಜಮಾತೆ ಪ್ರಮೋದದೇವಿ ಒಡೆಯರ್, ಮಹಾರಾಜ ಯಧುವೀರ್, ತ್ರಿಷಿಕಾ ಒಡೆಯರ್ ಸೇರಿದಂತೆ ಸಾವಿರಾರು ಭಕ್ತರು, ಕಲಾತಂಡಗಳು ಭಾಗವಹಿಸಿದ್ದವು, ಸಿಎಆರ್ ಸಿಬ್ಬಂದಿ ಕುಶಾಲತೋಪ ಸಿಡಿಸಿ ಗೌರವ ಸಲ್ಲಿಸಿದರು.
ಇದರ ಜೊತೆಗೆ ಇಂದಿನಿಂದ ಅ. 14 ರವರೆಗೆ ನಾಡ ದೇವತೆಗೆ ವಿಶೇಷ ಪೂಜೆ ,ಹೋಮ ಹವನಗಳು ನಡೆಯಲಿವೆ.
ಸುಪ್ರೀಂ ತೀರ್ಪಿಗೆ ಆಕ್ರೋಶ ವ್ಯಕ್ತಪಡಿಸಿದ ಅಮೆರಿಕ ಅಧ್ಯಕ್ಷ ವಾಷಿಂಗ್ಟನ್ : ವಿವಿಧ ದೇಶಗಳ ಸರಕುಗಳ ಮೇಲೆ ವಿಧಿಸಿದ್ದ ಭಾರಿ ಸುಂಕಗಳನ್ನು…
ಮೈಸೂರು : ಮಹಾರಾಷ್ಟ್ರದ ಕಾರ್ಜತ್‌ನಲ್ಲಿ ಇತ್ತೀಚೆಗೆ ನಡೆದ ಹೂಫ್‌ಬೀಟ್ ಮ್ಯಾರಥಾನ್ - ಮಹಾರಾಷ್ಟ್ರ ರಾಜ್ಯ ಎಂಡ್ಯುರನ್ಸ್ ಚಾಂಪಿಯನ್‌ಶಿಪ್‌ನಲ್ಲಿ ಮೈಸೂರಿನ ಚಾಮುಂಡಿ…
ಮದ್ದೂರು : ವಿರೋಧದ ನಡುವೆಯೂ ಪ್ರೀತಿಸಿ ಮದುವೆಯಾದ ಹಿನ್ನೆಲೆಯಲ್ಲಿ ಹುಡುಗನ ಮನೆಗೆ ಯುವತಿಯ ತಂದೆ ಬೆಂಕಿ ಹಚ್ಚಿದ್ದು, ಯುವಕನ ಮನೆ…
ಮೈಸೂರು : ರಾಜ್ಯದಲ್ಲಿ ಆರ್ಥಿಕ ಪರಿಸ್ಥಿತಿಯನ್ನು ದಿವಾಳಿ ಅಂಚಿಗೆ ತಂದು ನಿಲ್ಲಿಸಿರುವ ಗ್ಯಾರಂಟಿ ಯೋಜನೆಗಳ ಕುರಿತು ಸರ್ವೇ ನಡೆಸಬೇಕು. ಕಳೆದ…
ಹನೂರು : ವಿವಿಧ ಸಮಸ್ಯೆಗಳನ್ನು ಬಗೆಹರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ…
ಹನೂರು : ಬೆಳ್ಳಂಬೆಳಗ್ಗೆ ಎರಡು ಕಾಡಾನೆಗಳು ಜಮೀನುಗಳಲ್ಲಿ ಓಡಾಡಿ ಆತಂಕ ಸೃಷ್ಟಿಸಿದ ಘಟನೆ ಹನೂರು ತಾಲೂಕಿನ ಗುಂಡಾಪುರ ಗ್ರಾಮದಲ್ಲಿ ಶನಿವಾರ…