ಚಾಮರಾಜನಗರ

ಜಿಂಕೆ ಪಕ್ಕದಲ್ಲಿದ್ದರು ಹುಲಿಯ ಚಿತ್ತವೇಕೆ ಬೇರೆಡೆ ಸೆಳೆಯಿತು..!

ಬಂಡೀಪುರ : ಹುಲಿಯೊಂದು ಗಾಂಭೀರ್ಯದಿಂದ ಹೆಜ್ಜೆ ಇಡುವ ಪೋಟೋವೊಂದೊ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಸದ್ಯ ಈ ಪೋಟೋವನ್ನು ಎಲ್ಲರೂ ಬಲು ಕುತೂಹಲದಿಂದ ನೋಡುತ್ತಿದ್ದಾರೆ. ಹೀಗಾಗಿ, ಈ ಪೋಟೋ ಈಗ ಸಾಕಷ್ಟು ವೀಕ್ಷಣೆಯನ್ನೂ ಗಳಿಸಿದೆ.

ಬೇಟೆ ಕಾಡಿನ ಜೀವನ… ಇಲ್ಲಿ ಮತ್ತೊಂದು ಪ್ರಾಣಿಯನ್ನು ತಿಂದೇ ಇನ್ನೊಂದು ಜೀವಿಗಳು ಬದುಕಬೇಕು… ಇದು ಕಾಡಿನ ಆಹಾರ ಕ್ರಮವೂ ಹೌದು. ಸಾಕಷ್ಟು ಪ್ರಾಣಿಗಳು ಬೇಟೆಯಲ್ಲಿ ಪಳಗಿರುತ್ತವೆ. ಅವುಗಳಲ್ಲಿ ಹುಲಿಗಳು ಕೂಡಾ ಒಂದು. ಹೊಂಚು ಹಾಕಿ ಹುಲಿಗಳು ಬೇಟೆಗೆ ನಿಂತರೆ ವಿಫಲವಾಗುವುದು ಬಹಳ ಅಪರೂಪ. ಹಾಗಂತ, ಬೇಟೆಯಾಡಲೇಬೇಕೆಂದು ಹುಲಿಗಳು ಬೇಟೆಯಾಡುವುದಿಲ್ಲ. ಹಸಿದರಷ್ಟೇ ಅವುಗಳ ಬೇಟೆ. ಇಲ್ಲದಿದ್ದರೆ ದುರ್ಬಲ ಪ್ರಾಣಿ ಪಕ್ಕದಲ್ಲಿದ್ದರೂ ಅವುಗಳು ಅದರತ್ತ ಚಿತ್ತವನ್ನೇ ಹರಿಸುವುದಿಲ್ಲ. ಅಂತಹ ಶಿಸ್ತು ಈ ಪ್ರಾಣಿಗಳಲ್ಲಿ ನೋಡಬಹುದು. ಅದಕ್ಕೆ ಸಾಕ್ಷಿಯಾದ ಪೋಟೋ ಈಗ ವೈರಲ್ ಆಗುತ್ತಿದೆ. ವನ್ಯಜೀವಿಗಳ ಬಗ್ಗೆ ಕುತೂಹಲವುಳ್ಳವರು ಈ ದೃಶ್ಯವನ್ನು ಬಲು ಆಸಕ್ತಿಯಿಂದಲೇ ನೋಡುತ್ತಿದ್ದಾರೆ. ಸಹಜವಾಗಿಯೇ ಪೋಟೋ ಎಲ್ಲರಲ್ಲೂ ಆಸಕ್ತಿ ಮೂಡಿಸಿದೆ.

andolana

Recent Posts

ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು: ಸಚಿವ ಯತೀಂದ್ರ ಸಿದ್ದರಾಮಯ್ಯ

ಮೈಸೂರು: ರಾಜ್ಯದಲ್ಲಿ ನಡೆಯುತ್ತಿರುವ ಎಸ್ಐಆರ್ ಪ್ರಕ್ರಿಯೆ ರದ್ದಾಗಬೇಕು ಎಂದು ಸಚಿಚ ಯತೀಂದ್ರ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಈ ಬಗ್ಗೆ ಮೈಸೂರಿನಲ್ಲಿಂದು ಸುದ್ದಿಗಾರರ…

15 hours ago

ನಾಡಹಬ್ಬ ಮೈಸೂರು ದಸರಾ: ಸಂಪ್ರದಾಯದಂತೆ ಪ್ರಮೋದಾ ದೇವಿ ಒಡೆಯರ್ ಗೆ ಆಹ್ವಾನ

ಮೈಸೂರು: ಮೈಸೂರು ದಸರಾ ಮಹೋತ್ಸವ ರಂಗೇರುತ್ತಿದೆ. ರಾಜವಂಶಸ್ಥರಾದ ಪ್ರಮೋದಾ ದೇವಿ ಒಡೆಯರ್ ಅವರಿಗೆ ದಸರಾಗೆ ಆಹ್ವಾನಿಸಲಾಗಿದೆ. ಈ ಬಗ್ಗೆ ಮಾತನಾಡಿದ…

15 hours ago

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಬಿದ್ದ ಮರ: ಕೂದಲೆಳೆಯಲ್ಲಿ ಪಾರಾದ ಚಾಲಕ

ಕೊಡಗು: ಭಾರೀ ಗಾಳಿ ಮಳೆಗೆ ಪಿಕಪ್ ವಾಹನದ ಮೇಲೆ ಮರ ಬಿದ್ದಿದ್ದು, ಕೂದಲೆಳೆ ಅಂತರದಲ್ಲಿ ಚಾಲಕ ಪಾರಾಗಿದ್ದಾನೆ. ಕೂಡುಮಂಗಳೂರು ದೊಡ್ಡಮ್ಮತಾಯಿ…

21 hours ago

ಓದುಗರ ಪತ್ರ: ಗೊಬ್ಬಳಿ ಮರ ಬಸ್‌ನಿಲ್ದಾಣದ ಆವರಣ ಸ್ವಚ್ಛವಾಗಿರಲಿ

ಸಾಂಸ್ಕೃತಿಕ ನಗರಿ ಮೈಸೂರಿನ ದಕ್ಷಿಣ ಭಾಗದ ಜೆ. ಪಿ. ನಗರದ ಅಕ್ಕಮಹಾದೇವಿ ರಸ್ತೆಯ ಗೊಬ್ಬಳಿ ಮರ ಬಸ್ ನಿಲ್ದಾಣವು ಪ್ರತಿನಿತ್ಯ…

21 hours ago

ಓದುಗರ ಪತ್ರ: ಮಹಾತ್ಮರ ರಾಮರಾಜ್ಯದ ಕಲ್ಪನೆಯ ಸಂದೇಶ ಸಾಕಾರಗೊಳ್ಳಲಿ

ಗಾಂಧಿ ಜಯಂತಿಯಾದ ಅ.೨ರಂದು ದೇಶಾದ್ಯಂತ ರಾಷ್ಟ್ರಪಿತ ಮಹಾತ್ಮ ಗಾಂಧಿಯವರನ್ನು ನೆನೆಯಲಾಗುತ್ತದೆ. ಬಾಪು ಎಂದೇ ಕರೆಯಲ್ಪಡುವ ಗಾಂಧೀಜಿ ಈ ದೇಶದ ಸ್ವಾತಂತ್ರಕ್ಕಾಗಿ…

21 hours ago

ಓದುಗರ ಪತ್ರ: ಇಬ್ಬರು ಮಹಾನ್ ನಾಯಕರ ಆಶಯ ಮುಂದಿನ ಪೀಳಿಗೆಗೆ ದಾಟಿಸಲಿ

ದೇಶದ ಇತಿಹಾಸದಲ್ಲಿ ಅಕ್ಟೋಬರ್ ೨ಕ್ಕೆ ವಿಶೇಷವಾದ ಸ್ಥಾನವಿದೆ. ಈ ದಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಜನ್ಮದಿನದ ಜೊತೆಗೆ, ಭಾರತದ ಮಾಜಿ…

21 hours ago