ಕೊಳ್ಳೇಗಾಲ: ಬೆಂಗಳೂರಿನ ದೀಪಾಂಜಲಿ ನಗರದ ರೈಲು ಹಳಿಯ ಮೇಲೆ ಕೊಳ್ಳೇಗಾಲ ಮೂಲದ ಯುವಕನ ಶವ ಪತ್ತೆಯಾಗಿದ್ದು, ಇದು ಕೊಲೆ ಎಂದು ಆರೋಪಿಸಿ ಯುವಕನ ಪೋಷಕರು ಹಾಗೂ ನೂರಾರು ಮಂದಿ ಕೊಳ್ಳೇಗಾಲದ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದರು.
ಪಟ್ಟಣದ ಲಿಂಗಣಾಪುರದ ಮಹಾದೇವಪ್ಪ ಎಂಬವರ ಪುತ್ರ ನಂದೀಶ್ (27) ಮೃತಪಟ್ಟಯುವಕ. ಮೆಡಿಕಲ್ ರೆಪ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಈತ, ಶನಿವಾರ ಮೈಸೂರಿನಿಂದ ಆಗ ಮಿಸಿ ಕೊಳ್ಳೇಗಾಲದ ಬಸ್ ನಿಲ್ದಾಣದಲ್ಲಿ ಇಳಿಯುವಾಗ ಸಹ ಪ್ರಯಾಣಿಕರೊಂದಿಗೆ ಗಲಾಟೆಯಾಗಿದೆ. ಈ ವೇಳೆ ಮೂವರು ಹಲ್ಲೆ ನಡೆಸಿದ್ದು, ಅದಾದ ಬಳಿಕ ಕೆಲವರು ನಿಮ್ಮ ಪುತ್ರನ ಮೊಬೈಲ್ ಸಿಕ್ಕಿದೆ ಎಂದು ನಮ್ಮ ಮನೆಗೆ ತಲುಪಿಸಿದ್ದಾರೆ. ಅದಾದ ನಂತರ ಮರುದಿನ ಭಾನುವಾರ ಬೆಳಿಗ್ಗೆ ನನ್ನ ಪುತ್ರನ ಮೊಬೈಲ್‌ಗೆ ಕರೆ ಬಂದಿದ್ದು, ನಿಮ್ಮ ಪುತ್ರನ ಶವ ಬೆಂಗಳೂರಿನ ರೈಲು ಹಳಿಯ ಮೇಲೆ ಸಿಕ್ಕಿದೆ ಎಂದು ತಿಳಿಸಿದರು. ಇದು ಗಲಾಟೆ ಹಿನ್ನೆಲೆಯಲ್ಲಿ ನಡೆದ ಕೊಲೆ ಆಗಿದ್ದು ಈ ಬಗ್ಗೆ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಮೃತನ ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.
ಈ ನಡುವೆ ದೂರು ಕೊಡಲು ತೆರಳಿದ್ದಾಗ ಪೊಲೀಸ ರಿಂದ ಸೂಕ್ತ ಸ್ಪಂದನೆ ದೊರಕಲಿಲ್ಲ. ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ್ದಾರೆ ಎಂದು ಆರೋಪಿಸಿ ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ನೂರಾರು ಮಂದಿ ಸೋಮವಾರ ಪೊಲೀಸ್ ಠಾಣೆ ಎದುರು ಪ್ರತಿ ಭಟನೆ ನಡೆಸಿದರು. ಪ್ರತಿಭಟನೆ ವೇಳೆ ಮೃತನ ತಾಯಿ ದಾಕ್ಷಾಯಿಣಿ ಅವರ ಗೋಳಾಟ ಮನಕಲಕುವಂತಿತ್ತು.
ಪ್ರತಿಭಟನೆಯಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷ ಮೂಡ್ಲುಪುರನಂದೀಶ್, ರೈತ ಮುಖಂಡ ಮಧುವನಹಳ್ಳಿ ಬಸವರಾಜು, ವೀರಶೈವ ಮುಖಂಡ ದೊಡ್ಡಿಂದುವಾಡಿ ವೀರಭದ್ರ, ರೈತ ಮುಖಂಡ ಅಣಗಳ್ಳಿ ಬಸವರಾಜು, ಕರವೇ ಅಧ್ಯಕ್ಷ ಮತೀನ್, ಶಂಕನಪುರ ಜಗದೀಶ್, ಜಾಗತಿಕ ಮಹಾಸಭಾ ತಾಲ್ಲೂಕು ಅಧ್ಯಕ್ಷ ಬಿಂದು ಲೋಕೇಶ್, ಕೆಎಂಎಫ್ ನಿರ್ದೇಶಕ ನಂಜುಂಡಸ್ವಾಮಿ, ಮಧುವಹಳ್ಳಿ ಬಾಲು, ನರೀಪುರ ಮಹೇಶ, ರುದ್ರಸ್ವಾಮಿ, ಮಾಲಂಗಿ ಬಸವರಾಜು, ಇಂದ್ರೇಶ್, ಸುಂದ್ರಪ್ಪ ಮತ್ತಿತರರು ಭಾಗವಹಿಸಿದ್ದರು.
ಡಿವೈಎಸ್‌ಪಿ ಸೋಮೇಗೌಡ, ವೃತ್ತ ನಿರೀಕ್ಷಕ ಕೃಷ್ಣಪ್ಪ ಪ್ರತಿಭಟನಾಕಾರರ ಮನವೊಲಿಸುವ ಪ್ರಯತ್ನ ಮಾಡಿದರು. ಎಎಸ್‌ಪಿ ಉದೇಶ್ ಸ್ಥಳಕ್ಕೆ ಆಗಮಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಕೈಬಿಡಲಾಯಿತು.
ಮಹಾದೇಶ್ ಎಂ ಗೌಡ ಹನೂರು: ನಂಜದೇವನಪುರ ಗ್ರಾಮದಲ್ಲಿ ಸೆರೆಹಿಡಿದಿರುವ ಹುಲಿ ಮರಿಗಳನ್ನು ಬಿಆರ್‌ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ…
ಚಿಕ್ಕಬಳ್ಳಾಪುರ: ಮೈಸೂರಿನಿಂದ ಬೆಂಗಳೂರು ಮಾರ್ಗವಾಗಿ ಮಂತ್ರಾಲಯಕ್ಕೆ ತೆರಳುತ್ತಿದ್ದ ಸ್ಪೀಪರ್ ಕೋಚ್ ಬಸ್ ಕಂಟೇನರ್ ಲಾರಿಗೆ ಡಿಕ್ಕಿ ಹೊಡೆದ ಪರಿಣಾಮ ಓರ್ವ…
ಬೆಂಗಳೂರು: ಡಿಸಿಎಂ ಡಿ.ಕೆ.ಶಿವಕುಮಾರ್‌ಗೆ ಸಿಎಂ ಸ್ಥಾನ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಂಸದ ಡಿ.ಕೆ.ಸುರೇಶ್ ಅವರು, ನಮ್ಮಣ್ಣನ ಹಣೆಯಲ್ಲಿ ಬರೆದಿದ್ದರೆ ಅವರು…
ಮೈಸೂರು: ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪ್ರಯತ್ನದ ಫಲವಾಗಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇಯ ಮಣಿಪಾಲ್ ಜಂಕ್ಷನ್ ಫ್ಲೈಓವರ್…
ಮಡಿಕೇರಿ: ಅಕ್ರಮವಾಗಿ ಗೋಮಾಂಸ ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಬಂಧಿಸುವಲ್ಲಿ ವಿರಾಜಪೇಟೆ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ಹುಣಸೂರಿನ ರತ್ನಪುರಿ ನಿವಾಸಿ ಜಾಹಿರ್…
ನಂಜನಗೂಡು: ತಾಲ್ಲೂಕಿನ ಸುತ್ತೂರಿನಲ್ಲಿ ನಡೆಯುತ್ತಿರುವ ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳವರ ಜಾತ್ರಾ ಮಹೋತ್ಸವದಲ್ಲಿ ಆಯೋಜಿಸಿದ್ದ ನಾಟಕ ನೋಡಿ ಅಲ್ಲೇ ಪಕ್ಕದಲ್ಲಿ ಮಲಗಿ…